ಶಿಕ್ಷಕಿಯೊಬ್ಬರು ತಮ್ಮ ಹಾಜರಾತಿಗೆ ಮಾರ್ಕ್ ಮಾಡಲು ಶಾಲೆಯ ಮುಖ್ಯೋಪಾಧ್ಯಯರ ಬಳಿ ಕೇಳಿದಾಗ ಆಗ ಆತ ಕೆನ್ನೆಗೆ ಮುತ್ತು ಕೊಟ್ಟರೆ ನೀಡುತ್ತೇನೆ ಎಂದು ಹೇಳಿದ್ದಾನೆ.
ಈ ಘಟನೆ ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಕೆನ್ನೆಗೆ ಮುತ್ತು ನೀಡುವಂತೆ ಕೇಳಿತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರಪ್ರದೇಶದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಿಗಾಗಿ ಡಿಜಿಟಲ್ ಹಾಜರಾತಿ ವ್ಯವಸ್ಥೆಯನ್ನು ಕಡ್ಡಾಯ ಮಾಡಲಾಗಿತ್ತು. ಈ ವ್ಯವಸ್ಥೆ ಸಾಕಷ್ಟು ವಿರೋಧಗಳಿಗೆ ಕೂಡ ಎಡೆ ಮಾಡಿಕೊಟ್ಟಿತ್ತು. ಕೊನೆಗೆ ಯೋಗಿ ಅದಿತ್ಯನಾಥ್ ಸರ್ಕಾರ ಈ ಡಿಜಿಟಲ್ ಹಾಜರಾತಿ ವ್ಯವಸ್ಥೆಯನ್ನು ಪ್ರಸ್ತುತ ತಡೆಹಿಡಿದಿದೆ. ಅದರ ಪರಿಣಾಮ ಶಿಕ್ಷಕಿಯರು ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ.
ಮುಖ್ಯೋಪಾಧ್ಯಯರ ಬಳಿ ಬಂದ ಮಹಿಳಾ ಶಿಕ್ಷಕಿ ತನ್ನ ಹಾಜರಾತಿ ಮಾರ್ಕ್ ಮಾಡುವಂತೆ ಕೇಳಿಕೊಂಡಿದ್ದಾಳೆ. ಈ ವೇಳೆ ಕೆನ್ನೆಯ ಮೇಲೆ ಬೆರಳಿಟ್ಟು ಸಂಜ್ಞೆ ಮಾಡಿದ ಹೆಡ್ ಮಾಸ್ಟರ್ ಒಂದು ಮುತ್ತು ಕೊಡು ಮಾರ್ಕ್ ಮಾಡ್ತೀನಿ ಎಂದಿದ್ದಾನೆ. ಸರ್ಕಾರಿ ಶಾಲೆಯ ಹೆಡ್ಮಾಸ್ಟರ್ ಮಾಡಿರುವ ಈ ಅಸಭ್ಯ ವರ್ತನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ.
ಘಟನೆಯನ್ನು ಮಹಿಳಾ ಶಿಕ್ಷಕಿ ವಿಡಿಯೋ ಮಾಡಿದ್ದಾಳೆ, ವಿಡಿಯೋದಲ್ಲಿ ಹೆಡ್ ಮಾಸ್ಟರ್ ಮುತ್ತು ಕೇಳಿದಾಗ, ಇದಕ್ಕೆ ನನ್ನ ಒಪ್ಪಿಗೆಯಿಲ್ಲ, ಇದು ಅತ್ಯಂತ ಹೊಲಸು ಕೆಲಸ ಎಂದಿದ್ದಾರೆ.
ಜಿಲ್ಲೆಯಲ್ಲಿ 10.165 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯ ಇದ್ದು, ಬೇಡಿಕೆಗಿಂತ ಹೆಚ್ಚಿನ ರಸಗೊಬ್ಬರ ದಾಸ್ತಾನು ಇದೆ ಹಾಗಾಗಿ ರಸಗೊಬ್ಬರ ಕೊರತೆ…
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲಿದ್ದ ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಆರೋಪ ಸಾಬೀತಾಗಿದೆ. ಪ್ರಜ್ವಲ್ ರೇವಣ್ಣ ಅಪರಾಧಿ…
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬರುತ್ತಿದ್ದ ಸುಂದರ ಯುವತಿಯರು, ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಬ್ಯಾಗ್ ನಲ್ಲಿದ್ದ ಚಿನ್ನಾಭರಣಗಳನ್ನ ಕ್ಷಣ…
ದೇವನಹಳ್ಳಿ: ತಾಲೂಕಿನ ಜಾಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸಿಂಗರಹಳ್ಳಿ ಗ್ರಾಮದ ಸರ್ವೆ ನಂಬರ್ -6 ರಲ್ಲಿ ಸುಮಾರು 60…
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರವಾಗಿ ವ್ಯಂಗ್ಯವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಪ್ರಥಮ್ ಗೆ ಅಂಬೇಡ್ಕರ್ ಸೇನೆ ಹೋರಾಟಗಾರರು ದೊಡ್ಡಬಳ್ಳಾಪುರ…
ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದೊಡ್ಡಬಳ್ಳಾಪುರ ತಾಲೂಕಿನ ರಾಮಯ್ಯನಪಾಳ್ಯ ಸಮೀಪವಿರುವ ರೇಣುಕಾ ಯಲ್ಲಮ್ಮ ದೇವಾಲಯದ…