ಕರ್ನಾಟಕ ಅಲ್ಪಸಂಖ್ಯಾತ ನಿಗಮದ ವತಿಯಿಂದ ಅಲ್ಪಸಂಖ್ಯಾತ ಸಮುದಾಯದ ಕ್ರೈಸ್ತರು, ಮುಸಲ್ಮಾನರು, ಬೌದ್ಧರು, ಸಿಖ್ಖರು ಮತ್ತು ಪಾರ್ಸಿ ಜನಾಂಗದ ನಿರುದ್ಯೋಗ ಹೊಂದಿರುವ ಯುವಕ ಯುವತಿಯರಿಗೆ ಸ್ವಂತ ಉದ್ಯೋಗ/ಕಚೇರಿ, ಕಂಪನಿ, ಕಾರ್ಖಾನೆಗಳಲ್ಲಿ ಉದ್ಯೋಗ ದೊರಕಿಸುವ ಸಲುವಾಗಿ ತರಬೇತಿ ಯೋಜನೆಯನ್ನು ಹಮ್ಮಿಕೊಳ್ಳಲು ಪ್ರಸ್ತಾಪಿಸಲಾಗಿದೆ. ಮಾನ್ಯತೆ ಪಡೆದ ಕೇಂದ್ರಗಳೊಂದಿಗೆ ಬ್ಯೂಟಿ ಪಾರ್ಲರ್ ತರಬೇತಿ (ಪುರುಷರು ಮತ್ತು ಮಹಿಳೆಯರು) ಪ್ರಮಾಣೀಕರಣ ಕೋರ್ಸ್
• Beauty Parlour Training (Men and Women) certification course with recognized centres.
• ಹೆವಿ ಅರ್ಥ್ ಮೂವರ್ ತರಬೇತಿ (ಜೆಸಿಬಿ, ಕ್ರೇನ್, ಪೋಕ್ ಲೇನ್ ಸೇರಿದಂತೆ ಭಾರಿ ವಾಹನ ಚಾಲನಾ ತರಬೇತಿ)
• Heavy Earth Mover Operatoin Training (JCB, Crane, Pock lain, Heavy Vehicle Operation)
• ಶಾರ್ಟ್ ಹ್ಯಾಂಡ್ ಟ್ರೈನಿಂಗ್ Short hand training
• ಭದ್ರತಾ ಸೇವೆಗಳ ತರಬೇತಿ Security Services Training
ಅರ್ಜಿ ಸಲ್ಲಿಸಲು ಆರ್ಜಿದಾರರ ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು. ಆಯ್ಕೆಯಾದ ಅರ್ಜಿದಾರರು ಕಡ್ಡಾಯವಾಗಿ ತರಬೇತಿಯನ್ನು ಪೂರ್ಣಗೊಳಿಸಬೇಕು, ಅಭ್ಯರ್ಥಿಯು ಬೇರೆ ಯಾವುದೇ ಸರ್ಕಾರದ ವತಿಯಿಂದ ವೃತ್ತಿ ಪರ ತರಬೇತಿಯನ್ನು ಪಡೆದಿರಬಾರದು, ಎಲ್ಲಾ ಮೂಲಗಳಿಂದ ಕುಟುಂಬದ ಆದಾಯ ನಗರ ಪ್ರದೇಶಗಳಲ್ಲಿ ರೂ.1,03,000/-, ಗ್ರಾಮಾಂತರ ಪ್ರದೇಶದಲ್ಲಿ ರೂ.96,000 ಮೀರಬಾರದು, ತರಬೇತಿಯನ್ನು ಸರ್ಕಾರಿ/ಅರೆ ಸರ್ಕಾರಿ/ಸಾರ್ವಜನಿಕ ವಲಯ ಮತ್ತು ಮಾನ್ಯತೆ ಪಡೆದ ಖಾಸಗಿ ಸಂಸ್ಥೆಗಳಿಂದ
ನೀಡಲಾಗುವುದು.
ಅರ್ಜಿ ಯನ್ನು ಆನ್ ಲೈನ್ ವೆಬ್ ಸೈಟ್
https://kmdconline.karnataka.gov.in ಮೂಲಕ ಆಗಸ್ಟ್ 22 ರಿಂದ ಕೊನೆಯ ದಿನಾಂಕ ಸಪ್ಟೆಂಬರ್ 25 ರವರೆಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ (ರಜಾ ದಿನವನ್ನು ಹೊರತುಪಡಿಸಿ) ಸಂಪರ್ಕಿಸಬಹುದಾಗಿದೆ.
ಅರ್ಜಿ ಸಲ್ಲಿಸಬೇಕಾದ ಕಚೇರಿ ವಿಳಾಸ
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ,
ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ನಂ.1599, ವೈ.ಎಸ್ ಬಿಲ್ಡಿಂಗ್, ಹೊಸ ಬಸ್ ಸ್ಟಾಂಡ್ ಹಿಂಬಭಾಗ, ಯಲಹಂಕ ಬೀದಿ,
ದೇವನಹಳ್ಳಿ ತಾಲ್ಲೂಕು, ದೂರವಾಣಿ ಕಚೇರಿ: (080)-27681786 ಅಥವಾ
Gmail: kmdcbrural@gmail.com, ಸಹಾಯವಾಣಿ ಸಂಖ್ಯೆ-8277799990 (24×7) ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವ್ಯವಸ್ಥಾಪಕರು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ), ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾನು ಜೆಡಿಎಸ್ ತಾಲೂಕು ಅಧ್ಯಕ್ಷ ಸ್ಥಾನಕ್ಕಾಗಿ ವರಿಷ್ಠರ ಬಳಿ ಕೇಳಿದ್ದೇನೆ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಪಕ್ಷದ ವರಿಷ್ಠರು ಯಾವುದೇ…
ಹೆಣ್ಣಿನ ಹಿತರಕ್ಷಣೆಗಾಗಿ ದೊಡ್ಡಬಳ್ಳಾಪುರದಲ್ಲಿ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಾಪನೆ ಮಾಡಲಾಗಿದೆ..ಈ ಮಹಿಳಾ ಠಾಣೆಯಲ್ಲಿ ಅತ್ಯಾಚಾರ, ವರದಕ್ಷಿಣೆ ನಿಷೇಧ ಕಾಯ್ದೆ, ಮಕ್ಕಳ…
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟು ಹಬ್ಬದ ಮುನ್ನ ( ಏಪ್ರಿಲ್ 14 ) ಅವರ ವ್ಯಕ್ತಿತ್ವ ಮತ್ತು…
In der heutigen akademischen Welt steht die Qualität der schriftlichen Arbeiten im Mittelpunkt des Interesses.…
'ಆಸರೆ' ಯೋಜನೆ ಅಂಗವಾಗಿ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗೇನಹಳ್ಳಿ ಐಯಮ್ಮನಹಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಪೊಲೀಸ್…
ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ..…