ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ಸರ್ಕಾರಿ ಆಸ್ಪತ್ರೆ‌, ವೈದ್ಯಕೀಯ ಸೇವೆಗಳ ಕುರಿತು ಜಾಗೃತಿ

ಇಂದು ದೊಡ್ಡಬಳ್ಳಾಪುರ ನಗರದ ಕಾರ್ಮಲ್ ಜ್ಯೋತಿ‌ ಪ್ರೌಢ ಶಾಲೆಯ ಸುಮಾರು 42 ಮಂದಿ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ತಾಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಸರ್ಕಾರಿ‌ ಆಸ್ಪತ್ರೆಯಲ್ಲಿನ ದೈನಂದಿನ ಚಟುವಟಿಕೆಗಳು ಹಾಗೂ‌ ಇಲ್ಲಿನ  ವ್ಯವಸ್ಥೆ ಬಗ್ಗೆ ವೈದ್ಯರು ಹಾಗೂ ಸಿಬ್ಬಂದಿ ಸವಿವರವಾಗಿ ತಿಳಿಸಿಕೊಟ್ಟರು.

ಸ್ಕೌಟ್ಸ್ ಮತ್ತು ಗೈಡ್ಸ್ ನ ಮೂಲ ಉದ್ದೇಶ ಸಮಾಜ ಸೇವೆ ಮಾಡುವುದು. ದೇಶಭಿಮಾನ, ದೇಶಭಕ್ತಿ, ಸಂಸ್ಕಾರ, ಸಹೋದರ ಭಾವನೆ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಅನಿರ್ವಾಯ ಸ್ಥಿತಿಯಲ್ಲಿ ರೋಗಿಗೆ ಪ್ರಾಥಮಿಕ‌ ಚಿಕಿತ್ಸೆ ನೀಡುವುದು ಹೇಗೆ, ಆಂಬುಲೆನ್ಸ್ ಸೇವೆ ಹೇಗಿರುತ್ತದೆ. ಒಳ ರೋಗಿ, ಹೋರ ರೋಗಿ ಎಂದರೇನು, ಎಕ್ಸ್ ರೇ ಕೊಠಡಿ ಹೇಗಿರುತ್ತದೆ. ಎಕ್ಸ್ ರೇ ಹೇಗೆ ತೆಗೆಯಲಾಗುತ್ತದೆ. ಔಷಧಿ ಕೊಠಡಿ, ಚುಚ್ಚು‌ಮದ್ದು ಕೊಠಡಿ, ಚುಚ್ಚು‌ಮದ್ದು ಹೇಗೆ ಕೊಡಬೇಕು, ವೈದ್ಯರು ರೋಗಿಗಳನ್ನು ಹೇಗೆ ಉಪಚರಿಸಬೇಕು. ಸ್ಕ್ಯಾನಿಂಗ್ ಸೆಂಟರ್, ಶುಚಿತ್ವ, ನರ್ಸ್ ಗಳ ಕೆಲಸ ಹೇಗಿರುತ್ತದೆ, ಶಸ್ತ್ರಚಿಕಿತ್ಸೆ ಹೇಗೆ ಮಾಡಲಾಗುತ್ತದೆ ಸೇರಿದಂತೆ ಇನ್ನಿತರೆ ಆಸ್ಪತ್ರೆಯ ಚಟುವಟಿಕೆಗಳ ಬಗ್ಗೆ ಸಂಪೂರ್ಣವಾಗಿ ಇಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಮಕ್ಕಳಿಗೆ ತಿಳಿಸಿಕೊಟ್ಟರು.

ಈ ವೇಳೆ ಆಸ್ಪತ್ರೆ ಆಡಳಿತಾಧಿಕಾರಿಗಳು, ವೈದ್ಯರು, ಶಾಲಾ ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.

Ramesh Babu

Journalist

Recent Posts

ರಸಗೊಬ್ಬರ ಮುಂಗಡ ಕಾಯ್ದಿರಿಸಿ ಖರೀದಿಸಲು ಆ್ಯಪ್‌ ಬಿಡುಗಡೆ: ಡಿ.01 ರಿಂದ ಜಾರಿ

ಕೇಂದ್ರ ಸರ್ಕಾರವು ಮೊಬೈಲ್ ಮೂಲಕ ರೈತರು ಎಲ್ಲಾ ರಸಗೊಬ್ಬರಗಳನ್ನು ಮುಂಗಡವಾಗಿ ಕಾಯ್ದಿರಿಸಿ ಖರೀದಿಸುವ ನೂತನ " ಫರ್ಟಿಲೈಸರ್ ಸೇಲ್ ಅಪಿಕೇಶನ್…

1 hour ago

ಆನೆಗಳ ಸ್ಥಳಾಂತರಕ್ಕೆ ವಿರೋಧ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಯನಾ ಮೋಟಮ್ಮ ನಿರ್ಧಾರ!

ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಸೆರೆಹಿಡಿದ ಆನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗಕ್ಕೆ ಸ್ಥಳಾಂತರಿಸುವ ಅರಣ್ಯ ಇಲಾಖೆಯ ನಿರ್ಧಾರಕ್ಕೆ ತೀವ್ರ ವಿರೋಧ…

2 hours ago

ರಾಜ್ಯದ ನೀರಾವರಿ ಜಾಲಕ್ಕೆ ಆಸ್ಟ್ರೇಲಿಯಾ ತಂತ್ರಜ್ಞಾನ ಬಲ; ‘ವಾಟರ್ ಟ್ರೇಡಿಂಗ್’ ಅಧ್ಯಯನಕ್ಕೆ ಸಚಿವ ಚಲುವರಾಯಸ್ವಾಮಿ ಸಮ್ಮತಿ

ರಾಜ್ಯದ ಹಳೆಯ ಕಾಲುವೆಗಳ ಆಧುನೀಕರಣ, ನೀರಿನ ಸೋರಿಕೆ ತಡೆಗಟ್ಟುವಿಕೆ ಹಾಗೂ ಕೃಷಿ ನೀರಾವರಿ ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ…

4 hours ago

ಕಾಣೆಯಾಗುವ ಬಾಲ್ಯದ ಆದರ್ಶಗಳು……

ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಗುಣಮಟ್ಟದ ಪರೀಕ್ಷೆ ಮಾಡುವ ತನಿಖಾಧಿಕಾರಿಗಳು ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡುತ್ತಾರೆ........ ನೀವು ದೊಡ್ಡವರಾದ ಮೇಲೆ ಏನಾಗಲು ಇಷ್ಟ…

11 hours ago

ಹಿಂಬದಿಯಿಂದ ಬೈಕ್ ಡಿಕ್ಕಿ: ಪಾದಚಾರಿ ಸ್ಥಳದಲ್ಲೇ ಸಾವು

ದೊಡ್ಡಬಳ್ಳಾಪುರ: ತಾಲ್ಲೂಕಿನ ಕಾಡನೂರು ಕೈಮರ ಸಮೀಪದ ಆಂಜನಮೂರ್ತಿ ನಗರ ಬಳಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ…

1 day ago

ಕುಮಾರಸ್ವಾಮಿ ಕೇಂದ್ರ ಸಚಿವರಲ್ಲ; ಕೇಂದ್ರದ ವಕ್ತಾರ, ಟೀಕಾ ಸಚಿವ – ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ‌ ವ್ಯಂಗ್ಯ

ವಿರಾಜಪೇಟೆ(ಕೊಡಗು): ಎಚ್.ಡಿ.ಕುಮಾರಸ್ವಾಮಿ ಅವರು ಒಬ್ಬ ಜವಾಬ್ದಾರಿಯುತ ಕೇಂದ್ರ ಸಚಿವರಂತೆ ವರ್ತಿಸುತ್ತಿಲ್ಲ, ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ವಕ್ತಾರರಾಗಿ ಕೆಲಸ ಮಾಡುತ್ತಿದ್ದಾರೆ‌ ಎಂದು…

2 days ago