ಹೊಸಕೋಟೆ: ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಸೇರಿದಂತೆ ತಂಪು ಹವಾಗುಣದ ಪ್ರದೇಶಗಳಿಗಷ್ಟೇ ಸೀಮಿತವಾಗಿದ್ದ ಸೇಬು ಈಗ ಸರ್ವ ಋತು ಬೆಳೆಯಾಗಿ ಬದಲಾಗಿದೆ.
ಸಮಶೀತೋಷ್ಣ ಬೆಳೆ ಎನಿಸಿರುವ ಕಾಶ್ಮೀರಿ ಸೇಬನ್ನು ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಮೀಪವೇ ಇರುವ ಹೊಸಕೋಟೆಯಲ್ಲೂ ಬೆಳೆಯಲಾಗಿದೆ. ಪ್ರಯೋಗಶೀಲ ರೈತನ ಮೊದಲ ಪ್ರಯೋಗದಲ್ಲೇ ಉತ್ತಮ ಇಳುವರಿಯೊಂದಿಗೆ ಸೇಬಿನ ಬೆಳೆ ನಳನಳಿಸುತ್ತಿದೆ.
ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯ ಸಿದ್ದೇನಹಳ್ಳಿ ನಿವಾಸಿಯಾದ ಬಸವರಾಜು ಅವರು ರೇಷ್ಮೆ ಹಾಗೂ ತರಕಾರಿ ಬೆಳೆಯಿಂದ ಸೇಬು ಬೆಳೆಯತ್ತ ಹೊರಳಿದ್ದಾರೆ. ತರಕಾರಿ, ಸೊಪ್ಪು ಬೆಳೆಯಿಂದ ದಿಢೀರ್ ಸೇಬಿನ ಬೆಳೆಯತ್ತ ಮುಖ ಮಾಡಿದಾಗ ಬಸವರಾಜು ಅವರನ್ನು ಮೂದಲಿಸಿದವರು ಹಲವರು. ಆದರೆ, ಯಾರ ಮೂದಲಿಕೆಗೂ ಕುಗ್ಗದೇ ದಿಟ್ಟ ಹೆಜ್ಜೆ ಇಟ್ಟಿದ್ದರಿಂದಲೇ ಇಂದು ಬಸವರಾಜು ಅವರು ಪ್ರಗತಿಪರ, ಪ್ರಯೋಗಶೀಲ ರೈತರಾಗಿ ಹೊರಹೊಮ್ಮಿದ್ದಾರೆ.
ಸಿದ್ದೇನಹಳ್ಳಿಯ ಬಸವರಾಜು ಅವರು ಒಂದು ಎಕರೆ ನಾಲ್ಕು ಗುಂಟೆಯಲ್ಲಿ 442 ಸೇಬಿನ ಗಿಡಗಳನ್ನು ಬೆಳೆದಿದ್ದು, ಗಿಡದಲ್ಲಿ ಹಣ್ಣಿನ ಗೊಂಚಲುಗಳು ತೊನೆದಾಡುತ್ತಿವೆ. ಸೇಬಿನ ಗಿಡಗಳನ್ನು ನೆಟ್ಟು ಒಂದು ವರ್ಷ ಎಂಟು ತಿಂಗಳ ಬಳಿಕ ಹಣ್ಣುಗಳು ನಳನಳಿಸುತ್ತಿವೆ. ಪ್ರಸ್ತುತ ಬಂದಿರುವ ಇಳುವರಿ ಸುಮಾರು 2 ಟನ್ ಆಗುವ ನಿರೀಕ್ಷೆ ಇದೆ.
ಬಸವರಾಜು ಅವರು ಈ ಹಿಂದೆ ರೇಷ್ಮೆ ಬೆಳೆ ಬೆಳೆಯುತ್ತಿದ್ದರು. ಅದಾದ ಬಳಿಕ ತರಕಾರಿ ಬೆಳೆದು ಅತ್ಯಲ್ಪ ಲಾಭ ಕಾಣುತ್ತಿದ್ದರು. ಬಂದ ಅಲ್ಪಸ್ವಲ್ಪ ಲಾಭದಲ್ಲೇ ಸಂಸಾರ, ಬೆಳೆ ಖರ್ಚು, ಮಕ್ಕಳ ವ್ಯಾಸಂಗದ ಖರ್ಚು ನಿಭಾಯಿಸುತ್ತಿದ್ದರು. ಒಮ್ಮೆ 6ನೇ ತರಗತಿ ಓದುತ್ತಿರುವ ಅವರ ಮಗ ಆಡಿದ ಕೆಲ ಮಾತುಗಳು ಬಸವರಾಜು ಅವರನ್ನು ಚಿಂತೆಗೀಡು ಮಾಡಿದವು. ಅದೇನೆಂದರೆ, ಸಣ್ಣಪುಟ್ಟ ಬೆಳೆಯಿಂದ ಯಾವುದೇ ಲಾಭವಿಲ್ಲ. ಹೀಗಾದರೆ ಎಸ್ಸೆಸ್ಸೆಲ್ಸಿ ಮುಂದಿನ ಶಿಕ್ಷಣ ಮಾಡುವುದು ಎಂದು ಬಸವರಾಜು ಬಳಿ ಮಗ ಕೇಳಿದ್ದರಂತೆ. ಮಗನ ಮಾತು ತೆಗೆದುಹಾಕದೇ ಯೋಚಿಸಿದಾಗ ಹೊಳೆದಿದ್ದೇ ಸೇಬು ಬೆಳೆಯ ಕಲ್ಪನೆ.
ಜಿಕೆವಿಕೆ, ಕೃಷಿ ಇಲಾಖೆ, ಯೂಟ್ಯೂಬ್ ಗಳಲ್ಲಿ ಸೇಬಿನ ಬೆಳೆಯ ಬಗ್ಗೆ ಸಾಕಷ್ಟು ಮಾಹಿತಿಗಾಗಿ ಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ. ಶಿರಾದಲ್ಲಿ ಸೇಬು ಬೆಳೆದಿರುವ ಕುರಿತು ಸ್ನೇಹಿತರೊಬ್ಬರು ಹೇಳಿದ್ದರು. ಅದರಂತೆ ಶಿರಾಗೆ ಹೋಗಿ ನೋಡಿದಾಗ ಅಲ್ಲಿ ಒಂದೇ ಒಂದು ಗಿಡವಿತ್ತು. ಬೆಳೆ ವಿಧಾನದ ಕುರಿತು ಅವರೂ ಕೂಡ ಅಷ್ಟೇನೂ ಮಾಹಿತಿ ನೀಡಲಿಲ್ಲ. ಬಳಿಕ ಮಂಗಳೂರು ಹೋದರೂ ಉಪಯೋಗ ಆಗಲಿಲ್ಲ. ಕೊನೆಗೆ ಯೂಟ್ಯೂಬ್ ನಲ್ಲಿ ಬಿಜಾಪುರ(ವಿಜಯಪುರ)ದ ಸಚಿನ್ ಬಾಲಕೊಂಡ ಬೆಳೆದಿರುವ ಸೇಬು ಬೆಳೆಯನ್ನು ನೋಡಿ ಪೋನ್ ಮೂಲಕ ಮಾಹಿತಿ ಪಡೆದರು. ಅವರಿಂದಲೇ ಪ್ರತಿ ಗಿಡಕ್ಕೆ 300 ರೂ.ಪಾವತಿಸಿ ಒಟ್ಟು 442 ಗಿಡ ಖರೀದಿಸಿದರು. ಸಚಿನ್ ಬಾಲಕೊಂಡ ಅವರೇ ಮನೆಗೆ ಸಸಿಗಳನ್ನು ಡೆಲಿವರಿ ಕೊಟ್ಟರು ಎಂದು ಬಸವರಾಜು ವಿವರಿಸಿದರು.
ಒಂದು ಎಕರೆ ನಾಲ್ಕು ಗುಂಟೆಯಲ್ಲಿ 10 ಅಡಿ ಸುತ್ತಳತೆಗೆ ಒಂದರಂತೆ ಗಿಡ ನಾಟಿ ಮಾಡಲು ಗುಂಡಿ ತೆಗೆಸಿದರು. ಎರಡು ಅಡಿ ಆಳದ ಗುಂಡಿ ತೆಗೆದು ಅದಕ್ಕೆ ನಾಟಿ ಗೊಬ್ಬರ, ಬೇವು ಹಾಗೂ ಹೊಂಗೆ ಇಂಡಿ ಹಾಕಿ ಸೇಬಿನ ಗಿಡಗಳನ್ನು ಭರಣಿ ಮಳೆಯ ನಂತರ ನಾಟಿ ಮಾಡಿದರು. ಪ್ರತಿ ಮೂರು ದಿನಕ್ಕೆ ಒಮ್ಮೆ ನೀರು ಹಾಯಿಸಿದರು.
ಸೇಬಿನ ಮೊದಲ ಫಸಲನ್ನು ಸುತ್ತಮುತ್ತಲ ಗ್ರಾಮಸ್ಥರಿಗೆ ಕೆ.ಜಿಗೆ ₹150 ರಂತೆ ಮಾರಾಟ ಮಾಡಿದೆ. ಇಲ್ಲಿಯವರೆಗೆ ₹1,200ಕೆ.ಜಿಯಷ್ಟು ಸೇಬು ಮಾರಾಟ ಮಾಡಿದ್ದೇನೆ ಎಂದರು.
ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ.....…
ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…