ಸುರಕ್ಷಿತವಾಗಿ ಭೂಮಿಗೆ ಮರಳಿದ ಭಾರತೀಯ ಮೂಲದ ಗಗನಯಾನಿ ಸುನಿತಾ ವಿಲಿಯಮ್ಸ್‌

ಸುಮಾರು 9 ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ಸಿಲುಕಿದ್ದ ಭಾರತೀಯ ಮೂಲದ ಗಗನಯಾನಿ ಸುನಿತಾ ವಿಲಿಯಮ್ಸ್‌ ಮತ್ತು ಸಹ ಗಗನಯಾತ್ರಿ ಬುಚ್‌ ವಿಲ್ಮೋರ್‌ ಕಡೆಗೂ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ.

ಸಹ ಗಗನಯಾತ್ರಿಗಳಾದ ನಿಕ್‌ ಹೇಗ್‌ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್‌ ಗೋರ್ಬುನೋವ್‌ ಒಳಗೊಂಡಂತೆ ಒಟ್ಟು ನಾಲ್ವರನ್ನು ಹೊತ್ತ ‘ಸ್ಪೇಸೆಕ್ಸ್‌ ಕ್ರ್ಯೂ ಡ್ರ್ಯಾಗನ್‌’ ಗಗನನೌಕೆ ಸುರಕ್ಷಿತವಾಗಿ ಬುಧವಾರ ಬೆಳಗ್ಗೆ ಸರಿಯಾಗಿ 3.37ಕ್ಕೆ ಫ್ಲೋರಿಡಾ ಕರಾವಳಿಯಲ್ಲಿ ಇಳಿದಿದೆ.

ಹಡಗಿನ ಮೂಲಕ ಗಗನಯಾತ್ರಿಗಳನ್ನು ನೌಕೆಯಿಂದ ಹೊರತರಲಾಗಿದ್ದು, ನಾಲ್ವರೂ ಗಗನಯಾತ್ರಿಗಳು ಆರೋಗ್ಯವಾಗಿದ್ದಾರೆ.

ಗಗನನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ 10.30ಕ್ಕೆ ನಿರ್ಗಮಿಸಿತ್ತು. ಸುಮಾರು 17 ಗಂಟೆಗಳ ಸುದೀರ್ಘ ಯಾನದ ಬಳಿಕ ಬುಧವಾರ ಮುಂಜಾನೆ 3.37ಕ್ಕೆ ‘ಕ್ರ್ಯೂ ಡ್ರ್ಯಾಗನ್‌’ ಗಗನನೌಕೆ ಸಮುದ್ರಸ್ಪರ್ಶಕ್ಕೆ ಮಾಡಿದೆ. ಫ್ಲೋರಿಡಾದ ಬಳಿ, ಗಲ್ಫ್ ಕೊಲ್ಲಿಯಲ್ಲಿ ಸಮುದ್ರಕ್ಕೆ ಬಿದ್ದಿದೆ. ಇದಕ್ಕೂ ಮುನ್ನ ಗಗನನೌಕೆಯಲ್ಲಿ ಅಳವಡಿಸಲಾಗಿರುವ ಪ್ಯಾರಾಶ್ಯೂಟ್‌ಗಳು ತೆರೆದುಕೊಂಡು ಗಗನನೌಕೆಯ ವೇಗವನ್ನು ತಗ್ಗಿಸುವ ಮೂಲಕ ಸುರಕ್ಷಿತವಾಗಿ ಅದು ಸಮುದ್ರಕ್ಕೆ ಬೀಳುವಂತೆ ಮಾಡಲಾಗಿದೆ.

ವಿಲಿಯಮ್ಸ ಮತ್ತು ವಿಲ್ಮೋರ್‌ ಜೂನ್‌ 5, 2024 ರಂದು ಬೋಯಿಂಗ್‌ನ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಆದರೆ ಪ್ರೊಪಲ್ಷನ್‌ ಸಿಸ್ಟಮ್‌ ಅಸಮರ್ಪಕ ಕಾರ್ಯನಿರ್ವಹಣೆ ಸೇರಿದಂತೆ ತಾಂತ್ರಿಕ ಸಮಸ್ಯೆಗಳಿಂದ ಅವರ ಸಕಾಲಿಕ ಮರಳುವಿಕೆ ವಿಳಂಬವಾಯಿತು.

ಸೆಪ್ಟೆಂಬರ್‌ 2024ರಲ್ಲಿ ಸ್ಟಾರ್‌ಲೈನರ್‌ ಅನ್ನು ಸುರಕ್ಷತೆ ದೃಷ್ಟಿಯಿಂದ ಸಿಬ್ಬಂದಿಯಿಲ್ಲದೆಯೇ ಭೂಮಿಗೆ ವಾಪಾಸ್‌ ಕರೆಸಿಕೊಳ್ಳಲಾಯಿತು. ಕೊನೆಯ ಆಯ್ಕೆಯೆಂಬಂತೆ, ಐಎಸ್‌ಎಸ್‌ನಲ್ಲಿ ಸಿಲುಕಿದ ಸುನಿತಾ ಮತ್ತು ವಿಲ್ಮೋರ್‌ ಅವರನ್ನು ಭೂಮಿಗೆ ಕರೆಸಿಕೊಳ್ಳಲು ಉದ್ಯಮಿ ಎಲಾನ್‌ ಮಸ್ಕ್‌ ಒಡೆತನದ ‘ಸ್ಪೇಸೆಕ್ಸ್‌’ ಜತೆ ನಾಸಾ ಕೈಜೋಡಿಸಿತು.

ಅನಿರೀಕ್ಷಿತವಾಗಿ ಇಬ್ಬರು ಗಗನಯಾತ್ರಿಗಳು 286 ದಿನಗಳ ಕಾಲ ಅವರು ಬಾಹ್ಯಾಕಾಶದಲ್ಲಿ ಇದ್ದರು. ಈ ಸಮಯದಲ್ಲಿ ಅವರು ಭೂಮಿಯ ಸುತ್ತ 4,576 ಸುತ್ತುಗಳನ್ನು ಹಾಕಿದ್ದು, ಸುಮಾರು 121 ಮಿಲಿಯನ್ ಮೈಲುಗಳು (195 ಮಿಲಿಯನ್ ಕಿಲೋಮೀಟರ್) ಪ್ರಯಾಣಿಸಿದ್ದಾರೆ. ಬೇರೆ ಗಗನಯಾತ್ರಿಗಳು ಈ ಹಿಂದೆ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಇದ್ದರೂ, ಇವರಷ್ಟು ಅನಿಶ್ಚಿತತೆಯನ್ನು ಯಾರೂ ಎದುರಿಸಿರಲಿಲ್ಲ.

ಸುನಿತಾ ಹಾಗೂ ಬುಚ್ ವಿಲ್ಮೋರ್ ಬಾಹ್ಯಾಕಾಶ ನಿಲ್ದಾಣದಲ್ಲಿ ಅನೇಖ ಪ್ರಯೋಗಗಳನ್ನು ಮಾಡಿದರು. ಉಪಕರಣಗಳ ದುರಸ್ತಿ , ಬಾಹ್ಯಾಕಾಶ ನಡಿಗೆಯನ್ನೂ ಮಾಡಿದರು. ಸುನಿತಾ ವಿಲಿಯಮ್ಸ್ ಮೂರು ತಿಂಗಳ ನಂತರ ಐಎಸ್‌ಎಸ್‌ ನ ಕಮಾಂಡರ್ ಆದರು. ಅವರು ಒಟ್ಟು 62 ಗಂಟೆಗಳ ಕಾಲ ಒಂಬತ್ತು ಬಾರಿ ಬಾಹ್ಯಾಕಾಶ ನಡಿಗೆ ಮಾಡಿ ಮಹಿಳಾ ಗಗನಯಾತ್ರಿಯಾಗಿ ದಾಖಲೆ ನಿರ್ಮಿಸಿದರು.

Ramesh Babu

Journalist

Share
Published by
Ramesh Babu

Recent Posts

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

2 hours ago

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ…..

ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…

5 hours ago

ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆದ ನಟ ದರ್ಶನ್

ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…

5 hours ago

ಭೀಮನ ಅಮವಾಸ್ಯೆ ದಿನದಂದು ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…

16 hours ago

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ಬೆಳೆ ವಿಮೆಗೆ ನೊಂದಾಯಿಸಿ

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…

17 hours ago

ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಿಂದ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಕೋಲಾರ ಇವರ ಸಹಯೋಗದಲ್ಲಿ ರೇಮಂಡ್ ಕಂಪನಿ ಸಮೂಹದ ಸಿಲ್ವರ್ ಸ್ಪಾರ್ಕ್…

17 hours ago