ಸಿನಿಮಾ ಸ್ಟೈಲ್‌ನಲ್ಲಿ ಪೊಲೀಸರ ಚೇಸಿಂಗ್: ಎರಡೇ ಗಂಟೆಗಳಲ್ಲಿ ಕಳವು ಮಾಡಿದ್ದ ಕ್ಯಾಷ್‌ ಸಮೇತ ಕಳ್ಳರ ಬಂಧನ

ಚಿಕ್ಕಬಳ್ಳಾಪುರ-‌ ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಕ್ಷಣ ಮಾತ್ರದಲ್ಲಿ ಕಣ್ಣಿಗೆ ಕಾರದಪುಡಿ ಹಾಕಿ ಒಂದಲ್ಲ ಎರಡಲ್ಲ ಬರೋಬ್ಬರಿ ಏಳೂವರೆ ಲಕ್ಷ ರೂಪಾಯಿ ಬ್ಯಾಗ್‌ ಕದ್ದು ಎಸ್ಕೇಪ್‌ ಆಗಿದ್ರು…

ಅಡ್ಡ ಬಂದ ಸಾರ್ವಜನಿಕರಿಗೆ ಲಾಂಗ್‌ ಮಚ್ಚು ತೋರಿಸಿ ಎಸ್ಕೇಪ್‌ ಆದ ಕಳ್ಳರನ್ನ ಎರಡೇ ಗಂಟೆಯಲ್ಲೇ ಸಿನಿಮಾ ಸ್ಟೈಲಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸರು ಚೇಸ್‌ ಮಾಡಿ ಕ್ಯಾಷ್‌ ಸಮೇತ ಅರೆಸ್ಟ್‌ ಮಾಡಿದ್ದಾರೆ..

ಅಂದಹಾಗೆ ಗೌರಿಬಿದನೂರು ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಗೌರಿಬಿದನೂರು ನಗರದ ವಿನಾಯಕ ನಗರದಲ್ಲಿ ಕಳ್ಳತನ ಪ್ರಕರಣ ವರದಿಯಾಗಿತ್ತು.

ವಿನಾಯಕ ನಗರದ ನಿವಾಸಿ…ಹೋಟೆಲ್‌, ಊಟ ಕ್ಯಾಟರಿಂಗ್‌ ಕೆಲಸ ಮಾಡಿಕೊಂಡಿದ್ದ ಶಿವಶಂಕರ್‌ ಅರಾಧ್ಯೆಗೆ ವಾಕಿಂಗ್‌ ಹೋಗಿ ಬರೋವಾಗ ದೂರದ ಸಂಬಂಧಿ ಯುವಕ ಯಶ್ವಂತ್‌ ಅರಾಧ್ಯನ ಪರಿಚಯ ಆಗಿತ್ತು…ಯಶ್ವಂತ್‌ ಅರಾಧ್ಯ ತಾನು ಎಲ್ಲೋ ಬೋರ‍್ಡ್‌ ಕಾರು ಇಟ್ಕೊಂಡಿದ್ದು ಲಕ್ಷ ಲಕ್ಷ ದುಡೀತಿದ್ದೀನಿ, ನಿಮಗೂ ಕಡಿಮೆ ಬೆಲೆಗೆ ಕಾರು ಕೊಡಿಸ್ತೀನಿ, ನಾನೇ ಟ್ರಾವೆಲ್ಸ್‌ ಗೆ ಬಿಡಿಸ್ತೀನಿ, ತಿಂಗಳಿಗೆ ಲಕ್ಷ ಲಕ್ಷ ಕೊಡ್ತೀನಿ ಅಂತ ನಯ ವಂಚನೆಯ ಮಾತುಗಳನ್ನ ಹೇಳಿ ಶಂಕರ್‌ ಅರಾಧ್ಯ ತಲೆಕೆಡಿಸಿದ್ದಾನೆ.

ಈತನ ಮಾತು ನಂಬಿದ ಶಿವಶಂಕರ್‌ ಅರಾಧ್ಯ ಮನೆಯಲ್ಲಿದ್ದ ಆರೂವರೆ ಲಕ್ಷ ಹಣ ಹಾಗೂ ಒಡವೆಗಳನ್ನ ಅಡಮಾನ ಇಟ್ಟು ಏಳೂವರೆ ಲಕ್ಷ ಹಣ ತಂದು ಕಾರುಗಳನ್ನ ತರೋಕೆ ಅಂತ ಮನೆಯಿಂದ ಅಚೆ ಬಂದಿದ್ದ ಅಷ್ಟೇ…ಬೈಕ್‌ ನಲ್ಲಿ ಬಂದ ಇಬ್ಬರು ಯುವಕರು ಸರ್‌ ಈ ಅಡ್ರೆಸ್‌ ಎಲ್ಲಿ ಅಂತ ಕೇಳೋ ರೀತಿಯಲ್ಲಿ ಬಂದು ಕಣ್ಣಿಗೆ ಕಾರದಪುಡಿ ಹಾಕಿ ಕೈಯಲ್ಲಿದ್ದ ಏಳೂವರೆ ಲಕ್ಷ ರೂಪಾಯಿ ಇದ್ದ ಬ್ಯಾಗ್‌ ಕಿತ್ತಕೊಂಡು ಎಸ್ಕೇಪ್‌ ಆಗಿಬಿಟ್ಟಿದ್ರು..

ಸಿನಿಮಾ ಸ್ಟೈಲಲ್ಲಿ ಪೊಲೀಸರ ಚೇಸಿಂಗ್-ಕ್ಯಾಷ್‌ ಸಮೇತ ಕಳ್ಳರ ಬಂಧನ.

ಒಂದು ಬ್ಯಾಗ್‌ ನಲ್ಲಿ ಆರೂವರೆ ಲಕ್ಷ ಮತ್ತೊಂದು ಬ್ಯಾಗ್‌ ನಲ್ಲಿ ಏಳೂವರೆ ಲಕ್ಷ ರೂಪಾಯಿ ಇಟ್ಟುಕೊಂಡು ಮನೆಯಿಂದ ಹೊರಬಂದಿದ್ದ ಶಿವಶಂಕರ್‌ ಅರಾಧ್ಯ ಕಣ್ಣಿಗೆ ಕಾರದ ಪುಡಿ ಎರಚುತ್ತಿದ್ದಂತೆ ಕಳ್ಳ ಕಳ್ಳ ಅಂತ ಚೀರಾಡಿದ್ದಾರೆ. ಕಳ್ಳ ಶಿವಶಂಕರ್‌ ಅರಾದ್ಯ ನಡುವೆ ತಳ್ಳಾಟ ನೂಕಾಟ ಆಗಿ ಒಂದು ಬ್ಯಾಗ್‌ ಕಿತ್ತಕೊಂಡಿದ್ದಾನೆ…ಅಷ್ಟರಲ್ಲೇ ಅಡ್ಡಬಂದ ಸಾರ್ವಜನಿಕರಿಗೆ ಲಾಂಗ್‌ ತೋರಿಸಿ ಅಲ್ಲಿಂದ ಕಾಲ್ಕಿತ್ತಿದ್ದರು…

ಆದ್ರೆ ಇಷ್ಟೆಲ್ಲಾ ಆಗ್ರಿದ್ರೂ ಅಲ್ಲೇ ಇದ್ದ ಕಾರು ಕೊಡಿಸ್ತೀನಿ ಅಂತ ಬಂದಿದ್ದ ಯಶ್ವಂತ್‌ ಕಳ್ಳರನ್ನ ಹಿಡಿಯೋ ತಡೆಯೋ ಕೆಲಸ ಮಾಡಿಲ್ಲ…ಹೀಗಾಗಿ ಪೊಲೀಸರು ಬಂದಾಗ ಯಶ್ವಂತ್‌ ಆಡಿದ ಮಾತುಗಳು ಅನುಮಾನ ಭರಿಸಿವೆ..ಇದ್ರಿಂದ ಯಶ್ವಂತ್‌ ನನ್ನೇ ವಶಕ್ಕೆ ಪಡೆದು ಕ್ಲಾಸ್‌ ತಗೊಂಡ ಪೊಲೀಸರಿಗೆ ಯಶ್ವಂತ್‌ ತನ್ನ ಪ್ಲಾನ್‌ ಬಾಯಿ ಬಿಟ್ಟಿದ್ದ,..ತಾನೇ ಇಬ್ಬರು ಹುಡುಗರನ್ನ ಕರೆಸಿ ಕಳ್ಳತನ ಮಾಡಿಸಿದೆ… ಆಗ ಅರೆಸ್ಟ್ ಆದ ಪೊಲೀಸರು ಕಳ್ಳರ ಜೊತೆ ಯಶ್ವಂತ್‌ ನನ್ನ ಏನೂ ಗೊತ್ತಿಲ್ಲದ ಹಾಗೆ ಮಾತನಾಡಿಸಿ ಎಲ್ಲಿ ಹೋಗ್ತಿದ್ದಾರೆ ಯಾವ ಕಡೆ ಹೋಗ್ತೀದ್ದೀರಿ ಅಂತ ಮಾಹಿತಿ ಪಡೆದುಕೊಂಡಿದ್ದಾರೆ.

ಕಳ್ಳರು ಆದಾಗಲೇ ಗೌರಿಬಿದನೂರಿನಿಂದ ಚಿಕ್ಕಬಳ್ಳಾಪುರ ನಂತರ ದೇವನಹಳ್ಳಿ ಮೂಲಕ ಬೆಂಗಳೂರಿನತ್ತ ಹೊರಟಿದ್ರು…ಲೋಕೇಶನ್‌ ಆಧಾರದ ಮೇಲೆ ಕಳ್ಳರ ಬೆನ್ನು ಹತ್ತಿದ್ದ ಚಿಕ್ಕಬಳ್ಳಾಪುರ ಗ್ರಾಮಾಂತರ ಪಿಎಸ್‌ಐ ಹರೀಶ್‌ ತಂಡ, ಕಳ್ಳರು ಸುಸ್ತಾಗಿ ಜ್ಯೂಸ್‌ ಕುಡಿಯೋಕೆ ಅಂತ ಹೆಬ್ಬಾಳ ಕೆ ಆರ್‌ ಪುರಂ ರಸ್ತೆಯೊಂದರ ಜ್ಯೂಸ್‌ ಸೆಂಟರ್‌ ಬಳಿ ಜ್ಯೂಸ್‌ ಕುಡಿದು ಪೋನ್‌ ಪೇ ಮಾಡಿ ಹೊರಡಬೇಕು ಅನ್ನೋವಷ್ಟರಲ್ಲಿ ಪೊಲೀಸರು ಎದುರಗಡೆ ನಿಂತಿದ್ರು. ಇದ್ರಿಂದ ಹಣ ಕದ್ದು ಪರಾರಿಯಾಗಿದ್ದ ಭರತ್‌ ಹಾಗೂ ರ‍್ಶನ್‌ ಗೆ ಶಾಕ್‌ ಆಗಿದೆ, ಕೊನೆಗೆ ಬೈಕ್‌ ಸಮೇತ ಇಬ್ಬರನ್ನ ಪಿಎಸ್‌ಐ ಹರೀಶ್‌ ಹಾಗೂ ತಂಡ ಬಂಧಿಸಿ ಕರೆತಂದಿದ್ದಾರೆ.  ಕೊನೆಗೆ ಬೆಂಗಳೂರಿನ ಹೆಬ್ಬಾಳದಿಂದ ಕೆ ಆರ್‌ ಪುರಂ ರಸ್ತೆಯೊಂದರಲ್ಲಿ ಕ್ಯಾಷ್‌ ಸಮೇತ ಇಬ್ಬರು ಕಳ್ಳರನ್ನ ಬಂಧಿಸಿ ಕರೆತಂದಿದ್ದಾರೆ.   ಇನ್ನೂ ಈ ತರ ಮಾಡೋದಕ್ಕೆ ಪ್ಲಾನ್‌ ಕೊಟ್ಟಿದ್ದ ಅಂತ ಬೆಂಗಳೂರಿನ ಟ್ರಾವೆಲ್ಸ್‌ ಮಾಲೀಕ ವಿಷಕಂಠ ಸೇರಿ ಯಶ್ವಂತ್‌, ರ‍್ಶನ್‌ ಹಾಗೂ ಭರತ್‌ ಸೇರಿ ನಾಲ್ವರನ್ನೂ ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.‌

ಇನ್ನೂ ಯಶ್ವಂತ್‌ ಮಾತು ನಂಬಿ ಕಾರು ಸಿಗುತ್ತೆ ಅಂತ ಮೋಸ ಹೋಗ್ತಿದ್ದ ಶಿವಶಂಕರ ಅರಾಧ್ಯಗೆ 2 ಗಂಟೆಯಲ್ಲೇ ಕಳ್ಳರನ್ನ ಬಂಧಿಸಿ ಕ್ಯಾಷ್‌ ವಶಕ್ಕೆ ಪಡೆಯುವ ಮೂಲಕ  ನಿಟ್ಟುಸಿರು ಬಿಡುವಂತೆ ಮಾಡಿದ್ದು, ಪೊಲೀಸರ ಕರ‍್ಯಕ್ಕೆ ಶಿವಶಂಕರ್‌ ಅರಾಧ್ಯ ಕೈ ಮುಗಿದು ನಮಸ್ಕರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!