
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ತಮ್ಮೊಂದಿಗೆ ಬುಧವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 13 ಸಚಿವರಿಗೆ ಗುರುವಾರ ಖಾತೆ ಹಂಚಿಕೆ ಮಾಡಿದ್ದಾರೆ.
1. ಡಿ.ಕೆ ಶಿವಕುಮಾರ್ – ಮುಖ್ಯಮಂತ್ರಿ – ಹಣಕಾಸು, ಗುಪ್ತಚರ, ಸಹಕಾರ, ಸಿಬ್ಬಂದಿ ಆಡಳಿತ ಸುಧಾರಣೆ
2.ಡಾ. ಜಿ ಪರಮೇಶ್ವರ – ಉಪಮುಖ್ಯಮಂತ್ರಿ – ಕಂದಾಯ, ಯುವ ಸಬಲೀಕರಣ
3.ಕೆ.ಎಚ್ ಮುನಿಯಪ್ಪ – ಆಹಾರ
4.ಕೆ.ಜೆ ಜಾರ್ಜ್ – ಇಂಧನ, ಪ್ರವಾಸೋದ್ಯಮ
5.ಎಂ.ಬಿ ಪಾಟೀಲ್ – ಬೃಹತ್ ಕೈಗಾರಿಕೆ
6.ರಾಮಲಿಂಗಾ ರೆಡ್ಡಿ – ಜಲಸಂಪನ್ಮೂಲ
7.ಸತೀಶ್ ಜಾರಕಿಹೊಳಿ – ಲೋಕೋಪಯೋಗಿ
8.ಕೃಷ್ಣ ಬೈರೇಗೌಡ – ಬೆಂಗಳೂರು ಅಭಿವೃದ್ದಿ
9.ಪ್ರಿಯಾಂಕ್ ಖರ್ಗೆ – ಗೃಹ, ಐಟಿಬಿಟಿ
10.ಯುಟಿ ಖಾದರ್ – ಆರೋಗ್ಯ
11.ಈಶ್ವರ್ ಖಂಡ್ರೆ – ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ದಿ
12.ಡಾ.ಯತೀಂದ್ರ ಸಿದ್ದರಾಮಯ್ಯ – ನಗರಾಭಿವೃದ್ದಿ, ಹಿಂದುಳಿದ ಕಲ್ಯಾಣ
13.ಬೈರತಿ ಸುರೇಶ್ – ಸಾರಿಗೆ
14.ಡಾ.ಶರಣ ಪ್ರಕಾಶ್ ಪಾಟೀಲ್ – ವೈದ್ಯಕೀಯ ಶಿಕ್ಷಣ

ಇದರೊಂದಿಗೆ ಹಣಕಾಸು, ಗೃಹ, ಕಂದಾಯ, ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ ಸೇರಿದಂತೆ ಯಾರಿಗೆ ಯಾವ ಖಾತೆ ಸಿಗಲಿದೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.
ಪ್ರಮುಖ ಖಾತೆಗಳಿಗಾಗಿ ಪಟ್ಟು ಹಿಡಿದಿದ್ದ ಹಿರಿಯ ಸಚಿವರು ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ಕಾರ್ಯ ನಿರ್ವಹಿಸಿದ ಖಾತೆಗಳನ್ನೇ ನೀಡಿ, ಅಲ್ಲಿ ಇನ್ನೂ ಕೆಲ ಅತೀಮುಖ್ಯ ಕಾರ್ಯ ಯೋಜನೆಗಳು ಬಾಕಿ ಉಳಿದಿದ್ದು, ಅವುಗಳನ್ನು ಪೂರ್ಣಗೊಳಿಸಬೇಕಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರ ಮೇಲೆ ಒತ್ತಡ ಹೇರಿದ್ದರು. ಹೀಗಾಗಿ ಹಲವು ಸಚಿವರಿಗೆ ಈ ಹಿಂದೆ ನೀಡಿದ್ದ ಖಾತೆಗಳನ್ನು ನೀಡಲಾಗಿದೆ.