ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ. ಈ ವರ್ಷದಿಂದ ಚನ್ನವೀರನಹಳ್ಳಿಯಲ್ಲಿ ಹೊಸದಾಗಿ ಪದವಿ ಪೂರ್ವ ಕಾಲೇಜು ಆರಂಭವಾಗಿದೆ. ಇಂದಿನಿಂದಲೇ ದಾಖಲಾತಿ ಪ್ರಕ್ರಿಯೆ ಶುರುವಾಗಿದೆ. ಈ ಕಾಲೇಜು ಆರಂಭದಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ದೂರದ ಊರುಗಳಿಗೆ ಹೋಗುವ ಅಗತ್ಯತೆಯನ್ನು ದೂರ ಮಾಡಿದೆ.
ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ವರದಾನವಾಗಿ ಪರಿಣಮಿಸಿದೆ.
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ ಉತ್ತಮ ಫಲಿತಾಂಶ ದೊರೆತಿದೆ. ತಾಲೂಕಿನಿಂದ ಅತೀ ದೂರವಿರುವ ಸಾಸಲು ಹೋಬಳಿಯಲ್ಲಿ ಇಷ್ಟು ವರ್ಷ ಸರ್ಕಾರಿ, ಸರ್ಕಾರ ಅನುದಾನಿತ, ಖಾಸಗಿ ಪಿಯು ಕಾಲೇಜು ಇರಲಿಲ್ಲ. ಇದೇ ಮೊದಲ ಬಾರಿಗೆ ಚನ್ನವೀರನಹಳ್ಳಿ ಪ್ರೌಢಶಾಲೆಯಲ್ಲಿ ಪಿಯು ಕಾಲೇಜು ಮಂಜೂರಾಗಿದೆ. 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಗೆ ದಾಖಲಾತಿಗಳು ಪ್ರಾರಂಭಗೊಂಡಿವೆ. ಬಾಶೆಟ್ಟಿಹಳ್ಳಿಯಲ್ಲಿ ಈಗಾಗಲೇ ಇರುವ ಸರಕಾರಿ ಕಾಲೇಜು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಶೈಕ್ಷಣಿಕ ವರ್ಷದಿಂದ ಸೈನ್ಸ್ ಮತ್ತು ಕಾಮರ್ಸ್‌ಗೆ ದಾಖಲಾತಿ ಆರಂಭಗೊಂಡಿದೆ. ಅಲ್ಲದೇ, ಕ್ಷೇತ್ರದಲ್ಲಿನ ಕೊನಘಟ್ಟ, ಮಾದಗೊಂಡನಹಳ್ಳಿ, ಮಧುರೆ ಮತ್ತು ದೊಡ್ಡಬೆಳವಂಗಲದಲ್ಲಿನ ಸರ್ಕಾರಿ ಪಿಯು ಕಾಲೇಜುಗಳಲ್ಲೂ ಉತ್ತಮ ಸೌಕರ್ಯ ಲಭ್ಯವಿದ್ದು, ಪೋಷಕರು ಒಮ್ಮೆ ತಮ್ಮ ಹತ್ತಿರದ ಈ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಸೌಕರ್ಯ, ಶಿಕ್ಷಕರ ವಿದ್ಯಾರ್ಹತೆ, ಪ್ರತಿ ವರ್ಷದ ಉತ್ತಮ ಫಲಿತಾಂಶ ಎಲ್ಲವನ್ನೂ ಗಮನಿಸಿ, ನಿಮ್ಮ ಮಕ್ಕಳನ್ನು ಸರ್ಕಾರಿ ಕಾಲೇಜುಗಳಿಗೆ ದಾಖಲಿಸಿ ಎಂದು ಶಾಸಕ ಧೀರಜ್ ಮುನಿರಾಜು ಮನವಿ ಮಾಡಿದ್ದಾರೆ.
ಚೆನ್ನವೀರನಹಳ್ಳಿ ಗ್ರಾಮಸ್ಥರು ಮಾತನಾಡಿ, ಸಾಸಲು ಹೋಬಳಿ ತಾಲೂಕು ಕೇಂದ್ರದಿಂದ ಸುಮಾರು 28 ಕಿಮೀ ದೂರದಲ್ಲಿದೆ. ಈ ಹೋಬಳಿಯಲ್ಲಿ ಸುಮಾರು 58 ಹಳ್ಳಿಗಳಿವೆ. ಇಲ್ಲಿ ಯಾವುದೇ ಖಾಸಗಿ, ಸರ್ಕಾರಿ, ಸರ್ಕಾರ ಅನುದಾನಿತ ಪಿಯು ಕಾಲೇಜುಗಳು ಇರಲಿಲ್ಲ. ಪಿಯು ಕಾಲೇಜು ಆರಂಭಕ್ಕೆ ಹಲವು ಮನವಿಗಳನ್ನು ಸಂಬಂಧಪಟ್ಟವರಿಗೆ ನೀಡಲಾಗಿತ್ತು. ಈ ಗ್ರಾಮಗಳ ವಿದ್ಯಾರ್ಥಿಗಳು ಪ್ರೌಢ ಶಾಲೆ ಮುಗಿಸಿ ಪಿಯು ವಿದ್ಯಾಭ್ಯಾಸಕ್ಕಾಗಿ ದೂರದ ಊರುಗಳಿಗೆ ಹೋಗಬೇಕಾಗಿತ್ತು. ಸಾಸಲು ಹೋಬಳಿ ಕೇಂದ್ರದಿಂದ 28 ಕಿಮೀ ದೂರದಲ್ಲಿರುವ ದೊಡ್ಡಬಳ್ಳಾಪುರ ಸರ್ಕಾರಿ ಪಿಯು ಕಾಲೇಜು, 17 ಕಿ.ಮೀ ದೂರದ ದೊಡ್ಡಬೆಳವಂಗಲ ಸರ್ಕಾರಿ ಪಿಯು ಕಾಲೇಜು, 15 ಕಿ.ಮೀ ದೂರದ ಕೋಳಾಲ ಸರ್ಕಾರಿ ಪಿಯು ಕಾಲೇಜುಗಳಿಗೆ ಹೋಗಬೇಕಾಗಿತ್ತು. ಇದರಿಂದ ಮಕ್ಕಳಿಗೆ ತುಂಬಾ ಸಮಸ್ಯೆಯಾಗುತ್ತಿತ್ತು. ಬಸ್ ವ್ಯವಸ್ಥೆ, ಊಟದ ವ್ಯವಸ್ಥೆ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಮಕ್ಕಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಇದೀಗ ಚನ್ನವೀರನಹಳ್ಳಿಯಲ್ಲಿ ಪಿಯು ಕಾಲೇಜು ಆರಂಭದಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ನಮ್ಮ ಹೋಬಳಿಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಚನ್ನವೀರನಹಳ್ಳಿ ಪ್ರೌಢಶಾಲೆಯಲ್ಲಿ ಪಿಯು ಕಾಲೇಜು ಆರಂಭಗೊಂಡಿರುವುದು ಸಂಸತಸದ ಸಂಗತಿ. ಸದ್ಯ ವಾಣಿಜ್ಯ ವಿಭಾಗ ಮಾತ್ರ ಪ್ರಾರಂಭ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ವಿಜ್ಞಾನ ಮತ್ತು ಕಲಾ ವಿಭಾಗವನ್ನು ಆರಂಭಿಸಿದರೆ ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತದೆ ಎಂದು ವಿದ್ಯಾರ್ಥಿ ರಂಜಿತ್ ಹೇಳಿದರು..
ಶ್ರೀರಾಮನಹಳ್ಳಿ ಗ್ರಾಮಸ್ಥರು 2020ನೇ ಸಾಲಿನಲ್ಲೇ ಪದವಿ ಪೂರ್ವ ಕಾಲೇಜು ಬೇಕೆಂದು ಮನವಿ ಕೊಟ್ಟಿದ್ದರು
ಹಲವಾರು ವರ್ಷಗಳ ಸತತ ಪ್ರಯತ್ನದಿಂದ ಸಾಸಲು ಹೋಬಳಿಯಲ್ಲಿ ಪಿಯು ಕಾಲೇಜು ಪ್ರಾರಂಭವಾಗಿದೆ. ಇದಕ್ಕೆ ಸಹಕಾರ ನೀಡಿದ ಶಾಸಕ ಧೀರಜ್ ಮುನಿರಾಜ್, ಸ್ಥಳೀಯರಿಗೆ ಧನ್ಯವಾದಗಳು. ಕಾಲೇಜು ಪ್ರಾರಂಭವಾಗಿರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಇಂದಿನಿಂದ ದಾಖಲಾತಿಗಳು ಪ್ರಾರಂಭವಾಗಿವೆ. ನುರಿತ ಉಪನ್ಯಾಕರಿದ್ದಾರೆ. ವಾಣಿಜ್ಯ ಕೋರ್ಸ್( ಅರ್ಥಶಾಸ್ತ್ರ, ವ್ಯವಹಾರಿಕ ಅಧ್ಯಯನ, ಲೆಕ್ಕಶಾಸ್ತ್ರ, ಗಣಕ ವಿಜ್ಞಾನ (EBACs) ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಕಲಾ ವಿಭಾಗ, ವಿಜ್ಞಾನ ಕೋರ್ಸ್ ಗಳನ್ನು ಪ್ರಾರಂಭಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ ಎಂದು ಪ್ರಾಂಶುಪಾಲ ಕೇಶವಮೂರ್ತಿ ತಿಳಿಸಿದ್ದಾರೆ…
ದೊಡ್ಡಬಳ್ಳಾಪುರ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಹದಗೆಟ್ಟಿರುವ ರಸ್ತೆಗಳು ಹಾಗೂ ಸಮರ್ಪಕ ನಿರ್ವಹಣೆ ಇಲ್ಲದ ಕೆಎಸ್‌ಆರ್‌ಟಿಸಿ ಬಸ್‌ಗಳಿಂದಾಗಿ ಸಾರ್ವಜನಿಕರು ನಿತ್ಯವೂ ಪರದಾಡುವಂತಾಗಿದೆ.…
ದೊಡ್ಡಬಳ್ಳಾಪುರ: ಗೌರಿ ಗಣೇಶ ಹಬ್ಬದ ಸಂಭ್ರಮ ನಾಡಿನಾದ್ಯಂತ ಮನೆಮಾಡಿದ್ದು, ದೊಡ್ಡಬಳ್ಳಾಪುರ ನಗರದಲ್ಲೂ ಗಣೇಶೋತ್ಸವದ ಕಳೆ ಹೆಚ್ಚಾಗಿದೆ. ನಗರದ ವಿವಿಧೆಡೆ ಗಣೇಶ…
ದೊಡ್ಡಬಳ್ಳಾಪುರ: ಗಣೇಶೋತ್ಸವದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಹೊಸಹಳ್ಳಿ ಪೊಲೀಸ್ ಠಾಣೆ ವತಿಯಿಂದ ಗುಂಡಮಗೆರೆ ಕೆರೆಯಲ್ಲಿ ವಿಶೇಷ ವ್ಯವಸ್ಥೆ…
ದೊಡ್ಡಬಳ್ಳಾಪುರ: ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದೆ. ವಿವಿಧೆಡೆ…
ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…
ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…