ಕಾರಿನಲ್ಲಿ ಮಹಿಳೆ ಸಜೀವ ದಹನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಗಂಡನಿಗೆ ಮೋಸ ಮಾಡಲ್ಲ ಎಂದಿದ್ದ ಮಹಿಳೆಗೆ ಬೆಂಕಿಯಿಟ್ಟ ಪ್ರಿಯಕರ

ದೊಡ್ಡಬಳ್ಳಾಪುರ: ಆಕೆ ಪ್ರತಿನಿತ್ಯ ಮಕ್ಕಳಿಗೆ ಜೀವನ ಪಾಠ ಹೇಳಿಕೊಡುತ್ತಿದ್ದ ಉಪನ್ಯಾಸಕಿ. ಗಂಡನ ಜೊತೆಯಲ್ಲಿ ಇಬ್ಬರ ಮಕ್ಕಳೊಂದಿಗೆ ಸುಖವಾಗಿ ಸಂಸಾರ ಮಾಡುತ್ತಿದ್ದ ಮಹಿಳೆಗೆ ಪರ ಪುರುಷನ ವ್ಯಾಮೋಹವಾಗಿದೆ. ಆಕೆ ಮಾಡಿದ ಆ ಒಂದು ಎಡವಟ್ಟಿನಿಂದ ಶವ ಸಂಸ್ಕಾರ ಮಾಡಲು ಶವವೇ ಸಿಗದ ರೀತಿ ಪ್ರಿಯಕರ ಕೈಯಲ್ಲಿ ಕೊಲೆಯಾಗಿ ಸುಟ್ಟು ಭಸ್ಮವಾಗಿದ್ದಾಳೆ. ಅಕ್ರಮ ಸಂಬಂಧ ಬೇಡ ಮದುವೆ ಆಗೋಣ ಅಂದಾಗ ನಾನು ಆಗಲ್ಲ ಅಂದಿದಕ್ಕೆ, ಕುಪಿತಗೊಂಡ ವ್ಯಕ್ತಿ ಮಹಿಳೆಯನ್ನ ಕೊಲೆ ಮಾಡಿ ಆತನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೌದು…ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಕೆಜಿ ಕುಂಟನಹಳ್ಳಿ ಬಳಿ ನಿರ್ಜನ‌ ಪ್ರದೇಶದಲ್ಲಿ ಮೇ.2ರ ಮಧ್ಯಾಹ್ನ ಕಾರೊಂದು ಧಗಧಗ ಹೊತ್ತಿ ಉರಿಯುತ್ತಿದ್ದ ದೃಶ್ಯ ಕಂಡುಬಂದಿತ್ತು. ಸ್ಥಳಕ್ಕೆ ಪೊಲೀಸರು‌, ಅಗ್ನಿಶಾಮಕ‌ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸುವಷ್ಟರಲ್ಲಿ ಕಾರೆಲ್ಲಾ ಸುಟ್ಟು ಬೂದಿಯಾಗಿತ್ತು. ಒಳಹೊಕ್ಕು ನೋಡಿದಾಗ ಕಾರಿನ ಒಳಗೆ ಓರ್ವ ಮಹಿಳೆಯ ತಲೆ ಬುರುಡೆ, ಅರೆಬರೆ ಬೆಂದ ಕೈ ಕಾಲುಗಳು, ಎಲುಬುಗಳು, ತಲೆ ಬುರುಡೆ ಸುಟ್ಟರೂ ಕತ್ತಲ್ಲಿ ಹಾಗೆ ಉಳಿದಿರುವ ಮಾಂಗಲ್ಯ ಸರ ಕಂಡುಬಂದಿತ್ತು.

ಆದರೆ, ಕಾರಿನ ಡ್ರೈವರ್ ಮಾತ್ರ ನೀಲಗಿರಿ ತೋಪಿನಲ್ಲಿ ತನ್ನ ಮೊಬೈಲ್, ಶರ್ಟ್ ಬಿಟ್ಟು ಪರಾರಿಯಾಗಿದ್ದ. ಆಗ ಎಲ್ಲರಲ್ಲಿ ಅನುಮಾನ ಶುರುವಾಗಿತ್ತು. ಸಾವನಪ್ಪಿರುವ ಮಹಿಳೆ ಹೆಸರು, ಊರು, ಕಾರಿನ ಡ್ರೈವರ್ ಯಾರು, ಕಾರಿನ ಮಾಲೀಕನ ಹೆಸರು, ಇಲ್ಲಿಗೆ ಏಕೆ ಬಂದಿದ್ದರು. ಘಟನೆ ಇತರೆ ಕಾರಣಗಳನ್ನು ಪೊಲೀಸರಿಂದ ತನಿಖೆ ಶುರುವಾಗಿತ್ತು. ಅಷ್ಟರಲ್ಲಿ ಮಹಿಳೆ ಜೊತೆ ಇದ್ದ ವ್ಯಕ್ತಿ ಕೂಡ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ತಿಳಿದುಬಂದಿತ್ತು.

ಇಬ್ಬರು ಸತ್ತ ಮೇಲೆ ಪೊಲೀಸ್ ತನಿಖೆಯಿಂದ ಅಸಲಿ ಸತ್ಯ ಹೊರಬಂದಿದೆ… ಸುಟ್ಟು ಬೂದಿಯಾದ ಮಹಿಳೆಯ ಹೆಸರು ಸರೋಜಾ(35). ಮಹಿಳೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಹೆಸರು ಮಾರಸಂದ್ರ ಗ್ರಾಮದ ರಾಮಾಂಜಿನಪ್ಪ.

ಸರೋಜಾ ವೃತ್ತಿಯಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಳು. ಗಂಡನಿಗೆ ಹಲ್ಲಿನ ಸಮಸ್ಯೆಯಿದೆ, ಆಸ್ಪತ್ರೆಗೆ ಹೋಗಬೇಕು ಎಂದು ಹೇಳಿ ಮನೆಯಿಂದ ಬಸ್ ನಿಲ್ದಾಣಕ್ಕೆ ಡ್ರಾಪ್ ಹಾಕಿಸಿಕೊಂಡು, ಬಸ್ ಹತ್ತಿದವಳು, ಮಾರ್ಗ ಮಧ್ಯದಲ್ಲಿ ಪ್ರಿಯಕರ ರಾಮಾಂಜಿನಪ್ಪ ಜೊತೆಯಲ್ಲಿ ಕಾರಿನಲ್ಲಿ ಹೊರಟು‌ ನೇರವಾಗಿ ಮಾರಸಂದ್ರ ಮಾರ್ಗವಾಗಿ ದೊಡ್ಡಬಳ್ಳಾಪುರ ತಾಲೂಕಿನ ಕೆಜಿ ಕುಂಟನಹಳ್ಳಿ ಬಳಿ ನಿರ್ಜನ‌ ಪ್ರದೇಶಕ್ಕೆ ಬಂದು ಪ್ರಿಯಕರನ ಜೊತೆಯಲ್ಲಿ ಏಕಾಂತ ಕಳೆದಿದ್ದರು..ರಾಮಾಂಜಿನಪ್ಪ ಜೊತೆಯಲ್ಲಿ ಕಳೆದ ನಾಲ್ಕೈದು ವರ್ಷದಿಂದ ಈಕೆಗೆ ಅನೈತಿಕ ಸಂಬಂದವಿರುತ್ತದೆ. ಸರೋಜಾ ಗಂಡ ಏರ್ಪೋರ್ಟ್ ನಲ್ಲಿ ಕೆಲಸ ಮಾಡುವ ಹಿನ್ನಲೆ, ಈಕೆ ರಾಮಾಂಜಿನಪ್ಪ ಜೊತೆಯಲ್ಲಿ ಆಗಾಗ ಪಲ್ಲಂಗದಾಟ ಆಡುತ್ತಿದ್ದಳಂತೆ.

ಮೃತ ಸರೋಜಾ ಹಾಗೂ ರಾಮಾಂಜಿನಪ್ಪ ಅನೈತಿಕ ಸಂಬಂಧ ಹೊಂದಿದ್ದ ಕಾರಣದಿಂದಾಗಿ ಕಳೆದ 4 ತಿಂಗಳ ಹಿಂದೆ ರಾಮಾಂಜಿನಪ್ಪ ಹೆಂಡತಿಯಿಂದ ಡಿವೋರ್ಸ್ ಪಡೆದುಕೊಂಡಿದ್ದ. ಬಳಿಕ ಸುಜಾತಳಿಗೂ ಗಂಡನ ಬಿಟ್ಟು ಬರುವಂತೆ ಟಾರ್ಚರ್ ಮಾಡುತ್ತಿದ್ದ. ಆದರೆ ಸರೋಜಾ ಗಂಡನ ಬಿಟ್ಟು ಬರಲು ಒಪ್ಪಿರಲಿಲ್ಲ. ಸಿಟ್ಟಿನಲ್ಲಿ ಏ.2ರಂದು ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆ ಬಚ್ಚಹಳ್ಳಿ ಬಳಿ ಕಾರಿನಲ್ಲಿ ಸುಜಾಳನ್ನು ಹೊಡೆದು ಕೊಲೆ ಮಾಡಿ, ಬಳಿಕ ಕಾರಿಗೆ ಬೆಂಕಿಯಿಟ್ಟು ಪರಾರಿಯಾಗಿದ್ದ. ಓಡುವ ಆತುರದಲ್ಲಿ ಪಕ್ಕದಲ್ಲೇ ಇದ್ದ ನೀಲಗಿರಿ ತೋಪಿನಲ್ಲಿ ತನ್ನ ಮೊಬೈಲ್, ಶರ್ಟ್ ಬಿಟ್ಟು ಪರಾರಿಯಾಗಿದ್ದನು.

ಪೊಲೀಸರು ಕಾರು ಪರಿಶೀಲನೆ ಮಾಡಿದಾಗ ಮಾರಸಂದ್ರದ ಸುರೇಶ್ ಅವರದ್ದು ಎಂದು ಗೊತ್ತಾಗಿತ್ತು. ಬಳಿಕ ಸುರೇಶ್ ಅವರ ಕಾರನ್ನು ರಾಮಾಂಜಿನಪ್ಪ ತೆಗೆದುಕೊಂಡು ಹೋಗಿರುವುದಾಗಿ ತಿಳಿದುಬಂದಿತ್ತು. ಇದೀಗ ಬೆಂಗಳೂರಿನ ಬಿಡದಿ ಬಳಿ ರೈಲ್ವೇ ನಿಲ್ದಾಣ ಬಳಿ ರಾಮಾಂಜಿನಪ್ಪ ಶವ ಪತ್ತೆಯಾಗಿದ್ದು, ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ನಂತರ ಪೊಲೀಸರಿಂದ ಮಾಹಿತಿ ತಿಳಿದ ಸರೋಜಾ ಗಂಡ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

ಒಟ್ಟಾರೆ ಆರೋಗ್ಯ ಸರಿ ಇಲ್ಲ ಎಂದು ಪಕ್ಕದ ಮನೆಯ ಸುರೇಶ್ ಎಂಬುವವರಿಗೆ ಸೇರಿದ್ದ ಕಾರನ್ನ ತೆಗೆದುಕೊಂಡು ಬಂದ ರಾಮಾಂಜಿನಪ್ಪ ಈ ರೀತಿ ಮಹಿಳೆಯನ್ನು ಕೊಲೆ ಮಾಡಿ ಬೆಂಕಿ ಇಟ್ಟಿದ್ದು ಮಾತ್ರ ವಿಪರ್ಯಾಸ. ಕಾರಿಗೆ ಬೆಂಕಿ ಬೀಳುತ್ತಿದ್ದಂತೆ ಕಾರಿನ ಮಾಲೀಕರಿಗೆ ಅಲರ್ಟ್ ಮೆಸೇಜ್ ಬಂದಿದ್ದು, ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಹೋಗಿತ್ತು. ಅಕ್ರಮ ಸಂಬಂಧಕ್ಕೆ ಇಬ್ಬರೂ ಈ ರೀತಿ ದುರಂತ ಅಂತ್ಯ ಕಂಡಿದ್ದು ಮಾತ್ರ ದುರ್ದೈವ. ಗಂಡ ಮಕ್ಕಳನ್ನು ಬಿಟ್ಟು ಅಡ್ಡ ದಾರಿ ಹಿಡಿಯುವ ಹೆಂಗಸರಿಗೆ ಇದೊಂದು ಪಾಠ ಎನ್ನುತ್ತಿದ್ದಾರೆ ಸಾರ್ವಜನಿಕರು.

Ramesh Babu

Journalist

Recent Posts

ಗುಂಡಿ ರಸ್ತೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳೇ ಬಲಿಪಶು: ಹದಗೆಟ್ಟ ರಸ್ತೆ–ನಿರ್ವಹಣೆ ಕೊರತೆ; ಮಾರ್ಗಮಧ್ಯೆಯೇ ಕೆಟ್ಟು ನಿಲ್ಲುವ ಬಸ್‌ಗಳಿಂದ ಪ್ರಯಾಣಿಕರ ಪರದಾಟ

ದೊಡ್ಡಬಳ್ಳಾಪುರ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಹದಗೆಟ್ಟಿರುವ ರಸ್ತೆಗಳು ಹಾಗೂ ಸಮರ್ಪಕ ನಿರ್ವಹಣೆ ಇಲ್ಲದ ಕೆಎಸ್‌ಆರ್‌ಟಿಸಿ ಬಸ್‌ಗಳಿಂದಾಗಿ ಸಾರ್ವಜನಿಕರು ನಿತ್ಯವೂ ಪರದಾಡುವಂತಾಗಿದೆ.…

5 hours ago

ಗಜಮುಖನ ಆರಾಧನೆಯಲ್ಲಿ ಮಿಂದೆದ್ದ ದೊಡ್ಡಬಳ್ಳಾಪುರ: ಬೆಸ್ತರಪೇಟೆಯಲ್ಲಿ 14 ಅಡಿ ಎತ್ತರದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ: 7ನೇ ವರ್ಷದ ಗಣೇಶೋತ್ಸವಕ್ಕೆ ಅದ್ಧೂರಿ ಮೆರುಗು

ದೊಡ್ಡಬಳ್ಳಾಪುರ: ಗೌರಿ ಗಣೇಶ ಹಬ್ಬದ ಸಂಭ್ರಮ ನಾಡಿನಾದ್ಯಂತ ಮನೆಮಾಡಿದ್ದು, ದೊಡ್ಡಬಳ್ಳಾಪುರ ನಗರದಲ್ಲೂ ಗಣೇಶೋತ್ಸವದ ಕಳೆ ಹೆಚ್ಚಾಗಿದೆ. ನಗರದ ವಿವಿಧೆಡೆ ಗಣೇಶ…

5 hours ago

ಗಣೇಶ ವಿಸರ್ಜನೆಗೆ ಗುಂಡಮಗೆರೆ ಕೆರೆ ಬಳಿ ವಿಶೇಷ ವ್ಯವಸ್ಥೆ

ದೊಡ್ಡಬಳ್ಳಾಪುರ: ಗಣೇಶೋತ್ಸವದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಹೊಸಹಳ್ಳಿ ಪೊಲೀಸ್ ಠಾಣೆ ವತಿಯಿಂದ ಗುಂಡಮಗೆರೆ ಕೆರೆಯಲ್ಲಿ ವಿಶೇಷ ವ್ಯವಸ್ಥೆ…

7 hours ago

ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ: ತೂಬಗೆರೆಯಲ್ಲೂ ಕಳೆಗಟ್ಟಿದ ಗೌರಿ ಗಣೇಶ ಹಬ್ಬದ ಆಚರಣೆ: 20 ಅಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

ದೊಡ್ಡಬಳ್ಳಾಪುರ: ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದೆ. ವಿವಿಧೆಡೆ…

11 hours ago

ಅಕ್ಷರ ಜ್ಞಾನದ ಬೆಳಕಿನಲ್ಲಿ ಗ್ರಾಮಾಂತರ; ಸಂಪೂರ್ಣ ಸಾಕ್ಷರತೆಯತ್ತ ದಾಪುಗಾಲು!

ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…

17 hours ago

185 ವರ್ಷಗಳ ಹಳೆಯ ಪೊಲೀಸ್ ಬಿಲ್ಲೆ ಪತ್ತೆ: ಇತಿಹಾಸ ಸಂರಕ್ಷಣೆಯಲ್ಲಿ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ವಿಶಿಷ್ಟ ಹೆಜ್ಜೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…

1 day ago