Categories: ಕೋಲಾರ

ಸಾಲ ಬೇಡ, ಠೇವಣಿ ಹಣ ವಾಪಸ್ಸು ಮಾಡುವಂತೆ ಮಹಿಳಾ ಸಂಘಗಳು ಒತ್ತಾಯ

ಕೋಲಾರ: ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಠೇವಣಿ ಹಣವನ್ನು ಕೂಡಲೇ ವಾಪಸು ನೀಡುವಂತೆ ಮಹಿಳಾ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಹುತ್ತೂರು ಹೋಬಳಿ ವ್ಯಾಪ್ತಿಯ ಮಹಿಳಾ ಸಂಘಗಳು ಮಂಗಳವಾರ ನಗರದ ಡಿಸಿಸಿ ಬ್ಯಾಂಕ್ ಮುಂದೆ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಶಶಿಕಲಾ ಮಾತನಾಡಿ, ಜಿಲ್ಲೆಯ ಹುತ್ತೂರು ಹೋಬಳಿ ವ್ಯಾಪ್ತಿಯ ಮಹಿಳಾ ಸಂಘಗಳಿಗೆ ಸಾಲು ನೀಡುವುದಾಗಿ ನಂಬಿಸಿ ಸುಮಾರು 70 ರಿಂದ 80 ಸಾವಿರದವರಗೆ 300 ಸಂಘಗಳಿಂದ ಠೇವಣಿ ಹಣವನ್ನು ಸಂಗ್ರಹಿಸಿ ಸುಮಾರು ಎರಡು ವರ್ಷ ಕಳೆದರು ಇದುವರೆಗೂ ಯಾವುದೇ ಸಾಲವನ್ನು ನೀಡದೇ ಮಹಿಳೆಯರಿಗೆ ವಂಚನೆ ಮಾಡಿದ್ದಾರೆ ಸಾಲ ಕಟ್ಟಿಲ್ಲವೆಂದರೆ ಮನೆ ತನಕ ಬರುವ ಅಧಿಕಾರಿಗಳು ನಮ್ಮ ಠೇವಣಿ ಹಣವನ್ನು ಇಷ್ಟು ದಿನಗಳವರೆಗೆ ಹಾಗೆಯೇ ಇಟ್ಟುಕೊಂಡಿದ್ದಾರೆ ಇದಕ್ಕೆ ಹೊಣೆ ಯಾರು ಕೂಡಲೇ ನಮ್ಮ ಠೇವಣಿ ಹಣವನ್ನು ವಾಪಸ್ಸು ನೀಡುವಂತೆ ಒತ್ತಾಯಿಸಿದರು.

ಈಗಾಗಲೇ ಹುತ್ತೂರು ಸೊಸೈಟಿಯ ವಡಗೂರು ಶಾಖೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಆಡಳಿತ ಮಂಡಳಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ ಜೊತೆಗೆ ಕಳೆದ ಸರ್ವ ಸದಸ್ಯರ ಸಭೆಯಲ್ಲಿ ಸಹ ಈ ವಿಷಯದ ಕುರಿತಾಗಿ ಪ್ರಸ್ತಾವನೆ ಮಾಡಲಾಗಿದೆ ಹಣ ಕೊಟ್ಟಿದ್ದರಿಂದ ತಮ್ಮ ಮನೆಗಳಲ್ಲಿ ನಿರಂತರವಾಗಿ ಗಲಾಟೆಗಳು ನಡೆಯುತ್ತಿದ್ದು ಹೆಣ್ಣು ಮಕ್ಕಳು ಮನೆ ಬಿಡುವ ಸನ್ನಿವೇಶ ಬಂದಿದೆ ಕೂಡಲೇ ಹಣ ವಾಪಸ್ಸು ಮಾಡಬೇಕು ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟಕ್ಕೆ ಹೋಬಳಿ ವ್ಯಾಪ್ತಿಯ ಮಹಿಳಾ ಸಂಘಗಳು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಹುತ್ತೂರು ಸೊಸೈಟಿ ಅಧ್ಯಕ್ಷ ಕೋಟೆ ಸಿ.ಎಂ ನಾರಾಯಣಸ್ವಾಮಿ ಮಾತನಾಡಿ ಸೊಸೈಟಿಯಲ್ಲಿನ ಹಿಂದಿನ ಸಿಇಒ ವಿಜಯಕುಮಾರ್ ಅವರು ಸುಮಾರು 116 ಮಹಿಳಾ ಸಂಘಗಳಿಂದ 1.35 ಕೋಟಿ ಹಣವನ್ನು ಸಂಗ್ರಹಿಸಿ ಬ್ಯಾಂಕ್ ಗೆ ಕಟ್ಟದೇ ಸ್ವಂತಕ್ಕೆ ದುರುಪಯೋಗ ಮಾಡಿಕೊಂಡಿದ್ದಾನೆ ಅತನ ವಿರುದ್ದ ಈಗಾಗಲೇ ದೂರು ದಾಖಲಾಗಿದೆ ಅತನ ಬೇಜಾವ್ದಾರಿಯಿಂದ ಇಂತಹ ಪರಿಸ್ಥಿತಿ ಬಂದಿದೆ ಕೋರ್ಟ್ ಮೂಲಕ ವಸೂಲಿ ಮಾಡಲಾಗುತ್ತಾ ಇದೆ ಎಂದು ಸಮಜಾಯಿಷಿ ನೀಡಿದರು.

ಈ ಸಂದರ್ಭದಲ್ಲಿ ಮಹಿಳಾ ಸಂಘಗಳ ಪ್ರತಿನಿಧಿಗಳಾದ ಜ್ಯೋತಿ, ಮಂಜುಳಾ, ಅಮರಾವತಿ, ಕಾಂತಮ್ಮ, ಲೀಲಾವತಿ, ಭಾವನಾ, ವಿಜಯಮ್ಮ, ನೇತ್ರಾವತಿ, ಕಮಲಮ್ಮ, ಶ್ವೇತಾ, ಪದ್ಮಾವತಿ ಮುಂತಾದವರು ವಹಿಸಿದ್ದರು

Ramesh Babu

Journalist

Recent Posts

ಕೆ.ಸಿ.ವ್ಯಾಲಿಯಿಂದ ಜಿಲ್ಲೆಯ ರೈತರ ಬದುಕು ಹಸನು- ಕಾಂಗ್ರೆಸ್‌ ಮುಖಂಡ ಜನಪಹಳ್ಳಿ ನವೀನ್‌

ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್‌ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…

34 minutes ago

ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು  ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…

50 minutes ago

ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆ: ಮಕ್ಕಳು, ಶಿಕ್ಷಕ ಭಾವುಕ

ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…

3 hours ago

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ.‌ ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…

11 hours ago

ಚುನಾವಣಾ ಫಲಿತಾಂಶದ ವಿಶ್ಲೇಷಣೆ…..

ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…

14 hours ago

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್: ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸಲು ಸಭೆ

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…

24 hours ago