ಗರಿಗೆದರಿದ “TEAM MSS” ಚಟುವಟಿಕೆ: ಯಾರದ್ದು, ಏನಿದು ‘ಟೀಂ ಎಂಎಸ್ ಎಸ್’….? ಸಂಪೂರ್ಣ ಮಾಹಿತಿಗಾಗಿ ಈ ಸುದ್ದಿಯನ್ನು ಓದಿ….

ಒಂದು ಉಪಚುನಾವಣೆ ಒಳಗೊಂಡಂತೆ ನಾಲ್ಕು ವಿಧಾನಸಭೆ ಚುನಾವಣೆಗಳನ್ನು ಎದುರಿಸಿದ ಬಿ.ಮುನೇಗೌಡ ತಾಲೂಕಿಗೆ ನೀರು, ಕಲ್ಲು ಮುನೇಗೌಡ ಎಂದೇ ಚಿರಪರಿಚಿತರಾಗಿದ್ದಾರೆ…ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳಿಂದ ‘TEAM MSS’ ಎಂಬ ಹೆಸರನ್ನು ಚಾಲ್ತಿಗೆ ತಂದಿದ್ದಾರೆ ಎನ್ನಲಾಗಿದೆ….

ಸುದೀರ್ಘ ಅವಧಿಗೆ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.. ಜೆಡಿಎಸ್ ನ ಕಟ್ಟಾಳಾಗಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳಿಸಿದ್ದಾರೆ. 2013ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಬಿ.ಮುನೇಗೌಡರಿಗೆ, ಕೆಲವೇ ಕೆಲವು ಮತಗಳ ಅಂತರದಿಂದ ಹಿನ್ನಡೆಯಾಗಿತ್ತು. ಆದರೂ, ಎದೆಗುಂದದೆ ತಾಲೂಕಿನಲ್ಲಿ ಹನಿ ಕುಡಿಯುವ ನೀರಿಗೂ ಅಭಾವ ಎದುರಾದ ಸಂದರ್ಭದಲ್ಲಿ ಸ್ವಂತ ಹಣದಿಂದ ತಾಲೂಕಿನ ವಿವಿಧೆ ಬೋರ್ ವೆಲ್ ಮುಖಾಂತರ ನೀರನ್ನು ಒದಗಿಸಿದರು. ನಗರದಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಕೊಟ್ಟರು… ಅದೇರೀತಿ ತಾಲೂಕಿನ ಬಹುತೇಕ ದೇಗುಲಗಳಿಗೆ ಬಿ.ಮುನೇಗೌಡರು ಕಲ್ಲಿನ‌ ಸಹಾಯ ಮಾಡುವ ಮೂಲಕ ದೈವ ಹಾಗೂ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ‌..

2018 ಮತ್ತು 2023ರಲ್ಲಿ ‘ದಳಪತಿ’ಯಾಗಿ ಜನರ ಸೇವೆಗೆಂದು ಕಣಕ್ಕಿಳಿದಿದ್ದ ಬಿ.ಮುನೇಗೌಡರಿಗೆ ‘ಅದೃಷ್ಟ’ ಕೈ ಹಿಡಿಯಲಿಲ್ಲ. ಇದೀಗ ಬದಲಾದ ರಾಜಕೀಯ ‘ವಾತಾವರಣ’ದಲ್ಲಿ ಬಿ.ಮುನೇಗೌಡ ಹೊಸ ಹೆಜ್ಜೆ ಇಟ್ಟಂತೆ ಮೇಲ್ನೋಟಕ್ಕೆ ಕಾಣುತ್ತಿದೆ….

ಯುಗಾದಿಯ ಹೊಸ ಚಿಗುರಿನ ಸಮಯದಲ್ಲಿ ಮುನೇಗೌಡರ ಹೊಸ ಕನಸು ಕೂಡ ಚಿಗುರಿದೆ. ಇದಕ್ಕೆ ಸಾಕ್ಷಿ ಎಂಬಂತೆ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ “TEAM MSS” ಹೆಸರಿನಲ್ಲಿ ಹೊಸ ಪೋಸ್ಟ್ ಗಳು ರಾರಾಜಿಸುತ್ತಿವೆ.. ಈ ಪೋಸ್ಟರ್ ಗಳಲ್ಲಿ ಮುನೇಗೌಡರು ತಾಲೂಕಿಗೆ ಮಾಡಿದಂತಹ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆರೋಗ್ಯ ಸೇವೆ ಸೇರಿದಂತೆ ಹಲವು ಸೇವೆಗಳನ್ನು ನಮೂದಿಸಲಾಗಿದೆ‌. ಈ ಮೂಲಕ ತಮ್ಮ ಅಭಿಮಾನಿಗಳು, ತಾಲೂಕಿನ ಜನತೆಗೆ ಯುಗಾದಿ ಸಂದರ್ಭದಲ್ಲಿ ಹೊಸ ಸಂದೇಶ ರವಾನಿಸಿದ್ದಾರೆ..

ವಿಧಾನಸಭಾ ಚುನಾವಣೆಗೆ ಕೇವಲ ಎರಡು ವರ್ಷಗಳು ಬಾಕಿ ಇರುವಂತೆಯೇ ಮುನೇಗೌಡರು ಕ್ರೀಯಾಶೀಲರಾಗಿರುವುದು ಅವರ ಅಭಿಮಾನಿಗಳಲ್ಲಿ ಸಂತೋಷ ಮೂಡಿಸಿದೆ…

Ramesh Babu

Journalist

Recent Posts

ಹಿಂಬದಿಯಿಂದ ಬೈಕ್‌ಗೆ ಕಾರು ಡಿಕ್ಕಿ: ದಂಪತಿ ಸಾವು

ದೊಡ್ಡಬಳ್ಳಾಪುರ: ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ದಂಪತಿ ಮೃತಪಟ್ಟಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ…

1 hour ago

ಬಿಗ್ ಬಾಸ್ ಮತ್ತು ಏಷ್ಯನ್ ಗೇಮ್ಸ್……

ಜಪಾನಿನ ಐಚಿ - ನಾಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಮತ್ತು ಭಾರತದ ವಿವಿಧ ಭಾಷೆಯ ಟಿವಿ ಚಾನಲ್ ಗಳಲ್ಲಿ ಪ್ರಸಾರವಾಗುತ್ತಿರುವ…

2 hours ago

ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ- ಆರ್.ವಿ. ಮಹೇಶ್

ದೊಡ್ಡಬಳ್ಳಾಪುರ: ಬರಗಾಲದ ಸಂದರ್ಭದಲ್ಲಿ ಜಲಮೂಲಗಳ ಸಂರಕ್ಷಣೆ ಹಾಗೂ ಕೆರೆಗಳ ಪುನಶ್ಚೇತನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಗೊಳ್ಳುತ್ತಿರುವ ಕೆರೆ…

14 hours ago

ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾದ 18ರ ಹರೆಯದ ವಿದ್ಯಾರ್ಥಿ

ದೇವನಹಳ್ಳಿ: ಹಾಸ್ಟೆಲ್ ಕೊಠಡಿಯಲ್ಲಿ ಡಿಪ್ಲೋಮಾ ವಿದ್ಯಾರ್ಥಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಚನ್ನರಾಯಪಟ್ಟಣ ಗ್ರಾಮದಲ್ಲಿರುವ ಸರ್ಕಾರಿ ಉಪಕರಣಾಗಾರ…

15 hours ago

ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ತೇಜಸ್ವಿನಿ.ಸಿ

ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢಶಾಲಾ…

15 hours ago

ಬರದ ನಡುವೆ ಜಾನುವಾರುಗಳಿಗೆ ಹಸಿರು ಆಸರೆ: 70 ಎಕರೆಯಲ್ಲಿ ಹಸಿಹುಲ್ಲು ಬೆಳವಣಿಗೆಗೆ ಜಿಪಂ ಕ್ರಮ: ಮತ್ತಷ್ಟು ಸರ್ಕಾರಿ ಜಮೀನು ಹುಲ್ಲುಗಾವಲಾಗಿ ಪರಿವರ್ತನೆ

ಬೆಂಗಳೂರು ಗ್ರಾಮಾಂತರ: ಮಳೆ ಕೈಕೊಟ್ಟ ಪರಿಣಾಮ ಕೃಷಿ ಬೆಳೆಗಳ ಜತೆಗೆ ಜಾನುವಾರುಗಳ ಮೇವಿನ ಮೇಲೂ ಬರದ ಕರಿನೆರಳು ಆವರಿಸುತ್ತಿರುವ ಹಿನ್ನೆಲೆಯಲ್ಲಿ…

1 day ago