ಸರ್ಕಾರಿ ಭೂಮಿ ಸರ್ಕಾರಕ್ಕೆ ಹೊರತು- ಭೂಗಳ್ಳರಿಗಲ್ಲ- ರೈತ ಅಂಬರೀಶ್

ದೊಡ್ಡಬಳ್ಳಾಪುರ: ತಹಶೀಲ್ದಾರ್ ನೀಡಿದ ವರದಿಯ ಆಧಾರದ ಮೇಲೆ ವಿಚಾರಣೆ ನಡೆಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರು ತಾಲ್ಲೂಕಿನ  ಹುಲಿಕುಂಟೆ ಗ್ರಾಮದ ಸರ್ವೇ ನಂಬರ್ 150ರ ಸರ್ಕಾರಿ ಗೋಮಾಳ ಜಮೀನಿನಲ್ಲಿ ಆಹಾರ ಧಾನ್ಯ ಉತ್ಪಾದನೆ ಸಲುವಾಗಿ ರೈತರಿಗೆ ಜಿಎಂಎಫ್ ಯೋಜನೆಯಡಿ ಹಂಗಾಮಿಯಾಗಿ ಸಾಗುವಳಿ ಚೀಟಿ ನೀಡಲಾಗಿದ್ದ ಸುಮಾರು 38 ಎಕರೆ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯುವಂತೆ ಜೂನ್ 18 ರಂದು ಆದೇಶ ಮಾಡಿದ್ದಾರೆ.

ಜಿಎಂಎಫ್ ಯೋಜನೆಯಲ್ಲಿ ರೈತರಿಗೆ ಸರ್ಕಾರದಿಂದ ಮಂಜೂರಾಗಿರುವ ಜಮೀನುಗಳು ಕಾನೂನಾತ್ಮಕವಾಗಿ ವಹಿವಾಟು ಆಗದೇ ಇರುವುದರಿಂದ ಈ ಜಮೀನುಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವುದು ಅವಶ್ಯಕವಾಗಿದೆ. ಹಾಗಾಗಿ ಈ ಜಮೀನುಗಳನ್ನು ಸರ್ಕಾರದ ವಶಕ್ಕೆ ಪಡೆಯಲು ದೊಡ್ಡಬಳ್ಳಾಪುರ ತಹಶೀಲ್ದಾರ್ ಅವರಿಗೆ ನಿರ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ ಎಂದು ರೈತ ಅಂಬರೀಶ್ ತಿಳಿಸಿದ್ದಾರೆ.

ಸರ್ಕಾರದ ವಶಕ್ಕೆ ಪಡೆಯಲಾಗುತ್ತಿರುವ ಈ ಜಮೀನು ಈಗಿನ ಮಾರುಕಟ್ಟೆ ಬೆಲೆಯಲ್ಲಿ ಸುಮಾರು ₹150 ಕೋಟಿ ಬೆಲೆ ಬಾಳಬಹುದು ಎಂದು ಅಂದಾಜಿಸಲಾಗಿದೆ. ಹುಲಿಕುಂಟೆ ಸಮೀಪ ಸರ್ಕಾರ ವಶಕ್ಕೆ ಪಡೆಯುತ್ತಿರುವ ಈ ಜಮೀನಿನ ಸುತ್ತಲು ಈಗಾಗಲೇ ಕೆಎಐಡಿಬಿ ಕ್ವಿನ್ ಸಿಟಿ ಹಾಗೂ ಹೈಟೆಕ್ ಲಾಜಿಸ್ಟಿಕ್ ಪಾರ್ಕ್ ಸ್ಥಾಪನೆಗಾಗಿ ಸುಮಾರು 2 ಸಾವಿರ ಎಕರೆ ಭೂಸ್ವಾಧೀನ ಮಾಡಿಕೊಂಡಿದೆ. ಹುಲಿಕುಂಟೆ ಗ್ರಾಮದ ಸರ್ವೇ ನಂಬರ್ 150ಕ್ಕೆ ಸಂಬಂಧಿಸಿದಂತೆ ನಡೆದಿರಬಹುದಾದ ಅಕ್ರಮ ವಹಿವಾಟಿನ ಕುರಿತು ತನಿಖೆ ನಡೆಸಿ 15 ದಿನಗಳ ಒಳಗೆ ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಮೂರು ಜನರ ಸಮಿತಿ ರಚಿಸಿ ಜೂನ್ 13 ರಂದು ಕಂದಾಯ ಇಲಾಖೆಯ(ವಿಶೇಷ ಕೋಶ) ಅಧೀನ ಕಾರ್ಯದರ್ಶಿ ಕೆ.ಎಸ್.ಶೈಲಶ್ರೀ ಅವರು ಸಹ ಆದೇಶ ಹೊರಡಿಸಿದ್ದಾರೆ ಎಂದರು.

ಇನ್ನು ತಾಲೂಕಿನಲ್ಲಿ ಇಂತಹ ಸರ್ಕಾರಿ ಜಾಗಗಳನ್ನು ಭೂಗಳ್ಳರು ಕಬಳಿಸಿದ್ದಾರೆ. ಅವುಗಳನ್ನು ಕೂಡಲೇ ಪತ್ತೆಹಚ್ಚಿ ಸರ್ಕಾರ ವಶಕ್ಕೆ ಪಡೆಯಬೇಕು. ರಿಯಲ್ ಎಸ್ಟೇಟ್ ದಂಧೆಗೆ ಕಡಿವಾಣ ಹಾಕಬೇಕು. ಸರ್ಕಾರಿ ಉದ್ದೇಶಕ್ಕೋಸ್ಕರ ಸರ್ಕಾರಿ ಜಾಗವನ್ನು ಉಪಯೋಗಿಸಬೇಕು ಎಂದರು.

Ramesh Babu

Journalist

Recent Posts

ಘಾಟಿ ಸುಬ್ರಹ್ಮಣ್ಯ‌ ದೇವಾಲಯ ಹುಂಡಿ ಎಣಿಕೆ: 77.58 ಲಕ್ಷ ಸಂಗ್ರಹ

ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆಯಿತು. ಎಣಿಕೆಯಲ್ಲಿ…

2 hours ago

ಲಗೇಜ್ ಟ್ರಾಲಿಯಲ್ಲಿ ಚಿನ್ನ ಸಾಗಾಟ: ಇಬ್ಬರ ಬಂಧನ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಗೇಜ್ ಟ್ರಾಲಿಯಲ್ಲಿ ಚಿನ್ನದ ಬಿಸ್ಕೆಟ್‌ಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರು ಪ್ರಯಾಣಿಕರನ್ನು ಡೈರೆಕ್ಟರೇಟ್…

3 hours ago

ಆಧುನಿಕ ತಂತ್ರಜ್ಞಾನ–ಸಾವಯವ ಕೃಷಿಯಿಂದ ಮಾದರಿಯಾದ ನೆಲಮಂಗಲದ ರೈತ ಮಹಿಳೆ

ನೆಲಮಂಗಲ: ಕಡಿಮೆ ಶಿಕ್ಷಣದ ನಡುವೆಯೂ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಸಾವಯವ ಪದ್ಧತಿಗಳನ್ನು ಅಳವಡಿಸಿಕೊಂಡು ಸಾಧನೆ ಮಾಡಿರುವ ನೆಲಮಂಗಲ ತಾಲೂಕಿನ…

3 hours ago

ನೊಬೆಲ್ ಪ್ರಶಸ್ತಿ ಮತ್ತೆ ಮನಸ್ಸು ಮತ್ತು ಸಮಾಜ ಪುನ:ಶ್ಚೇತನಗೊಳ್ಳುವಂತೆ ಮಾಡಲಿ

ನೊಬೆಲ್ ಪ್ರಶಸ್ತಿ ಘೋಷಣೆಯ ವಾರ....... ಈ ವಾರ ಪ್ರಕಟವಾಗುತ್ತಿರುವ ನೊಬೆಲ್ ಪ್ರಶಸ್ತಿಗಳ ಕಡೆಯೂ ಸ್ವಲ್ಪ ಮನಸ್ಸು ಹರಿಯಲಿ ಮತ್ತು ಅರಿಯಲಿ..........…

7 hours ago