ಕೋಲಾರ: ಮುಂದಿನ ದಿನಗಳಲ್ಲಿ ವೇಮಗಲ್ ಅನ್ನು ಹೊಸ ತಾಲ್ಲೂಕು ಆಗುವ ಸಾದ್ಯತೆ ಹೆಚ್ಚಾಗಿರುವುದರಿಂದ ಅ ಭಾಗದಲ್ಲಿರುವ ಗುಂಡು ತೋಪು, ಕೆರೆ, ಕುಂಟೆ, ಹಾಗೂ ಸರ್ಕಾರಿ ಜಮೀನುಗಳನ್ನು ಉಳಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ನಗರದ ಹೊರವಲಯದ ಉಪವಿಭಾಗಾಧಿಕಾರಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕೋಲಾರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಮಂಜೂರಾಗಿ ಖಾತೆಗಳಾಗಿರುವ ಜಮೀನುಗಳ ಪೋಡಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಈಗಾಗಲೇ ಪೋಡಿ ಆಂದೋಲನ ಕಾರ್ಯ ಬಿರುಸಿನಿಂದ ಸಾಗಿದೆ ಕನಿಷ್ಠ ಎರಡು ತಿಂಗಳೊಳಗೆ ರೈತರಿಗೆ ದಾಖಲೆಗಳನ್ನು ಕೊಡಿಸುವ ಕೆಲಸ ಮಾಡಲಾಗುತ್ತದೆ ಎಂದರು.
ವೇಮಗಲ್ ಅನ್ನು ಹೊಸ ತಾಲ್ಲೂಕು ಕೇಂದ್ರ ಮಾಡಿದರೆ ಅ ಭಾಗದಲ್ಲಿ ಹೊಸದಾಗಿ ತಾಲೂಕು ಮಟ್ಟದ ಅಧಿಕಾರಿಗಳ ಕಛೇರಿ ಶಾಲೆ, ಕಾಲೇಜು ಆಸ್ಪತ್ರೆಗಾಗಿ ಜಮೀನುಗಳನ್ನು ಉಳಿಸಬೇಕಾಗಿದೆ ಅದಕ್ಕಾಗಿ ಗುಂಡು ತೋಪು ಕೆರೆ, ಕುಂಟೆ ಸ್ಮಶಾನ ಜಮೀನುಗಳನ್ನು ಯಾರು ಅಕ್ರಮವಾಗಿ ಭೋಗಸ್ ದಾಖಲೆಗಳನ್ನು ಸೃಷ್ಟಿಸಿಕೊಳ್ಳಲು ಸಾಧ್ಯವಿಲ್ಲ ಅದನೆಲ್ಲಾ ಸರ್ವೆ ಮಾಡಿ ಪೆನ್ಸಿಂಗ್ ಹಾಕಿಸುತ್ತೇವೆ ಬೋಗಸ್ ದಾಖಲೆಗಳನ್ನು ಸೃಷ್ಟಿಸಿಕೊಂಡು ಅತಿಕ್ರಮಿಸಿಕೊಂಡರೆ ಅಂತವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿರುವ ರೈತರಿಗೆ ಸಾಗುವಳಿ ಚೀಟಿ ನೀಡಿ ಖಾತೆ ಮಾಡಲಾಗಿರುವ ಜಮೀನುಗಳಿಗೆ ಹದ್ದುಬಸ್ತು ಗುರುತಿಸುವ ಕಾರ್ಯ ನಡೆಯುತ್ತಿದೆ ರಾಜ್ಯದಲ್ಲೇ ಕೋಲಾರ ವಿಧಾನಸಭಾ ಕ್ಷೇತ್ರವನ್ನು ಪೋಡಿ ಆಂದೋಲನದಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳಲಿದೆ. ಪಿ ನಂಬರ್ ಇರುವ ಜಮೀನುಗಳಿಗೆ ಪ್ರತ್ಯೇಕ ಪಾಣಿ ನೀಡುವ ಉದ್ದೇಶ ಈ ಆಂದೋಲನ ಪ್ರಮುಖ ಉದ್ದೇಶವಾಗಿದೆ ಎಂದರು
ಕೋಲಾರ ವಿದಾನಸಭಾ ಕ್ಷೇತ್ರದಲ್ಲಿ ೨೦೧೬-೨೦೧೭ ನೇ ಸಾಲಿನಲ್ಲಿ ನೀಡಲಾಗಿರುವ ಸಾಗುವಳಿ ಚೀಟಿಗಳಲ್ಲಿ ಅವ್ಯವಹಾರವಾಗಿದೆ ಎನ್ನುವ ಆರೋಪದಿಂದ ಎಸ್.ಐ.ಟಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ಸಾಗುವಳಿ ನೀಡಲಾಗಿರುವ ಹಲವು ರೈತರ ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ ಆದರೆ ಅದರಲ್ಲಿ ಯಾವುದು ಅಕ್ರಮವಾಗಿದೆ ಅದು ಬಿಟ್ಟು ಉಳಿದ ಕಡತಗಳನ್ನು ವಾಪಸ್ ನೀಡುವಂತೆ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳು ಪತ್ರ ಮುಖೇನ ಎಸ್.ಐ.ಟಿ ಅಧಿಕಾರಿಗಳನ್ನು ಕೋರಲಾಗಿದೆ ಶೀಘ್ರದಲ್ಲೇ ಎಲ್ಲಾ ರೈತರಿಗೂ ಪಹಣಿ ನೀಡುವ ಕೆಲಸ ಕೋಲಾರದಲ್ಲಿ ನಡೆಯಲಿದೆ ಎಂದರು.
ಆಶ್ರಯ ಯೋಜನೆಯಲ್ಲಿ ಶೀಘ್ರದಲ್ಲೇ ಕೋಲಾರ ವಿಧಾನಸಭಾ ಕ್ಷೇತ್ರದ ನಿವೇಶನ ರಹಿತರನ್ನು ಗುರುತಿಸಿ ನಿವೇಶನ ನೀಡುವ ಪ್ರಯತ್ನ ನಡೆಯುತ್ತಿದೆ ತಾಲ್ಲೂಕಿನ ಅರಹಳ್ಳಿ ಬಳಿ ಈಗಾಗಲೇ ಜಮೀನನ್ನು ಗುರುತಿಸಲಾಗಿದೆ. ಅದಕ್ಕೂ ಮೊದಲು ಆಶ್ರಯ ಸಮಿತಿಯ ರಚನೆಯಾಗಬೇಕಿತ್ತು ಸಮಿತಿ ರಚನೆಯಾಗಿದೆ ಶೀಘ್ರದಲ್ಲೇ ಆಶ್ರಯ ಸಮಿತಿ ಸಭೆ ನಡೆಸಿ ತೀರ್ಮಾಣ ಕೈಗೊಳ್ಳಲಾಗುವುದು ಸರ್ಕಾರದಿಂದ ಕೊಂಡು ನಿವೇಶನ ರಹಿತರಿಗೆ ನೀಡುವಂತೆ ಆದೇಶವನ್ನು ಹೊರಡಿಸಲಾಗಿದೆ. ವಿಶೇಷವಾಗಿ ಆಪಾರ್ಟ್ಮೆಂಟ್ ರೀತಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡುವ ಆಲೋಚನೆ ಇದೆ. ಅದರಲ್ಲಿ ಸುಸಜ್ಜಿತವಾಗಿ ಮೂಲಭೂತ ಸೌಲಭ್ಯಗಳನ್ನು ಒಳಗೊಂಡು ಮಾಡಬೇಕು ಎನ್ನುವುದು ಆಲೋಚನೆ ಇದೆ ಎಂದು ಹೇಳಿದರು.
ಕುಡಾದಲ್ಲಿ ಹಣದ ಕೊರತೆ ಇದೆ ಹಾಗಾಗಿ ಕೂಡಾ ಬಡಾವಣೆಯಲ್ಲಿ ೨೭೦ ಕ್ಕೂ ಹೆಚ್ಚು ಖಾಲಿ ನಿವೇಶಗಳಿಗೆ ಅದನ್ನೆಲ್ಲಾ ಹರಾಜು ಮಾಡಿ ಮಾರಾಟ ಮಾಡಿ ಅದರಿಂದ ಬರುವ ಹಣದಿಂದ ಜಮೀನು ಖರೀದಿ ಮಾಡಿ ಹೊಸ ಬಡಾವಣೆ ಮಾಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಈ ಬಗ್ಗೆ ಸರ್ಕಾರದಿಂದ ಅನುಮತಿ ನೀಡಲು ಪತ್ರ ಬರೆಯಲಾಗಿದೆ. ಅನುಮತಿ ಸಿಕ್ಕ ಕೂಡಲೇ ಕೂಡ ಬಡಾವಣೆ ನಿರ್ಮಾಣ ಮಾಡಲಾಗುವುದು ಎಂದರು.
ಕುಡಾ ಬಡಾವಣೆಯಲ್ಲಿ ಹರಾಜು ಪ್ರಕ್ರಿಯೆ ಮೂಲಕ ಮಾರಾಟವಾಗದೇ ಇದ್ದಲ್ಲಿ ಸಿಂಗಲ್ ಏಜೆಂಟರಿಗೆ ಬಡಾವಣೆಯಲ್ಲಿರುವ ನಿವೇಶನಗಳನ್ನು ಮಾರಾಟ ಮಾಡಲಾಗುವುದು ಈ ಹಿಂದೆ ಹರಾಜು ಪ್ರಕ್ರಿಯೆ ನಡೆದಿತ್ತಾದರೂ ಅಭಿವೃದ್ದಿ ಇಲ್ಲದೆ ಇದ್ದುದ್ದರಿಂದ ಖರೀದಿಗೆ ಯಾರು ಮುಂದಾಗಿರಲ್ಲಿ, ಆದರೆ ಈ ಬಾರಿ ಆರೀತಿ ಆಗುವುದಿಲ್ಲ ಎನ್ನುವ ನಂಬಿಕೆ ಇದೆ. ಕೂಡಾ ಬಡಾವಣೆಯನ್ನು ಅಭಿವೃದ್ದಿ ಪಡಿಸಲಾಗುತ್ತಿದೆ ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ನಿವೇಶನ ಕೊಂಡುಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಾರೆ ಎನ್ನುವ ನಿರೀಕ್ಷೆ ಇದೆ ಎಂದರು.
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…
ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…
ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…
ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…