Categories: ಲೇಖನ

ಸಮಾಜ ಬದಲಾಗಬೇಕು ನಿಜ, ಆದರೆ, ಬೆಕ್ಕಿಗೆ ಗಂಟೆ ಕಟ್ಟುವವರು ಯಾರು….?

” ಈ ಸಮಾಜ ಹಾಳಾಗಲು ಕೇವಲ ಕೆಟ್ಟವರು ಮಾತ್ರ ಕಾರಣವಲ್ಲ ಒಳ್ಳೆಯವರ ಮೌನವೂ ಕಾರಣ ”

ಜಗತ್ತಿನ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದು ಕರೆಯಲಾಗುವ ಆಲ್ಬರ್ಟ್ ಐನ್ ಸ್ಟೈನ್ ಅವರ ಮಾತುಗಳಿವು. ಆ ಅನುಭವದ ಅನಿಸಿಕೆಯ ಹಿನ್ನೆಲೆಯಲ್ಲಿ……

ಸಮಾಜ ಬದಲಾಗಬೇಕು ನಿಜ,
ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು.?

ಸಾಮಾಜಿಕ ಜಾಲತಾಣಗಳಲ್ಲಿ ಬರೆದ ಮಾತ್ರಕ್ಕೆ ಕ್ರಾಂತಿ ಆಗುತ್ತದೆಯೇ ?

ಬಹಳಷ್ಟು ಮಹಾನುಭಾವರೇ ವಿಫಲವಾಗಿರುವಾಗ ನಿಮ್ಮಿಂದ ನಮ್ಮಿಂದ ಸಾಧ್ಯವೇ ?

ಎಲ್ಲವೂ ಹೇಳೋಕೆ, ಕೇಳೋಕೆ ಚೆಂದ. ಆದರೆ ವಾಸ್ತವ ಅಳವಡಿಕೆ ಅಸಾಧ್ಯ. !

ಶ್ರೀಮಂತರಿಗೆ ಬದಲಾವಣೆ ಅಗತ್ಯವಿಲ್ಲ. ಬಡವರಿಗೆ ಬದಲಾಯಿಸುವ ಶಕ್ತಿ ಇಲ್ಲ. !

ನಮ್ಮ ಜನ ಬದಲಾಗದೆ ಏನೂ ಮಾಡಲು ಸಾಧ್ಯವಿಲ್ಲ. !

ಮೊದಲು ನೀವು ಬದಲಾಗಿ,
ಆಮೇಲೆ ಬೇರೆಯವರ ಬಗ್ಗೆ ಮಾತನಾಡಿ.!

ಎಲ್ಲ ಎಲ್ಲವನರಿತು ಫಲವೇನು,
ತನ್ನ ತಾ ಅರಿಯಬೇಕಲ್ಲವೇ !

ಲೋಕದಾ ಡೊಂಕ ನೀವೇಕೆ ತಿದ್ದುವಿರು,
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ,
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ !

ಎಲ್ಲರೂ ಕಳ್ಳರು, ಎಲ್ಲರೂ ಭ್ರಷ್ಟರು, ಹಾಗಾದರೆ ಬದಲಾವಣೆ ಮಾಡುವುದು ಯಾರನ್ನು.?

ಬದಲಾವಣೆ ಒಂದು ಕನಸು ಭ್ರಮೆ. ಸುಮ್ಮನೆ ಬೇರೆ ಕೆಲಸ ನೋಡಿಕೊಳ್ಳಿ. !

ಜನ ಬದಲಾದರೆ ಸಮಾಜ ತನ್ನಿಂದ ತಾನೇ ಬದಲಾಗುತ್ತದೆ. !

ಸಮಾಜ ಬದಲಾಗಬೇಕಾದರೆ ಮೊದಲು ಜನ ಬದಲಾಗಬೇಕು. !

ಒಳ್ಳೆಯ ಸರ್ಕಾರದಿಂದ ಮಾತ್ರ ಬದಲಾವಣೆ ತರಲು ಸಾಧ್ಯ. !

ಸರ್ಕಾರ ಒಳ್ಳೆಯದು ಬರಬೇಕಾದರೆ ಮೊದಲು ಜನ ಬದಲಾಗಬೇಕು. !

ಹೌದು,
ಈ ರೀತಿಯ ಚರ್ಚೆಗಳು ದಿನನಿತ್ಯ ನಿರಂತರವಾಗಿ ಆಗುತ್ತಲೇ ಇದೆ.

ಸ್ವಲ್ಪ ಮಟ್ಟಿಗೆ ಉತ್ತರಗಳೂ ಸಿಗಬಹುದು.

ಅನೇಕರು ಅನೇಕ ರೀತಿಯಲ್ಲಿ ವ್ಯಾಖ್ಯಾನಿಸಬಹುದು.

ಬದಲಾವಣೆ ಒಪ್ಪದ ಜನ ಇನ್ನೂ ಅನೇಕ ರೀತಿಯಲ್ಲಿ ವೇದಾಂತಗಳನ್ನು ಉವಾಚಿಸಿ ನಮ್ಮ ಬಾಯಿ ಮುಚ್ಚಿಸಬಹುದು !

ಹಾಗೆಂದು ಸುಮ್ಮನೆ ಇರುವುದು ಉಚಿತವೇ ?

ಯಥಾಸ್ಥಿತಿ ಒಪ್ಪಿಕೊಂಡು ಸುಮ್ಮನೆ ಕುಳಿತುಕೊಳ್ಳಬೇಕೆ ?

ವ್ಯವಸ್ಥೆಯ ಲಾಭ ಪಡೆಯುತ್ತಿರುವ ಶೋಷಕರ ಶೋಷಣೆ ಪ್ರಶ್ನಿಸಬಾರದೆ ?

ಕನಿಷ್ಠ ನಮ್ಮ ಪ್ರಯತ್ನ ಮಾಡಬಾರದೆ‌ ?

ಆದರೆ ವಾಸ್ತವ. ?

ನಮ್ಮ ಮನಗಳಲ್ಲಿ,
ನಮ್ಮ ಮನೆಗಳಲ್ಲಿ,
ನಮ್ಮ ಮತಗಳಲ್ಲಿ.
ಬದಲಾವಣೆಯಾಗಬೇಕಿದೆ.

ಆಗ ನಮ್ಮೆಲ್ಲರ ಕನಸಿನ ಸಮ ಸಮಾಜದ ಕನಸು ಸಾಧ್ಯವಾಗಬಹುದು.

ಜನರ ಜೀವನಮಟ್ಟ ಸುಧಾರಣೆಯಾಗಬಹುದು.

ಅದಕ್ಕಾಗಿ ನಾವು ಮಾಡಬೇಕಾದ ಮೊದಲನೆಯ ಕೆಲಸ ಸಂಘಟನೆ ಅಥವಾ ಒಂದು ಗೂಡುವುದು.

ನಮ್ಮ ಮನಸ್ಸುಗಳನ್ನು ಜಾಗೃತಾವಸ್ಥೆಯಲ್ಲಿ ಇರುವಂತೆ ನೋಡಿಕೊಳ್ಳುವುದು.

ನಮ್ಮ ಸಂಪರ್ಕಕ್ಕೆ ಬರುವ ಎಲ್ಲರಿಗೂ ಈ ಬಗ್ಗೆ ಯೋಚಿಸುವಂತೆ ಮಾಡುವುದು.

ಆ ಬದಲಾವಣೆಯ ನಿರೀಕ್ಷೆಯಲ್ಲಿ ……………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಏ.12ರಂದು ದೊಡ್ಡಬಳ್ಳಾಪುರ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ ನಗರದಲ್ಲಿ ಏ.12 ರಂದು 220/66/11ಕೆವಿ ಕೆಐಎಡಿಬಿ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F02-Birla Super ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಗಳು…

1 hour ago

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರ ಸಾವು

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರವಾಗಿ ಸಾವನ್ನಪ್ಪಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೋರಾಯನಪಾಳ್ಯದಲ್ಲಿ ನಡೆದಿದೆ.. 17 ವರ್ಷದ…

6 hours ago

ಲೋಕಾಯುಕ್ತ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ರಾಯಚೂರು ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸುರೇಶ್ ಶೆಟ್ಟಿ ಲೋಕಾಯುಕ್ತರ ಬಲೆಗೆ ಬಿದ್ದ ಮುಖ್ಯಾಧಿಕಾರಿ. ರಾಘವೇಂದ್ರ…

6 hours ago

ಹುಚ್ಚನೊಬ್ಬನ ಕನಸು….

ದೇಶದ ಎಲ್ಲಾ ದಲಿತ ಕೇರಿಗಳನ್ನು ನಾಶ ಮಾಡಬೇಕು. ಅಲ್ಲಿನ ಎಲ್ಲರಿಗೂ ಊರ ಒಳಗಿನ ಸ್ಥಳದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಬೇಕು. ಬ್ರಾಹ್ಮಣರ…

11 hours ago

PUC Result: ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ….ಈ ಕಥೆ ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಗ್ಯಾರಂಟಿ

600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಟಾಪರ್ ಆದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು…

22 hours ago

ತೂಬಗೆರೆ ಸರ್ಕಾರಿ ಪಿಯು ಕಾಲೇಜಿಗೆ ಮತ್ತೊಮ್ಮೆ ಮೆರುಗು: ಶೇ.95.45 ಫಲಿತಾಂಶ

ದೊಡ್ಡಬಳ್ಳಾಪುರ (ತೂಬಗೆರೆ): ಗ್ರಾಮಾಂತರ ಭಾಗದಲ್ಲಿದ್ದರೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು…

23 hours ago