Categories: ಲೇಖನ

ಸಕಾರಾತ್ಮಕ ಮತ್ತು ನಕಾರಾತ್ಮಕ…….

ಸಕಾರಾತ್ಮಕ – ಪಾಸಿಟಿವ್ ವಿಷಯಗಳ ಬಗ್ಗೆಯೇ ಹೆಚ್ಚು ಮಾತನಾಡಬೇಕು, ಓದಬೇಕು, ಬರೆಯಬೇಕು, ತಿಳಿಯಬೇಕು, ತಿಳಿಸಬೇಕು ಎಂಬುದು ಒಂದು ಸಾಮಾನ್ಯ ಸಾರ್ವಜನಿಕ ಅಭಿಪ್ರಾಯ…..

ಹಾಗಾದರೆ ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಾಮಾಜಿಕ ಮುಂತಾದ ವಿಷಯಗಳಲ್ಲಿ ಯಾವುದು ಪಾಸಿಟಿವ್, ಯಾವುದು ನೆಗೆಟಿವ್ ಎಂಬುದು ಒಂದು ಪ್ರಶ್ನೆಯಾಗಿ ಕಾಡುತ್ತದೆ.

ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಇತ್ಯಾದಿ ಧರ್ಮಗಳ ಲೋಪ ದೋಷಗಳ ಬಗ್ಗೆ ಮಾತನಾಡುವುದು ಅಥವಾ ಅವುಗಳಲ್ಲಿರುವ ಒಳ್ಳೆಯ ಗುಣಗಳ ಬಗ್ಗೆ ಮಾತನಾಡುವುದರಲ್ಲಿ ಯಾವುದು ಪಾಸಿಟಿವ್ ಯಾವುದು ನೆಗೆಟಿವ್ ?

ಕೇವಲ ಒಳ್ಳೆಯ ವಿಷಯ ಮಾತ್ರ ಪ್ರಸ್ತಾಪಿಸಿದರೆ ನಮ್ಮ ಚಿಂತನೆಯಲ್ಲಿ ಮೂಡುವ ಲೋಪಗಳನ್ನು ಸರಿಪಡಿಸುವುದು ಹೇಗೆ ? ಕಾಲಕ್ಕೆ ತಕ್ಕಂತೆ ಲೋಪ ಸರಿಪಡಿಸದೆ ಪರಿಪೂರ್ಣ ಧರ್ಮ ಎಂದು ಕರೆಯುವುದು ಮತ್ತು ಅನುಸರಿಸುವುದು ಹೇಗೆ ?

ಪೆಹಲ್ಗಾಮ್, ಭಯೋತ್ಪಾದನೆ, ಯುದ್ಧ, ಮತಾಂತರ, ಟಿಪ್ಪು ಸುಲ್ತಾನ್, ಶಿವಾಜಿ, ಗಾಂಧಿ, ಸಾರ್ವಕರ್ ಮುಂತಾದವರ ಬಗ್ಗೆ ಪರ ಅಥವಾ ವಿರೋಧ ಮಾತನಾಡುವುದು ಅಥವಾ ಊಟ, ಬಟ್ಟೆ, ವಸತಿ, ಶಿಕ್ಷಣ, ಆರೋಗ್ಯ, ಉದ್ಯೋಗ ಇವುಗಳ ಬಗ್ಗೆ ಮಾತನಾಡುವುದು
ಇದರಲ್ಲಿ ಯಾವುದು ಪಾಸಿಟಿವ್ ಯಾವುದು ನೆಗೆಟಿವ್ ?

ಇತಿಹಾಸ ತಿರುಚಲಾಗಿದೆ, ಈಗ ಅದನ್ನು ಮತ್ತೆ ಸರಿಪಡಿಸಬೇಕು ಎಂಬುದು ಅಥವಾ ಇತಿಹಾಸ ಸರಿಯಾಗಿದೆ ಈಗ ಅದನ್ನು ತಿರುಚಲಾಗುತ್ತಿದೆ ಎಂಬುದರಲ್ಲಿ ಯಾವುದು ಪಾಸಿಟಿವ್ ಯಾವುದು ನೆಗೆಟಿವ್….

ಅಂಬಾನಿ, ಅದಾನಿಗಳು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅತ್ಯುತ್ತಮ ಸ್ಥಾನ ಪಡೆದಿದ್ದಾರೆ, ಕೆಲವು ಸಿನಿಮಾಗಳು 1000 ಕೋಟಿಗೂ ಹೆಚ್ಚು ಲಾಭಗಳಿಸಿದ ಸಾಧನೆ ಬಗ್ಗೆ ಮಾತನಾಡುವುದು ಅಥವಾ ಈಗಲೂ ಲಕ್ಷಾಂತರ ಭಿಕ್ಷುಕರು, ಅಪೌಷ್ಟಿಕತೆಯ ಮಕ್ಕಳು, ಅತ್ಯಾಚಾರ, ಕೊಲೆಗಳು, ಭ್ರಷ್ಟಾಚಾರ, ಜಾತೀಯತೆ ಸಮಸ್ಯೆಗಳ ಬಗ್ಗೆ ಮಾತನಾಡುವುದು ಇದರಲ್ಲಿ ಯಾವುದು ಪಾಸಿಟಿವ್ ಯಾವುದು ನೆಗೆಟಿವ್ ?

ಮಾಧ್ಯಮಗಳ ಪ್ರತಿ ಕ್ಷಣವೂ ಬಿತ್ತರಿಸುವ ಬ್ರೇಕಿಂಗ್ ನ್ಯೂಸ್ ಗಳಲ್ಲಿ ಎಷ್ಟು ಪಾಸಿಟಿವ್ ಇದೆ, ಎಷ್ಟು ನೆಗೆಟಿವ್ ಇದೆ, ಅದು ಯಾವುದು ಎಂದು ಗಮನಿಸಿದರೆ ಸಕಾರಾತ್ಮಕ ಮತ್ತು ನಕಾರಾತ್ಮಕದ ಅರ್ಥವೇ ಬದಲಾಗುತ್ತದೆ…..

ಕುಸಿಯುತ್ತಿರುವ ರೂಪಾಯಿ ಬೆಲೆ, ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ಅಥವಾ ಆರ್ಥಿಕ ಗಾತ್ರದಲ್ಲಿ ಮತ್ತು ಜಿಡಿಪಿ ಬೆಳವಣಿಗೆಯಲ್ಲಿ ಏರುತ್ತಿರುವ ಅಂಕಿಅಂಶಗಳ ಬಗ್ಗೆ ಮಾತನಾಡುವುದರಲ್ಲಿ ಯಾವುದು ಪಾಸಿಟಿವ್ ಯಾವುದು ನೆಗೆಟಿವ್ ?

ಮುಸ್ಲಿಮರದು ಅತಿಯಾಯಿತು ಅವರಿಗೆ ಸರಿಯಾಗಿ ಪಾಠ ಕಲಿಸಬೇಕು ಎಂಬುದು ಒಂದು ಕಡೆ, ಹಿಂದೂಗಳ ದಬ್ಬಾಳಿಕೆ ಜಾಸ್ತಿಯಾಯಿತು‌ ಅವರಿಗೆ ಸರಿಯಾಗಿ ಪಾಠ ಕಲಿಸಬೇಕು ಎಂಬುದು ಅಥವಾ ಘರ್ಷಣೆ ಬೇಡ ಆಗಿದ್ದು ಆಗಿ ಹೋಯಿತು, ಈಗ ಎಲ್ಲರೂ ಒಟ್ಟಾಗಿ ಒಬ್ಬರನ್ನೊಬ್ಬರು ಗೌರವಿಸಿತ್ತಾ ಇರೋಣ ಎಂಬುದರಲ್ಲಿ ಯಾವುದು ಪಾಸಿಟಿವ್ ಯಾವುದು ನೆಗೆಟಿವ್ ?

ಹಿಂದೂ ಧರ್ಮ ತುಂಬಾ ಒಳ್ಳೆಯದು, ಇಸ್ಲಾಂ ಧರ್ಮ ತುಂಬಾ ಶಾಂತಿ ಪ್ರಿಯ ಧರ್ಮ, ಕ್ರಿಶ್ಚಿಯನ್ ಧರ್ಮ ತುಂಬಾ ಸಮಾನತೆಯ ಪ್ರೀತಿಯ ಧರ್ಮ ಎಂಬುದು ಅಥವಾ ಹಿಂದೂ ಧರ್ಮದಲ್ಲಿ ಅಮಾನವೀಯ ಜಾತಿ ಪದ್ದತಿ ಇದೆ, ಇಸ್ಲಾಂ ಧರ್ಮದಲ್ಲಿ ಪ್ರಶ್ನೆ ಮಾಡಲಾಗದ ಮತಾಂಧತೆ ಇದೆ, ಕ್ರಿಶ್ಚಿಯನ್ ಧರ್ಮದಲ್ಲಿ ಮತಾಂತರ ಇದೆ ಎಂದು ಚರ್ಚೆ ಮಾಡುವಾಗ ಯಾವುದು ಪಾಸಿಟಿವ್ ಯಾವುದು ನೆಗೆಟಿವ್‌ ?

ಸಮಸ್ಯೆಗಳ ಬಗ್ಗೆ ಮಾತನಾಡುವುದು, ಸಮಸ್ಯೆ ಇದ್ದರೂ ಅದನ್ನು ಮರೆಮಾಚಿ ಕೇವಲ ಅನುಕೂಲಗಳನ್ನು ಮಾತ್ರ ಮಾತನಾಡುವುದು, ಸಮಸ್ಯೆ ಮತ್ತು ಪರಿಹಾರ ಎರಡನ್ನೂ ಮಾತನಾಡುವುದು ಇದರಲ್ಲಿ ‌ಯಾವುದು ಪಾಸಿಟಿವ್ ಯಾವುದು ನೆಗೆಟಿವ್ ?

ಸಮಸ್ಯೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಪರಿಹಾರ ಸಾಧ್ಯ. ‌ಪಾಸಿಟಿವ್ ಮತ್ತು ನೆಗೆಟಿವ್ ಎಂದು ನಮಗೆ ಅನುಕೂಲ ವಿಷಯಗಳನ್ನು ಮಾತ್ರ ಮಾತನಾಡುವುದಲ್ಲ. ಸಮಯಕ್ಕೆ ತಕ್ಕಂತೆ ಲಾಭ ಪಡೆಯುವುದು ಅಥವಾ ವಾದ ಮಂಡಿಸುವುದಲ್ಲ.
ಹೃದಯಾಂತರಾಳದಿಂದ ಸಮಸ್ಯೆಗಳಿಗೆ ನಿಜವಾದ ಸ್ಪಂದನೆ ಇರಬೇಕು. ಆಗ ಸಮಾಜ ಶಾಂತಿಯ ಕಡೆಗೆ ಸಾಗುತ್ತದೆ.

ಮುಖವಾಡಗಳ ಮರೆಯಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ತಮ್ಮ ಸ್ವ ಹಿತಾಸಕ್ತಿಯ ಹೊರತು.
ಬಡತನ ನೆಗೆಟಿವ್, ಶ್ರೀಮಂತಿಕೆ ಪಾಸಿಟಿವ್, ಬಡವರು ಪಾಸಿಟಿವ್, ಶ್ರೀಮಂತರು ನೆಗೆಟಿವ್ ಹೀಗೂ ಚರ್ಚೆ ಮಾಡಬಹುದು. ಆದರೆ ವಾಸ್ತವ ಬೇರೆ. ಅದು ವಿಶಾಲ ಶುದ್ಧ ಮನಸ್ಸುಗಳ ಗ್ರಹಿಕೆಗೆ ಮಾತ್ರ ನಿಲುಕುತ್ತದೆ. ಮುಖವಾಡ ಧರಿಸಿದವರಿಗಲ್ಲ…..

ವೈಯಕ್ತಿಕ ಮಟ್ಟದಲ್ಲಿ ಒಳ್ಳೆಯದು ಕೆಟ್ಟದ್ದನ್ನು ಪಾಸಿಟಿವ್ ಅಥವಾ ನೆಗೆಟಿವ್ ಎಂದು ಅನುಕೂಲಕರವಾಗಿ ವಿಂಗಡಿಸಬಹುದು. ಆದರೆ ಒಟ್ಟಾರೆ ವ್ಯವಸ್ಥೆಯನ್ನು ವಿಮರ್ಶಿಸುವಾಗ ಇದು ತುಂಬಾ ಕಷ್ಟ. ವಿಷಯಗಳನ್ನು ಆಧರಿಸಿ ಅರ್ಥೈಸಬೇಕಾಗುತ್ತದೆ.
ಧನ್ಯವಾದಗಳು

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ನಾಳೆ (ಜು.29) ರಂದು ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬ: ಭಕ್ತರಿಗೆ ವಿಶೇಷ ಆಹ್ವಾನ: ವಿಶೇಷ ಪೂಜೆ, ಭಕ್ತರಿಗೆ ಭೋಜನೆ ವ್ಯವಸ್ಥೆ

ನಾಳೆ (ಜು.29) ರಂದು ದೊಡ್ಡಬಳ್ಳಾಪುರ ತಾಲೂಕಿನ ಪವಿತ್ರ ಹಾಗೂ ಪುಣ್ಯ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬವನ್ನು…

7 hours ago

“ಉತ್ತರ ಕರ್ನಾಟಕದ ಗ್ರಾಮೀಣ ನಾಗರ ಪಂಚಮಿ: ಹೆಣ್ಮಕ್ಕಳ ಜೋಕಾಲಿ ಸಂಭ್ರಮ”

ಭಾರತೀಯರು ಹಬ್ಬ-ಹರಿದಿನಗಳ ಪ್ರಿಯರು ಒಂದೋದು ಹಬ್ಬಕ್ಕೆ ತನ್ನದೇಯಾದ ವೈಶಿಷ್ಟತೆಯನ್ನು ನೀಡುತ್ತಾ, ಭಕ್ತಿ-ಭಾವದಿಂದ ನೂರಾರು ತಲೆಮಾರುಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಅದರಲ್ಲಿ ಉತ್ತರ…

7 hours ago

ಗ್ರಾಪಂ ನೌಕರರ ಬೇಡಿಕೆಗಳ ಈಡೇರಿಕೆಗೆ ಜಿಪಂ ಮುಂದೆ ಪ್ರತಿಭಟನೆ

ಕೋಲಾರ: ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸಿಐಟಿಯು ನೇತೃತ್ವದ ಗ್ರಾಮ…

8 hours ago

RCB ಕಾಲ್ತುಳಿತ ಪ್ರಕರಣ: ಪೊಲಿಸ್ ಅಧಿಕಾರಿಗಳ ಅಮಾನತು ಆದೇಶ ಹಿಂಪಡೆದ ರಾಜ್ಯ ಸರ್ಕಾರ: ಅಚ್ಚರಿ ಹಾಗೂ ಚರ್ಚೆಗೆ ಗ್ರಾಸವಾದ ಸರ್ಕಾರದ ನಡೆ

ಜೂನ್ 4 ರಂದು ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡವನ್ನು ಅಭಿನಂದಿಸಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ವೇಳೆ ಕಾಲ್ತುಳಿತ…

9 hours ago

ದೇವಸ್ಥಾನದಲ್ಲಿ ಕಳ್ಳನ ಕೈಚಳಕ: ಬೈಕ್ ಸಮೇತ ಕಳ್ಳನ ಬಂಧನ

ಭಟ್ಕಳದ ಹೆಬಳೆ ತೆಂಗಿನಗುಂಡಿಯಲ್ಲಿರುವ ಶ್ರೀ ಬ್ರಹ್ಮಲಿಂಗೇಶ್ವರ ನಾಗದೇವತಾ ಪ್ರಸನ್ನ ದೇವಸ್ಥಾನದಲ್ಲಿ ಭಾನುವಾರ ಹಾಡುಹಗಲೇ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಭಟ್ಕಳ…

11 hours ago

ನೊಂದವರ ನೋವಾ ನೋಯದವರೆತ್ತ ಬಲ್ಲರೋ……

ಸುಪ್ರಭಾತ.......... ಭಾರತೀಯ ಸಮಾಜ ಎಂಬುದು ಮಧ್ಯಮ ವರ್ಗದ ಸಂತೆ ಇದ್ದಂತೆ. ಇಲ್ಲಿ ಬಹುತೇಕ ಮಧ್ಯಮ ವರ್ಗದವರೇ ಅತಿ ಹೆಚ್ಚು ಮಧ್ಯಮ…

19 hours ago