ವಿನಯಶ್ರೀ ವಿದ್ಯಾ ಸಂಸ್ಥೆ (ರಿ) ಸಮೂಹಗಳು ಶ್ರೀ ರಾಮ ಪ್ರೌಢಶಾಲೆ, ಎಂ.ಜಿ.ಕೆ ರವರ ಆತ್ಮೀಯ ಒಡನಾಡಿ ಬಳಗದಿಂದ ವಿದ್ಯಾ ವಾರಿಧಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಕಾಡನೂರು ಕೈಮರ ಬಳಿಯ ಶ್ರೀರಾಮ ಪ್ರೌಢಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಡಾ. ಎಂ.ಗೋಪಾಲಕೃಷ್ಣಯ್ಯ ರವರ ಸಮಾಜ ಸೇವೆಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ಮಟ್ಟದ ಸಂಸ್ಥೆ WMSI MYNISTRY OF CORPORATE AFFAIR GOVERNENT OF INDIA PH.D (HON) DOCTORATE ಹಾಗೂ CENTRAL CHRISTIAN UNIVERSITY SECRETARY OF STATE-DELAWARE (USA) ಅಂತಾರಾಷ್ಟ್ರೀಯ ಮಟ್ಟದ PH.D (HON) ಗೌರವ ಡಾಕ್ಟರೇಟ್ ಕೊಟ್ಟು ಪುರಸ್ಕರಿಸಿದ ಹಿನ್ನೆಲೆ ಡಾ. ಎಂ.ಗೋಪಾಲಕೃಷ್ಣಯ್ಯರನ್ನು ಸನ್ಮಾನಿಸಿ ಅಭಿನಂದಿಸಿದರು.
ಕಾರ್ಯಕ್ರಮ ಕುರಿತು ಮಾತನಾಡಿದ ಡಾ. ಎಂ.ಗೋಪಾಲಕೃಷ್ಣಯ್ಯ, ನಾನು ಬಡ ಕುಟುಂಬದಿಂದ ಬಂದವನು, ನಮ್ಮದು ಚನ್ನೇಗೌಡ ವಂಶ, ನನ್ನ ಸೇವೆ ಎಲ್ಲಾ ಕ್ಷೇತ್ರದಲ್ಲಿ ಇದೆ. ನಾನು ಶ್ರಮಜೀವಿಯಾಗಿ ಕೆಲಸ ಮಾಡ್ತೇನೆ. ಕೆಲಸಕ್ಕೆ ಸೇರಬೇಕಾದರೆ ತುಂಬಾ ಕಷ್ಟ ಪಟ್ಟಿದ್ದೇನೆ. ನನ್ನ ಸಂಬಂಧಿಕರು ಶಿಕ್ಷಣ ಕ್ಷೇತ್ರದಲ್ಲಿ ಇದ್ದರು. ಅವರನ್ನು ನೋಡಿ ನಾನು ಶಿಕ್ಷಕ ಆಗಬೇಕೆಂದು ಶಿಕ್ಷಕ ಆದೆ. ದಾನದಲ್ಲಿ ದೊಡ್ಡದಾನ ವಿದ್ಯಾದಾನ ಎಂದು ತಿಳಿದು. ಈ ಸ್ಥಳದಿಂದ 10 ಕಿ.ಮೀ ಅಂತರದಲ್ಲಿ ಯಾವುದೇ ಶಾಲೆ ಇಲ್ಲದ ಕಾರಣ ಈ ಜಾಗವನ್ನು ಆರಿಸಿಕೊಂಡು ಶಾಲೆಯನ್ನು ಪ್ರಾರಂಭಿಸಿದೆ. ನನ್ನ 18 ರಿಂದ 25ನೇ ವಯಸ್ಸಿನಲ್ಲಿ ಗ್ರಾಮದ ಜಾತ್ರೆ ಉತ್ಸವದಲ್ಲಿ ಆಸಕ್ತ ನಾಗರಿತಿದ್ದೆ, ವಿಧವೆ ವೇತನ ಹಾಗೂ ಇತರೆ ಸರ್ಕಾರಿ ಯೋಜನೆ ಕೊಡಿಸುವುದರಲ್ಲಿ ನಾಯಕತ್ವ ಹೊಂದಿರುತ್ತಿದ್ದೆ ಎಂದರು.
ನಮ್ಮ ಶಾಲಾ ಮಕ್ಕಳ ಪೋಷಕರಲ್ಲಿ ಶ್ರೀರಾಮ ಶಾಲೆ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ. ಎಷ್ಟೇ ಹಣ, ಅಧಿಕಾರ, ರೂಪ ಇದ್ದರೂ ಮನುಷ್ಯನಿಗೆ ಮಾನವೀಯ ಮೌಲ್ಯ ಮುಖ್ಯ. ಹತ್ತು ದೇವಾಲಯಕ್ಕಿಂತ ಗ್ರಾಮಾಂತರದಲ್ಲಿ ಒಂದು ಉತ್ತಮ ಶಾಲೆ ಇರಬೇಕು ಎಂದು ತಮ್ಮ ಭಾವನಾತ್ಮಕ ನುಡಿಯನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯರು , ಅಧ್ಯಕ್ಷರು ವಿನಯಶ್ರೀ ವಿದ್ಯಾ ಸಂಸ್ಥೆ ಡಾ. ಆಂಜನಪ್ಪ, ಖ್ಯಾತ ವಕೀಲರು ಸಿ.ಹೆಚ್.ಹನುಮಂತರಾಯ, ಡಾ. ಗಿರೀಶ , ನಿವೃತ್ತ ಡಿ ಡಿ ಪಿ ಐ ಗಂಗಮರೇಗೌಡ, ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರವಿಕುಮಾರ್. ಟಿ.ಕೆ, ವಿನಯಶ್ರೀ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮೀದೇವಿ ಜಿ. ಎಸ್, ಶಿಕ್ಷಕರ ವೃಂದ, ಸಿಬ್ಬಂದಿ ವರ್ಗ ಸೇರಿ ಹಲವರು ಉಪಸ್ಥಿತರಿದ್ದರು.
ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…
ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…
ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರ ಸೂಸುತ್ರವಾಗಿ ಪೂರ್ಣಗೊಂಡಿದೆ. ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ…
ಒಂಟಿ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಊರಿನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು…
ಯಲಹಂಕ ತಾಲೂಕಿನ ಜಾಲ ಹೋಬಳಿಯ ಚಿಕ್ಕಜಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎ.ಸಿ. ಗೋವಿಂದಪ್ಪ ಅವಿರೋಧವಾಗಿ…
ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಪೋಲಿಯೋ ಮುಕ್ತ ರಾಷ್ಟ್ರ ಎಂದು ಮತ್ತೊಮ್ಮೆ ಸಾಬೀತು ಮಾಡೋಣ…