Categories: ಲೇಖನ

ಶಿಕ್ಷಕರು ಮತ್ತು ಉಪನ್ಯಾಸಕರೇ ಶೋಷಣೆಗೊಳಗಾದರೆ ನಮ್ಮ ಮಕ್ಕಳ ಮುಂದಿನ ಭವಿಷ್ಯವೇನು……?

ಅತ್ಯಂತ ಕಳಕಳಿಯಿ ಒಂದು ತುರ್ತು ಮನವಿ………

ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವರೇ,
ಹಾಗೂ,
ಮಾನ್ಯ ಉನ್ನತ ಶಿಕ್ಷಣ ಸಚಿವರೇ…..

ಅತ್ಯಂತ ಗಂಭೀರವಾಗಿ ಈ ವಿಷಯವನ್ನು ಪರಿಗಣಿಸಿ…..

ಶಿಕ್ಷಕರು ಮತ್ತು ಉಪನ್ಯಾಸಕರೇ ಶೋಷಣೆಗೊಳಗಾದರೆ ನಮ್ಮ ಮಕ್ಕಳ ಮುಂದಿನ ಭವಿಷ್ಯವೇನು……

ಇತ್ತೀಚೆಗೆ ಕೆಲವು ಶಿಕ್ಷಕರು ಮತ್ತು ಉಪನ್ಯಾಸಕರು ನಮ್ಮನ್ನು ಖಾಸಗಿಯಾಗಿ ಭೇಟಿಮಾಡಿ ಅವರು ಅನುಭವಿಸುತ್ತಿರುವ ಕಷ್ಟಗಳು ಮತ್ತು ಎದುರಿಸುತ್ತಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಅದನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗದೆ ಅಸಹಾಯಕತೆಯನ್ನು ಪ್ರದರ್ಶಿಸಿದರು. ಅದಕ್ಕೆ ಬಹು ಮುಖ್ಯ ಕಾರಣ ಅವರಲ್ಲಿದ್ದ ಉದ್ಯೋಗದ ಬಗೆಗಿನ ಅಭದ್ರತೆ, ಅದರಿಂದಾಗಿ ಅವರಲ್ಲಿ ಉಂಟಾದ ಸಂಘಟನಾತ್ಮಕ ಶಕ್ತಿಯ ಕೊರತೆ.

ಎಲ್ಲಿ ಒಂದು ಪ್ರಬಲ ಸಂಘಟನೆ ಇರುವುದಿಲ್ಲವೋ ಅಲ್ಲಿ ಶೋಷಣೆಯೂ ನಿರಂತರವಾಗಿರುತ್ತದೆ. ಕೇಳುವವರಿಲ್ಲದಿದ್ದರೆ ಶೋಷಕರಿಗೆ ಶೋಷಿಸಲು ಅದೇ ದೊಡ್ಡ ಮತ್ತು ಮುಕ್ತ ಹೆದ್ದಾರಿ. ಅವರಿಗೆ ಈಗ ಸಂಘಟಿತರಾಗುವ ಅನಿವಾರ್ಯ ಸೃಷ್ಟಿಯಾಗಿದೆ…..

ಮೊದಲಿಗೆ ಅವರ ಸಮಸ್ಯೆಗಳನ್ನು ಆಲಿಸೋಣ…….

ಕರ್ನಾಟಕ ರಾಜ್ಯ ಅನುದಾನ ರಹಿತ ಶಾಲಾ – ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರ ಸಂಘ
ರಾಜ್ಯ ಸಮಿತಿ ಬೆಂಗಳೂರು.
ಇವರ ಕೆಲವು ಪ್ರಮುಖ ಆಡಳಿತಾತ್ಮಕ ಸಮಸ್ಯೆಗಳು, ಅವರೇ ಹೇಳಿಕೊಂಡಂತೆ……

1. ಕೆಲವು ಶಾಲಾ – ಕಾಲೇಜುಗಳು ಸರ್ಕಾರದ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಕಡಿಮೆ ಸಂಬಳಕ್ಕೆ ದಿನದಲ್ಲಿ 10 ಗಂಟೆಗಳ ಕಾಲ ಕೆಲಸವನ್ನು ಮಾಡಬೇಕೆಂದು ನಿರ್ಬಂಧ ವಿಧಿಸಿರುವುದು. ಇದು ಜೀವ ವಿರೋಧಿ ನಿಲುವು ಮತ್ತು ಅತ್ಯಂತ ಹೆಚ್ಚು ಮಾನಸಿಕ ಒತ್ತಡ ಹೆಚ್ಚಿಸಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ….

2. ಪ್ರಾಯೋಗಿಕ ಮತ್ತು ಪರೀಕ್ಷಾ ಭತ್ಯೆಯನ್ನು ಕಳೆದ ಮೂರು ವರ್ಷಗಳಿಂದ ಅನುದಾನ ರಹಿತ ಕಾಲೇಜು ಶಿಕ್ಷಕರಿಗೆ ನೀಡದೆ ಇರುವುದು. ಅಲ್ಲದೇ ಸರ್ಕಾರಿ ಮತ್ತು ಅನುದಾನಿತ ಶಿಕ್ಷಕರಿಗೆ ಭತ್ಯೆ ನೀಡಿ ಖಾಸಗಿಯವರಿಗೆ ನಿರಾಕರಿಸಿ ಮಲತಾಯಿ ಧೋರಣೆಯನ್ನು ಶಾಲಾ ಶಿಕ್ಷಣ ಮಂಡಳಿಯೂ ಅನುಸರಿಸುತ್ತಿದೆ.

3. ಉದ್ಯೋಗ ಭದ್ರತೆಯನ್ನು ನೀಡಬೇಕಾದ ಸಂಸ್ಥೆಗಳು ಹಿರಿಯ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಕಾರಣವಿಲ್ಲದೇ ತೆಗೆದುಹಾಕಿ ಅವರ ಬದಲಿಗೆ ಕಡಿಮೆ ವೇತನಕ್ಕೆ ಬರುವ ಶಿಕ್ಷಕರನ್ನು ನೇಮಿಸಿಕೊಳ್ಳುವುದರೊಂದಿಗೆ ಶಿಕ್ಷಕರು ಮತ್ತು ಅವರ ಕುಟುಂಬಕ್ಕೆ ಮಾನಸಿಕವಾಗಿ ಹಿಂಸೆ ನೀಡುತ್ತಿರುವುದು ಮತ್ತು ಮಧ್ಯಕಾಲದಲ್ಲಿ ಇಡೀ ಕುಟುಂಬಗಳನ್ನೇ ಆತಂಕಕ್ಕೆ ದೂಡುವುದು…..

4. ನಿಯಮಾನುಸಾರ ನೇಮಕ ಪತ್ರವನ್ನು ನೀಡಬೇಕಾದ ಸಂಸ್ಥೆಗಳು ನೇಮಕ ಪತ್ರಗಳನ್ನು ನೀಡದೆ ತಮಗೆ ಬೇಕಾದಾಗ ಸೇರಿಸಿಕೊಳ್ಳುವುದು ಮತ್ತು ಬೇಡದೇ ಹೋದಾಗ ತೆಗೆದು ಹಾಕುತ್ತಾ ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ. ಇದು ಬಹಳ ಅಪಾಯಕಾರಿ ನಡೆ.

5. ಶಾಲಾ ಶಿಕ್ಷಣ ಸಂಸ್ಥೆಯು vocational department ಆಗಿದ್ದರೂ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ಸಿಗಬೇಕಾದ ಬೇಸಿಗೆ ರಜೆ ಮತ್ತು ದಸರಾ ರಜೆಯನ್ನು ನೀಡದೆ, Non vocational Department ಗೆ ನೀಡುವ CL & EL facility ಯನ್ನೂ
ನೀಡದೆ ಶಿಕ್ಷಕರನ್ನು ಮಾನಸಿಕವಾಗಿ ಹಿಂಸಿಸುವುದರ ಜೊತೆಗೆ ಕೆಲ ಕಾಲೇಜುಗಳು ಭಾನುವಾರವೂ ಕೆಲಸ ನಿರ್ವಹಿಸುತ್ತಿವೆ. ಇದು ತೀರಾ ಅನ್ಯಾಯ…

6. ಕೆಲವು ಅನುದಾನ ರಹಿತ ಕಾಲೇಜುಗಳಲ್ಲಿ ಪ್ರಾಯೋಗಿಕ ತರಗತಿಗಳನ್ನು ನಡೆಸದೇ ಇರುವುದು. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ…

7. ಅರ್ಹತೆ ಇಲ್ಲದ ಶಿಕ್ಷಕ ಮತ್ತು ಉಪನ್ಯಾಸಕರನ್ನು ಹೊರರಾಜ್ಯಗಳಿಂದ ಕರೆದುಕೊಂಡು ಬಂದು ಕಡಿಮೆ ಸಂಬಳಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಭಾರಿ ಅನಾಹುತಕ್ಕೆ ಕಾರಣವಾಗಬಹುದು ಮತ್ತು ಮಕ್ಕಳಿಗೆ ಸ್ಥಳೀಯ ಸಂಸ್ಕೃತಿಯ ಪರಿಚಯವಾಗದೇ ಹೋಗಬಹುದು…

8. ಪ್ರಾವಿಡೆಂಟ್ ಫಂಡ್ ಕಡ್ಡಾಯವಾಗಿ EFP ಆಕ್ಟ್ ಪ್ರಕಾರ ನೀಡಬೇಕಿದ್ದರೂ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಇನ್ನೂ PF ಮತ್ತು gratuity ಯನ್ನು ಕೊಟ್ಟೇ ಇಲ್ಲ. ಅದನ್ನು ತನಿಖೆಗೆ ಒಳಪಡಿಸಬೇಕು ಮತ್ತು ಇನ್ನು ಮುಂದೆ ಹಾಗೆ ಆಗದಂತೆ ನೋಡಿಕೊಳ್ಳಬೇಕು….

9. PU ಕೋರ್ಸ್ ನಡೆಸುತ್ತೇವೆ ಎಂದು ಅನುಮತಿ ತೆಗೆದುಕೊಂಡು, ಸ್ಪರ್ಧಾತ್ಮಕ ಕೋರ್ಸ್ಗಳಾದ
NEET/JEE/IIT ಕೋರ್ಸ್ಗಳನ್ನೇ ಮುಖ್ಯವಾಗಿ ನಡೆಸುತ್ತಾ, ಅರ್ಹತೆ ಇಲ್ಲದ ಮಕ್ಕಳನ್ನು ಹೆಚ್ಚಿನ ಹಣ ವಸೂಲಿ ಮಾಡುವ ಉದ್ದೇಶದಿಂದ ಬಲವಂತವಾಗಿ ಸೇರಿಸಿಕೊಂಡು, ಮಕ್ಕಳಿಗೆ ಮತ್ತು ಪೋಷಕರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಮತ್ತು ಅವರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ…

10.ಅನುದಾನ ರಹಿತ ಶಾಲಾ ಕಾಲೇಜು ಶಿಕ್ಷಕರಿಂದ 200 ರೂಪಾಯಿಗಳನ್ನು ಮತ್ತು ವಿದ್ಯಾರ್ಥಿಗಳಿಂದ 60 ರೂಪಾಯಿಗಳನ್ನು ಶಿಕ್ಷಕರ ಭವಿಷ್ಯ ನಿಧಿಗೆ ಪ್ರತಿವರ್ಷವೂ ಪಡೆದುಕೊಂಡು, ಅನುದಾನ ರಹಿತ ಶಿಕ್ಷಕರು ಮತ್ತು ಉಪನ್ಯಾಸಕರು ಹಾಗೂ ಅವರ ಮಕ್ಕಳಿಗೆ ಯಾವುದೇ ಸವಲತ್ತು ನೀಡದೆ, ಸರ್ಕಾರಿ ಮತ್ತು ಅನುದಾನಿತ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಮಾತ್ರ ಎಲ್ಲಾ ಸವಲತ್ತುಗಳನ್ನು ನೀಡುತ್ತಿರುವುದು ತುಂಬಾ ಅನ್ಯಾಯ. ಅದನ್ನು ಎಲ್ಲರಿಗೂ ಸಮನಾಗಿ ನೀಡಬೇಕು…

11. ಶಿಕ್ಷಕರ ಗೌರವ, ಘನತೆ ಕಾಪಾಡಬೇಕಾಗಿದ್ದವರು ಮತ್ತು ಮಾನಸಿಕ ಹಿಂಸೆಯನ್ನು ತಡೆಯಬೇಕಾದ ಶಾಲಾ ಶಿಕ್ಷಣ ಮಂಡಲಿಯು, ಇದುವರೆಗೂ ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಂಡಿಲ್ಲ. ಎಷ್ಟೋ ಬಾರಿ ಮನವಿ ಸಲ್ಲಿಸಿದ್ದರೂ ಅವರ ಶಾಲಾ ಕಾಲೇಜುಗಳನ್ನು ತಿಳಿದುಕೊಂಡು, ಪರೋಕ್ಷವಾಗಿ ಸಂಸ್ಥೆಗೆ ತಿಳಿಸಿ ಅವರನ್ನು ಸಸ್ಪೆಂಡ್ or ಟರ್ಮಿನೇಷನ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿಕ್ಷಕರು ಆಧುನಿಕ ಕಾಲದಲ್ಲಿ ಒಂದು ಸಮಾಜದ ಎಲ್ಲಾ ಮೌಲ್ಯಗಳನ್ನು, ನಾಗರಿಕ ಪ್ರಜ್ಞೆಯನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ವರ್ಗಾಯಿಸುವ ಬಹುದೊಡ್ಡ ಜವಾಬ್ದಾರಿ ಹೊಂದಿದ್ದಾರೆ. ಅವರು ನೆಮ್ಮದಿಯಿಂದ, ಶಾಂತಿಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು. ಅವರ ಬೇಡಿಕೆಗಳೇ ಈಡೇರದಿದ್ದರೆ ಅದು ನಮ್ಮ ಮಕ್ಕಳ ಭವಿಷ್ಯದ ಮೇಲೆ ಖಂಡಿತವಾಗಲೂ ದುಷ್ಪರಿಣಾಮ ಬೀರುತ್ತದೆ…

ಮಾನ್ಯ ಮುಖ್ಯಮಂತ್ರಿಗಳು,
ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆ ಅಧಿಕಾರಿಗಳು, ಖಾಸಗಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ದಯವಿಟ್ಟು ಈ ಬಗ್ಗೆ ಅತಿ ಶೀಘ್ರವಾಗಿ ಕ್ರಮ ಕೈಗೊಳ್ಳಿ ಅಥವಾ ಏನಾದರೂ ಗೊಂದಲಗಳಿದ್ದರೆ ಅದಕ್ಕಾಗಿ ಒಂದು ಅಧ್ಯಯನ ಸಮಿತಿಯನ್ನ ರಚಿಸಿ ಪರಿಹಾರ ಕಂಡುಕೊಳ್ಳಿ.

ಹಾಗೆಯೇ ಎಲ್ಲಾ ಅಂದರೆ ರಾಜ್ಯದಲ್ಲಿ ಒಂದು ಅಂದಾಜಿನಂತೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರು ಮತ್ತು ಉಪನ್ಯಾಸಕರಿದ್ದಾರೆ. ದಯವಿಟ್ಟು ಆದಷ್ಟು ಬೇಗ ಎಲ್ಲರೂ ಇಂದಿನ ಸಮೂಹ ಸಂಪರ್ಕ ಕ್ರಾಂತಿಯ ಸಂಪರ್ಕ ಸಾಧನಗಳನ್ನು ಉಪಯೋಗಿಸಿಕೊಂಡು ಒಗ್ಗಟ್ಟಾಗಿ ಒಂದು ದೊಡ್ಡ ಸಂಘಟನೆಯನ್ನು ಮಾಡಿಕೊಳ್ಳಿ. ಸಂಘಟನೆಗೆ ಬಲ ಬಂದರೆ ನಿಮ್ಮನ್ನು ಯಾರು ಏನೂ ಮಾಡಲಾಗುವುದಿಲ್ಲ ಮತ್ತು ನಿಮ್ಮ ಬೇಡಿಕೆಗಳು ಶೀಘ್ರವಾಗಿ ಈಡೇರುತ್ತದೆ..

ದಯವಿಟ್ಟು ಈ ಕೆಳಗೆ ನಮೂದಿಸಿರುವ ಸಂಘದ ಸಂಚಾಲಕರನ್ನು ಮೊಬೈಲ್ ಮುಖಾಂತರ ಸಂಪರ್ಕಿಸಿ ಒಂದು ಸಂಘಟನೆಯನ್ನು ರೂಪಿಸಿಕೊಳ್ಳಿ.
ಆದಷ್ಟು ಶೀಘ್ರ ಅನುಕೂಲಕರ ಸ್ಥಳದಲ್ಲಿ ಮೀಟಿಂಗ್ ಮಾಡಿ ಮುಂದಿನ ಕಾರ್ಯಯೋಜನೆ ರೂಪಿಸಿಕೊಳ್ಳಿ. ನಮ್ಮ ಮತ್ತು ಎಲ್ಲಾ ಪ್ರಬುದ್ಧ ಮನಸ್ಸುಗಳ ಬೆಂಬಲ ಸದಾ ನಿಮ್ಮೊಂದಿಗೆ ಇರುತ್ತದೆ.
ಧನ್ಯವಾದಗಳು….

Sri Prasanna BC KSUTA
94822 13929
Sri Siddaramu
8970171627 –
8660724453

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಭಗತ್ ಸಿಂಗ್ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ: ವೈದ್ಯ, ಪತ್ರಕರ್ತ, ಪೊಲೀಸ್, ಪೌರಕಾರ್ಮಿಕರಿಗೆ ಸನ್ಮಾನ

"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…

14 hours ago

ಭಗತ್ ಸಿಂಗ್ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ: ಪತ್ರಕರ್ತ, ಪೊಲೀಸ್, ಪೌರಕಾರ್ಮಿಕರು ಸೇರಿದಂತೆ ಇತರೆ ಸಾಧಕರಿಗೆ ಸನ್ಮಾನ

"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…

16 hours ago

ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ ₹400 ಕೋಟಿ ದರೋಡೆ ಪ್ರಕರಣ: ದಟ್ಟಾರಣ್ಯದ ಮೌನದಲ್ಲಿ ಅಡಗಿದ್ದ ಭೀಕರ ರಹಸ್ಯ..ಬೆಚ್ಚಿಬೀಳಿಸುವ ಪ್ರಮುಖ ಅಂಶಗಳು…ಇಲ್ಲಿವೆ ಓದಿ…

ಬೆಳಗಾವಿಯ ದಟ್ಟ ಅರಣ್ಯ ಪ್ರದೇಶದ ನಡುವೆ ಸಾಗುವ ಚೋರ್ಲಾ ಘಾಟ್‌ನ ರಸ್ತೆಗಳು ಸಾಮಾನ್ಯವಾಗಿ ಮೌನದಿಂದ ಕೂಡಿರುತ್ತವೆ. ಆದರೆ, ಆ ಮೌನದಲ್ಲೇ…

1 day ago

2026ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ: ಕರ್ನಾಟಕದ 8 ಮಂದಿಯು ಈ ನಾಗರಿಕ ಗೌರವಕ್ಕೆ ಭಾಜನ

2026ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟವಾಗಿದೆ. ಒಟ್ಟು 131 ಮಂದಿ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕದ 8 ಮಂದಿಯು ಈ…

1 day ago

ಹುಲುಕುಡಿ ವೀರಭದ್ರಸ್ವಾಮಿ ಮತ್ತು ಪ್ರಸನ್ನ ಭದ್ರಕಾಳಮ್ಮ ರಥೋತ್ಸವ

ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರದಲ್ಲಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ವತಿಯಿಂದ ರಥಸಪ್ತಮಿ ಅಂಗವಾಗಿ ಇಂದು (ಜ.25) ವೀರಭದ್ರಸ್ವಾಮಿ ಮತ್ತು ಪ್ರಸನ್ನ…

2 days ago

ರಘುನಾಥಪುರ ಬಳಿ ಪಿಕಪ್ ವಾಹನ, ಆಟೋ ಹಾಗೂ ಬೈಕ್ ನಡುವೆ ಅಪಘಾತ: ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವು

ಪಿಕಪ್ ವಾಹನ, ಆಟೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ…

2 days ago