ದೇವದುರ್ಗ: ಶಾಸಕಿಯ ಪುತ್ರ ಸಂತೋಷ ನಾಯಕ ಮತ್ತು ಸಹೋದರ ಬೆಂಬಲಿಗರು ಸೇರಿದಂತೆ ಒಟ್ಟು 16 ಜನರಿಗೆ ಜಿಲ್ಲಾ ನ್ಯಾಯಾಲಯದ ನಾಯದೀಶರು ಬಂಧನದ ಭೀತಿಯ ನೋಟಿಸ್ ಜಾರಿ ಮಾಡಿದ್ದಾರೆ.
ತಾಲೂಕಿನ ಕಾಕರಗಲ್ ಸಮೀಪದ ರಾಜ್ಯ ಹೆದ್ದಾರಿಗೆ ನಿರ್ಮಿಸಿರುವ ಟೋಲ್ ಗೇಟ್ ಬಂದ್ ಮಾಡಿ, ಅಲ್ಲಿನ 19,56,300 ಲಕ್ಷಗಟ್ಟಲೆ ಬೆಲೆ ಬಾಳುವ ಸಾಮಗ್ರಿಗಳನ್ನು ಧ್ವಂಸ ಮಾಡಿದ ಜೆಡಿಎಸ್ ಶಾಸಕಿಯ ಪುತ್ರನಾದ ಸಂತೋಷ ನಾಯಕ ಮತ್ತು ಸಹೋದರ, ಬೆಂಬಲಿಗರು ಗುಂಡಾವರ್ತನೆಗೆ ಸಾಕ್ಷಿಯಾಗಿದ್ದನ್ನು ಪರಿಗಣಿಸಿ ದಿನಾಂಕ:-23-4-25ರಂದು ಗಬ್ಬೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಶಾಸಕಿಯ ಪುತ್ರ ಸಂತೋಷ ನಾಯಕ, ಸಹೋದರ ಮತ್ತು ಬೆಂಬಲಿಗರು ಕೋರ್ಟ್ ಗೆ ಹಾಜರಾಗುವಂತೆ 5-6 ನೋಟಿಸ್ ಗಳಿಗೆ ಗೌರವ ನೀಡದೆ, ತಲೆಮರಿಸಿಕೊಂಡು ರಾಜರೋಷವಾಗಿ ಓಡಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಜಿಲ್ಲಾ ನ್ಯಾಯಾಲಯದ ನ್ಯಾಯಧೀಶರು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಅರೆಸ್ಟ್ ವಾರೆಂಟ್ ಮಾಡಿದರೂ ಕೂಡಾ, ಜಿಲ್ಲಾ ವರಿಷ್ಠಾಧಿಕಾರಿಗಳು ಪ್ರಭಾವಿ ಶಾಸಕಿಯ ಪುತ್ರನೆಂಬ ಕಾರಣಕ್ಕೆ ಬಂಧಿಸುತ್ತಿಲ್ವ..? ಶಾಸಕರ ಮಕ್ಕಳಿಗೆ ಒಂದು ಕಾನೂನು, ಜನ ಸಾಮಾನ್ಯರಿಗೆ ಒಂದು ಕಾನೂನು ಮಾಡಲಾಗಿದೆಯಾ, ಕೂಡಲೇ ಶಾಸಕಿಯ ಪುತ್ರ ಸಂತೋಷ ನಾಯಕ ಮತ್ತು ಬೆಂಬಲಿಗರನ್ನು ಬಂಧಿಸದಿದ್ದರೆ ಪೊಲೀಸ್ ಇಲಾಖೆ ಮಾಡಿದ ಕರ್ತವ್ಯಲೋಪವನ್ನು ಖಂಡಿಸಿ ಹೋರಾಟ ಮಾಡಬೇಕಾಗುತ್ತದೆ ಎಂದು ವಿಶ್ವನಾಥ ಬಲ್ಲಿದವ ಆಗ್ರಹಿಸಿದರು.
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…
ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…
ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…