ಶಾಲಾ ವಾಹನ ಚಾಲಕರೇ ಸಂಚಾರಿ ನಿಯಮ ಪಾಲನೆ ಕಡ್ಡಾಯ- ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಸೂಚನೆ

ಶಾಲಾ ವಾಹನ ಚಾಲಕರು ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ಕರೆದುಕೊಂಡು ಹೋಗಿ, ಮನೆಗೆ ತಂದು ಬಿಡುವ  ಕಾರ್ಯವನ್ನು ಉತ್ತಮವಾಗಿ ನಿಭಾಯಿಸಬೇಕು ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಅವರು ಸೂಚಿಸಿದರು.

ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಅವರ ನೇತೃತ್ವದಲ್ಲಿ ಠಾಣಾ ಆವರಣದಲ್ಲಿಂದು ವಾಹನ ಚಾಲಕರಿಗೆ ಕಟ್ಟುನಿಟ್ಟಾಗಿ ಪಾಲಿಸಬೇಕಾದ ಸಂಚಾರಿ ನಿಯಮಾವಳಿಗಳ ಕುರಿತು ಜಾಗೃತಿ ಮೂಡಿಸಿದರು.

ಪೋಷಕರು, ಶಾಲಾ ಸಂಸ್ಥೆಗಳು, ವಾಹನ ಮಾಲೀಕರು ಮಕ್ಕಳು ಸುರಕ್ಷತೆಯನ್ನು ಆದ್ಯತೆಯಾಗಿ ಸ್ವೀಕರಿಸಬೇಕು. ಶಾಲಾ ವಾಹನಗಳಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.

ಸುಸ್ಥಿತಿ ಯಲ್ಲಿರುವ ವಾಹನಗಳನ್ನೇ ಶಾಲಾ ವಾಹನಗಳನ್ನಾಗಿ ಬಳಸಬೇಕು. ಶಾಲಾ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಸಿರಬೇಕು. ವೇಗದ ಮಿತಿ ಗಂಟೆಗೆ 40 ಕಿ.ಮೀ. ಇರಬೇಕು. ವಾಹನ 15 ವರ್ಷಗಳಿಗಿಂತ ಹಳೆಯದಿರಬಾರದು. ವಾಹನ ಹಳದಿ ಬಣ್ಣದ್ದಾಗಿರಬೇಕು ಮತ್ತು 150 ಮಿ.ಮೀ. ಅಗಲದ ಹಸಿರು ಪಟ್ಟಿ ವಾಹನದ ಮಧ್ಯದುದ್ದಕ್ಕೂ ಇರಬೇಕು. ಎಲ್ಲ ನಾಲ್ಕು ಬದಿಗಳಲ್ಲಿ ‘ಶಾಲಾ ವಾಹನ’ ಎಂದು ಸ್ಪಷ್ಟವಾಗಿ ಮತ್ತು ದೊಡ್ಡದಾಗಿ ಬರೆದಿರಬೇಕು. ಮಕ್ಕಳು 12 ವರ್ಷಕ್ಕಿಂತ ಕೆಳಗಿನವರಿದ್ದರೆ ಅನುಮತಿ ಇರುವ ಸಂಖ್ಯೆಯ ಸೀಟಿಗಿಂತ ಒಂದೂವರೆ ಪಟ್ಟಿಗಿಂತ ಮಕ್ಕಳು ಹೆಚ್ಚಿರಬಾರದು. 12 ವರ್ಷ ಮೇಲ್ಪಟ್ಟ ಮಕ್ಕಳನ್ನು ಒಬ್ಬ ವ್ಯಕ್ತಿ ಎಂದು ಪರಿಗಣಿಸಬೇಕು. ವಾಹನದಲ್ಲಿ ಎಲ್‌ಪಿಜಿ ಅಳವಡಿಸಲಾಗಿದ್ದರೆ ಸಂಬಂಧಿತ ನೋಂದಾವಣೆ ಅಧಿಕಾರಿಯಿಂದ ಪ್ರಮಾಣಪತ್ರ ಪಡೆದಿರಬೇಕು. ಮಕ್ಕಳನ್ನು ಸಿಲಿಂಡರ್ ಇರುವ ಸ್ಥಳದ ಮೇಲೆ ಕೂಡಿಸಬಾರದು ಎಂದು‌ ತಿಳಿಸಿದರು.

ವಾಹನದ ಗಾಜಿಗೆ ಬಣ್ಣದ ಶೀಟುಗಳನ್ನು ಬಳಸುವಂತಿಲ್ಲ. ಚಾಲಕನ ಬಳಿ ಕನಿಷ್ಠ ನಾಲ್ಕು ವರ್ಷ ಹಗುರ ವಾಹನ ಓಡಿಸಿದ ಅನುಭವವಿರಬೇಕು ಮತ್ತು ನ್ಯಾಯಸಮ್ಮತವಾದ ಲೈಸೆನ್ಸ್ ಇರಬೇಕು. ಸಮವಸ್ತ್ರ ಕಡ್ಡಾಯ, ಅಂಗಿಯ ಮೇಲೆ ಹೆಸರಿನ ಪ್ಲೇಟ್ ಇರಬೇಕು. ವಾಹನದ ಮೇಲೆ ಇರುವ ಕ್ಯಾರಿಯರ್ ಮೇಲೆ ಬ್ಯಾಗ್ ಇಡತಕ್ಕದ್ದಲ್ಲ ಮತ್ತು ವಾಹನದ ಹೊರಗಡೆ ಬ್ಯಾಗುಗಳನ್ನು ನೇತುಹಾಕುವಂತಿಲ್ಲ. ವಾಹನದ ಹಿಂಬದಿಯಲ್ಲಿ ಚಾಲಕನ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮುಂತಾದ ವಿವರಗಳನ್ನು ಲಗತ್ತಿಸಬೇಕು. ವಿದ್ಯಾರ್ಥಿಯ ಹೆಸರು, ವಿಳಾಸ, ರಕ್ತದ ಗುಂಪು, ತರಗತಿ, ವಾಹನ ಹತ್ತಿಳಿಯುವ ಸ್ಥಳ, ವಾಹನ ಚಲಿಸುವ ಮಾರ್ಗ ಮುಂತಾದ ವಿವರಗಳನ್ನು ಚಾಲಕ ಬರೆದಿಟ್ಟುಕೊಂಡಿರಬೇಕು ಎಂದರು.

ತುರ್ತು ಪರಿಸ್ಥಿತಿ ಎದುರಾದಾಗ ಡ್ರೈವರ್ ಅಥವಾ ಸಹಾಯಕ ಶಾಲೆಗೆ ಮಾಹಿತಿ ನೀಡಬೇಕು ಮತ್ತು ಮಕ್ಕಳನ್ನು ಸುರಕ್ಷಿತವಾಗಿರಿಸಲು ತಕ್ಕ ವ್ಯವಸ್ಥೆ ಮಾಡಬೇಕು.

ಮಗು ನರ್ಸರಿಯಲ್ಲಿ ಓದುತ್ತಿದ್ದರೆ, ಶಾಲೆ ಮತ್ತು ಪಾಲಕರು ಗುರುತಿಸುವಂಥ ವ್ಯಕ್ತಿ ಬಾರದೆಹೋದರೆ, ಮಗುವನ್ನು ಶಾಲೆಗೆ ಮರಳಿ ತರತಕ್ಕದ್ದು. ಮಗುವನ್ನು ಪಾಲಕರೇ ಶಾಲೆಗೆ ಬಂದು ಕರೆದುಕೊಂಡು ಹೋಗಬೇಕು ಎಂದು ಸೂಚಿಸಿದರು.

ಚಾಲಕ ಚಾಲನೆ ಮಾಡುವಾಗ, ಪಾನಮತ್ತನಾಗಿ, ಮೊಬೈಲ್ ಬಳಸುವುದನ್ನು ನಿರ್ಬಂಧಿಸಲಾಗಿದೆ. ತುರ್ತು ನಿರ್ಗಮನ ಕಡ್ಡಾಯ. ವಾಹನಗಳಲ್ಲಿ ಸಿಸಿಟಿವಿ, ಅಗ್ನಿ ಶಾಮಕ ಉಪಕರಣ, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಬೇಕು. ತುರ್ತು ನಿರ್ಗಮನಕ್ಕೆ ಅನುಕೂಲಕರ ಡೋರ್‌ ಇರಬೇಕು ಎಂದು ತಿಳಿಸಿದರು.

ನಿಯಮಗಳನ್ನು ಪಾಲಿಸದ ಚಾಲಕರು ಮತ್ತು ಸಂಸ್ಥೆಗಳಿಗೆ ಮೊದಲು ದಂಡ ವಿಧಿಸುತ್ತೇವೆ. ತಪ್ಪುಗಳು ಪುನರಾವರ್ತನೆ ಆದಲ್ಲಿ ವಾಹನ ನಿಯಂತ್ರಣ ಕಾಯ್ದೆ ಅನ್ವಯ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

Ramesh Babu

Journalist

Recent Posts

ಏ.12ರಂದು ದೊಡ್ಡಬಳ್ಳಾಪುರ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ ನಗರದಲ್ಲಿ ಏ.12 ರಂದು 220/66/11ಕೆವಿ ಕೆಐಎಡಿಬಿ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F02-Birla Super ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಗಳು…

5 hours ago

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರ ಸಾವು

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರವಾಗಿ ಸಾವನ್ನಪ್ಪಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೋರಾಯನಪಾಳ್ಯದಲ್ಲಿ ನಡೆದಿದೆ.. 17 ವರ್ಷದ…

10 hours ago

ಲೋಕಾಯುಕ್ತ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ರಾಯಚೂರು ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸುರೇಶ್ ಶೆಟ್ಟಿ ಲೋಕಾಯುಕ್ತರ ಬಲೆಗೆ ಬಿದ್ದ ಮುಖ್ಯಾಧಿಕಾರಿ. ರಾಘವೇಂದ್ರ…

10 hours ago

ಹುಚ್ಚನೊಬ್ಬನ ಕನಸು….

ದೇಶದ ಎಲ್ಲಾ ದಲಿತ ಕೇರಿಗಳನ್ನು ನಾಶ ಮಾಡಬೇಕು. ಅಲ್ಲಿನ ಎಲ್ಲರಿಗೂ ಊರ ಒಳಗಿನ ಸ್ಥಳದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಬೇಕು. ಬ್ರಾಹ್ಮಣರ…

15 hours ago

PUC Result: ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ….ಈ ಕಥೆ ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಗ್ಯಾರಂಟಿ

600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಟಾಪರ್ ಆದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು…

1 day ago

ತೂಬಗೆರೆ ಸರ್ಕಾರಿ ಪಿಯು ಕಾಲೇಜಿಗೆ ಮತ್ತೊಮ್ಮೆ ಮೆರುಗು: ಶೇ.95.45 ಫಲಿತಾಂಶ

ದೊಡ್ಡಬಳ್ಳಾಪುರ (ತೂಬಗೆರೆ): ಗ್ರಾಮಾಂತರ ಭಾಗದಲ್ಲಿದ್ದರೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು…

1 day ago