ಲೋಕೋಪಯೋಗಿ ಇಲಾಖೆಯಲ್ಲಿ ಪ್ರಥಮದರ್ಜೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳೆಗೆ ನಯವಂಚಕ ವೈದ್ಯನೊಬ್ಬ ಮರಳುಮಾತನಾಡಿ 10.50 ಲಕ್ಷ ಹಣ,500 ಗ್ರಾಂ ಚಿನ್ನಾಭರಣ ಹಾಗೂ 2 ಕೆಜಿ ಬೆಳ್ಳಿ ಗೆ ಉಂಡೆನಾಮ ಇಟ್ಟಿದ್ದಾನೆ.ವಂಚನೆಗೆ ಒಳಗಾದ ಮಹಿಳೆ ವೈದ್ಯನ ವಿರುದ್ದ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶ್ವೇತಾ ಮಹಂತೇಶ್(46) ವಂಚನೆಗೆ ಒಳಗಾದವರು. ಡಾ.ಶಿವಕುಮಾರ್ ವಂಚಿಸಿದ ವೈದ್ಯ.
ಕರೊನಾ ಸಂಧರ್ಭದಲ್ಲಿ ಶ್ವೇತಾ ತಮ್ಮ ಪತಿ ಮಹಂತೇಶ್ ಹಾಗೂ ಮಗ ಇಕ್ಷುಧನ್ವ ಇಬ್ಬರನ್ನೂ ಕಳೆದುಕೊಂಡಿದ್ದರು. ಮಹಂತೇಶ್ ಲೋಕೋಪಯೋಗಿ ಇಲಾಖೆಯಲ್ಲಿ ಎಫ್.ಡಿ.ಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪತಿಯ ಸಾವಿನ ನಂತೆ ಅನುಕಂಪದ ಆಧಾರದ ಮೇಲೆ ಪತ್ನಿ ಶ್ವೇತಾ ರವರಿಗೆ ಕೆಲಸ ದೊರೆತಿತ್ತು. ಪತಿಯ ಕೆಲಸ ಧಕ್ಕಿಸಿಕೊಂಡ ಶ್ವೇತಾ ರವರ ಬಾಳಿಗೆ ಎಂಟ್ರಿ ಕೊಟ್ಟವನು ಡಾ.ಶಿವಕುಮಾರ್.
ಫೇಸ್ ಬುಕ್ ಮೂಲಕ ಪರಿಚಯಿಸಿಕೊಂಡು ಮನೆಗೆ ಬಂದ ಡಾ.ಶಿವಕುಮಾರ್ ನಯವಾದ ಮಾತುಗಳಿಂದ ನಂಬಿಸಿ ಶ್ವೇತಾ ರವರ ಬಳಿ ಇದ್ದ 500 ಗ್ರಾಂ ಚಿನ್ನಾಭರಣ ಹಾಗೂ 2 ಕೆಜಿ ತೂಕದ 110 ಬೆಳ್ಳಿ ನಾಣ್ಯಗಳನ್ನ ತನ್ನ ಹೆಸರಿನಲ್ಲಿ ಆಕ್ಸಿಸ್ ಬ್ಯಾಂಕ್ ಲಾಕರ್ ಓಪನ್ ಮಾಡಿಸಿದರು. ಸುರಕ್ಷತೆ ಹೆಸರ ಹೇಳಿ ಲಾಕರ್ ಕೀ ಗಳನ್ನ ಶ್ವೇತಾ ಬಳಿ ಇರಿಸಿದ್ದರು. ನಂತರ ಹೆಚ್ಚಿನ ಲಾಭದ ಆಮಿಷ ತೋರಿಸಿ ಶ್ವೇತಾ ಬಳಿ ಇದ್ದ 10.50 ಲಕ್ಷ ಹಣವನ್ನ ಡಾ.ಶಿವಕುಮಾರ್ ವರ್ಗಾವಣೆ ಮಾಡಿಸಿಕೊಂಡರು.
ಇದಾದ ಕೆಲವೇ ದಿನಗಳಲ್ಲಿ ಲಾಕರ್ ನಲ್ಲಿದ್ದ ವಜ್ರದ ಉಂಗುರ ಡಾ.ಶಿವಕುಮಾರ್ ಬೆರಳಿನಲ್ಲಿ ಕಾಣಿಸಿದೆ. ಲಾಕರ್ ಕೀ ನನ್ನ ಬಳಿ ಇರುವಾಗ ವಜ್ರದ ಉಂಗುರ ಹೇಗೆ ಬಂತು ಎಂದು ಪ್ರಶ್ನಿಸಿದಾಗ ಸಮಂಜಸ ಉತ್ತರ ಬಂದಿಲ್ಲ. ನಂತರ ಪರಿಶೀಲಿಸಿದಾಗ ಲಾಕರ್ ನಲ್ಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ಪದಾರ್ಥಗಳು ಡಾ.ಶಿವಕುಮಾರ್ ಪಾಲಾಗಿತ್ತು.
ತನ್ನ ಚಿನ್ನಾಭರಣ ಬೆಳ್ಳಿ ಹಾಗೂ ನಗದು ಹಣವನ್ನ ಹಿಂದಿರುಗಿಸುವಂತೆ ಕೇಳಿದಾಗ ಡಾ.ಶಿವಕುಮಾರ್ ಜೀವಬೆದರಿಕೆ ಹಾಕಿದ್ದಾರೆಂದು ಆರೋಪಿಸಿರುವ ಶ್ವೇತಾ ರವರು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ…
ಬೆಂಗಳೂರು ಗ್ರಾಮಾಂತರ: ಮೊಬೈಲ್ ಫೋನ್ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್ ಕೇವಲ ಸಂಪರ್ಕ…
ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…
ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟದ ಅಂದಾಜು 50 ರಿಂದ 60 ಸಾವಿರ ಕೋಟಿವರೆಗೆ ತಲುಪುವ ಸಾಧ್ಯತೆಯಿದ್ದು, ಕೇಂದ್ರ…
ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ........ ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ..... ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು…
ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…
ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…