Categories: ಸಿನಿಮಾ

ವೇಗದ ಸಿನಿಮಾ ಸೆಟ್ ನಿರ್ಮಾಣ ಮಾಡಿ ಗಿನ್ನಿಸ್‌ಗೆ ಶ್ರಮಿಸಿದ ಕ್ಷಣ ಹಂಚಿಕೊಂಡ “ದೇವರ ಆಟ ಬಲ್ಲವಾರು” ಚಿತ್ರತಂಡ

ಕನ್ನಡ ಸಿನಿರಂಗದಲ್ಲಿ ಪ್ರಯೋಗಾತ್ಮಕ ಸಿನಿಮಾಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತವೆ. ಅದೇ ಸಾಲಿನಲ್ಲಿ “ದೇವರ ಆಟ ಬಲ್ಲವರಾರು ” ಸಿನಿಮಾ ನಿಲ್ಲುವಂತೆ ಭರವಸೆ ಮೂಡಿಸಿದೆ.

ಜನಾರ್ದನ್ ಪಿ ಜಾನಿ ನಿರ್ದೇಶಿಸಿ, ನಿರ್ಮಾಣ ಮಾಡಿತ್ತಿದ್ದು, ಹನುಮಂತ್‌ ರಾಜು, ಲತಾ ರಾಗ, ಆರ್ ಹೆಚ್ ಎಂಟರ್ಪ್ರೈಸಸ್ ಮತ್ತು ಪ್ರಿಸ್ವಾಸ್ ಸ್ಟುಡಿಯೋಸ್ ಬ್ಯಾನರ್ ಸಹಯೋಗದಲ್ಲಿ ನಿರ್ಮಾಣಗೊಳ್ಳುತ್ತಿರುವ, ಈ ಸಿನಿಮಾ ಕನ್ನಡ ಚಿತ್ರರಂಗದಲ್ಲೆ ಹೊಸ ದಾಖಲೆಯನ್ನು ಬರೆಯಲು ಸಜ್ಜಾಗಿದೆ.

ಮೊದಲ ಹಂತದ ಗಿನ್ನಿಸ್ ದಾಖಲಿಸಿ. ಕೇವಲ 22 ಗಂಟೆ 24 ನಿಮಿಷ 58 ಸೆಕೆಂಡ್‌ಗಳಲ್ಲಿ ನಿರ್ಮಾಣ ಮಾಡಿ ಅಚ್ಚರಿ ಮೂಡಿಸಿತ್ತು. ಅದರ ಕುರಿತಾದಂತೆ ಮೇಕಿಂಗ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದೆ. ವೇಗದ ಸೆಟ್ ನಿರ್ಮಾಣದ ಆ ಪರಿಶ್ರಮದ ಕ್ಷಣ ಹಂಚಿಕೊಳ್ಳಲು ಮಡಿಕೇರಿಯಲ್ಲೇ ಕಂಪ್ಲೇಟ್ ಚಿತ್ರೀಕರಣದ ಸ್ಥಳದಲ್ಲೇ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿತ್ತು.

ಈ ವೇಳೆ ಮಾತನಾಡಿದ ನಿರ್ದೇಶಕ ಜನಾರ್ಧನ್ ಪಿ ಜಾನಿ ಸೆಟ್ ನಿರ್ಮಾಣಕ್ಕಾಗಿ ಆರು ತಿಂಗಳ ಪರಿಶ್ರಮ ಇದೆ. ಪ್ರತಿಯೊಂದು ಪ್ಲಾನ್ ಮಾಡಿ ಎಕ್ಸಿಕ್ಯೂಟ್ ಮಾಡಲಾಯಿತು.

ಈ ವೇಗದ ಸೆಟ್ ನಿರ್ಮಾಣಕ್ಕೆ ನನಗೆ ಸಾತ್ ಕೊಟ್ಟಿದ್ದು ಆರ್ಟ್ ಡೈರೆಕ್ಟರ್ ಬಾಲ ಸರ್ ಜಗತ್ತಿನಲ್ಲಿ ಯಾರು ಮಾಡಲಾಗದ ಒಂದು ಪ್ರಯೋಗಾತ್ಮಕ ಕನ್ನಡದಲ್ಲಿ ಆಗ್ಬೇಕು ಅನ್ನೋ ಉದ್ದೇಶ ಇಟ್ಕೊಂಡು ಎರಡು ಹಂತದ ಗಿನ್ನಿಸ್ ಯೋಚನೆಯನ್ನು ಹೊತ್ತು ಮೊದಲ ಹಂತದ ಗಿನ್ನಿಸ್ ಗಾಗಿ ವೇಗದ ಸೆಟ್ ನಿರ್ಮಾಣ ಮಾಡಿ ಮೊದಲ ಹಂತದ ಜಯ ನಮಗೆ ಗಳಿಸಿದೆ. ಕನ್ನಡಿಗರು ಮತ್ತು ಮಾಧ್ಯಮ ಮಿತ್ರರ ಸಹಕಾರ ನಮಗೆ ಅತಿ ಮುಖ್ಯ ಎರಡನೇ ಹಂತದ ಗಿನ್ನಿಸ್ ಸಾಹಸಕ್ಕೆ ಕೈ ಹಾಕಿದ್ದೇವೆ. 30 ದಿನಗಳಲ್ಲಿ ಚಿತ್ರೀಕರಣ ಮುಗಿಸಿ ತೆರೆ ಮೇಲೆ ತರುವ ಈ ಸಾಹಸಕ್ಕೆ ಸಕಲ ಸಿದ್ಧತೆಯೊಂದಿಗೆ ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ ಎಂದರು.

ಇದೆ ವೇಳೆಯಲ್ಲಿ ನಾಯಕನಟ ಅರ್ಜುನ್ ರಮೇಶ್ ಮಾತನಾಡಿ ಬಿಗ್ ಬಾಸ್ ಮುಗಿದ ಬಳಿಕ ಕಳೆದ ಒಂದುವರೆ ವರ್ಷದಿಂದಲೂ ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿತ್ತು, ಕಳೆದ ಆರು ತಿಂಗಳಿನಿಂದ ಸಿನಿಮಾದ ತಯಾರಿಯಲ್ಲಿದ್ದೇವೆ ಸಿನಿಮಾ ಸ್ಕ್ರಿಪ್ಟ್ ನನಗೆ ತುಂಬಾ ಇಷ್ಟ ಆಗಿ ಅದಕ್ಕೆ ಬೇಕಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಈ ಸಿನಿಮಾಕ್ಕಾಗಿ 50 ದಿನಗಳಲ್ಲಿ 14 ಕೆಜಿ ತೂಕ ಇಳಿಸಿಕೊಂಡಿದ್ದೇನೆ.

ಕನ್ನಡ ಸಿನಿಮಾ ರಂಗದಲ್ಲೇ ದೇವರ ಆಟ ಬಲ್ಲವರಾರು ಸಿನಿಮಾ ಉತ್ತಮ ಸಿನಿಮಾಗಳ ಸಾಲಿನಲ್ಲಿ ನಿಂತುಕೊಳ್ಳಲಿದೆ. ಮೊದಲ ಹಂತದ ಗಿನ್ನಿಸ್ ಗಳಿಸಿ ಈಗ ಎರಡನೇ ಹಂತಕ್ಕೆ ಕಾಲಿಟ್ಟಿದ್ದೇವೆ. 30 ದಿನಗಳಲ್ಲಿ ಸಿನಿಮಾ ಚಿತ್ರೀಕರಣ ಮುಗಿಸಿ ತೆರೆ ಮೇಲೆ ತರುವ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದೇವೆ.

ದಿನದ 24 ಗಂಟೆಯೂ ಚಿತ್ರೀಕರಣ ನಡೆಯಲಿದೆ ಚಿತ್ರೀಕರಣ ಜಾಗದಲ್ಲಿ ಸ್ಟುಡಿಯೋ ಸೆಟ್ ಅಪ್ ಎಡಿಟಿಂಗ್ ಸೆನ್ಸರ್ ಎಲ್ಲವೂ ಚಿತ್ರೀಕರಣ ಜಾಗದಲ್ಲಿಯೇ ಯೋಜನಾಬದ್ಧವಾಗಿ ವ್ಯವಸ್ಥೆ ಮಾಡಿಕೊಂಡಿದ್ದೇವೆ‌. ಸಿನಿಮಾದ ಎಲ್ಲ ಪ್ರಕ್ರಿಯೆಯು ಮಡಿಕೇರಿಯಲ್ಲಿ ನಡೆಯಲಿದ್ದು ಎಲ್ಲಾ ಪ್ರಕ್ರಿಯೆ ಇಲ್ಲಿಯೇ ಮುಗಿಸಿ ತೆರೆ ಮೇಲೆ ತರುವ ಎಲ್ಲಾ ಯೋಜನೆಯನ್ನು ಹಾಕಿಕೊಂಡಿದ್ದೇವೆ‌.

ಅದರಂತೆಯೇ ಪ್ರಕ್ರಿಯೆ ನಡೆಯುತ್ತಿದೆ ಈ ಚಿತ್ರದಲ್ಲಿ ನಾನು ಸೂರಿ ಅನ್ನೋ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಸೂರಿ ಅನ್ನೋ ಪಾತ್ರದ ಮೂಲಕ ಈ ಅರ್ಜುನ್ ರಮೇಶ್ ಎಲ್ಲರ ಮನದಲ್ಲಿ ಉಳಿಯುವ ಉತ್ತಮ ಕ್ಯಾರೆಕ್ಟರ್ ನನಗೆ ಕೊಟ್ಟಿದ್ದಾರೆ. ಇದೊಂದು 1975ರ ಕಾಲಘಟ್ಟದ ಸಿನಿಮಾ. ನನ್ನ ಮತ್ತು ಸಿಂಧು ಲೋಕನಾಥ್ ನಡುವೆ ಒಂದು ಅದ್ಭುತ ಫೈಟ್ ಸೀನ್ ಇದೆ. ನೋಡುಗರನ್ನ ರೋಮಾಂಚನಗೊಳಿಸುವುದಂತು ಪಕ್ಕ ಎಂದರು.

ಪತ್ರಿಕಾಗೋಷ್ಠಿ ವೇಳೆ ನಿರ್ದೇಶಕ ಜನಾರ್ಧನ್ ಪಿ ಜಾನಿ ನಾಯಕ ನಟ ಅರ್ಜುನ್ ರಮೇಶ್ ನಿರ್ಮಾಪಕ ಆರ್ ಹೆಚ್ ಎಂಟರ್ಪ್ರೈಸಸ್ ಹನುಮಂತ್ ರಾಜು, ಆರ್ಟ್ ಡೈರೆಕ್ಟರ್ ಬಾಲ ಚಂದಿರ್ ಭಾಗಿಯಾಗಿದ್ದರು.

ಈ ಸಿನಿಮಾದಲ್ಲಿ ನಾಯಕನಟಿಯಾಗಿ ಸಿಂಧು ಲೋಕನಾಥ್ ಅಭಿನಯಿಸುತ್ತಿದ್ದು ನಾಗಾರ್ಜುನ, ಸಂಪತ್ ರಾಮ್, ವರ್ಷ ವಿಶ್ವನಾಥ್, ಮತ್ತಿತರರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಅತಿ ದೊಡ್ಡ ತಾರಾ ಬಳಗವನ್ನೇ ಹೊಂದಿದೆ.

ಗಿನ್ನಿಸ್ ತಂಡ ಚಿತ್ರೀಕರಣ ಜಾಗದಲ್ಲಿ ವಾಸ್ತವ್ಯ ಹೂಡಿದ್ದು ಚಿತ್ರೀಕರಣದ ಎಲ್ಲಾ ಪ್ರಕ್ರಿಯೆಯನ್ನು ಗಮನಿಸುತ್ತಿದೆ ಮತ್ತು ಚಿತ್ರೀಕರಣದ ಆರಂಭದಿಂದ ಅಂತ್ಯದವರೆಗೂ ಸಿಸಿಟಿವಿಯಲ್ಲಿ ದೃಶ್ಯಾವಳಿಗಳನ್ನ ದಾಖಲಿಸಿಕೊಳ್ಳುತ್ತಿದೆ. ಒಟ್ಟಿನಲ್ಲಿ ಅಂದುಕೊಂಡಂತೆ ಆದರೆ 30 ದಿನಗಳಲ್ಲಿ ಸಿನಿಮಾ ಚಿತ್ರೀಕರಣ ಮುಗಿಸಿ ತೆರೆ ಮೇಲೆತ್ತಿರುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

Ramesh Babu

Journalist

Recent Posts

ಮದುವೆಯಾದ 45 ದಿನಕ್ಕೆ ಲವರ್​​ ಜೊತೆ ಯುವತಿ ಎಸ್ಕೇಪ್​​: ಪತಿ, ಸೋದರ ಮಾವ ಸೂಸೈಡ್

  ಮದುವೆಯಾದ 45 ದಿನಕ್ಕೆ ನವವಿವಾಹಿತ ಪತ್ನಿಯಿಂದ ಕಿರುಕುಳ ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ವರ್ತನೆಯೇ ಸಾವಿಗೆ ಕಾರಣ ಎಂದು…

4 hours ago

ವರದಕ್ಷಿಣೆ ಭೂತಕ್ಕೆ ಬಲಿಯಾದ ವಿವಾಹಿತೆ; ಮದುವೆಯಾದ ಎರಡೇ ವರ್ಷಕ್ಕೆ ಮಸಣದ ಪಾಲು

ಬೆಂಗಳೂರು ನಗರದ ಯಡಿಯೂರು ಕೆರೆ ಸಮೀಪದ ನಿವಾಸಿಯೊಬ್ಬರು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.…

6 hours ago

ಆಸ್ತಿ ವ್ಯಾಮೋಹಕ್ಕೆ ಹೆತ್ತ ತಾಯಿಯ ಕೊಲೆ: ಕಲ್ಲು ಎತ್ತಿ ಹಾಕಿ ಕೊಂದ ಮಗ.!

ರಾಯಚೂರು: ಆಸ್ತಿ ಮೇಲಿನ ವ್ಯಾಮೋಹಕ್ಕೆ ಹೆತ್ತ ತಾಯಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಹೃದಯವಿದ್ರಾವಕ ಘಟನೆ ರಾಯಚೂರು…

7 hours ago

ಚೀಲದಲ್ಲಿ ಯುವತಿಯ ಶಿರವಿಲ್ಲದ ದೇಹ ಪತ್ತೆ; ಸಹೋದ್ಯೋಗಿ ಅರೆಸ್ಟ್….! ಏಕೆ ಗೊತ್ತಾ….?

ಆಗ್ರಾ: ಆಗ್ರಾದಲ್ಲಿ ಚೀಲದಲ್ಲಿ ಯುವತಿಯ ಶಿರರಹಿತ ಶವ ಪತ್ತೆಯಾದ ಪ್ರಕರಣದಲ್ಲಿ ಯುವಕನೊಬ್ಬನನ್ನು ಬಂಧಿಸಲಾಗಿದೆ. ಆಗ್ರಾದ ಪಾರ್ವತಿ ವಿಹಾರ್‌ನಲ್ಲಿ ಜನವರಿ 24…

8 hours ago

ಪಿಟಿಸಿಎಲ್ ಕಾಯ್ದೆ ವಿರುದ್ದ ತೀರ್ಪು ನೀಡಿದವರ ಮೇಲೆ ಕ್ರಮಕ್ಕೆ ಒತ್ತಾಯ

ಕೋಲಾರ: ರಾಜ್ಯ ಸರ್ಕಾರ 2023ರ ಪಿಟಿಸಿಎಲ್ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ಕಂದಾಯ ಇಲಾಖೆ, ನ್ಯಾಯಾಲಯಗಳು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನಲ್ಲಿ…

9 hours ago

ಸಾಲದ ಸುಳಿಗಿಂತಲೂ ಕಿರುಕುಳವೇ ಮಾರಕ…

ಒಂದು ಸುಂದರ ಸಂಸಾರ ಸಾಲದ ಸುಳಿಗೆ ಸಿಲುಕುವುದು ಎಂದರೆ ಅದು ಕೇವಲ ಆರ್ಥಿಕ ಬಿಕ್ಕಟ್ಟಲ್ಲ; ಅದು ಆ ಮನೆಯ ನೆಮ್ಮದಿಯ…

14 hours ago