ಪುಸ್ತಕ ವಿತರಣೆ ಕಾರ್ಯಕ್ರಮ ಹೆಸರಿಗೋಸ್ಕರ ಮಾಡುತ್ತಿರುವ ಕಾರ್ಯಕ್ರಮವಲ್ಲ. ಈ ರೀತಿ ಪ್ರತಿ ವರ್ಷ ಪುಸ್ತಕ ನೀಡಲಾಗುತ್ತದೆ. ದಸರಾ ರಜಾದ ವೇಳೆ ಈ ಭಾಗದ ಸುತ್ತಮುತ್ತಲಿನ ಮಠಗಳಿಗೆ ಮಕ್ಕಳನ್ನು ಕರೆದೊಯ್ದು ಮಠಗಳ ಪರಿಚಯ ಮಾಡಿಕೊಡಲಾಗುತ್ತದೆ. ಸರ್ಕಾರಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮುಂದಿನ ಓದಿಗೆ ಉಚಿತ ದಾಖಲಾತಿ ನೀಡಲಾಗುತ್ತದೆ. ಈ ಪುಸ್ತಕಗಳನ್ನು ಸರಿಯಾಗಿ ಉಪಯೋಗಿಸುವ ಮೂಲಕ ಶಿಕ್ಷಣದಲ್ಲಿ ಸಾಧನೆ ಮಾಡಬೇಕು ಪವಾಡಶ್ರೀ ಬಸವಣ್ಣ ಮಠದ ಶ್ರೀಸಿದ್ದಲಿಂಗಸ್ವಾಮಿ ಹೇಳಿದರು.
ನಗರದ ಬಸವ ಭವನದಲ್ಲಿ ಭಾನುವಾರ ರಾಜ್ಯ ವೀರಶೈವ ಲಿಂಗಾಯತ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಪವಾಡಶ್ರೀ ಬಸವಣ್ಣದೇವರ ಮಠ, ಹಾಗೂ ಬಸವ ಭಾರತ ಪ್ರತಿಷ್ಠಾನ ಪವಾಡಶ್ರೀ ಬಸವಣ್ಣ ದೇವರ ಮಠ ನೆಲಮಂಗಲ ಸಹಯೋಗದಲ್ಲಿ ತಾಲೂಕಿನ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವೀರಶೈವ ಲಿಂಗಾಯಿತ ಮಕ್ಕಳಿಗೆ ಲೇಖನ ಸಾಮಗ್ರಿ ಮತ್ತು ನೋಟ್ ಪುಸ್ತಕ ವಿತರಣಾ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅನ್ನ ಕ್ಷಣಿಕ ತೃಪ್ತಿ ನೀಡಿದರೆ , ಶಿಕ್ಷಣ ಬಳಸಿದಷ್ಟು ಹೆಚ್ಚು ಜ್ಞಾನ ನೀಡುತ್ತದೆ. ವಿದ್ಯಾರ್ಥಿಗಳ ಕಲಿಕೆಗೆ ೫ ಮಾತ್ರೆಗಳು ಅವಶ್ಯಕ ಬೆಳಿಗ್ಗೆ ಬೇಗನೇ ಏಳುವುದು, ಪ್ರತಿದಿನ 15 ನಿಮಿಷ ಧ್ಯಾನ, ಕಲಿಕೆಯೊಂದಿಗೆ ತಂದೆತಾಯಿಗೆ ನೆರವಾಗುವುದು. ಓದಿರುವ ವಿಷಯದ ಪ್ರಮುಖ ವಿಷಯಗಳನ್ನು ಬರೆದಿಡುವುದು, ಪರೀಕ್ಷೆ ದಿನ ಓದುವುದಲ್ಲ ಪ್ರತಿದಿನ ಓದುವಾಗ ತಿಳಿದ ವಿಷಯಗಳನ್ನು ಶಿಕ್ಷಕರಿಂದ ಮಾಹಿತಿ ಪಡೆಯುವುದು ಇವು 5 ಪ್ರಮುಖ ಮಾತ್ರೆಗಳಾಗಿವೆ. ಈ ಮೂಲಕ ಶೈಕ್ಷಣಿಕ ದೊಡ್ಡ ಸಾಧನೆ ಮಾಡಬಹುದು ಎಂದರು.
"ಆದರ್ಶವೊಂದನ್ನು ಬೆನ್ನು ಹತ್ತುವುದು ಮನುಷ್ಯನಿಗೆ ಕ್ರಿಯಾಶೀಲತೆಯನ್ನು ಮತ್ತು ಸೊಗಸಾದ ನೈತಿಕ ಧೈರ್ಯವನ್ನು ನೀಡುತ್ತದೆ " - ಡಾಕ್ಟರ್ ಬಾಬಾ ಸಾಹೇಬ್…
Cheap Emotional Support Animal Letter: Your Guide Understanding Cheap Emotional Support Animal Letters In recent…
Understanding ESA Letters for Mental Health Support The Role of ESA Letters in Mental Health…
ತಲಾ ಆದಾಯದಲ್ಲಿ ನಾವು ದೇಶದಲ್ಲೇ ನಂಬರ್ ಒನ್ ಆಗಿದ್ದೇವೆ. ಆದ್ದರಿಂದ ದೇಶಕ್ಕೆ ಕಾಂಗ್ರೆಸ್ ಬೇಕು. ತೆರಿಗೆ ಸಂಗ್ರಹದಲ್ಲಿ ರಾಜ್ಯ ಎರಡನೇ…
ದೇವಿಯ ಕರಗ ಉತ್ಸವದಲ್ಲಿ ಅಶ್ಲೀಲ ನರ್ತನ ಮಾಡಿದ್ದರಿಂದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ…
ಬಾಬು ಜಗಜೀವನ್ ರಾಮ್ ಜಯಂತಿ ಪ್ರಯುಕ್ತ ಏ.5ರ ಭಾನುವಾರ ತೂಬಗೆರೆ ಸರ್ಕಾರಿ ಶಾಲೆಯಲ್ಲಿ ಬಾಬು ಜಗಜೀವನ ರಾಮ್ ರಾಷ್ಟ್ರೀಯ ಶಿಕ್ಷಣ…