ವಿದ್ಯಾರ್ಜನೆಗಾಗಿ ಕಾದಿರುವ ಪುಟಾಣಿಗಳಿಗೆ ಶಾಲೆಯ ಬಾಗಿಲು ತೆರೆದಿದೆ, ತೊದಲು ನುಡಿಯುತ್ತಿದ್ದ ಮಕ್ಕಳು ಅಕ್ಷರಗಳ ಉಚ್ಛಾರಣೆ, ಬರೆಯಲು ಪ್ರಾರಂಭಿಸಿದ್ದಾರೆ. ಈ ಹಿನ್ನೆಲೆ ಇಂದು ನಗರದ ನ್ಯಾಷನಲ್ ಪ್ರೈಡ್ ಶಾಲೆಯ ಮೊದಲ ದಿನವಾದ ಇಂದು ಶಾಸ್ತ್ರಬದ್ದವಾಗಿಯೇ ಆರಂಭಿಸಲಾಗಿದೆ.
ನೂತನವಾಗಿ ಶಾಲೆಗೆ ದಾಖಲಾದ ಸಾಮೂಹಿಕ ಅಕ್ಷರಾಭ್ಯಾಸದಲ್ಲಿ ಭಾಗವಹಿಸಿ ಜ್ಞಾನದ ದೇವತೆ ಸ್ವರತಿಯ ಅಶೀರ್ವಾದದೊಂದಿಗೆ ವಿದ್ಯೆ ಕಲಿಕೆಯನ್ನ ಆರಂಭಿಸಿದರು.
ಸಾಮಾನ್ಯವಾಗಿ ಶೃಂಗೇರಿಯ ಶಾರದಾಂಬೆಯ ಸನ್ನಿಧಿಯಲ್ಲಿ ತಮ್ಮ ಮಕ್ಕಳ ಅಕ್ಷರಾಭ್ಯಾಸವನ್ನ ಮಾಡುತ್ತಾರೆ, ಈ ಪರಂಪರೆಯನ್ನೇ ಈ ಶಾಲೆಯಲ್ಲಿ ಪ್ರತಿಯೊಂದು ಮಗುವಿನ ಅಕ್ಷರಾಭ್ಯಾಸವನ್ನ ಸಾಮೂಹಿಕವಾಗಿ ಮಾಡಲಾಯಿತು.
ಶಾಲೆಗೆ ಬಂದ ಮಕ್ಕಳು ಮೊದಲ ಬಾರಿಗೆ ತರಗತಿಯೊಳಗೆ ಹೆಜ್ಜೆ ಇಡುತ್ತಿದ್ದಾರೆ, ಈ ದಿನವನ್ನ ಪೋಷಕರಿಗೆ ಸದಾ ನೆನೆಪಿನ ದಿನವನ್ನಾಗಿ ಮಾಡಲು ನ್ಯಾಷನಲ್ ಪ್ರೈಡ್ ಶಾಲೆ ಮುಂದಾಗಿದೆ, ಮಕ್ಕಳು ತರಗತಿಯೊಳಗೆ ಇಡುತ್ತಿರುವ ಮೊದಲ ಹೆಜ್ಜೆಯ ಫೂಟ್ ಪ್ರಿಂಟ್ ತೆಗದುಕೊಂಡು ತರಗತಿಯಲ್ಲಿ ದಾಖಲು ಮಾಡಲಾಯಿತು.
ಪುರಾಣಗಳಲ್ಲಿ ವಾಲ್ಮೀಕಿ ಮಹರ್ಷಿಗಳು ಲವಕುಶರಿಗೆ ಅಕ್ಷರಭ್ಯಾಸವನ್ನು ಮಾಡಿಸುವ ಮೂಲಕ ವಿದ್ಯೆಯನ್ನು ಪ್ರಾರಂಭಿಸಿದ್ದರು ಎಂಬ ಉಲ್ಲೇಖವಿದೆ. ಸರ್ವಧರ್ಮ ಸಮನ್ವಯತೆ ಸಾರುವ ನಿಟ್ಟಿನಲ್ಲಿ ಈ ಶಾಲೆ ಮುಂದಿದೆ. ಅದೇರೀತಿ ಶಿಸ್ತು ಮತ್ತು ಸಮಯ ಪಾಲನೆ ಶಾಲೆಯ ಪ್ರಮುಖ ಆದ್ಯತೆಯಾಗಿದೆ.
ದ್ವೇಷ ಭಾಷಣ ತಡೆ ಮಸೂದೆಯ ಬಗ್ಗೆ ಬಿಜೆಪಿಗೆ ಮಾತ್ರ ಏಕೆ ಆತಂಕ? ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡು…
ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಸಂಬಂಧ ಎಸ್ಪಿ ಗುಂಜನ್…
ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…
ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…
ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರ ಸೂಸುತ್ರವಾಗಿ ಪೂರ್ಣಗೊಂಡಿದೆ. ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ…
ಒಂಟಿ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಊರಿನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು…