ದೊಡ್ಡಬಳ್ಳಾಪುರ ನಗರದ 29ನೇ ಡಿವಿಜನ್ ಭೋವಿ (ವಡ್ಡರ)ಪೇಟೆಯಲ್ಲಿನ ಶ್ರೀ ಶ್ರೀ ಭೂನೀಳಾಸಮೇತ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹೋಳಿ (ಕದರಿ) ಹುಣ್ಣಿಮೆ ಪ್ರಯುಕ್ತ ಮಾ.2, 3ರಂದು ಲೋಕಕಲ್ಯಾಣಾರ್ಥ ಶ್ರೀ ಭೂನೀಳಾಸಮೇತ “ಶ್ರೀ ಲಕ್ಷ್ಮೀನರಸಿಂಹಸ್ವಾಮಿ ತಿರುಕಲ್ಯಾಣೋತ್ಸವ” ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿತು.
ಮಾ.2ರ ಬೆಳಿಗ್ಗೆ 6-00 ಗಂಟೆಗೆ ಸುಪ್ರಭಾತ ಸೇವೆ, ಶ್ರೀ ವಿಶ್ವಸೇನ ಪೂಜೆ, ಶ್ರೀ ಭಗವತ್ ವಾಸುದೇವ ಪುಣ್ಯಾಹ ವಾಚನ, ಶ್ರೀ ಮಹಾಲಕ್ಷ್ಮೀನರಸಿಂಹಸ್ವಾಮಿ ಪ್ರಧಾನ ಕಳಸ ಸ್ಥಾಪನೆ, ಸಕಲ ಇಷ್ಟಾರ್ಥ ಸಿದ್ದಿ ಶ್ರೀ ಲಕ್ಷ್ಮೀನರಸಿಂಹ ಪ್ರಧಾನ ಹೋಮ, ಮಹಾಸುದರ್ಶನ ಹೋಮ, ಶಾಂತಿ ಹೋಮ, ಪೂರ್ಣಾಹುತಿ ನಡೆಸಲಾಯಿತು.
ಮಧ್ಯಾಹ್ನ 12-30 ಗಂಟೆಗೆ ಮಂತ್ರ ಪುಷ್ಪ ಶಾತುಮುರೈ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಸಂಜೆ 6-00 ಗಂಟೆಗೆ ವೇದ-ಸ್ತೋತ್ರ-ಪ್ರಬಂಧ ಪಾರಾಯಣ ಶ್ರೀ ಮಹಾಲಕ್ಷ್ಮೀ ಪ್ರಧಾನ ಹೋಮ, ಮಹಾಪೂರ್ಣಾಹುತಿ ರಾತ್ರಿ 8-00 ಗಂಟೆಗೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ಮಾ.3ರ ಬೆಳಿಗ್ಗೆ 6-00 ಗಂಟೆಗೆ ಸುಪ್ರಭಾತ ಸೇವೆ, ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಅಲಂಕಾರ. ಬೆಳಿಗ್ಗೆ 9-00 ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ, ಮಧ್ಯಾಹ್ನ 12-00 ಗಂಟೆಗೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ಲೋಕಕಲ್ಯಾಣಾರ್ಥ ಶ್ರೀ ಭೂನೀಳಾಸಮೇತ “ಶ್ರೀ ಲಕ್ಷ್ಮೀನರಸಿಂಹಸ್ವಾಮಿ ತಿರುಕಲ್ಯಾಣೋತ್ಸವ”. ರಾತ್ರಿ 8ಕ್ಕೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ಲಕ್ಷ್ಮೀನರಸಿಂಹಸ್ವಾಮಿ ತಿರುಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳು, ಭಕ್ತಾಧಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಬಕಾರಿ ಇಲಾಖಾ ವತಿಯಿಂದ ವಿವಿಧ 47 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ 111.355 ಕೆ.ಜಿ ಗಾಂಜಾವನ್ನು ಬೆಂಗಳೂರು ಗ್ರಾಮಾಂತರ…
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ವಿವಿಧ ವಸತಿ ಶಾಲೆಗಳಲ್ಲಿ 2026-27ನೇ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ನಡೆಸಲಾಗುವ ರಾಜ್ಯಮಟ್ಟದ ಸಾಮಾನ್ಯ…
ದೊಡ್ಡಬಳ್ಳಾಪುರದಲ್ಲಿ ಈ ಮೊದಲೇ ಅನುಮೋದನೆಗೊಂಡ ಜಿಲ್ಲಾಸ್ಪತ್ರೆಗೆ ಗುದ್ದಲಿಪೂಜೆ ಮಾಡಿ 2 ವರ್ಷವಾಗಿದೆ. ಈ ಬಾರಿಯಾದರೂ ಅನುದಾನ ನೀಡಿ ಜಿಲ್ಲಾಸ್ಪತ್ರೆ ಪ್ರಾರಂಭಿಸಲು…
ಕೋಟಿ ವರದಕ್ಷಿಣೆ, ಕಿಯಾ ಕಾರು ಕೊಟ್ಟರು, ಹೆಂಡತಿಗೆ ಕಿರುಕುಳ ನೀಡುತ್ತಿದ್ದ ಈ ಹಿನ್ನೆಲೆ ಗಂಡನ ವಿರುದ್ಧ ಹೆಂಡತಿ ದೂರು ನೀಡಿದ್ದಾರೆ...…
ಬೆಂಗಳೂರು, ವೈಟ್‌ಫೀಲ್ಡ್ : ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಪಶ್ಚಿಮ ಬಂಗಾಳದ 26 ವರ್ಷದ ಯುವಕನಿಗೆ…
ದೊಡ್ಡಬಳ್ಳಾಪುರ ತಾಲೂಕಿನ ಹಮಾಮ್ ಗೇಟ್(ಶಿವಪುರ ಗೇಟ್) ಬಳಿ ಇಂದು ರಾತ್ರಿ ಸುಮಾರು 9:30ರಲ್ಲಿ ದಾರಿಯಲ್ಲಿದ್ದ ಮಹಿಳೆಗೆ ಕೋಳಿ ಸಾಗಿಸುವ ಐಷರ್…