ಅದ್ಧೂರಿಯಾಗಿ ನಡೆದ ಕಾಮೇನಹಳ್ಳಿ ಗುಟ್ಟೆ ಲಕ್ಷ್ಮಿನರಸಿಂಹ ಜಾತ್ರಾಮಹೋತ್ಸವ

ದೊಡ್ಡಬಳ್ಳಾಪುರ ತಾಲ್ಲೂಕಿನ ಕಾಮೇನಹಳ್ಳಿ ಸಮೀಪದ ಗುಟ್ಟೆ ಲಕ್ಷ್ಮಿನರಸಿಂಹ ಕ್ಷೇತ್ರದಲ್ಲಿ ಮಂಗಳವಾರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಗಂಗಾಪೂಜೆ, ಅಂಕುರಾರ್ಪಣೆ, ಧ್ವಜಸಂಕಲ್ಪ, ಸುದರ್ಶನ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಕದರಿ ಹುಣ್ಣಿಮೆ ಪ್ರಯುಕ್ತ ಮಧ್ಯಾಹ್ನ 12.8ಕ್ಕೆ ರಥೋತ್ಸವ ನೆರವೇರಿತು.

ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜೆ ನೆರವೇರಿಸಿ ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಪಾನಕ ಸೇವೆ, ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು.

ದೇವಾಲಯಕ್ಕೆ ತೆರಳಲು ಭಕ್ತರು ಖಾಸಗಿ ವಾಹನ, ಆಟೊಗಳ ಮೊರೆ ಹೋಗಿದ್ದರು. ಸಂಜೆ ಪಚ್ಚಾರಲಹಳ್ಳಿ, ಕಾಮೇನಹಳ್ಳಿ, ಆರೂಢಿ, ದೊಡ್ಡಗುಂಡಪ್ಪನಾಯಕನಹಳ್ಳಿ, ಚಿಕ್ಕ ಗುಂಡಪ್ಪನಾಯಕನಹಳ್ಳಿ, ಸಿಂಗ್ರಯ್ಯನಪಾಳ್ಯ, ಕಲ್ಲುಕುಂಟೆ, ಗರಿಕೇನಹಳ್ಳಿ, ವಡ್ಡನಹಳ್ಳಿ ಕೊಟ್ಟಗೆಮಾಚೇನಹಳ್ಳಿ, ಬನವತಿ, ದಡಘಟ್ಟಮೊಡಗು, ಗೌಡನಕುಂಟೆ, ಕರೇಕಲ್ಲಹಳ್ಳಿ, ಹಾರೋಹಳ್ಳಿ, ಲಿಂಗದವೀರನಹಳ್ಳಿ, ಸೋಮಶೆಟ್ಟಿಹಳ್ಳಿ, ನಾಚಕುಂಟೆ, ತರಿದಾಳು, ನಾಗತೇನಹಳ್ಳಿ, ಇಂದಿರಾನಗರ, ಬೇವಿನಹಳ್ಳಿ, ಕುಕ್ಕಲಹಳ್ಳಿ, ಉಜ್ಜನಿ, ಸಾಸಲು ಗ್ರಾಮಗಳಿಂದ ಆಕರ್ಷಕ ದೀಪದಾರತಿ, ಪಟಾಕಿ, ಬಾಣಬಿರುಸುಗಳ ಪ್ರದರ್ಶನ ನಡೆಯಿತು.

ಮಾರ್ಚ್ 4 ರಂದು ಬೆಳಿಗ್ಗೆ ಜಾತ್ರಾ ಮಹೋತ್ಸವದ ಜಲಧಿ ಕಾರ್ಯಕ್ರಮ, ಬಾಳೆಮರ ಅಂಬು ಹಾಕುವ ಮೂಲಕ ಶಾಂತಿ ಸಂಪನ್ನ, ಹೋಳಿ ಹಬ್ಬದ ಪ್ರಯುಕ್ತ ಬಣ್ಣದ ಓಕುಳಿ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ರಾತ್ರಿ 8ಕ್ಕೆ ಗುಟ್ಟೆ ಲಕ್ಷ್ಮಿನರಸಿಂಹಸ್ವಾಮಿ ನಾಟಕ ಮಂಡಳಿಯಿಂದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.

Ramesh Babu

Journalist

Recent Posts

ಬೀದಿ ನಾಯಿಗಳ ದಾಳಿಗೆ 10ಕ್ಕೂ ಹೆಚ್ಚು ಕುರಿ, ಮೇಕೆ ಬಲಿ!: ದೂರು ನೀಡಿದರೂ ಕ್ರಮ ಕೈಗೊಳ್ಳದ ಪಂಚಾಯಿತಿ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ದೇವನಹಳ್ಳಿ: ಬೀದಿ ನಾಯಿಗಳ ಗುಂಪೊಂದು ಕುರಿ, ಮೇಕೆಗಳ ಕೊಟ್ಟಿಗೆಗೆ ನುಗ್ಗಿ ದಾಳಿ ನಡೆಸಿದ ಪರಿಣಾಮ 10ಕ್ಕೂ ಹೆಚ್ಚು ಕುರಿ ಮತ್ತು…

7 hours ago

ಅಕ್ರಮ ವಿದೇಶಿಗರ ಬೇಟೆಗೆ ಪೊಲೀಸ್ ಬಲೆ!- ಕೈಗಾರಿಕಾ ವಲಯಗಳ ಬಾಡಿಗೆ ಮನೆ, ಗೆಸ್ಟ್ ಗೌಸ್, ಲಾಡ್ಜ್‌ಗಳ ಮೇಲೆ ಹದ್ದಿನ ಕಣ್ಣು-ಡಿವೈಎಸ್ಪಿ ಪಾಂಡುರಂಗ

ಸಮರ್ಪಕ ದಾಖಲೆಗಳಿಲ್ಲದೆ ವಿದೇಶಗಳಿಂದ ಬಂದು ಜಿಲ್ಲೆಯಲ್ಲಿ ನೆಲೆಸಿರುವವರ ಪತ್ತೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.…

12 hours ago

ಗುತ್ತಿಗೆದಾರರಿಂದ ಲಂಚ ವಸೂಲಿ ಶಂಕೆ; ಎಂಜಿನಿಯರ್ ಬಳಿ 21.88 ಲಕ್ಷ ನಗದು ಪತ್ತೆ!

ಒಡಿಶಾ: ಗುತ್ತಿಗೆದಾರರಿಂದ ಲಂಚ ಪಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಆಧಾರದ ಮೇಲೆ ಒಡಿಶಾ ವಿಜಿಲೆನ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ,…

1 day ago

ಕೆಲವು ಶಿಕ್ಷಕರ ಮತ ಮಾರಾಟ……

ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿಯೂ ಹಣದ ಹೊಳೆ ಹರಿಯುತ್ತಿದೆ. ಇದು ಹೊಸದೇನು…

2 days ago

ಸಚಿವ ಜಾರ್ಜ್ ಜತೆ ಶಾರದೆಯ ದರ್ಶನ ಪಡೆದ ರಾಜ್ಯಪಾಲರಾದ ಡಾ. ಸುಧಾ ಯಾದವ್

ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ‌ ದಿನವೇ ಡಾ. ಸುಧಾ ಯಾದವ್ ಅವರು ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್…

2 days ago

ಯುವ ಸಂಸತ್ತು ಸ್ಪರ್ಧೆ: ಕೊಂಗಾಡಿಯಪ್ಪ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ: ರವಿಕುಮಾರ್‌ಗೆ ದ್ವಿತೀಯ ಸ್ಥಾನ; ಜಿಲ್ಲಾ ಮಟ್ಟಕ್ಕೆ ಆಯ್ಕೆ

ದೊಡ್ಡಬಳ್ಳಾಪುರ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ತಾಲ್ಲೂಕು ಮಟ್ಟದ ಯುವ ಸಂಸತ್ತು ಅಣಕು ಸ್ಪರ್ಧೆಯಲ್ಲಿ ಶ್ರೀ ಕೊಂಗಾಡಿಯಪ್ಪ ಕಾನೂನು…

2 days ago