ಆಕೆ ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆ ಆಗಿದ್ದಳು. ಗಂಡನ ಜೊತೆಗೆ ನೆಮ್ಮದಿಯಾಗಿ ಇರಬೇಕು ಎಂದು ಒಂದು ಸೈಟ್ ಕೊಂಡುಕೊಳ್ಳಲು ಮುಂದಾಗಿದ್ದಾಳೆ. ಈ ವೇಳೆ ಸೈಟ್ ಕೊಳ್ಳಲು ಓರ್ವ ಸ್ವಾಮೀಜಿಯನ್ನ ಮಧ್ಯಸ್ಥಿಕೆಗೆ ಕರೆದಿದ್ದಾಳೆ. ಇವರಿಬ್ಬರ ಮಧ್ಯೆ ಹಣದ ವಿಚಾರಕ್ಕೆ ಮನಃಸ್ತಾಪ ಉಂಟಾಗಿ ಈಗ ಸ್ವಾಮೀಜಿ ನನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪ ಮಾಡಿದ್ದಾಳೆ. ಈ ಕುರಿತ ಕಂಪ್ಲೀಟ್ ವರದಿ ಇಲ್ಲಿದೆ ಓದಿ……………
ಹೌದು ಹೀಗೆ ದಾಖಲೆಗಳನ್ನ ತೋರಿಸುತ್ತಿರುವ ಸ್ವಾಮೀಜಿ, ನಮ್ಮ ಸ್ವಾಮೀಜಿ ಅಂಥವರಲ್ಲ ಎಂದು ಆಕ್ರೋಶ ಹೊರ ಹಾಕುತ್ತಿರುವ ಭಕ್ತಾಧಿಗಳು, ನನ್ನ ಹೆಂಡತಿಗೆ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡುತ್ತಿರುವ ಗಂಡ ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆ ಬಳಿ.
ಹೌದು ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು, ತನಗೆ ಲೈಗಿಂಕ ಕಿರುಕುಳ ನೀಡುತ್ತಿದ್ದಾರೆ ಎಂದು ಸೆಲ್ಫಿ ವಿಡಿಯೋ ಮಾಡಿ ಆರೋಪ ಮಾಡಿದ್ದಾಳೆ. ಐದು ಸಾವಿರ ಹಣ ಕೇಳಿದರೆ ರೂಂ ಗೆ ಬಾ, ಆಮೇಲೆ ಹಣ ಕೊಡುತ್ತೇನೆ ಎಂದು ಸ್ವಾಮೀಜಿ ಕರೆಯುತ್ತಿದ್ದಾನೆ, ಪ್ರತಿನಿತ್ಯ ಕಾಲ್ ಮಾಡಿ ಕಿರುಕುಳ ನೀಡುತ್ತಿದ್ದಾನೆ. ಮಹಿಳೆ ಒಂಟಿಯಾಗಿದ್ದಾಗ ಮನೆಗೆ ಹೋಗಿ ಕಿರುಕುಳ ನೀಡುತ್ತಿದ್ದಾನೆ ಹಾಗಾಗಿ ನನಗೆ ಆದ ರೀತಿ ಯಾವ ಮಹಿಳೆಗೂ ಆಗುವುದು ಬೇಡ, ನನಗೆ ನ್ಯಾಯ ಬೇಕು ಎಂದು ಮಹಿಳೆ ಆರೋಪಿಸಿ ವಿಡಿಯೋ ಹರಿ ಬಿಟ್ಟಿದ್ದಾಳೆ.
ಇನ್ನೂ ಈ ರೀತಿ ಗಂಭೀರ ಆರೋಪ ಎದುರಿಸುತ್ತಿರುವ ಸ್ವಾಮೀಜಿಯ ಹೆಸರು ಬ್ರಹ್ಮಾನಂದ ಗುರೂಜಿ ಅಂತ. ಈ ವಿಚಾರವಾಗಿ ಈತ ಹೇಳುವ ಮಾತೇ ಬೇರೆ. ಮಹಿಳೆ ಗಂಡ ನನಗೆ ಬಹಳ ಪರಿಚಯ. ಹಾಗಾಗಿ ಅವರು ನಮ್ಮ ಬಳಿ ಬಂದು ಒಂದು ಸೈಟ್ ಕೊಡಿಸುವುದಾಗಿ ಕೇಳಿಕೊಂಡರು. ಆಗ ನನಗೆ ಪರಿಚಯ ಇದ್ದ ಒಬ್ಬರ ಬಳಿ 11 ಲಕ್ಷಕ್ಕೆ ಸೈಟ್ ಕೊಡಿಸಿದ್ದ. ಅದು ಕೆಲವೇ ದಿನಗಳಲ್ಲಿ ಸೈಟ್ ಇ ಖಾತೆ ಮಾಡುವುದನ್ನ ಸರಕಾರ ನಿಲ್ಲಿಸಿತು. ಆಗ ಅವರ ಹಣವನ್ನ ವಾಪಸ್ ನೀಡಿದ್ದೇವೆ. ಈ ವೇಳೆ ಮಹಿಳೆ ನನ್ನ ಜೊತೆ ಸಲುಗೆಯಿಂದ ಮಾತನಾಡಲು ಮುಂದಾದಳು. ಆಗ ನಾನು ಅವರ ನಂಬರ್ ಬ್ಲಾಕ್ ಮಾಡಿದೆ. ನಂತರ ಕೂಡ ಬೇರೆ ಬೇರೆ ನಂಬರ್ ಗಳಿಂದ ನನಗೆ ಫೋನ್ ಮತ್ತು ಮೆಸೇಜ್ ಮಾಡಿದರು. ಆದರೆ ಈಗ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಇವರು ಮತ್ತು ನಮ್ಮಊರಿನಲ್ಲಿ ನನಗೆ ಆಗದವರು ನಮ್ಮ ವಿರುದ್ಧ ಷಡ್ಯಂತರ ಮಾಡಿದ್ದಾರೆ. ನನ್ನ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಎಂದು ಹೇಳಿಕೆ ನೀಡಿದ್ದಾರೆ.ಇನ್ನೂ ಮಹಿಳೆಯ ಗಂಡ ಮಹಿಳಾ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೆ, ಇತ್ತ ಸ್ವಾಮೀಜಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ.
ಒಟ್ಟಾರೆ ಸೈಟ್ ನ ವಿಚಾರಕ್ಕೆ ಆರಂಭವಾದ ಮನಸ್ಥಾಪ ಈಗ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪದ ವರೆಗೆ ತಲುಪಿದೆ. ಈಗಾಗಲೇ ದೂರು ಪ್ರತಿ ದೂರು ದಾಖಲಾಗಿದ್ದು ಪೊಲೀಸ್ ತನಿಖೆಯ ನಂತರ ಸತ್ಯಾಸತ್ಯತೆ ತಿಳಿಯಬೇಕಿದೆ.
ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…
ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…
ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರ ಸೂಸುತ್ರವಾಗಿ ಪೂರ್ಣಗೊಂಡಿದೆ. ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ…
ಒಂಟಿ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಊರಿನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು…
ಯಲಹಂಕ ತಾಲೂಕಿನ ಜಾಲ ಹೋಬಳಿಯ ಚಿಕ್ಕಜಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎ.ಸಿ. ಗೋವಿಂದಪ್ಪ ಅವಿರೋಧವಾಗಿ…
ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಪೋಲಿಯೋ ಮುಕ್ತ ರಾಷ್ಟ್ರ ಎಂದು ಮತ್ತೊಮ್ಮೆ ಸಾಬೀತು ಮಾಡೋಣ…