ವಾಲ್ಮೀಕಿ ರಾಮಾಯಣ ಭಾರತೀಯ ಸಂಸ್ಕೃತಿಯ ಪ್ರತಿಬಿಂಬ- ಪ್ರೊ. ಕೆ.ಆರ್. ರವಿಕಿರಣ್

ದೊಡ್ಡಬಳ್ಳಾಪುರ: ವಾಲ್ಮೀಕಿ ರಾಮಾಯಣವು ಪ್ರಾಚೀನ ಭಾರತದ ಸಂಸ್ಕೃತಿ, ಧರ್ಮ, ರಾಜನೀತಿ, ಕುಟುಂಬ ವ್ಯವಸ್ಥೆ, ಪ್ರಕೃತಿ ಸೌಂದರ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಪರಿಚಯಿಸುವ ಮಹಾಕಾವ್ಯವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ. ಕೆ.ಆರ್. ರವಿಕಿರಣ್ ತಿಳಿಸಿದರು.

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ಡಾ. ರಾಜ್‌ಕುಮಾರ್ ಕಲಾಮಂದಿರದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಜಗತ್ತಿನ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಅವರ ರಾಮಾಯಣ ಮಹಾಕಾವ್ಯ ಭಾವನಾಪ್ರಧಾನ ಕೃತಿಯಾಗಿದ್ದು, ಭಾರತೀಯ ಭಾಷೆಗಳ ಮೇಲೆ ಬೀರಿರುವ ಪ್ರೇರಣೆ ಮತ್ತು ಪ್ರಭಾವ ಅನನ್ಯವಾದುದು ಎಂದರು.

ರಾಮಾಯಣದ ಓದು ಇಂದಿಗೂ ನಿರಂತರವಾಗಿ ಸಾಗುತ್ತಿದೆ. ಮಹಾಕಾವ್ಯದಲ್ಲಿ ಭಾರತದ ನದಿಗಳು, ವನಗಳು ಹಾಗೂ ಪರ್ವತಗಳ ವರ್ಣನೆಯ ಮೂಲಕ ಪ್ರಕೃತಿ ಮತ್ತು ಪರಿಸರದ ಪರಿಚಯವಾಗುತ್ತದೆ. ವಿವಿಧ ಪಾತ್ರಗಳು ಹಾಗೂ ಸನ್ನಿವೇಶಗಳು ಅಂದಿನ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ವಿಶ್ಲೇಷಿಸಲು ನೆರವಾಗುತ್ತವೆ ಎಂದು ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಿ. ಶ್ರೀಕಾಂತ್ ಮಾತನಾಡಿ, ರಾಮಾಯಣದ ಪಾತ್ರಗಳ ಮೂಲಕ ಮಾನವೀಯ ಸಂಬಂಧಗಳು ಮತ್ತು ನೈತಿಕ ಸಂಘರ್ಷಗಳನ್ನು ಮಹರ್ಷಿ ವಾಲ್ಮೀಕಿ ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ಶತಶತಮಾನಗಳಿಂದ ರಾಮಾಯಣ ಭಾರತೀಯರ ಮನ್ನಣೆಗೆ ಪಾತ್ರವಾಗಿದ್ದು, ವಾಲ್ಮೀಕಿಯ ವಿದ್ವತ್ತಿಗೆ ಜನಮನ್ನಣೆ ದೊರೆತಿದೆ. ಅವರ ಸೃಜನಶೀಲತೆ ಮತ್ತು ಕಲಾತ್ಮಕತೆಯ ಪ್ರಭಾವದಿಂದ ಭಾರತೀಯ ಭಾಷೆಗಳಲ್ಲಿ ಅನೇಕ ರಾಮಾಯಣ ಕೃತಿಗಳು ರಚನೆಯಾಗಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್, ಜಿಲ್ಲಾಧ್ಯಕ್ಷ ಮುನಿಪಾಪಣ್ಣ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ. ಗೋವಿಂದರಾಜು, ಗೌರವ ಕಾರ್ಯದರ್ಶಿ ಎ. ಜಯರಾಮ್, ಕಸಬಾ ಹೋಬಳಿ ಘಟಕದ ಅಧ್ಯಕ್ಷ ದಾದಾಪೀರ್, ಕೋಶಾಧ್ಯಕ್ಷ ಜಿ. ಸುರೇಶ್, ಪ್ರತಿನಿಧಿಗಳಾದ ಸಫೀರ್, ರಂಗಸ್ವಾಮಯ್ಯ, ಕೋದಂಡರಾಮ್, ಅಣ್ಣಯ್ಯ, ನಿವೃತ್ತ ಮುಖ್ಯಶಿಕ್ಷಕ ಕೆ.ವಿ. ವೆಂಕಟರೆಡ್ಡಿ, ಲಾವಣ್ಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಸಿ. ಮಂಜುನಾಥ್, ಕನ್ನಡ ಜಾಗೃತ ವೇದಿಕೆ ಅಧ್ಯಕ್ಷ ನಾಗರಾಜ್, ಕಲಾವಿದರಾದ ದರ್ಗಾಜೋಗಿಹಳ್ಳಿ ಮಲ್ಲೇಶ್, ವೆಂಕಟರಾಜು, ಶ್ರೀನಿವಾಸಲು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Ramesh Babu

Journalist

Recent Posts

ಗುಂಡಿಮಯ ರಸ್ತೆಗಳು, ಕೆಸರುಗದ್ದೆಯಾದ ಬಡಾವಣೆ, ಲೇಔಟ್ ಗಳ ಸಂಪರ್ಕ ಮಾರ್ಗ..!!

ದೊಡ್ಡಬಳ್ಳಾಪುರ: ಯೋಗಿ ನಾರಾಯಣ ಬಡಾವಣೆ, ನಿಜಗಲ್ ಲೇಔಟ್ ಹಾಗೂ ನಂದಿ ಲೇಔಟ್‌ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಮೂರ್ನಾಲ್ಕು…

23 hours ago

ಬಿರುಗಾಳಿ ಮಳೆಗೆ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಬೇವಿನ ಮರ

ದೊಡ್ಡಬಳ್ಳಾಪುರ: ತಾಲೂಕಿನ ಮಧುರನಹೊಸಹಳ್ಳಿ ಸಮೀಪ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಬೃಹತ್ ಬೇವಿನ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ…

1 day ago

ರಾಜ್ಯದಲ್ಲಿ ಮಳೆ ಅಬ್ಬರದ ಮುನ್ಸೂಚನೆ: ಮುಂದಿನ 4–5 ದಿನ ಭಾರೀ ವರ್ಷಧಾರೆ, ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ.…

1 day ago

ತಾಯಿ ಭಾಷೆಯ ಹಬ್ಬ, ಕರುನಾಡ ಸಂಭ್ರಮ….

ತಾಯಿ ಭಾಷೆಯ ಹಬ್ಬ, ಕರುನಾಡ ಸಂಭ್ರಮ.... ಕನ್ನಡ ರಾಜ್ಯೋತ್ಸವದ ಹೊಸ್ತಿಲಿನಲ್ಲಿ ನನ್ನ ತಾಯಿ ಭಾಷೆಯ ಬಗ್ಗೆ ಒಂದಷ್ಟು ಅನಿಸಿಕೆ............ ಸಾಮಾಜಿಕ…

1 day ago

ಕೃಷಿಯಲ್ಲೂ ಲಾಭವಿದೆ ಎಂಬ ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಿ: ಮಲ್ಲಿಕಾರ್ಜುನ ಹೊಸಪಾಳ್ಯ

ದೊಡ್ಡಬಳ್ಳಾಪುರ: ಕೃಷಿಯಲ್ಲಿ ಲಾಭ-ನಷ್ಟ ಹಿಂದೆಯೂ ಇತ್ತು, ಈಗಲೂ ಇದೆ. ಆದರೆ ಸದಾ ನಷ್ಟದ ಬಗ್ಗೆಯೇ ಮಾತನಾಡುವ ಬದಲು ಕೃಷಿಯಲ್ಲೂ ಲಾಭವಿದೆ…

2 days ago

ರಾಮನಗರ, ಕನಕಪುರಕ್ಕೆ ಮಾತ್ರ ಡಿಕೆಶಿ ಸಿಎಂ – ಆರ್. ಅಶೋಕ್: ‘ಕೈ’ ಸರ್ಕಾರ ರಿಯಲ್ ಎಸ್ಟೇಟ್ ದಂಧೆ ಮಾಡಿಕೊಂಡು ಅಧಿಕಾರ ನಡೆಸುತ್ತಿದೆ – ಬಿ.ವೈ ವಿಜಯೇಂದ್ರ ಆರೋಪ

ದೊಡ್ಡಬಳ್ಳಾಪುರ: ಕನಕಪುರದಲ್ಲಿ ಮಾತ್ರ ರೈತರಿಗೆ ಭೂಮಿಯನ್ನು ಮಾರಾಟ ಮಾಡಬೇಡಿ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳುತ್ತಾರೆ. ಆದರೆ ಬಿಡದಿ, ದೊಡ್ಡಬಳ್ಳಾಪುರ…

2 days ago