ವರದಕ್ಷಿಣೆ ಕಿರುಕುಳ ಗೃಹಿಣಿ ಆತ್ಮಹತ್ಯೆ ಆರೋಪ ಪ್ರಕರಣ: ಪತಿ ರಾಜೇಶ್ ಸೇರಿ ಐವರು ಆರೋಪಿಗಳ ಬಂಧನ: ಮುಂದುವರಿದ ವಿಚಾರಣೆ

ವರದಕ್ಷಿಣೆ ಕಿರುಕುಳದಿಂದ ಮನನೊಂದು ಗೃಹಿಣಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಐಶ್ವರ್ಯ ಪತಿ ರಾಜೇಶ್ ಸೇರಿ ಐವರು ಆರೋಪಿಗಳನ್ನು ಗೋವಿಂದರಾಜನಗರ ಪೊಲೀಸರು ಬಂಧನ ಮಾಡಿದ್ದಾರೆ.

26 ವರ್ಷದ ಐಶ್ವರ್ಯ ಆತ್ಮಹತ್ಯೆಗೆ ಶರಣಾಗಿದ್ದ ಗೃಹಿಣಿ, ಅಕ್ಟೋಬರ್ 26 ರಂದು ಗೋವಿಂದರಾಜ ನಗರ ತವರುಮನೆಯಲ್ಲಿ ಫ್ಯಾನಿಗೆ ಕೊರಳೊಡ್ಡಿದ್ದ ಗೃಹಿಣಿ ಐಶ್ವರ್ಯ. ಘಟ‌ನೆ ಸಂಬಂಧ ಐಶ್ವರ್ಯ ತಾಯಿಯಿಂದ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲು.

ಪ್ರಕರಣ ಸಂಬಂಧ ಮೃತ ಐಶ್ವರ್ಯ ಪತಿ ರಾಜೇಶ್, ಮಾವ ಗಿರಿಯಪ್ಪ, ಅತ್ತೆ ಸೀತಾ, ಮೈದುನ ವಿಜಯ್, ಮೈದುನನ ಪತ್ನಿ ತಸ್ಮಿನ್ ರನ್ನ ಬಂಧಿಸಿ ವಿಚಾರಣೆ ಮುಂದುವರಿಸಿರುವ ಪೊಲೀಸರು.

ಐಶ್ವರ್ಯ ಸುಸೈಡ್ ಬಳಿಕ ಗೋವಾ, ಮುಂಬೈ‌ನಲ್ಲಿ‌ ಪಾರ್ಟಿಮಾಡುತ್ತಿದ್ದ ಪತಿ ಮನೆಯ ಸದಸ್ಯರು. ಪ್ರಸಿದ್ದ ಡೈರಿ ರಿಚ್ ಐಸ್ ಕ್ರೀಮ್ ಕಂಪನಿ ಜತೆ ಟೈಯಾಪ್ ಆಗಿರುವ ಸಿತಾ ಐಸ್ ಕ್ರೀಮ್ ಪ್ರೈ,ಲಿ. ಮಾಲೀಕರಾಗಿದ್ದ ರಾಜೇಶ್ ಕುಟುಂಬ.

ಮದುವೆ ಮಾಡಿಸಿದ್ದು ಸಂಬಂಧಿಕರೇ ಕೊನೆಗೂ ಮದುವೆ ಮುರಿದಿದ್ದು ಸಂಬಂಧಿಕರೇ ಎಂಬ ಕೂಗು ಕೇಳಿಬಂದಿದೆ. ಐಶ್ವರ್ಯ ಯುಎಸ್ ಎ ನಲ್ಲಿ ಎಂಬಿಎ ಮಾಡಿಕೊಂಡಿದ್ದರು. ಕಳೆದ 5 ವರ್ಷಗಳ ಹಿಂದೆ ರಾಜೇಶ್ ಎಂಬಾತನನ್ನ ಕುಟುಂಬಸ್ಥರ ನಿಶ್ಚಯದಂತೆ ಮದುವೆಯಾಗಿದ್ದರು.

ಸಿತಾ ಐಸ್ ಕ್ರೀಮ್ ಪ್ರೈ,ಲಿ ಕಂಪನಿಯಲ್ಲಿ ಆಡಿಟರ್ ಆಗಿದ್ದ ಐಶ್ವರ್ಯ ಸಂಬಂಧಿ ರವೀಂದ್ರ ಎಂಬುವವರು ರಾಜೇಶ್ ಹಾಗೂ ಐಶ್ವರ್ಯ ಮದುವೆ ಮಾಡಿಸಿದ್ದರು. ರವೀಂದ್ರ ಎಂಬುವವರು ಐಶ್ವರ್ಯ ತಂದೆ ಸುಬ್ರಮಣಿಯ ತಂಗಿ ಗಂಡ ಆಗಿದ್ದಾರೆ. ಆಸ್ತಿ ವಿಚಾರವಾಗಿ ರವೀಂದ್ರ ಮತ್ತು ಸುಬ್ರಮಣಿ ಕುಟುಂಬದಲ್ಲಿ ಕಲಹ ಉಂಟಾಗಿತ್ತು. ತಂದೆ ಮೇಲಿನ ದ್ವೇಷಕ್ಕೆ ಮಗಳ ಸಂಸಾರದಲ್ಲಿ ಹುಳಿ ಹಿಂಡಿರುವ ದಾಯಾದಿಗಳು ಎಂಬ ಆರೋಪ ಕೇಳಿಬಂದಿದೆ.

ಇದರಿಂದ ಮನನೊಂದ ಐಶ್ವರ್ಯ ಕಳೆದ ಅ.26 ರಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯತೆಗೆ ಶರಣಾಗಿದ್ದಾರೆ.

Ramesh Babu

Journalist

Recent Posts

ಮೊಬೈಲ್ ಕಳೆದುಹೋದರೆ ಗಾಬರಿ ಬೇಡ: ತಕ್ಷಣದ ಕ್ರಮವೇ ರಕ್ಷಣೆ: ಮೊಬೈಲ್‌ ಕಳೆದುಹೋದ 10 ನಿಮಿಷಗಳಲ್ಲಿ ಮಾಡಬೇಕಾದ 7 ಕೆಲಸಗಳು ಇಲ್ಲಿವೆ ನೋಡಿ…

ಬೆಂಗಳೂರು ಗ್ರಾಮಾಂತರ: ಮೊಬೈಲ್‌ ಫೋನ್‌ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್‌ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್‌ ಕೇವಲ ಸಂಪರ್ಕ…

6 minutes ago

ಎಸ್ಐಆರ್ ಅಕ್ರಮ ಹಾಗೂ ಬರ ಪರಿಹಾರ ವಿಳಂಬ: ಕೇಂದ್ರ ಮತ್ತು ವಿಪಕ್ಷದ ವಿರುದ್ಧ ಸಚಿವ ಚಲುವರಾಯಸ್ವಾಮಿ ಆಕ್ರೋಶ

ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…

31 minutes ago

ಬರ ಪರಿಹಾರಕ್ಕೆ 60 ಸಾವಿರ ಕೋಟಿ ನಷ್ಟದ ಅಂದಾಜು- ಡಿಸಿಎಂ ಡಾ.ಜಿ ಪರಮೇಶ್ವರ್

ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟದ ಅಂದಾಜು 50 ರಿಂದ 60 ಸಾವಿರ ಕೋಟಿವರೆಗೆ ತಲುಪುವ ಸಾಧ್ಯತೆಯಿದ್ದು, ಕೇಂದ್ರ…

2 hours ago

“ಸರ್ಕಾರದ ಕೆಲಸ ದೇವರ ಕೆಲಸ ” ಎಂದು ಹೇಳುವವರು ದೇವರಿಗೂ ವಂಚಿಸುತ್ತಿದ್ದಾರೆ…

ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ........ ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ..... ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು…

8 hours ago

ಸರ್ಕಾರಿ ಶಾಲಾ ಮಕ್ಕಳಿಗೆ ಟ್ರ್ಯಾಕ್‌ಸೂಟ್, ಶೂ ವಿತರಣೆ

ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…

22 hours ago

ಕಸ ವಿಂಗಡಣೆ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…

1 day ago