ಲಂಡನ್‌ನಲ್ಲಿ ಮಾಜಿ ಗೆಳತಿಗೆ ಇರಿದ ಆರೋಪ: ಆರೋಪಿಗೆ 16 ವರ್ಷಗಳ ಜೈಲು ಶಿಕ್ಷೆ: ಇರಿದು ಹಾಕುವ ಮುನ್ನ ‘ಮನುಷ್ಯನನ್ನು ಚಾಕುವಿನಿಂದ ತಕ್ಷಣ ಕೊಲ್ಲುವುದು ಹೇಗೆ’ ಎಂಬುದರ ಬಗ್ಗೆ ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದ ಆರೋಪಿ

ಲಂಡನ್‌ನಲ್ಲಿ ತನ್ನ ಮಾಜಿ ಗೆಳತಿಗೆ ಇರಿದ ಆರೋಪದ ಮೇಲೆ ಹೈದರಾಬಾದ್ ವ್ಯಕ್ತಿಗೆ 16 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಆಕೆಯನ್ನು ಇರಿದು ಹಾಕುವ ಮುನ್ನ ‘ಮನುಷ್ಯನನ್ನು ಚಾಕುವಿನಿಂದ ತಕ್ಷಣ ಕೊಲ್ಲುವುದು ಹೇಗೆ’, ಯುಕೆಯಲ್ಲಿ ವಿದೇಶಿಗರು ಕೊಲೆ ಮಾಡಿದರೆ ಏನಾಗುತ್ತದೆ’, ‘ಯಾರನ್ನಾದರೂ ಚಾಕುವಿನಿಂದ ಕೊಲ್ಲುವುದು ಎಷ್ಟು ಸುಲಭ’ ಮತ್ತು ‘ಚಾಕುವಿನಿಂದ ಯಾರನ್ನಾದರೂ ತಕ್ಷಣವೇ ಕೊಲ್ಲುವುದು ಹೇಗೆ’? ಎಂಬುದರ ಬಗ್ಗೆ ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದಾನೆ ಎನ್ನಲಾಗಿದೆ.

ಮಾರ್ಚ್ 5, 2022 ರಂದು, ಹೈದರಾಬಾದ್‌ನ 23 ವರ್ಷದ ಶ್ರೀರಾಮ್ ಅಂಬರಲಾ ಲಂಡನ್‌ನ ಹೈದರಾಬಾದ್ ವಾಲಾ ರೆಸ್ಟೋರೆಂಟ್‌ನಲ್ಲಿ ತನ್ನ ಮಾಜಿ ಗೆಳತಿ ಕೇರಳದ 23 ವರ್ಷದ ಸೋನಾ ಬಿಜುಗೆ ಇರಿದಿದ್ದಾನೆ.

 ರೆಸ್ಟೊರೆಂಟ್‌ನಲ್ಲಿ ಅರೆಕಾಲಿಕ ಉದ್ಯೋಗಿಯಾಗಿರುವ ಸೋನಾ ಬಿಜು ಅವರು ಶ್ರೀರಾಮ್ ಅವರನ್ನು ಇತರ ಗ್ರಾಹಕರಂತೆ ಉಪಚರಿಸಿದ್ದಾರೆ. ಈ ನಡುವೆ ಚಾಕುವಿನಿಂದ ಇರಿದಿದ್ದಾನೆ. ಚಾಕುವಿನಿಂದ ಇರಿದ ತಕ್ಷಣ ಆಕೆ ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಕುಸಿದು ಬೀಳುತ್ತಾಳೆ. ನಂತರ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ.

Ramesh Babu

Journalist

Recent Posts

ದೊಡ್ಡಬಳ್ಳಾಪುರದಲ್ಲಿ ದಾಖಲೆಗಳಿಲ್ಲದೆ ವಾಸ: ಮೂವರು ವಿದೇಶಿ ಪ್ರಜೆಗಳ ವಶ

ದೊಡ್ಡಬಳ್ಳಾಪುರ: ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದರೆನ್ನಲಾದ ಮೂವರು ನೈಜೀರಿಯಾ…

16 minutes ago

ಘಾಟಿ ಸುಬ್ರಹ್ಮಣ್ಯ‌ ದೇವಾಲಯ ಹುಂಡಿ ಎಣಿಕೆ: 77.58 ಲಕ್ಷ ಸಂಗ್ರಹ

ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆಯಿತು. ಎಣಿಕೆಯಲ್ಲಿ…

3 hours ago

ಲಗೇಜ್ ಟ್ರಾಲಿಯಲ್ಲಿ ಚಿನ್ನ ಸಾಗಾಟ: ಇಬ್ಬರ ಬಂಧನ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಗೇಜ್ ಟ್ರಾಲಿಯಲ್ಲಿ ಚಿನ್ನದ ಬಿಸ್ಕೆಟ್‌ಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರು ಪ್ರಯಾಣಿಕರನ್ನು ಡೈರೆಕ್ಟರೇಟ್…

4 hours ago

ಆಧುನಿಕ ತಂತ್ರಜ್ಞಾನ–ಸಾವಯವ ಕೃಷಿಯಿಂದ ಮಾದರಿಯಾದ ನೆಲಮಂಗಲದ ರೈತ ಮಹಿಳೆ

ನೆಲಮಂಗಲ: ಕಡಿಮೆ ಶಿಕ್ಷಣದ ನಡುವೆಯೂ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಸಾವಯವ ಪದ್ಧತಿಗಳನ್ನು ಅಳವಡಿಸಿಕೊಂಡು ಸಾಧನೆ ಮಾಡಿರುವ ನೆಲಮಂಗಲ ತಾಲೂಕಿನ…

4 hours ago

ನೊಬೆಲ್ ಪ್ರಶಸ್ತಿ ಮತ್ತೆ ಮನಸ್ಸು ಮತ್ತು ಸಮಾಜ ಪುನ:ಶ್ಚೇತನಗೊಳ್ಳುವಂತೆ ಮಾಡಲಿ

ನೊಬೆಲ್ ಪ್ರಶಸ್ತಿ ಘೋಷಣೆಯ ವಾರ....... ಈ ವಾರ ಪ್ರಕಟವಾಗುತ್ತಿರುವ ನೊಬೆಲ್ ಪ್ರಶಸ್ತಿಗಳ ಕಡೆಯೂ ಸ್ವಲ್ಪ ಮನಸ್ಸು ಹರಿಯಲಿ ಮತ್ತು ಅರಿಯಲಿ..........…

8 hours ago