ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ತೊಂಡೆಬಾವಿ ಮತ್ತು ಮಾಕಳಿ ದುರ್ಗ ರೈಲು ನಿಲ್ದಾಣಗಳ ಮಾರ್ಗ ಮಧ್ಯೆ ಅಪರಿಚಿತ ವ್ಯಕ್ತಿ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ವಯಸ್ಸು: ಸುಮಾರು 25 ರಿಂದ 30 ವರ್ಷ ವಯಸ್ಸು ಆಗಿರಬಹುದು ಎಂದು ಅಂದಾಜಿಸಲಾಗಿದೆ. ಮೃತನ ಹೆಸರು ಮತ್ತು ವಾರಸುದಾರರು ಯಾರು ಪತ್ತೆ ಆಗಿರುವುದಿಲ್ಲ.

ಮೃತನ ಚಹರೆ:

ಮೃತರು ಸುಮಾರು 5.5ಅಡಿ ಎತ್ತರ, ಸಾಧಾರಣ ಗೋಧಿ ಮೈ ಬಣ್ಣ, ಕೋಲು ಮುಖ, ಗಿಡ್ಡನೆಯ ಮೂಗು, ತಲೆಯಲ್ಲಿ ಅರ್ಧ ಇಂಚು ಉದ್ದದ ಕಪ್ಪನೆಯ ತಲೆ ಕೂದಲು, ಸಣ್ಣನೆಯ ಗಡ್ಡ ಮೀಸೆ, ಸಾಧಾರಣ ಶರೀರವನ್ನು ಹೊಂದಿರುತ್ತಾರೆ.

ಶವದ ಮೈಮೇಲೆ ಕಡು ಆಕಾಶ ನೀಲಿ ತಿಳಿ ಕೆಂಪು ಬಣ್ಣದ ಉದ್ದ ಮತ್ತು ಅಡ್ಡನೆಯ ಗೆರೆಗಳಿರುವ ಚೌಕಳಿ ಶರ್ಟ್, ಬಿಳಿ ಬಣ್ಣದ ಉದ್ದನೆಯ ಗೆರೆಗಳಿರುವ ಶರ್ಟ್, ಕಂದು ಬಣ್ಣದ ಒಳಚಡ್ಡಿ, ಕಡು ಕಂದು ಬಣ್ಣದ ಬನಿಯನ್, ತಿಳಿಹಸಿರು ಬಣ್ಣದ ಬರ್ಮುಡಾ ನಿಕ್ಕರ್, ಸೊಂಟದಲ್ಲಿ ಎರಡು ಎಳೆ ಕೆಂಪನೆಯ ಉಡದಾರ ಇದ್ದು, ಅದರಲ್ಲಿ ಒಂದು ತಾಯತವಿರುತ್ತದೆ.

ಕೊರಳಲ್ಲಿ ಒಂದು ಎಳೆ ಕಪ್ಪನೆಯ ದಾರವಿದ್ದು, ಅದರಲ್ಲಿ ಒಂದು ತಾಯತವಿದ್ದು, ಗಾಜಿನ ಮಣಿಗಳ ರೀತಿಯಲ್ಲಿರುವ ಒಂದು ಸರ ಇರುತ್ತದೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಜಗದೀಶ್.ಆರ್ ಪಿ ಎಸ್ ಐ ಯಶವಂತಪುರ ರೈಲ್ವೆ ಪೊಲೀಸ್ ಠಾಣೆ ಬೆಂಗಳೂರು ಮೊಬೈಲ್ ಸಂಖ್ಯೆ 948080211 ಹಾಗೂ ಅಶ್ವತ್ಥ್. ಜಿ.ಎನ್ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸ್ ಹೊರಉಪ ಠಾಣೆ Ph no. 9480802143 ಇವರುಗಳನ್ನು ಸಂಪರ್ಕಿಸಬೇಕಾಗಿ ಕೋರಿದೆ.

Ramesh Babu

Journalist

Recent Posts

ಏ.12ರಂದು ದೊಡ್ಡಬಳ್ಳಾಪುರ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ ನಗರದಲ್ಲಿ ಏ.12 ರಂದು 220/66/11ಕೆವಿ ಕೆಐಎಡಿಬಿ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F02-Birla Super ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಗಳು…

13 hours ago

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರ ಸಾವು

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರವಾಗಿ ಸಾವನ್ನಪ್ಪಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೋರಾಯನಪಾಳ್ಯದಲ್ಲಿ ನಡೆದಿದೆ.. 17 ವರ್ಷದ…

18 hours ago

ಲೋಕಾಯುಕ್ತ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ರಾಯಚೂರು ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸುರೇಶ್ ಶೆಟ್ಟಿ ಲೋಕಾಯುಕ್ತರ ಬಲೆಗೆ ಬಿದ್ದ ಮುಖ್ಯಾಧಿಕಾರಿ. ರಾಘವೇಂದ್ರ…

18 hours ago

ಹುಚ್ಚನೊಬ್ಬನ ಕನಸು….

ದೇಶದ ಎಲ್ಲಾ ದಲಿತ ಕೇರಿಗಳನ್ನು ನಾಶ ಮಾಡಬೇಕು. ಅಲ್ಲಿನ ಎಲ್ಲರಿಗೂ ಊರ ಒಳಗಿನ ಸ್ಥಳದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಬೇಕು. ಬ್ರಾಹ್ಮಣರ…

23 hours ago

PUC Result: ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ….ಈ ಕಥೆ ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಗ್ಯಾರಂಟಿ

600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಟಾಪರ್ ಆದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು…

1 day ago

ತೂಬಗೆರೆ ಸರ್ಕಾರಿ ಪಿಯು ಕಾಲೇಜಿಗೆ ಮತ್ತೊಮ್ಮೆ ಮೆರುಗು: ಶೇ.95.45 ಫಲಿತಾಂಶ

ದೊಡ್ಡಬಳ್ಳಾಪುರ (ತೂಬಗೆರೆ): ಗ್ರಾಮಾಂತರ ಭಾಗದಲ್ಲಿದ್ದರೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು…

1 day ago