ಕೋಲಾರ: ಸರ್ಕಾರದಿಂದ ಬರುವ ಟಾರ್ಪಲ್ ಅನ್ನು ಕಾಳಸಂತೆಯಲ್ಲಿ ಮಾರಾಟ ದಂಧೆಗೆ ಕಡಿವಾಣ ಹಾಕಿ ರಾಗಿ ರಕ್ಷಣೆ ಮಾಡಲು ಕೃಷಿ ಇಲಾಖೆಯಿಂದ ಉಚಿತವಾಗಿ ಟಾರ್ಪಲ್ ವಿತರಣೆ ಮಾಡಿ ಬಡ ರೈತರ ರಕ್ಷಣೆ ಮಾಡಬೇಕೆಂದು ರೈತಸಂಘದಿಂದ ರಾಗಿ ತೆನೆ ಸಮೇತ ಕೃಷಿ ಇಲಾಖೆ ಮುಂದೆ ಹೋರಾಟ ಮಾಡಿ ಕೃಷಿ ಅಧಿಕಾರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮುಂಗಾರು ಮಳೆ ಕೈಕೊಟ್ಟು ಹಿಂಗಾರು ಉತ್ತಮ ಮಳೆಯಾಗಿರುವುದರಿಂದ ರಾಗಿ, ನೆಲಗಡಲೆ, ಭತ್ತ ಸಮೃದ್ದಿಯಾಗಿ ಬೆಳೆದು ನಿಂತು ಕಟಾವಿಗೆ ಬಂದಿದ್ದು, ಒಂದು ಕಡೆ ಗ್ರಾಮೀಣ ಪ್ರದೇಶಗಳಲ್ಲಿ ಎತ್ತುಗಳು ಇಲ್ಲದ ಕಾರಣ ಬೆಳೆ ಕಟಾವು ಮಾಡಲು ಕೂಲಿ ಕಾರ್ಮಿಕರ ಕೊರತೆಯಿದ್ದು, ಪರ್ಯಾಯವಾಗಿ ಕೃಷಿ ಇಲಾಖೆಯಿಂದ ಯಂತ್ರೋಪಕರಣಗಳು ಸಿಗದೆ ಇರುವ ಸಮಸ್ಯೆಯಿಂದ ಖಾಸಗಿ ಕಟಾವು ಯಂತ್ರಗಳಿಗೆ ರೈತರು ಪ್ರತಿ ಎಕರೆಗೆ 6 ಸಾವಿರದಿಂದ 10 ಸಾವಿರದವರೆಗೆ ಹಗಲು ದರೋಡೆ ಮಾಡುತ್ತಿರುವುದು ಅಧಿಕಾರಿಗಳ ಗಮನಕ್ಕಿದ್ದರೂ ಬೆಲೆ ನಿಗದಿಯೂ ಇಲ್ಲ ಕೃಷಿ ಇಲಾಖೆಯಿಂದ ಯಂತ್ರೋಪಕರಣಗಳು ನೀಡದೆ ಅಧಿಕಾರಿಗಳೇ ಖಾಸಗಿ ಮಾಲೀಕರ ಜೊತೆ ಶಾಮೀಲಾಗಿದ್ದಾರೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಅವ್ಯವಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ವರ್ಷ ರಾಗಿ, ಭತ್ತ ಕಟಾವು ಋತುಮಾನದಲ್ಲಿ ಸರ್ಕಾರ ಬಡರೈತರಿಗೆ ಅನುಕೂಲವಾಗಲೆಂದು ಸಾವಿರಾರು ಕೋಟಿ ವೆಚ್ಚದಲ್ಲಿ ಟಾರ್ಪಲ್‌ಗಳನ್ನು ಸಬ್ಸಿಡಿ ದರದಲ್ಲಿ ವಿತರಣೆ ಮಾಡಲು ಜಿಲ್ಲಾ, ತಾಲ್ಲೂಕು ಕೃಷಿ ಇಲಾಖೆಗೆ ರೈತರಿಗೆ ಅವಶ್ಯಕತೆಯಿರುವಷ್ಟು ಟಾರ್ಪಲ್‌ಗಳನ್ನು ಸರಬರಾಜು ಮಾಡುತ್ತಿದ್ದರೂ ಸಮರ್ಪಕವಾಗಿ ರೈತರಿಗೆ ಪದೇ ಪದೇ ಮದ್ಯವರ್ತಿಗಳು ರಾಜಕಾರಣಿಗಳ ಬೆಂಬಲಿಗರಿಗೆ ಮಾತ್ರ ಸರ್ಕಾರದ ಟಾರ್ಪಲ್ ಸಿಗುತ್ತಿದ್ದು, ಬಡ ರೈತರು ಕಚೇರಿಗೆ ಅಲೆದರೂ ಖಾಲಿ ಎಂಬ ನಾಮ ಪಲಕ ನೋಡಿ ವಾಪಸ್ ಆಗುವ ಜೊತೆಗೆ ೩ ತಿಂಗಳ ಕಷ್ಟ ಬೆವರಿನಿಂದ ಬೆಳೆದ ರಾಗಿ, ಭತ್ತ ರಕ್ಷಣೆಗೆ ಸಾವಿರಾರು ಹಣ ನೀಡಿ ಖಾಸಗಿ ಅಂಗಡಿಗಳಲ್ಲಿ ಖರೀದಿ ಮಾಡುವ ಮೂಲಕ ಸರ್ಕಾರದ ಯೋಜನೆಗಳು ಬಡವರಿಗೆ ಸಿಗುತ್ತಿಲ್ಲ ಎಂಬುದು ಸಾಬೀತಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಸಿದರು.
ಮಾನ್ಯರು ಕೂಡಲೇ ಸರ್ಕಾರದಿಂದ ಕೃಷಿ ಇಲಾಖೆಗೆ ಬರುವ ಟಾರ್ಪಲ್‌ಗಳು ಖಾಸಗಿ ಅಂಗಡಿಗಳಿ ಕಾಳ ಸಂತೆಯಲ್ಲಿ ಮಾರಾಟ ಮಾಡುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡು ಕೃಷಿ ಇಲಾಖೆಯಿಂದ ರಾಜಕೀಯ ಬೆಂಬಲಿಗರಿಗೆ ಹಾಗೂ ದಲ್ಲಾಳಿಗಳಿಗೆ ಹಂಚದೆ ಬಡ ರೈತರಿಗೆ ವಿತರಣೆ ಮಾಡುವ ಮುಖಾಂತರ ರಾಗಿ ಭತ್ತ ರಕ್ಷಣೆ ಮಾಡಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕೃಷಿ ಅಧಿಕಾರಿ, ಸರ್ಕಾರದಿಂದ ಬರುವ ಟಾರ್ಪಲ್‌ಗಳನ್ನು ಅರ್ಜಿ ಸಲ್ಲಿಸಿರುವ ರೈತರಿಗೆ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ಜೊತೆಗೆ ರಾಜಕೀಯ ವ್ಯಕ್ತಿಗಳ ಒತ್ತಡವೂ ಕಿರಿಯ ಅಧಿಕಾರಿಗಳ ಮೇಲೆ ಇರಬಹುದು ನಮ್ಮ ಗಮನಕ್ಕೆ ಬಂದಿಲ್ಲ ಕೂಡಲೇ ರೈತರಿಗೆ ಅವಶ್ಯಕತೆ ಇರುವ ಟಾರ್ಪಲ್‌ಗಳನ್ನು ವಿತರಣೆ ಮಾಡುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗವಾದಿ ನಾಗರಾಜಗೌಡ, ಶಿವಾರೆಡ್ಡಿ, ಗೀರೀಶ್, ಪುತ್ತೇರಿ ರಾಜು ರ‍್ನಹಳ್ಳಿ ಆಂಜಿನಪ್ಪ,.ಶೈಲಜಾ ರತ್ನಮ್ಮ ವೆಂಕಟಮ್ಮ ಗೌರಮ್ಮ ಕಂಪಮ್ಮ ಚೌಡಮ್ಮ ಬಾಗ್ಯಮ ಮುಂತಾದವರಿದ್ದರು.
ಕುವೆಂಪು......... ಸಾಹಿತ್ಯ - ವಿಶ್ವ ಮಾನವ ಪ್ರಜ್ಞೆ...... ಅಕ್ಷರಗಳ ಸಂಶೋಧನೆ - ಬರವಣಿಗೆ - ಸಾಹಿತ್ಯ - ಕನ್ನಡ ಭಾಷೆ…
ಬಾಂಗ್ಲಾ......... ಒಂದು ಎಚ್ಚರಿಕೆಯ ಪಾಠ......... ಬಾಂಗ್ಲಾದೇಶದ ಅಮಾನವೀಯವಾದ ಹಿಂದೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸುತ್ತಾ, ನಮ್ಮ ಜವಾಬ್ದಾರಿ ನೆನಪಿಸುತ್ತಾ...... ಬಾಂಗ್ಲಾದೇಶದಲ್ಲಿ…
ಜೆಸಿಬಿ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಹಲವರಿಗೆ ಗಾಯಗಳಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮೆಣಸಿ ಗೇಟ್ ಬಳಿ…
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವತಿಯಿಂದ ದೊಡ್ಡಬಳ್ಳಾಪುರ ಉಪವಿಭಾಗದಲ್ಲಿ ಸಂಚಾರ ಸುರಕ್ಷತಾ ಸಪ್ತಾಹ-2025ರ ಅಡಿಯಲ್ಲಿ ವಾಹನ (ಬೈಕ್) ಸವಾರರಿಗೆ ಹೆಲ್ಮೆಟ್…
ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಆಟೋ ಹಳ್ಳಕ್ಕೆ ಉರುಳಿಬಿದ್ದಿರುವ ಘಟನೆ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಾವರ ಗೇಟ್ ಸಮೀಪ…
ಸೃಷ್ಟಿಯ ಸಹಜತೆ ಮತ್ತು ವಿಸ್ಮಯ....., ಅಲೆಗ್ಸಾಂಡರ್ ದಿ ಗ್ರೇಟ್ ವಿಶ್ವ ಗೆಲ್ಲುವ ಕನಸಿನ ಚಕ್ರವರ್ತಿ ರೋಗಕ್ಕೆ ಬಲಿಯಾದ.... ಶಾಂತಿ ದೂತ,…