ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಇಂದು ದರ್ಶನ್, ಪವಿತ್ರಾ ಗೌಡ ಹಾಗೂ ಇತರರು ಬೆಂಗಳೂರಿನ 64ನೇ ಸೆಷನ್ಸ್ ಕೋರ್ಟ್ ಗೆ ಹಾಜರಾಗಿದ್ದರು.
ಆದರೆ ಕೇಸಿನಲ್ಲಿ ಎ10 ವಿನಯ್ , ಎ15 ,ಕಾರ್ತಿಕ್ ಹಾಗೂ ಎ 16 ಕೇಶವಮೂರ್ತಿ ಮತ್ತು ಎ17 ನಿಖಿಲ್ ಕೋರ್ಟ್ಗೆ ಹಾಜಾರಾಗಿಲ್ಲ ಹೀಗಾಗಿ, ಸೆಪ್ಟೆಂಬರ್9 ಕ್ಕೆ ಮುಂದಿನ ದಿನಾಂಕ ವಿಚಾರಣೆಯನ್ನು ನಿಗದಿಪಡಿಸಲಾಯಿತು.
ಆ ದಿನ ಪ್ರಕರಣದ ಎಲ್ಲಾ ಆರೋಪಿಗಳು ಕಡ್ಡಾಯವಾಗಿ ಹಾಜರು ಇರಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.
ಹೈಕೋರ್ಟ್ ಜಾಮೀನು ಆದೇಶ ರೀತಿಯ ಬಗ್ಗೆ ಆಕ್ಷೇಪಿಸಿದ್ದ ನ್ಯಾಯಪೀಠ ಲಿಖಿತ ವಾದಮಂಡನೆಗಳನ್ನು ಸಲ್ಲಿಸುವಂತೆ ಎರಡೂ ಕಡೆ ವಕೀಲರಿಗೆ ಸೂಚಿಸಿತ್ತು. ದರ್ಶನ್ ವಿರುದ್ಧದ ಹಳೆಯ ಕೇಸ್ ಗಳ ಬಗ್ಗೆಯೂ ದಾಖಲೆ ಸಲ್ಲಿಕೆ ಮಾಡುವಂತೆ ಕೇಳಿತ್ತು. ಪ್ರಾಸಿಕ್ಯೂಷನ್ ಪರ ವಕೀಲರಿಂದ ಸುಪ್ರೀಂಕೋರ್ಟ್ ಗೆ ಸಲ್ಲಿಕೆಯಾಗಿದೆ.
ಚಾರ್ಜ್ ಪ್ರೇಮ್ ಸಲುವಾಗಿ ಕೋರ್ಟ್ ಎರಡು ಕಡೆಯ ವಾದ ಆಲಿಸಲಿದೆ. ಚಾರ್ಜ್ ಪ್ರೇಮ್ ಎಂದರೆ ದೋಷಾರೋಪ ಹೊರಿಸುವುದು. ಯಾವ ಯಾವ ಸೆಕ್ಷನ್ಗಳಡಿ ಆರೋಪ ಇದೆ ಎಂದು ಕೋರ್ಟ್ನಲ್ಲಿ ಜಡ್ಜ್ ಆರೋಪ ಹೊರಿಸುತ್ತಾರೆ. ಆ ಸೆಕ್ಷನ್ಗಳ ಬಗ್ಗೆ ಕೋರ್ಟ್ನಲ್ಲಿ ಇನ್ನೂ ಮುಂದೆ ವಾದ ನಡೆಯುತ್ತೆ. ಹೀಗಾಗಿ ಆರೋಪಿಗಳಿಗೆ ಟೆನ್ಷನ್ ಶುರುವಾಗಿದೆ.
ಈಗಾಗಲೇ ಸುಪ್ರೀಂ ಕೋರ್ಟ್ ಜಾಮೀನು ಮೇಲ್ಮನವಿ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದೆ. ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಟ್ರಯಲ್ ಬಗ್ಗೆ ಪ್ರಶ್ನಿಸಿತ್ತು. ವಿಚಾರಣೆ ವೇಳೆ ಎಷ್ಟು ದಿನದಲ್ಲಿ ಟ್ರಯಲ್ ಆರಂಭ ಮಾಡ್ತೀರಾ ಎಂದು ಪ್ರಶ್ನೆ ಮಾಡಿತ್ತು. ಆಗ ಸರ್ಕಾರದ ಪರ ವಕೀಲರು ಆರು ತಿಂಗಳಲ್ಲಿ ವಿಚಾರಣೆ ಮುಗಿಸುತ್ತೇವೆ ಎಂದು ಉತ್ತರಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಟ್ರಯಲ್ ದಿನಾಂಕ ನಿಗದಿ ಆಗುವ ಸಾಧ್ಯತೆ ಇತ್ತು. 64ನೇ ಸೆಷನ್ಸ್ ಕೋರ್ಟ್ನಲ್ಲಿ ನ್ಯಾಯಾಧೀಶರಾದ ಐ.ಪಿ.ನಾಯ್ಕ್ ಅವರು ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿದ್ದಾರೆ. ಒಂದು ಕಡೆ ಸೆಷನ್ಸ್ ಕೋರ್ಟ್ನಲ್ಲಿ ಟ್ರಯಲ್ ಆರಂಭ ಚಿಂತೆಯಾದ್ರೆ, ಮತ್ತೊಂದು ಕಡೆ ಸುಪ್ರೀಂ ಕೋರ್ಟ್ನಲ್ಲಿ ಬೇಲ್ ಭವಿಷ್ಯದ ಆತಂಕ ಶುರುವಾಗಿದೆ.
ದೊಡ್ಡಬಳ್ಳಾಪುರ: ಕೊಳೆತ ಸ್ಥಿತಿಯಲ್ಲಿ ತಲೆ ಇಲ್ಲದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ನೆಲಮಂಗಲ–ಮಧುರೆ ಮುಖ್ಯರಸ್ತೆಯ ಕನ್ನಮಂಗಲ ಗೇಟ್ ಸಮೀಪ…
ಮತ್ತೆ ಮತ್ತೆ ಕಾಲದ ಅಗ್ನಿಪರೀಕ್ಷೆಯಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯ ಆಚರಣೆಗಳನ್ನು ಪುನರ್ ವಿಮರ್ಶೆಗೊಳಪಡಿಸಿ, ಅನುಭವದ ಆಧಾರದ ಮೇಲೆ ಸಾರ್ವತ್ರಿಕ ಸತ್ಯಗಳನ್ನು…
ರೈತರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಬರ ಪರಿಹಾರದ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಾಡಿದ್ದ ಟೀಕೆಗೆ ಸಚಿವ…
ನಾಗಮಂಗಲ: ಕಾರ್ಮಿಕರಿಗಾಗಿಯೇ ಪ್ರತಿ ತಾಲೂಕಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಶಾಲೆ ತೆರೆಯಲು ಸರ್ಕಾರ ಮುಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ…
ನಾಗಮಂಗಲ: ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ತಾಲೂಕಿನಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬರೋಬ್ಬರಿ 691 ಪ್ರಕರಣಗಳಲ್ಲಿ ಕಾನೂನುಬಾಹಿರವಾಗಿ ಸಾಗುವಳಿ ಚೀಟಿ…
ದೊಡ್ಡಬಳ್ಳಾಪುರ: ಯುವಕರು ಮೊದಲು ತಂದೆ-ತಾಯಿಯನ್ನು ಗೌರವಿಸುವುದನ್ನು ಕಲಿಯಬೇಕು. ನಂತರ ಪಾಠ-ಪ್ರವಚನಗಳನ್ನು ಕಲಿಯಬೇಕು ಎಂದು ಹೈಕೋರ್ಟ್ ವಕೀಲರಾದ ಸುರೇಶ್ ಗೌಡ ಬಿ.ವಿದ್ಯಾರ್ಥಿಗಳಿಗೆ…