ಬೆಂಗಳೂರು, ವೈಟ್‌ಫೀಲ್ಡ್: ಬೈಕ್ ಅಪಘಾತದಲ್ಲಿ ಭಾರೀ ಗಾಯಗೊಂಡು, ಕೈ ಹಾಗೂ ಭುಜ ಭಾಗ ಸಂಪೂರ್ಣವಾಗಿ ಸ್ವಾಧೀನ ಕಳೆದುಕೊಂಡ ಸ್ಥಿತಿಗೆ ತಲುಪಿದ್ದ 23 ವರ್ಷದ ದೇಬ್ ರಂಜನ್ ಎಂಬ ಯುವಕನಿಗೆ, ಮೆಡಿಕವರ್ ಆಸ್ಪತ್ರೆಯಲ್ಲಿ ನಡೆದ ಅಪರೂಪದ ಹಾಗೂ ಯಶಸ್ವಿ ಶಸ್ತ್ರಚಿಕಿತ್ಸೆಯು ನವಜೀವನ ನೀಡಿದೆ.
ಕೊಲ್ಕತ್ತ ಮೂಲದ ದೇಬ್ ರಂಜನ್ ಬೈಕ್‌ನಿಂದ ಬಿದ್ದು ಭುಜ ಮತ್ತು ಕತ್ತಿನ ನರಗಳು ಸಂಪೂರ್ಣವಾಗಿ ತೀವ್ರವಾಗಿ ಕೆಲಸ ಮಾಡೋಕೆ ಆಗದ ಸ್ಥಿತಿಯಲ್ಲಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಫಲಿತಾಂಶ ಇಲ್ಲದ ಕಾರಣ, ಅವರು ಬೆಂಗಳೂರಿನ ಮೆಡಿಕವರ್ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್ ಡಾ. ಸುರೇಶ್ ಕೆ ಅವರನ್ನು ಸಂಪರ್ಕಿಸಿದರು.
ಸಂದರ್ಶನ ಮತ್ತು ಸ್ಕ್ಯಾನ್ ಪರೀಕ್ಷೆಗಳಿಂದ ಭುಜದ ಹಾಗೂ ಕತ್ತಿನ ಬ್ರಾಚಿಯಲ್ ಪ್ಲೆಕ್ಸಸ್ ನರಗಳು ಸಂಪೂರ್ಣವಾಗಿ ಕಟ್ ಆಗಿರುವುದು ಪತ್ತೆಯಾಯಿತು. ತಕ್ಷಣವೇ ಡಾ. ಸುರೇಶ್ ಅವರು ಸೂಪರ್ ಮೈಕ್ರೋ ಶಸ್ತ್ರಚಿಕಿತ್ಸೆ ನಡೆಸಿದರು. ಈ ಶಸ್ತ್ರಚಿಕಿತ್ಸೆ ಅತ್ಯಂತ ಸೂಕ್ಷ್ಮವಾದ ಕಾರ್ಯವಿಧಾನವಾಗಿದ್ದು, ಭುಜದ ನಡು ನರಗಳನ್ನು ಪುನರ್‌ಜೋಡಿಸುವಲ್ಲಿ ಯಶಸ್ವಿಯಾಯಿತು.
ಇದಕ್ಕು ಮೇಲೆ ಅರ್ಥೋಪೆಡಿಕ್ ಸರ್ಜನ್ ಡಾ. ಕೃಷ್ಣಕುಮಾರ್ ಅವರ ಸಹಕಾರದಿಂದ ಭುಜದ ಕೊಲ್ಲೇಬೋನು ಮುರಿತಕ್ಕೂ ಶಸ್ತ್ರಚಿಕಿತ್ಸೆ ನಡೆಯಿತು.
ಇಂದು, ದೇಬ್ ರಂಜನ್ ಸಂಪೂರ್ಣವಾಗಿ ಆರೋಗ್ಯ ಲಾಭಿಸಿ, ಯಾವ ಸಮಸ್ಯೆಯೂ ಇಲ್ಲದೆ ದೈನಂದಿನ ಜೀವನಕ್ಕೆ ಮರಳಿದ್ದಾರೆ. “ರೋಗಿಯ ಆರೋಗ್ಯದಲ್ಲಿ ಬಂದ ಸುಧಾರಣೆಯಿಂದ ನಾವು ಸಂತೋಷಪಡುವೆವು. ಇಂತಹ ಯಶಸ್ಸುಗಳು ನಮ್ಮ ತಂಡದ ಕಾರ್ಯಪಟುತ್ವದ ಪ್ರತಿಬಿಂಬವಾಗಿವೆ ಎಂದು ಡಾ. ಸುರೇಶ್ ಕೆ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರ
ಸಾರ್ವಜನಿಕರ ಕೆಲಸಗಳು ತಾಲೂಕು ಕಚೇರಿಗಳಲ್ಲಿ ಯಾವುದೇ ವಿಳಂಬವಿಲ್ಲದೆ ನಡೆಯಬೇಕು. ಕಂದಾಯ ದಾಖಲೆಗಳ ನಿರ್ವಹಣೆ, ಭೂಮಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ಹಾಗೂ…
ಅ.07-10-2026: ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರೊಬ್ಬರನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿ, ಚೆಕ್-ಇನ್ ಬ್ಯಾಗೇಜ್‌ನಲ್ಲಿ ಅಡಗಿಸಿಟ್ಟಿದ್ದ 942 ಗ್ರಾಂ…
ದೇವನಹಳ್ಳಿ: ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ…
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ರೈಲು ನಿಲ್ದಾಣದ ರೈಲ್ವೆ ಯಾರ್ಡ್‌ನಲ್ಲಿ ರೈಲಿಗೆ ಸಿಲುಕಿ ಸುಮಾರು 30 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ…