ದೊಡ್ಡಬಳ್ಳಾಪುರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಇಂದು ಅಂದಾಜು ರೂ. 7 ಕೋಟಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಧೀರಜ್‌ಮುನಿರಾಜ್ ಗುದ್ದಲಿ ಪೂಜೆ ನೆರವೇರಿಸಿದರು.
ಗುಂಡಮಗೆರೆ ಗ್ರಾಮದಲ್ಲಿ ಸಿ.ಸಿ ರಸ್ತೆ ಅಭಿವೃದ್ಧಿ ಕಾಮಗಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಆರೂಡಿ ಆಸ್ಪತ್ರೆಯಲ್ಲಿ ಹೊಸ ಮೀಟಿಂಗ್ ಹಾಲ್ ನಿರ್ಮಾಣ, ಅಂಬೆಡ್ಕರ್ ಭವನ ನಿರ್ಮಾಣ ಭಕ್ತರಹಳ್ಳಿ, ಕಾಮನ ಅಗ್ರಹಾರ ಮೂಲಕವಾಗಿ ಚಿಕ್ಕಮಂಕನಾಳಕ್ಕೆ ತಲುಪುವ NH 207 | ವರೆಗೆ ರಸ್ತೆ ಅಭಿವೃದ್ಧಿ, ಅಕ್ಕತಮ್ಮನಹಳ್ಳಿಯಿಂದ ಲಿಂಗಾಪುರ ರಸ್ತೆ ನಿರ್ವಹಣೆ, ಕೋಡಿಗೆಹಳ್ಳಿಯಿಂದ ಕನಕೇನಹಳ್ಳಿವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ, ಬೈರಸಂದ್ರಪಾಳ್ಯ ಸಿ.ಸಿ ರಸ್ತೆ ಅಭಿವೃದ್ಧಿ, ದೊಡ್ಡತುಮಕೂರು ಸಿ.ಸಿ ರಸ್ತೆ ಅಭಿವೃದ್ಧಿ, ಕರೀಂಸೊನಹಳ್ಳಿ ಕಾಲೋನಿಯ ಸಿ.ಸಿ ರಸ್ತೆ ಅಭಿವೃದ್ಧಿ, ಅಂಜನ್ ಮೂರ್ತಿ ನಗರ ಕಾಲೋನಿಯಲ್ಲಿ ಸಿ.ಸಿ ರಸ್ತೆ ಅಭಿವೃದ್ಧಿ, ಕನಸವಾಡಿ ಗ್ರಾಮ ಪಂಚಾಯಿತಿಯ, ಮಾರಸಂದ್ರ ಕಾಲೋನಿ ಪರಿಮಿತಿಯಲ್ಲಿ ಸಿ.ಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಾದ ಧೀರಜ್ ಮುನಿರಾಜ್ ಗುದ್ದಲಿ ಪೂಜೆ ನೆರವೇರಿಸಿದರು.
ಈ ಕಾಮಗಾರಿಗಳು ಮುಂದಿನ ದಿನಗಳಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮೂಲಸೌಕರ್ಯಕ್ಕೆ ಮೆರುಗು ನೀಡಲಿದೆ ಎಂದು ಶಾಸಕ ಧೀರಜ್ ಮುನಿರಾಜ್ ಹೇಳಿದರು.
ಈ ಸಂದರ್ಭದಲ್ಲಿ ಟಿವಿ ಲಕ್ಷ್ಮೀನಾರಾಯಣ್, ತಾಲೂಕು ಬಿಜೆಪಿ ಅಧ್ಯಕ್ಷರಾದ ನಾಗೇಶ್, ಅಶ್ವಥ್ ನಾರಾಯಣಸ್ವಾಮಿ, ಕಾಂತರಾಜು, ಗ್ರಾಮ್ ಪಂಚಾಯತಿ ಅಧ್ಯಕ್ಷರು ಸದಸ್ಯರು ಮುಖಂಡರು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ಪರವಾನಗಿ ಭೂ ಮಾಪಕರು ಎರಡು ತಿಂಗಳಿಂದ ಮುಷ್ಕರ ಹೂಡಿರುವುದರಿಂದ ಭೂ ಮಾಪನ ಇಲಾಖೆಯ…
ಕೇಂದ್ರ ಸರ್ಕಾರ ಕಳೆದ ಒಂದು ದಶಕದಿಂದ ವಿವಿಧ ಯೋಜನೆಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಒಂದೊಂದೆ ಹೆಜ್ಜೆ ಇಟ್ಟುಕೊಂಡು ಬರುತ್ತಿದೆ ಎಂದು…
ಆಶಾ ಭೋಸ್ಲೆ..... ಸಂಗೀತ ಎಂಬ ಮಾಂತ್ರಿಕ ಮತ್ತು ಭಾವನಾತ್ಮಕ ಹಾಗೂ ಭ್ರಮಾತ್ಮಕ ಶಕ್ತಿಯ ಉತ್ತುಂಗ ಧ್ವನಿಯೊಂದು ನಮ್ಮನ್ನಗಲಿದ ಸಂದರ್ಭದಲ್ಲಿ...... ಶಬ್ದ…
Effektives Schreiben von Hausarbeiten Das Schreiben von Hausarbeiten kann für viele Studierende eine große Herausforderung…
ನಾನು ಜೆಡಿಎಸ್ ತಾಲೂಕು ಅಧ್ಯಕ್ಷ ಸ್ಥಾನಕ್ಕಾಗಿ ವರಿಷ್ಠರ ಬಳಿ ಕೇಳಿದ್ದೇನೆ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಪಕ್ಷದ ವರಿಷ್ಠರು ಯಾವುದೇ…
ಹೆಣ್ಣಿನ ಹಿತರಕ್ಷಣೆಗಾಗಿ ದೊಡ್ಡಬಳ್ಳಾಪುರದಲ್ಲಿ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಾಪನೆ ಮಾಡಲಾಗಿದೆ..ಈ ಮಹಿಳಾ ಠಾಣೆಯಲ್ಲಿ ಅತ್ಯಾಚಾರ, ವರದಕ್ಷಿಣೆ ನಿಷೇಧ ಕಾಯ್ದೆ, ಮಕ್ಕಳ…