ರಿಪೇರಿ ಹಣ ಪಡೆದಿದ್ದರೂ ಮಾಲೀಕರಿಗೆ ವಾಹನ ಹಿಂತಿರುಗಿಸದೇ ಮೀನಾಮೇಷ ಆರೋಪ: ಹೆಚ್ಚುವರಿ ಹಣ ಪಡೆಯಲು ವಾಹನ ಮಾಲೀಕರಿಗೆ ಕಿರುಕುಳ ಆರೋಪ:PSN ಆಟೋಮೆಟಿವ್ ಮಾರ್ಕೆಟಿಂಗ್ ಕಂಪನಿ ಎದರು ಧರಣಿ

ರಸ್ತೆ ಅಪಘಾತಕ್ಕೆ ತುತ್ತಾಗಿದ್ದ ಗೂಡ್ಸ್ ಗಾಡಿಯ(ಕ್ಯಾಂಟರ್) ರಿಪೇರಿಗೆಂದು PSN ಆಟೋಮೆಟಿವ್ ಮಾರ್ಕೆಟಿಂಗ್ ಕಂಪನಿ ನೀಡಲಾಗಿತ್ತು, ವಾಹನದ ರಿಪೇರಿ ಹಣವನ್ನ ಇನ್ಷುರೆನ್ಸ್ ಕಂಪನಿ ಬಿಡುಗಡೆ ಮಾಡಿತ್ತು, ಹಣ ಪಾವತಿಯಾಗಿದ್ದರು ವಾಹನ ಬಿಡುಗಡೆ ಮಾಡುವುದಕ್ಕೆ ಮೀನಾಮೇಷ ಎಣಿಸಿ ವಾಹನ ಮಾಲೀಕರಿಗೆ ನಷ್ಟವನ್ನುಂಟು ಮಾಡಲಾಗಿದೆ ಎಂದು ಆರೋಪಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಕಂಪನಿಯ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕು ಕೆಸ್ತೂರ್ ಗೇಟ್ ಬಳಿ ಇರುವ PSN ಆಟೋಮೇಟಿವ್ ಮಾರ್ಕೆಟಿಂಗ್ ಕಂಪನಿ ಮುಂದೆ ನಡೆದಿದೆ.

ಗಾಡಿ ಮಾಲೀಕನ ಬಳಿ ಹೆಚ್ಚುವರಿ ಹಣದ ಬೇಡಿಕೆ ಇಟ್ಟ PSN ಕಂಪನಿ ಸಿಬ್ಬಂದಿ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಬೆಂಗಳೂರಿನ ಸಿದ್ದಾರ್ಥ ನಗರದ ನಿವಾಸಿ ಅಶ್ವತ್ಥನಾರಾಯಣರವರು ಹರೀಶ್ ಕಾರ್ಗೋ ಮೂವರ್ಸ್ ಕಂಪನಿಯ ಮಾಲೀಕರು, ಇವರ ಮಾಲೀಕತ್ವದ ಕೆಎ02ಎಹೆಚ್ 8714 ನೋಂದಣಿ ಸಂಖ್ಯೆ ಗೂಡ್ಸ್ ವಾಹನ ಮೂರ್ಚ್ 29 ರಂದು ಪೆನಗೊಂಡ ಬಳಿ ಅಪಘಾತಕ್ಕೆ ತುತ್ತಾಗಿತ್ತು. ಈ ಹಿನ್ನೆಲೆ ಅದೇ ದಿನ ರಿಪೇರಿ ಮಾಡಿಸಲು ದೊಡ್ಡಬಳ್ಳಾಪುರದ ಕೆಸ್ತೂರ್ ಗೇಟ್ ಬಳಿಯ PSN ಅಟೋಮೇಟಿವ್ ಮಾರ್ಕೆಟಿಂಗ್ ಕಂಪನಿಯಲ್ಲಿ ಬಿಡಲಾಗಿತು.

ವಾಹನದ ರಿಪೇರಿಯ ಸುಮಾರು 5 ಲಕ್ಷ ಹಣವನ್ನ ಓರಿಯಂಟಲ್ ಇನ್ಷುರೆನ್ಸ್ ಕಂಪನಿ ಆನ್ ಲೈನ್ ಮೂಲಕವೇ PSN ಕಂಪನಿಗೆ ಪಾವತಿ ಮಾಡಿದೆ. ಕಂಪನಿಗೆ ಹಣ ಪಾವತಿಯಾದರೂ ಮಾಲೀಕರಿಂದ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟು ಮಾಲೀಕರಿಗೆ ವಂಚನೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

PSN ಕಂಪನಿ ಮ್ಯಾನೇಜರ್ ಯುವರಾಜ್ ಹಾಗೂ ಜನರಲ್ ಮ್ಯಾನೇಜರ್ ಸುದರ್ಶನ್ 34 ಸಾವಿರ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದಾರೆ ವಾಹನ ಕೊಡುವುದಿಲ್ಲವೆಂದು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆಂದು ಅಶ್ವತ್ಥನಾರಾಯಣ್ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

PSN ಕಂಪನಿ ಸಿಬ್ಬಂದಿ ದೌರ್ಜನ್ಯ ಹಾಗೂ ಕಿರುಕುಳ ವಿರೋಧಿಸಿ ಕನ್ನಡಪರ ಸಂಘಟನಗಳು ಕಂಪನಿ ಮುಂದೆ ಪ್ರತಿಭಟನೆಯನ್ನ ನಡೆಸಿದವು.

ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಕನ್ನಡಪರ ಹೋರಾಟಗಾರ ರಘುವರ್ಮಾ, ಕಳೆದ ಎರಡು ತಿಂಗಳಿಂದ ಅಶ್ವತ್ಥನಾರಾಯಣರವರ ಗಾಡಿಯನ್ನ ಕೊಡದೆ ಹಣಕ್ಕಾಗಿ ಕಿರುಕುಳ ಕೊಡುತ್ತಿದ್ದಾರೆ, ಇನ್ಷುರೆನ್ಸ್ ಕಂಪನಿಯಿಂದ ಹಣ ಪಾವತಿಯಾಗಿದ್ರು ಹಣ ಬಂದಿಲ್ಲ ಎಂದು ಸುಳ್ಳು ಹೇಳಿ ಗೂಡ್ಸ್ ಮಾಲೀಕರಿಗೆ ಎರಡು ತಿಂಗಳ ಆದಾಯಕ್ಕೆ ಕನ್ನ ಹಾಕಿದ್ದಾರೆ, ಎರಡು ತಿಂಗಳಿಂದ ಸುಮಾರು 90 ಹಣ ನಷ್ಟವನ್ನ ಅನುಭವಿಸಿದ್ದಾರೆ ಅಶ್ವತ್ಥನಾರಾಯಣರವರು, ಅವರಿಗಾದ ನಷ್ಟವನ್ನ ತುಂಬಿಕೊಡಬೇಕು ಮತ್ತು PSN ಕಂಪನಿ ಸಿಬ್ಬಂದಿಗಳಾದ ಯುವರಾಜ್ ಮತ್ತು ಸುದರ್ಶನ್ ಗೂಡ್ಸ್ ಮಾಲೀಕರ ಬಳಿ ಕ್ಷಮೆ ಕೇಳಿ ಬೇಕೆಂದು ಒತ್ತಾಯಿಸಿದರು.

Ramesh Babu

Journalist

Recent Posts

ಹೃದಯವಿದ್ರಾವಕ ಘಟನೆ: ಒಂದೇ ದಿನ ಪತಿ-ಪತ್ನಿ ದಾರುಣ ಸಾವು

ಬೆಳಗಾವಿಯಲ್ಲಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಒಂದೇ ದಿನ ಪತಿ-ಪತ್ನಿ ದಾರುಣ ಸಾವನ್ನಪ್ಪಿದ್ದಾರೆ. ಅರವಳ್ಳಿ…

3 hours ago

ಮಾರಕಾಸ್ತ್ರಗಳಿಂದ ಶಿಕ್ಷಕಿಯ ಕ್ರೂರ ಹತ್ಯೆ: ಕೊಲೆ ಬಳಿಕ ದುಷ್ಕರ್ಮಿಗಳಿಂದ ಶವಕ್ಕೆ ಬೆಂಕಿ

ಕಲಬುರಗಿ ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯ ಮೇಲೆ ನಡೆದ ಕ್ರೂರ ಹತ್ಯೆ ಪ್ರಕರಣ ಎಲ್ಲರಲ್ಲೂ ಆತಂಕ ಮೂಡಿಸಿದೆ. ಕಮಲಾಪುರ ತಾಲೂಕಿನ…

4 hours ago

ಲಾಕಪ್ ಡೆತ್ ಮತ್ತು ಮರಣದಂಡನೆ….

ಸುಮಾರು ಆರು ವರ್ಷಗಳ ಹಿಂದೆ ಅಂದರೆ 2020ರಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದ ಅಮಾನುಷ ಲಾಕಪ್ ಡೆತ್ ಬಗ್ಗೆ ಬರೆದ…

6 hours ago

ತಂದೆ-ಮಗನ ಲಾಕಪ್ ಡೆತ್ ಕೇಸ್; ತಮಿಳುನಾಡಿನ 9 ಪೊಲೀಸರಿಗೆ ಗಲ್ಲು ಶಿಕ್ಷೆ

2020ರಲ್ಲಿ ತಮಿಳುನಾಡಿನಲ್ಲಿ ನಡೆದ ಸಾತಂಕುಲಂ ಕಸ್ಟಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮದ್ರಾಸ್ ಹೈಕೋರ್ಟ್‌ ಪೀಠವು 9 ಪೊಲೀಸ್ ಸಿಬ್ಬಂದಿಗೆ…

15 hours ago

ಇಂಧನ ತೈಲ ಮತ್ತು ಅನಿಲ ಪೂರೈಕೆ ಸಮಸ್ಯೆ – ರಾಜ್ಯದ ಜನತೆಗೆ ತೀವ್ರ ಸಂಕಷ್ಟ- ಸಚಿವ ಕೆ.ಎಚ್ ಮುನಿಯಪ್ಪ ಪ್ರತಿಕ್ರಿಯೆ

ರಾಜ್ಯದಲ್ಲಿ ಇಂಧನ ತೈಲ ಮತ್ತು ಅನಿಲ ಪೂರೈಕೆಯ ಸಮಸ್ಯೆ ಗಂಭೀರ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ, ಆಹಾರ, ನಾಗರಿಕ ಸರಬರಾಜು ಮತ್ತು…

16 hours ago

ಆಟೋ ಎಲ್‌ಪಿಜಿಗಾಗಿ ಸಾಲುಗಟ್ಟಿ ನಿಂತ ನೂರಾರು ಆಟೋಗಳು

ಆಟೋ ಎಲ್‌ಪಿಜಿಗಾಗಿ ಡಿಕ್ರಾಸ್ ರಸ್ತೆಯ ಸೂಪರ್ ಗ್ಯಾಸ್ ಬಂಕ್ ಬಳಿ ನೂರಾರು ಆಟೋಗಳು ಸಾಲುಗಟ್ಟಿ ನಿಂತಿವೆ. ಆಟೋ ಎಲ್ಪಿಜಿ ಇಲ್ಲದೆ…

18 hours ago