ರಾತ್ರಿ ವೇಳೆ ಮನೆಗೆ ನುಗ್ಗಿ ಮನೆಯಲ್ಲಿದ್ದವರನ್ನು ಬೆದರಿಸಿ ಬಂಗಾರ, ನಗದು, ದಾಖಲೆಗಳನ್ನು ಕದ್ದು ಎಸ್ಕೇಪ್ ಆಗಿದ್ದ 9 ಜನ ಆರೋಪಿಗಳನ್ನು ಗೌರಿಬಿದನೂರು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಇನ್ನೂ ಘಟನೆಗೆ ಸಂಬಂಧಿಸಿದಂತೆ ಕಳೆದ ಪೆಬ್ರವರಿಯಲ್ಲಿ ನಗರದ ಬಸವೇಶ್ವರ ನಗರದ ಶ್ರೀನಿವಾಸ್ ಅವರ ಮನೆಗೆ ನುಗ್ಗಿದ ಸುಲಿಗೆಕೋರರು ಮನೆಯಲ್ಲಿದ್ದವರನ್ನು ಬೆದರಿಸಿ ಚಿನ್ನಾಭರಣ ಹಾಗೂ ದಾಖಲೆಗಳನ್ನು ಕದ್ದು ಎಸ್ಕೇಪ್ ಆಗಿದ್ದು ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಇನ್ನೂ ಘಟನೆಗೆ ಸಂಬಂಧಿಸಿದಂತೆ ಗೌರಿಬಿದನೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು ಅದರಂತೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಸಿಸಿ ಟಿವಿಯ ದೃಶ್ಯವಳಿಗಳನ್ನು ಆಧರಿಸಿ 9 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಚಾಂದ್ ಪಾಷ, ಸಾಬೀರ್, ಫೈರೋಜ್ ಖಾನ್, ಬಷೀರ್ ಅಹಮದ್, ಇಲಿಯಾಜ್ ಎಂಡಿ, ತನ್ವೀರ್, ಇರ್ಫಾನ್ ಪಾಷ, ಬಾಬಾಜಾನ್, ಅಮೀನ್ ಎಂದು ತಿಳಿದು ಬಂದಿದೆ.
ಇನ್ನೂ ಮನೆಯ ಮಾಲೀಕ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಿದ್ದಾರೆ ಎಂದು ಮಾಹಿತಿ ಪಡೆದ ಸುಲುಗೆಕೋರರು ಫೆಬ್ರವರಿ 20 ರಂದು 3 ದ್ವಿಚಕ್ರ ವಾಹನಗಳೊಂದಿಗೆ ಮನೆಗೆ ನುಗ್ಗಿ ಬಂಗಾರ, ಹರಳು ಸೇರಿದಂತೆ ಮತ್ತಿತ್ತರು ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದರು.
ದೂರುದಾರನು ಅಕ್ರಮ ಮಾರ್ಗದಲ್ಲಿ ಸುಮಾರು 2 ಕೋಟಿಗೂ ಹೆಚ್ಚು ಹಣ, ಒಡವೆಗಳು, ಬೆಲೆ ಬಾಳುವ ವಸ್ತುಗಳು ಮತ್ತು ಆಸ್ತಿಯನ್ನು ಸಂಪಾದನೆ ಮಾಡಿರುವುದಾಗಿ ವದಂತಿಯ ಮೇರೆಗೆ ಆರೋಪಿತರೆಲ್ಲರೂ ಸೇರಿಕೊಂಡು ಸಂಚನ್ನು ರೂಪಿಸಿ ಫೆ.17 ರಂದು ಸುಲಿಗೆ ಮಾಡಲು ಪ್ರಯತ್ನಪಟ್ಟಿದ್ದು, ಆದರೆ, ಆ ದಿನ ವಿಫಲರಾಗಿರುತ್ತಾರೆ. ಮತ್ತೆ ಆರೋಪಿಗಳು ಫೆ.20ರಂದು ದೂರುದಾರ ಮನೆಯಲ್ಲಿ ಇಲ್ಲದಿರುವಿಕೆಯನ್ನು ನೋಡಿಕೊಂಡು, ಮನೆಗೆ ನುಗ್ಗಿ ಆತನ ಮನೆಯಲ್ಲಿದ್ದ ಸಂಬಂಧಿಗಳನ್ನು ಬೆದರಿಸಿ ಮನೆಯಲ್ಲಿದ್ದ ಒಡವೆಗಳು, ದಾಖಲಾತಿಗಳು ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆ.
ಆರೋಪಿಗಳು ಕೃತ್ಯಕ್ಕೆ 3 ದ್ವಿ ಚಕ್ರ ವಾಹನ, ಒಂದು ಕಾರನ್ನು ಬಳಿಸಿದ್ದು ಆರೋಪಿಗಳ ಕಡೆಯಿಂದ 1 ಉಂಗುರ, 14 ಹರಳುಗಳು, ಮತ್ತು 2 ಹವಳದ ಕಲ್ಲುಗಳನ್ನು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಈ ಪ್ರಕರಣದ ಆರೋಪಿಯಾದ ತನ್ನೀರ್ @ ಮೆಂಟಲ್ ತನು ಅವನ ಮೇಲೆ 2 ಕೊಲೆ. 2 ಕೊಲೆ ಪ್ರಯತ್ನ, 1 ದರೋಡೆಗೆ ಯತ್ನ ಒಟ್ಟು 5 ಪ್ರಕರಣಗಳು ದಾಖಲಾಗಿರುತ್ತವೆ. ಇತನ ವಿರುದ್ಧ ಡಿ.ಜೆ.ಹಳ್ಳಿ ಹಾಗೂ ಕೊಡುಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿಪಟ್ಟಿಯನ್ನು ತೆರದಿರುತ್ತಾರೆ.
ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲವೆಂದು ಮನನೊಂದು ಒಂದೇ ದಿನ ರಾಜ್ಯದ ಇಬ್ಬರು ಯುವಕರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆಗಳು ಚಿಕ್ಕಮಗಳೂರು…
ನಮ್ಮ ಮನೆ ದೇವರಾದ ರಾಮೇಶ್ವರ–ಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದದಿಂದಲೇ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಎರಡು ಬಾರಿ ವಿಪಕ್ಷ ನಾಯಕನಾಗಿ…
ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಅತ್ಯಂತ ಅವಶ್ಯಕ. ಇಂತಹ ಶಿಬಿರಗಳು ಕಾಲಕಾಲಕ್ಕೆ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಲೇ…
ಜಾತ್ರೆಯೊಂದರಲ್ಲಿ ವ್ಯಕ್ತಿಯ ಭೀಕರ ಕೊಲೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಂಗನಗೌಡ ಪಾಟೀಲ್…
ಲಾರಿ-ಕಾರು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕು ರಾಜಾಪುರ ಬಳಿ ನಡೆದಿದೆ. ಬೆಂಗಳೂರು…
ಇತ್ತೀಚೆಗೆ Social Media ಗಳಲ್ಲಿ ಅತ್ಯಂತ ಗಮನಸೆಳೆದ ಮನಮಿಡಿಯುವ ಚಿತ್ರ...... ಒಬ್ಬ ಬಾಲಕ ಡಾಕ್ಟರ್ ಬಳಿ " ಹಸಿವು ಹೋಗಲಾಡಿಸಲು…