ಓರ್ವ ಸೈನಿಕನ ವಿರುದ್ಧ ರಾಜ್ಯ ಮಹಿಳಾ ಹೋರಾಟಗಾರ್ತಿಯೊಬ್ಬರು ಲವ್, ಸೆಕ್ಸ್ ಮತ್ತು ದೋಖಾ ಆರೋಪ ಮಾಡಿ ನ್ಯಾಯಕ್ಕಾಗಿ ಯೋಧನ ಮನೆ ಮುಂದೆ ಹೋರಾಟಗಾರ್ತಿ ಧರಣಿ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ನಗರದ ಮಚ್ಚೆ ಗ್ರಾಮದ ನಿವಾಸಿ ಹೋರಾಟಗಾರ್ತಿ ಪ್ರಮೋದಾ ಹಜಾರೆ ಅವರು ಬಿಜಗರ್ಣಿ ಗ್ರಾಮದ ಯೋಧ ಅಕ್ಷಯ್ ನಲವಡೆ ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ.
ಆರು ವರ್ಷದ ಹಿಂದೆ ಫೇಸ್ಬುಕ್ನಲ್ಲಿ ಹೋರಾಟಗಾರ್ತಿ ಪ್ರಮೋದಾ ಹಜಾರೆ ಅವರಿಗೆ ಯೋಧ ಅಕ್ಷಯ್ ನಲವಡೆ ಪರಿಚಯವಾಗಿದ್ದ. ತನಗಿಂತ ಹದಿನಾಲ್ಕು ವರ್ಷ ಮೇಲ್ಪಟ್ಟ ಮಹಿಳೆ ಜೊತೆಗೆ ಪ್ರೀತಿ ಮಾಡಿದ್ದ. ಮದುವೆ ಆಗುವುದಾಗಿ ಹೋರಾಟಗಾರ್ತಿಗೆ ನಂಬಿಸಿದ್ದ. ಆರು ವರ್ಷದ ಹಿಂದೆ ಮನೆಯ ದೇವರ ಕೋಣೆ ಮುಂದೆ ಪ್ರಮೋದಾ ಮತ್ತು ಅಕ್ಷಯ್ ಮದುವೆಯಾಗಿದ್ದರು. ಬಳಿಕ ಆತ ಸೇನೆಯಿಂದ ರಜೆಗೆ ಬಂದಾಗ ಹದಿನೈದು ದಿನಗಳ ಕಾಲ ಪ್ರಮೋದಾ ಬಳಿ ಇರುತ್ತಿದ್ದ ಎನ್ನಲಾಗಿದೆ.
ಇದೇ ವೇಳೆ ಅಕ್ಷಯ್ಗೆ ಒಂಬತ್ತು ಯುವತಿಯರ ಜೊತೆಗೆ ನಂಟಿರುವುದು ಬೆಳಕಿಗೆ ಬಂದಿದೆ. ಅದನ್ನು ಪ್ರಶ್ನೆ ಮಾಡಿದ ಬಳಕ ಎಲ್ಲರನ್ನೂ ಬಿಟ್ಟು ಹೋರಾಟಗಾರ್ತಿ ಪ್ರಮೋದಾ ಹಜಾರೆ ಜೊತೆಗೆ ಇರುವುದಾಗಿ ಅಕ್ಷಯ್ ಹೇಳಿದ್ದ. ಮೊನ್ನೆ ಅಕ್ಷಯ್ ರಜೆಗೆ ಬಂದಾಗ ಬೇರೊಬ್ಬ ಯುವತಿ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ವಿಚಾರ ಗೊತ್ತಾಗಿ ಪ್ರಮೋದಾ ಅಕ್ಷಯ್ ಮನೆಗೆ ಹೋಗಿದ್ದರು. ಹಿರಿಯರು, ಕುಟುಂಬಸ್ಥರು ಕೂಡಿಕೊಂಡು ಸರಿಪಡಿಸುವುದಾಗಿ ಹೇಳಿ ಕಳಿಸಿದ್ದರು. ಬಳಿಕ ಮದುವೆ ಆಗಲ್ಲ ಎಂದು ಅಕ್ಷಯ್ ಉಲ್ಟಾ ಹೊಡೆದಿದ್ದ.
ಇದೀಗ ಅಕ್ಷಯ್ ಇಂದು ಮದುವೆ ಆಗಿದ್ದಾನೆ ಎಂದು ಆತನ ಮನೆಗೆ ಪ್ರಮೋದಾ ಬಂದಿದ್ದಾರೆ. ಆದರೆ, ಅಕ್ಷಯ್ ಕುಟುಂಬಸ್ಥರು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಸಾಯುವವರೆಗೂ ಮನೆ ಮುಂದೆ ಕುಳಿತುಕೊಳ್ಳುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ. ಸಾಕಷ್ಟು ಮಹಿಳೆಯರಿಗೆ ನ್ಯಾಯ ಕೊಡಿಸಿದ್ದೇನೆ ತನ್ನ ನೆರವಿಗೆ ಬರುವಂತೆ ಪ್ರಮೋದಾ ಮನವಿ ಮಾಡಿದ್ದಾರೆ.
ದೊಡ್ಡಬಳ್ಳಾಪುರ ನಗರದಲ್ಲಿ ಏ.12 ರಂದು 220/66/11ಕೆವಿ ಕೆಐಎಡಿಬಿ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F02-Birla Super ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಗಳು…
ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರವಾಗಿ ಸಾವನ್ನಪ್ಪಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೋರಾಯನಪಾಳ್ಯದಲ್ಲಿ ನಡೆದಿದೆ.. 17 ವರ್ಷದ…
ರಾಯಚೂರು ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸುರೇಶ್ ಶೆಟ್ಟಿ ಲೋಕಾಯುಕ್ತರ ಬಲೆಗೆ ಬಿದ್ದ ಮುಖ್ಯಾಧಿಕಾರಿ. ರಾಘವೇಂದ್ರ…
ದೇಶದ ಎಲ್ಲಾ ದಲಿತ ಕೇರಿಗಳನ್ನು ನಾಶ ಮಾಡಬೇಕು. ಅಲ್ಲಿನ ಎಲ್ಲರಿಗೂ ಊರ ಒಳಗಿನ ಸ್ಥಳದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಬೇಕು. ಬ್ರಾಹ್ಮಣರ…
600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಟಾಪರ್ ಆದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು…
ದೊಡ್ಡಬಳ್ಳಾಪುರ (ತೂಬಗೆರೆ): ಗ್ರಾಮಾಂತರ ಭಾಗದಲ್ಲಿದ್ದರೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು…