
ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 157ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ-ಸ್ನಾತಕೋತ್ತರ ಪದವಿ ಹಂತದ ವಿದ್ಯಾರ್ಥಿಗಳಿಗೆ ಮೂರು ಪ್ರತ್ಯೇಕ ವಿಭಾಗಗಳಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು.
ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರ ಪ್ರಬಂಧಗಳನ್ನು ರಾಜ್ಯ ಮಟ್ಟಕ್ಕೆ ಕಳುಹಿಸಲಾಗಿತ್ತು. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ತೇಜಸ್ವಿನಿ ಅವರಿಗೆ ದ್ವಿತೀಯ ಸ್ಥಾನ ಬಂದಿದ್ದು ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ 21 ಸಾವಿರ ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಲಾಗುವುದು.
ಜಿಲ್ಲಾ ಮಟ್ಟದ ಬಾಪೂಜಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳ ವಿವರ ಇಂತಿದೆ:
ಪ್ರೌಢಶಾಲಾ ವಿಭಾಗ:
ಪ್ರಥಮ–ತೇಜಸ್ವಿನಿ.ಸಿ (ಸರ್ಕಾರಿ ಪ್ರೌಢಶಾಲೆ, ಬಾಶೆಟ್ಟಹಳ್ಳಿ, ದೊಡ್ಡಬಳ್ಳಾಪುರ), ದ್ವಿತೀಯ–ಸಿ.ಮಾನಸ (ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ದೇವನಹಳ್ಳಿ), ತೃತೀಯ–ತೇಜಸ್.ಆರ್ (ಥಾಮಸ್ ಶಾಲೆ, ನೆಲಮಂಗಲ).
ಪದವಿ ಪೂರ್ವ ವಿಭಾಗ:
ಪ್ರಥಮ–ಸುಫಿಯಾ.ಎಸ್ (ಮಹಾದೇವ ಪಿಯು ಕಾಲೇಜು, ಹೊಸಕೋಟೆ), ದ್ವಿತೀಯ–ಸಹನಾ.ಎಸ್ (ಎಚ್.ಕೊಂಗಡಿಯಪ್ಪ ಪಿಯು ಕಾಲೇಜು, ದೊಡ್ಡಬಳ್ಳಾಪುರ), ತೃತೀಯ–ಕುಸುಮ.ಟಿ.ಹೆಚ್ (ಸರ್ಕಾರಿ ಪಿಯು ಕಾಲೇಜು, ತ್ಯಾಮಗೊಂಡ್ಲು, ನೆಲಮಂಗಲ).
ಪದವಿ/ಸ್ನಾತಕೋತ್ತರ ವಿಭಾಗ:
ಪ್ರಥಮ–ಸಿದ್ದವ್ವ ಬೀರಪ್ಪ ಪುಜೇರಿ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನೆಲಮಂಗಲ), ದ್ವಿತೀಯ–ಹೇಮಲತ.ಶ್ರೀ (ಇಂಡೋ ಸನ್ರೈಸ್ ಪ್ರಥಮ ದರ್ಜೆ ಕಾಲೇಜು, ಹೊಸಕೋಟೆ), ತೃತೀಯ–ಕಾರ್ತಿಕ್.ಕೆ.ಎಸ್ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದೊಡ್ಡಬಳ್ಳಾಪುರ).