ಚುನಾವಣೆಗೂ ಮೊದಲು ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಜಾರಿಯಾಗಿದ್ದು, ಜನರು ಇವುಗಳನ್ನು ಆತ್ಮೀಯವಾಗಿ ಬರ ಮಾಡಿಕೊಂಡಿದ್ದಾರೆ. ಹಾದಿ-ಬೀದಿಗಳಲ್ಲಿ ಇವುಗಳ ಬಗ್ಗೆಯೇ ಚರ್ಚಿಸುತ್ತಿದ್ದಾರೆ. ಯೋಜನೆಯ ಪ್ರಯೋಜನ ಪಡೆಯಲು ಪರಸ್ಪರ ನೆರವಾಗುತ್ತಿದ್ದಾರೆ. ಬಿಜೆಪಿಯ ಕೋಮು ರಾಜಕಾರಣದ ನೋವಿಗೆ, ಬೆಲೆ ಏರಿಕೆಯ ಬರೆಯಿಂದಾದ ಗಾಯಕ್ಕೆ ಕಾಂಗ್ರೆಸ್, ಗ್ಯಾರಂಟಿಗಳ ಮುಲಾಮು ಹಚ್ಚಿದೆ. ಸದಾ ನೋವು ನಿರಾಸೆ, ಹತಾಶೆಯಲ್ಲಿದ್ದ ಸಾರ್ವಜನಿಕರು ಗೃಹ ಜ್ಯೋತಿ, ಶಕ್ತಿ, ಅನ್ನ ಭಾಗ್ಯ, ಗೃಹ ಲಕ್ಷ್ಮಿ ಯೋಜನೆಗಳ ಲಾಭ ಪಡೆಯುವ ಮೂಲಕ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಗ್ಯಾರಂಟಿ ಕಾರ್ಯಕ್ರಮಗಳ ವಿರುದ್ಧ ಬಿಜೆಪಿ ಸೃಷ್ಟಿಸುತ್ತಿರುವ ಅಪ ಪ್ರಚಾರಗಳಿಗೆ ಅವರು ಕಿವಿಗೊಡದೆ, ತಮ್ಮ ಬದುಕಿನ ನಿರ್ವಹಣೆಯ ಕಡೆಗೆ ಗಮನಹರಿಸುತ್ತಿದ್ದಾರೆ. ಇದರಿಂದ ಬಿಜೆಪಿ ಸಂಪೂರ್ಣವಾಗಿ ವಿಚಲಿತಗೊಂಡು ಇಂಗು ತಿಂದ ಮಂಗನಂತೆ ಆಡುತ್ತಿದೆ ಎಂದು ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಕಿಡಿಕಾರಿದೆ.
ತಲೆಯ ತುಂಬಾ ಕೋಮು ವಿಷವನ್ನೇ ತುಂಬಿಕೊಂಡಿರುವ ಅವರಿಗೆ ಚರ್ಚೆ ಮಾಡುವುದಕ್ಕೆ, ಹೋರಾಟ ಮಾಡುವುದಕ್ಕೆ ವಿಚಾರಗಳೇ ಸಿಗುತ್ತಿಲ್ಲ. ಈ ಕಾರಣದಿಂದಾಗಿಯೇ ಉಡುಪಿಯ ಕಾಲೇಜಿನ ಮಕ್ಕಳ ಹುಡುಗಾಟದ ವಿಚಾರವನ್ನು ‘ಬಾತ್ ರೂಮ್ ರಾಜಕಾರಣ’ವನ್ನಾಗಿ ಪರಿವರ್ತಿಸಿ, ರಾಜ್ಯದ ಜನರ ಮನಸಿನಲ್ಲೂ ಕೋಮು ವಿಷಬೀಜ ಬಿತ್ತಲು ಯತ್ನಿಸುತ್ತಿದೆ. ಇದನ್ನ ಬಿಜೆಪಿಗರ ಮುಖಕ್ಕೆ ರಾಚುವಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ, ಬಿಜೆಪಿ ನಾಯಕಿ ಖುಷ್ಬು ಅವರೇ ಹೇಳಿದ್ದಾರೆ. “ಉಡುಪಿ ಕಾಲೇಜಿನ ಘಟನೆಯು ಷಡ್ಯಂತ್ರವಲ್ಲ, ವಿದ್ಯಾರ್ಥಿನೀಯರ ಮೊಬೈಲ್ ಗಳಲ್ಲಿ ಯಾವುದೇ ವಿಡಿಯೋಗಳು ಪತ್ತೆಯಾಗಿಲ್ಲ, ಸಾಮಾಜಿಕ ಜಾಲತಾಣದಲ್ಲಿ ನಕಲಿ ವಿಡಿಯೋ ಹರಿಬಿಡಲಾಗಿದೆ” ಎಂದು. ಈ ಹೇಳಿಕೆಯ ಮೂಲಕ ಖುಷ್ಬು ಅವರು ಬಿಜೆಪಿಯ ಬಾತ್ ರೂಮ್ ರಾಜಕೀಯವನ್ನು ಬಯಲು ಮಾಡಿದ್ದಾರೆ.
ಬಿಜೆಪಿಗೆ ತಮ್ಮ ಪಕ್ಷಕ್ಕೆ ಸೂಕ್ತ ಅಧ್ಯಕ್ಷರನ್ನು ನೇಮಕ ಮಾಡಿಕೊಳ್ಳಲು ಆಗುತ್ತಿಲ್ಲ, ವಿರೋಧ ಪಕ್ಷದ ನಾಯಕರ ನೇಮಕದ ವಿಚಾರ ಬಂದಾಗಲೆಲ್ಲ ಜೆಡಿಎಸ್ ಕಡೆಗೆ ತಿರುಗಿ ನೋಡುತ್ತಾರೆ, ಹೋರಾಟ-ಚರ್ಚೆ ಎಂದಾಗಲೆಲ್ಲ ಶಾಲಾ ಮಕ್ಕಳ ಹುಡುಗಾಟದಲ್ಲಿ ಬಾತ್ ರೂಮ್ ರಾಜಕಾರಣ ಮಾಡುತ್ತಾರೆ. ಇದೆಲ್ಲವೂ ‘ಬಿಜೆಪಿ ರಾಜಕೀಯವಾಗಿ ಸಂಪೂರ್ಣವಾಗಿ ದಿವಾಳಿಯಾಗಿದೆ’ ಎಂಬುದನ್ನು ಸಾಬೀತು ಮಾಡುತ್ತಿವೆ ಎಂದು ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಮದುವೆಯಾದ 45 ದಿನಕ್ಕೆ ನವವಿವಾಹಿತ ಪತ್ನಿಯಿಂದ ಕಿರುಕುಳ ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ವರ್ತನೆಯೇ ಸಾವಿಗೆ ಕಾರಣ ಎಂದು…
ಬೆಂಗಳೂರು ನಗರದ ಯಡಿಯೂರು ಕೆರೆ ಸಮೀಪದ ನಿವಾಸಿಯೊಬ್ಬರು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.…
ರಾಯಚೂರು: ಆಸ್ತಿ ಮೇಲಿನ ವ್ಯಾಮೋಹಕ್ಕೆ ಹೆತ್ತ ತಾಯಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಹೃದಯವಿದ್ರಾವಕ ಘಟನೆ ರಾಯಚೂರು…
ಆಗ್ರಾ: ಆಗ್ರಾದಲ್ಲಿ ಚೀಲದಲ್ಲಿ ಯುವತಿಯ ಶಿರರಹಿತ ಶವ ಪತ್ತೆಯಾದ ಪ್ರಕರಣದಲ್ಲಿ ಯುವಕನೊಬ್ಬನನ್ನು ಬಂಧಿಸಲಾಗಿದೆ. ಆಗ್ರಾದ ಪಾರ್ವತಿ ವಿಹಾರ್ನಲ್ಲಿ ಜನವರಿ 24…
ಕೋಲಾರ: ರಾಜ್ಯ ಸರ್ಕಾರ 2023ರ ಪಿಟಿಸಿಎಲ್ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ಕಂದಾಯ ಇಲಾಖೆ, ನ್ಯಾಯಾಲಯಗಳು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನಲ್ಲಿ…
ಒಂದು ಸುಂದರ ಸಂಸಾರ ಸಾಲದ ಸುಳಿಗೆ ಸಿಲುಕುವುದು ಎಂದರೆ ಅದು ಕೇವಲ ಆರ್ಥಿಕ ಬಿಕ್ಕಟ್ಟಲ್ಲ; ಅದು ಆ ಮನೆಯ ನೆಮ್ಮದಿಯ…