Categories: ಕೋಲಾರ

ರಾಗಿ ಬೆಳೆ ನಷ್ಟ ಎಕರೆಗೆ 50 ಸಾವಿರ ಪರಿಹಾರಕ್ಕೆ ರೈತ ಸಂಘ ಒತ್ತಾಯ

ಕೋಲಾರ: ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅರಿವು ಇಲ್ಲದ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ, ಮುಂಗಾರು ಮಳೆ ಇಲ್ಲದೆ ನಷ್ಟವಾಗಿರುವ ಪ್ರತಿ ಎಕರೆ ರಾಗಿ ಬೆಳೆಗೆ 50 ಸಾವಿರ ಪರಿಹಾರ ನೀಡುವಂತೆ ಆಗ್ರಹಿಸಿ ರೈತಸಂಘದಿಂದ ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಎತ್ತಿನ ಬಂಡಿಗಳೊಂದಿಗೆ ಪ್ರತಿಭಟನೆ ನಡೆಸಲಾಯಿತು.

ರೈತಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ಮುಂಗಾರು ಮಳೆ ಇಲ್ಲದೆ ಬಿತ್ತನೆ ಆಗಿರುವ ರಾಗಿ ಬೆಳೆ ಒಣಗಿರುವ ಹಿನ್ನೆಲೆಯಲ್ಲಿ ರೈತರು ಸರಕಾರ ನೀಡುವ ಪರಿಹಾರಕ್ಕಾಗಿ ಕಾಯುತ್ತಿದ್ದರೆ, ರೈತರ ಸಮಸ್ಯೆಗೆ ಸ್ಪಂದಿಸಬೇಕಾದ ಶಾಸಕರು ಆರೋಪ ಪ್ರತ್ಯಾರೋಪದಲ್ಲಿ ತೊಡಗಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಜಿಲ್ಲೆಯಲ್ಲಿ ಲಕ್ಷಾಂತರ ರೈತ ಕುಟುಂಬಗಳ ಹಾಗೂ ಸ್ತ್ರೀ ಶಕ್ತಿ ಸಂಘಗಳಿಗೆ ಜೀವನಾಡಿಯಾಗಿದ್ದ ಡಿಸಿಸಿ ಬ್ಯಾಂಕಿನಲ್ಲಿ ನಡೆದಿರುವ ಅಕ್ರಮ ಹಾಗೂ ಅವ್ಯವಹಾರದ ಕುರಿತು ತನಿಖೆ ನಡೆಸಬೇಕು. ಗ್ರಾಮೀಣ ಭಾಗಗಳಲ್ಲಿ ಮಹಿಳೆಯರು ತಮ್ಮ ಸ್ವಾಬಲಂಬಿ ಜೀವನ ನಡೆಸಲು ಹೆಚ್ಚಿನ ಬಡ್ಡಿಗೆ ಸಾಲ ಪಡೆದು ಸಂಕಷ್ಟಕ್ಕೆ ಸಿಲುಕುತ್ತಿದ್ದರೂ ಸಮಸ್ಯೆಯನ್ನು ಯಾಕೆ ಪರಿಗಣಿಸುತ್ತಿಲ್ಲ ಗ್ರಾಮೀಣ ಪ್ರದೇಶದ ಮಹಿಳೆಯರು ಪೊರಕೆ ಹಿಡಿದು ಬೀದಿಗೆ ಬರಬೆಕೇ ಎಂದು ಪ್ರಶ್ನೆ ಮಾಡಿದರು.

ಇನ್ನು ನಾಪತ್ತೆ ಆಗಿರುವ ಉಸ್ತುವಾರಿ ಸಚಿವರನ್ನು ಹುಡುಕಿಕೊಟ್ಟವರಿಗೆ ಜಿಲ್ಲೆಗೆ ಹರಿಯುತ್ತಿರುವ ಕೆ.ಸಿ ವ್ಯಾಲಿ ನೀರನ್ನು ಹಾಗೂ ದುಬಾರಿ ಆಗಿರುವ ಟೊಮೋಟೊವನ್ನು ವಿಧಾನಸೌಧದ 224 ಶಾಸಕರಿಗೆ ಉಚಿತವಾಗಿ ನೀಡುವ ಘೋಷಣೆ ಮಾಡಿದರು.

ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆ ಎಂದರೆ ಅತ್ತೆ ಮನೆಯಲ್ಲಿ ಮೂರು ದಿನ ಸ್ವಂತ ಮನೆಯಲ್ಲಿ ಮೂರು ದಿನ ಎಂಬ ಗಾದೆಯಂತಾಗಿದೆ. ಜಿಲ್ಲೆಯ ಮೇಲೆ ಕಾಳಜಿ ಇಲ್ಲದಿದ್ದರೆ ಬೇರೆಯವರನ್ನು ನೇಮಕ ಮಾಡಿ ಇಲ್ಲವೇ ಜಿಲ್ಲೆಯನ್ನು ಪಕ್ಕದ ಆಂಧ್ರಕ್ಕೆ ಸೇರಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಮನವಿ ಮಾಡಿದರು.

ಜಿಪಂ ಸಿಇಒ, ಎಸ್ಸೆನ್ನಾರ್ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕರ ಹುದ್ದೆ ಸೇರಿದಂತೆ ಶೇ.50 ರಷ್ಟು ಹುದ್ದೆಗಳು ಖಾಲಿ ಇವೆ. ಇದರ ಕಡೆ ಗಮನ ಹರಿಸದೆ ಹಗರಣಗಳ ಬಗ್ಗೆ ಪ್ರತಿದಿನ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುವ ಮುಖಾಂತರ ಕಾಲಹರಣ ಮಾಡುತ್ತಿದ್ದು, ಜನಪ್ರತಿನಿದಿಗಳಿಗೆ ಮುಂದಿನ ದಿನಗಳಲ್ಲಿ ಜನರೇ ಉತ್ತರಿಸಲಿದ್ದಾರೆಂದು ಎಚ್ಚರಿಸಿದರು.

ವಾರದೊಳಗೆ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ ನಷ್ಟವಾಗಿರುವ ರಾಗಿ ಬೆಳೆಗೆ 50 ಸಾವಿರ ಟೊಮೇಟೊ ಬೆಳೆಗೆ 2 ಲಕ್ಷ ಪರಿಹಾರ ವಿತರಣೆ ಮಾಡಬೇಕು ಇಲ್ಲವಾದರೆ ರೈತರ ಎಲ್ಲಾ ಬೆಳೆಗಳು ಜಾನುವಾರುಗಳ ಸಮೇತ ಮುಖ್ಯಮಂತ್ರಿ ಮನೆ ಮುಂದೆ ಆಹೋರಾತ್ರಿ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಂದಾಯ ನಿರೀಕ್ಷಕ ರಾಜೇಂದ್ರ ಮನವಿ ಸ್ವೀಕರಿಸಿ, ಹಿರಿಯ ಅಧಿಕಾರಿಗಳ ಮೂಲಕ ತಮ್ಮ ಮನವಿಯನ್ನು ಸರಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಶಿವಾರೆಡ್ಡಿ, ಪಾರುಖ್‌ಪಾಷ, ರಾಜೇಶ್, ಚಂದ್ರಪ್ಪ, ಯಲ್ಲಪ್ಪ, ಆಂಜಿನಪ್ಪ, ಹರೀಶ್, ಸುಪ್ರೀಂ ಚಲ, ಶಶಿ, ಮುನಿರಾಜು, ಮಂಗಸಂದ್ರ ತಿಮ್ಮಣ್ಣ, ಶೈಲಜ, ನಾಗರತ್ನ, ಮುನಿಯಮ್ಮ, ಶೋಭ, ರಾಧ, ಚೌಡಮ್ಮ ಮುಂತಾದವರಿದ್ದರು.

Ramesh Babu

Journalist

Recent Posts

ಗರಿಗೆದರಿದ “TEAM MSS” ಚಟುವಟಿಕೆ: ಯಾರದ್ದು, ಏನಿದು ‘ಟೀಂ ಎಂಎಸ್ ಎಸ್’….? ಸಂಪೂರ್ಣ ಮಾಹಿತಿಗಾಗಿ ಈ ಸುದ್ದಿಯನ್ನು ಓದಿ….

ಒಂದು ಉಪಚುನಾವಣೆ ಒಳಗೊಂಡಂತೆ ನಾಲ್ಕು ವಿಧಾನಸಭೆ ಚುನಾವಣೆಗಳನ್ನು ಎದುರಿಸಿದ ಬಿ.ಮುನೇಗೌಡ ತಾಲೂಕಿಗೆ ನೀರು, ಕಲ್ಲು ಮುನೇಗೌಡ ಎಂದೇ ಚಿರಪರಿಚಿತರಾಗಿದ್ದಾರೆ...ಇತ್ತೀಚೆಗೆ ನಡೆದ…

2 hours ago

ಇಂದಿನಿಂದ (ಮಾ.18) ಎಸ್.ಎಸ್.ಎಲ್.ಸಿ ಪರೀಕ್ಷೆ -01 ಆರಂಭ: ಪರೀಕ್ಷೆಗೆ ಬಂದ ವಿದ್ಯಾರ್ಥಿಗಳಿಗೆ ಗುಲಾಬಿ ನೀಡಿ ಸ್ವಾಗತಿಸಿದ ಬಿಇಒ

2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು  ಮಾರ್ಚ್ 18 ಬುಧವಾರದಿಂದ ಏಪ್ರಿಲ್ 02 ಗುರುವಾರದ ವರೆಗೆ ಬೆಳಿಗ್ಗೆ 10:15 ಗಂಟೆಯಿಂದ ಮಧ್ಯಾಹ್ನ…

5 hours ago

ಯುಗಾದಿ…..

ವಿಶ್ವ ಮಹಾಯುದ್ಧದ ಕಾರ್ಮೋಡಗಳ ನಡುವೆ, ಅತ್ಯಂತ ಅಗತ್ಯದ ಗ್ಯಾಸ್ ಸಿಲಿಂಡರ್ಗಳ ಅಭಾವದ ನಡುವೆ, ಪ್ರಕ್ಷ್ಯುಬ್ಧ ಮನಸ್ಥಿತಿಯ ನಡುವೆ, ಸಂಭ್ರಮದ ಹೊಸ…

7 hours ago

ಯುವ ಆಪದ್ ಮಿತ್ರ ಯೋಜನೆ: ವಿಪತ್ತು ನಿರ್ವಹಣೆ ಕುರಿತು ಒಂದು ವಾರ ತರಬೇತಿ ಶಿಬಿರ

ಯುವ ಆಪದ್ ಮಿತ್ರ ಯೋಜನೆಯ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳು ದೊಡ್ಡಬಳ್ಳಾಪುರದ ಅನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಮತ್ತು…

18 hours ago

ಮಹಿಳೆಯರನ್ನು ಮಂಚಕ್ಕೆ ಕರೆದ ಆರೋಪ: ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅಮಾನತು

ಪೊಲೀಸ್ ಠಾಣೆಗೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರು ಕೊಡಲು ಬಂದ ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಾರೆ ಎಂಬ ಆರೋಪದ ಮೇರೆಗೆ ಮೂಡುಬಿದಿರೆ…

18 hours ago

ಮುಂಗಾರು ಪೂರ್ವ ಮಳೆ: ಮಳೆಯಲ್ಲಿ ಸಾಲುಗಟ್ಟಿ ನಿಂತ ರಾಗಿ‌ ಮಾರಾಟ ಮಾಡಲು ಬಂದ ಟ್ರ್ಯಾಕ್ಟರ್ ಗಳು

ಇಂದು ಸಂಜೆ ಸುಮಾರು 4:30ರಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಪ್ರಾರಂಭವಾದ ಮಳೆಯು ಸತತವಾಗಿ 7ಗಂಟೆಯವರೆಗೆ ಬಿದ್ದಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿತು. ಅದೇರೀತಿ…

20 hours ago