ಇಂದು ಕೇಂದ್ರ ಬಜೆಟ್ ಮಂಡನೆಯನ್ನು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮ್ ಅವರು ಮಂಡಿಸಿದ್ದಾರೆ.
ನೈಸರ್ಗಿಕ ಕೃಷಿಗೆ ಒತ್ತು… 1.52 ಲಕ್ಷ ಕೋಟಿ ಕೃಷಿಗೆ ಮೀಸಲಾತಿ,.. ಎಣ್ಣೆ ಕಾಳು ಉತ್ಪಾದನೆ ಹಾಗೂ ಶೇಖರಣೆಗೆ ಒತ್ತು. ರೈತರಿಗೆ ಉತ್ತೇಜನ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಗೆ 1.48 ಲಕ್ಷ ಕೋಟಿ, ಉತ್ಪಾದನಾ ವಲಯದಲ್ಲಿ ಪ್ರಧಾನ ಮಂತ್ರಿಗಳ ವಿಶೇಷ ಪ್ಯಾಕೇಜ್ ಯೋಜನೆ ಅಡಿಯಲ್ಲಿ 5 ವರ್ಷದಲ್ಲಿ 20 ಲಕ್ಷ ಉದ್ಯೋಗಿಗಳಿಗೆ ಕೌಶಲ್ಯ ತರಬೇತಿ.
ಅಮೃತ್ಸರ ಕಲ್ಕತ್ತಾ, ಕೈಗಾರಿಕಾ ಕಾರಿಡಾರ್, 26 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಮುಖ ಹೆದ್ದಾರಿಗಳ ಅಭಿವೃದ್ಧಿ, ಬಿಹಾರ ಹಾಗೂ ಆಂಧ್ರ ರಾಜ್ಯಕ್ಕೆ 15 ಲಕ್ಷ ಕೋಟಿ ವಿಶೇಷ ಪ್ಯಾಕೇಜ್, ಬೆಂಗಳೂರು ಹೈದರಾಬಾದ್ ಗಳಲ್ಲಿ ಕೈಗಾರಿಕಾ ಕಾರಿಡಾರ್, ಪಿಎಂ ಅವಾಜ್ ಯೋಜನೆ ಅಡಿಯಲ್ಲಿ ಮೂರು ಕೋಟಿ ಮನೆಗಳ ನಿರ್ಮಾಣ, ಗ್ರಾಮೀಣ ಅಭಿವೃದ್ಧಿಗೆ 2.66 ಲಕ್ಷ ಕೋಟಿ, ಮುದ್ರ ಲೋನ್ 20 ಲಕ್ಷ ರೂಪಾಯಿವರೆಗೆ ಏರಿಕೆ, ಈಶಾನ್ಯ ರಾಜ್ಯಗಳಲ್ಲಿ ಬ್ಯಾಂಕಿಂಗ್ ಸೇವೆ ಹೆಚ್ಚಳ.
ಕೇಂದ್ರ ಬಜೆಟ್ ಯುವಕರಿಗೆ ಜಾಕ್ಪಾಟ್
ಒಂದು ಕೋಟಿ ಯುವಕರಿಗೆ ಇಂಟರ್ನ್ ಶಿಪ್, ಮಾಸಿಕ 5000 ಶಿಷ್ಯವೇತನ, 500 ದೊಡ್ಡ ಕಂಪನಿಗಳಲ್ಲಿ ಇಂಟರ್ನ್ ಶಿಪ್.
ಶಿಕ್ಷಣ ಸಾಲದ ಬಡ್ಡಿಯಲ್ಲಿ ರಿಯಾಯಿತಿ:
ಕೇಂದ್ರ ಬಜೆಟ್ 2024-25ನಲ್ಲಿ ಪ್ರತಿ ವರ್ಷ 25,000 ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮಾದರಿ ಕೌಶಲ್ಯ ಸಾಲ ಯೋಜನೆಯನ್ನು ತಿದ್ದುಪಡಿ ಮಾಡಲು ಪ್ರಸ್ತಾಪಿಸುತ್ತದೆ. ದೇಶೀಯ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ರೂ. 10 ಲಕ್ಷದವರೆಗಿನ ಸಾಲಕ್ಕಾಗಿ ಇ-ವೋಚರ್‌ಗಳನ್ನು ಪ್ರತಿ ವರ್ಷ 1 ಲಕ್ಷ ವಿದ್ಯಾರ್ಥಿಗಳಿಗೆ ಸಾಲದ ಮೊತ್ತದ 3% ವಾರ್ಷಿಕ ಬಡ್ಡಿ ರಿಯಾಯಿತಿಗಾಗಿ ನೇರವಾಗಿ ನೀಡಲಾಗುತ್ತದೆ ಎಂದು ಹಣಕಾಸು ಸಚಿವರು ಹೇಳಿದರು.
ಕೆಲಸಕ್ಕೆ ಸೇರುವವರಿಗೆ ಗುಡ್‌ನ್ಯೂಸ್
ಮೊದಲ ಬಾರಿಗೆ ಕೆಲಸಕ್ಕೆ ಸೇರುವ ಉದ್ಯೋಗಿಗಳಿಗೆ ಒಂದು ತಿಂಗಳ ವೇತನವನ್ನು ನೀಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮೊದಲ ಬಾರಿಗೆ ಉದ್ಯೋಗಿಗಳಿಗೆ, ಒಂದು ತಿಂಗಳ ವೇತನವು 15,000 ರೂಪಾಯಿವರೆಗೆ DBT ಆಗಿರುತ್ತದೆ, ಅರ್ಹತೆಯ ಮಿತಿಯು ತಿಂಗಳಿಗೆ 1 ಲಕ್ಷ ರೂಪಾಯಿ ಆಗಿರಲಿದ್ದು, ಇದರಿಂದ 210 ಲಕ್ಷ ಯುವಕರು ಪ್ರಯೋಜನ ಪಡೆಯಲಿದ್ದಾರೆ ಎಂದು ಹಣಕಾಸು ಸಚಿವರು ಹೇಳಿದರು.
ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್‌ರ ಮಹತ್ವದ ಘೋಷಣೆ ಹೀಗಿವೆ…
ಉಚಿತ ಪಡಿತರ ವ್ಯವಸ್ಥೆಯು 5 ವರ್ಷಗಳವರೆಗೆ ಮುಂದುವರಿಯುತ್ತದೆ.
ಈ ವರ್ಷ ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 1.52 ಲಕ್ಷ ಕೋಟಿ ರೂ.
ಉದ್ಯೋಗಕ್ಕಾಗಿ 3 ಪ್ರಮುಖ ಯೋಜನೆಗಳಲ್ಲಿ ಸರ್ಕಾರವು ಕೆಲಸ ಮಾಡುತ್ತದೆ.
ಬಿಹಾರದಲ್ಲಿ 3 ಎಕ್ಸ್‌ಪ್ರೆಸ್‌ವೇಗಳ ಘೋಷಣೆ.
ಬಿಹಾರದಲ್ಲಿ ಎಕ್ಸ್‌ಪ್ರೆಸ್‌ವೇಗೆ 26 ಸಾವಿರ ಕೋಟಿ ರೂ.
ವಿದ್ಯಾರ್ಥಿಗಳಿಗೆ ಕೌಶಲ್ಯ ಮಾದರಿ ಸಾಲ 7.5 ಲಕ್ಷ ರೂ.
ಮೊದಲ ಬಾರಿಗೆ ಉದ್ಯೋಗಿಗಳಿಗೆ ಹೆಚ್ಚುವರಿ ಪಿಎಫ್
ಉದ್ಯೋಗಗಳಲ್ಲಿ ಮಹಿಳೆಯರಿಗೆ ಆದ್ಯತೆ
ಬೋಧಗಯಾ-ವೈಶಾಲಿ ಎಕ್ಸ್‌ಪ್ರೆಸ್‌ವೇ ನಿರ್ಮಿಸಲಾಗುವುದು.
ಪಾಟ್ನಾ-ಪೂರ್ಣಿಯಾ ಎಕ್ಸ್‌ಪ್ರೆಸ್‌ವೇ ನಿರ್ಮಾಣ.
ಬಕ್ಸಾರ್‌ನಲ್ಲಿ ಗಂಗಾ ನದಿಯ ಮೇಲೆ ದ್ವಿಪಥ ಸೇತುವೆ.
ದೇಶದ ಒಂದು ಕೋಟಿ ಮನೆಗಳಿಗೆ ಸೌರಶಕ್ತಿ ವಿದ್ಯುತ್ ವಿತರಣೆ, ನಾಲ್ಕನೇ ಹಂತದ ಗ್ರಾಮೀಣ ಅಭಿವೃದ್ಧಿ ರಸ್ತೆ ಯೋಜನೆ, ದೀರ್ಘಾವಧಿ ಸಾಲಕ್ಕೆ 1.5 ಕೋಟಿ ಮೀಸಲು, ಬಿಹಾರ ಪ್ರವಾಹ ನಿಯಂತ್ರಣಕ್ಕೆ 11. 500 ಕೋಟಿ ಮೀಸಲು, ಸ್ವೀಟ್ ಫುಡ್ ಗಳ ಅಭಿವೃದ್ಧಿಗೆ ಆದ್ಯತೆ, ಸಣ್ಣ ಕೈಗಾರಿಕೆಗಳಿಗೆ 1.5 ಲಕ್ಷ ಬಡ್ಡಿ ರಹಿತ ಸಾಲ. ರಾಜ್ಯಗಳಿಗೆ 50 ವರ್ಷ ಬಡ್ಡಿ ರಹಿತ ಸಾಲ, ಟೆಂಪಲ್ ಕಾರಿಡಾರ್ ಯೋಜನೆ ಅನುಷ್ಠಾನ, ಗ್ರಾಮೀಣ ಪ್ರದೇಶದಲ್ಲಿ ಭೂ ಸುಧಾರಣೆಗೆ ಸಹಾಯಧನ, ಡಿಜಿಟಲ್ ಭೂ ಆಧಾರ್ ಯೋಜನೆ ಘೋಷಣೆ, ಮಹಿಳೆಯರಿಗೆ ಆಸ್ತಿ ಖರೀದಿಗೆ ವಿಶೇಷ ಯೋಜನೆ, ಬಿಹಾರದ ಐತಿಹಾಸಿಕ ದೇವಾಲಯಗಳಿಗೆ ಆರ್ಥಿಕ ನೆರವು, ಸಾಲ ವಸು ಲಾತಿಗೆ ನ್ಯಾಯ ಮಂಡಳಿಗಳ ಹೆಚ್ಚುವರಿ ಟ್ರಿಬ್ಯುನಲ್ ಸ್ಥಾಪನೆ.
ಮೊಬೈಲ್ ಫೋನ್ ಹಾಗೂ ಮೊಬೈಲ್ ಚಾರ್ಜರ್ ಇನ್ನು ಅಗ್ಗ
ಮೊಬೈಲ್ ಫೋನ್ ಗಳ ದರ ಶೇಕಡ 15ರಷ್ಟು ಇಳಿಕೆ. ಅತ್ಯವಶ್ಯಕ ಖನಿಜ ಮೇಲೆ ಕಸ್ಟಮ್ಸ್ ಡ್ಯೂಟಿ ಇಳಿಕೆ, ಚರ್ಮ ಉತ್ಪನ್ನಗಳ ದರ ಇಳಿಕೆ, ಚಿನ್ನ ಬೆಳ್ಳಿ ಪ್ಲಾಟಿನಂ ದರ ಇಳಿಕೆ.
ಪ್ಲಾಸ್ಟಿಕ್ ನಿಯಂತ್ರಣಕ್ಕೆ ಕ್ರಮ. ಪ್ಲಾಸ್ಟಿಕ್ ಉತ್ಪನ್ನಗಳ ದಾರಿ ಏರಿಕೆ, ಮೂರು ಕ್ಯಾನ್ಸರ್ ಔಷಧಿಗಳಿಗೆ ಸೀಮಾ ಸುಂಕ ಇಳಿಕೆ, ಸೋಲಾರ್ ಪ್ಯಾನೆಲ್ ಗಳ ದರ ಇಳಿಕೆ, ತೆರಿಗೆ ಪದ್ಧತಿ ಮತ್ತಷ್ಟು ಸರಳಿಕರಣ, ಚಿನ್ನ ಬೆಳ್ಳಿ ಪ್ಲಾಟಿನಮ್ ಮೇಲೆ ಶೇಕಡ 6.4 ರಷ್ಟು ಕಸ್ಟಮ್ಸ್ ಡ್ಯೂಟಿ ಇಳಿಕೆ.
ಇ.ಕಾಮರ್ಸ್ ಮೇಲಿನ ಟಿ ಡಿ ಎಸ್ ಇಳಿಕೆ, ಟಿಡಿಎಸ್, ಐ ಟಿ ಸಲ್ಲಿಸಲು ತಡವಾದರೆ ದಂಡ ಇಲ್ಲ, ಟಿಡಿಎಸ್ ಮತ್ತಷ್ಟು ಸರಳಿಕರಣ, ಚಾರಿಟಿ ತೆರಿಗೆ ಸಬಲೀಕರಣ, ಆನ್ಲೈನ್ ವ್ಯವಹಾರಗಳ ಮೇಲಿನ ಟಿಡಿಎಸ್ ಇಳಿಕೆ, ಸ್ಮಾರ್ಟ್ ಆಪ್ ಗಳಿಗೆ ಮತ್ತಷ್ಟು ಉತ್ತೇಜನ, ಆಮದು ಬಟ್ಟೆ ದರ ಏರಿಕೆ, ಆದಾಯ ತೆರಿಗೆ ಕಾಯ್ದೆಯಲ್ಲಿ ಬದಲಾವಣೆ, ಹೂಡಿಕೆದಾರರಿಗೆ ಏಂಜಲ್ ಟ್ಯಾಕ್ಸ್ ರದ್ದು, ಬಾಂಡ್ ಹಾಗೂ ಮ್ಯೂಚುಯಲ್ ಫಂಡ್ ಗಳ ಲಾಭದ ಮೇಲೆ ತೆರಿಗೆ.
ಆದಾಯ ತೆರಿಗೆ ವಾರ್ಷಿಕ ಮೂರು ಲಕ್ಷದವರೆಗೆ ಯಾವುದೇ ತೆರಿಗೆ ಇಲ್ಲ, ಮೂರರಿಂದ 7 ಲಕ್ಷದವರೆಗೆ ಶೇಕಡ 5. ಏಳರಿಂದ ಹತ್ತು ಲಕ್ಷದವರೆಗೆ ಶೇಕಡ 15ರಷ್ಟು ತೆರಿಗೆ. ಹತ್ತು ಲಕ್ಷ ಮೇಲ್ಪಟ್ಟವರು ಶೇಕಡ 30ರಷ್ಟು ಆದಾಯ ತೆರಿಗೆ ಕಟ್ಟಬೇಕು.
ರಾಜಧಾನಿಯನ್ನು ನಿರ್ಮಿಸಲು ಆಂಧ್ರಪ್ರದೇಶಕ್ಕೆ ₹15,000 ಕೋಟಿಯ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ.
ಮೂಲಸೌಕರ್ಯ ಯೋಜನೆಗಳಿಗಾಗಿ ಬಿಹಾರಕ್ಕೆ ₹26,000 ಕೋಟಿ ಮಂಜೂರು.
ಬಿಹಾರದ ಗಯಾದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಕೇಂದ್ರ ಬೆಂಬಲ ನೀಡಲಿದೆ.
ಆಂಧ್ರಪ್ರದೇಶದ ಮೂರು ಹಿಂದುಳಿದ ಭಾಗಗಳಿಗೆ ಹಿಂದುಳಿದ ಪ್ರದೇಶದ ಅನುದಾನವನ್ನು ಒದಗಿಸುವುದು. ಬಿಹಾರದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳು, ಸ್ಪೋರ್ಟ್ ಇನ್ಫ್ರಾ, ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು.
ಯೂನಿಯನ್ ಬಜೆಟ್ 2024-25 ಉದ್ಯೋಗ-ಸಂಯೋಜಿತ ಪ್ರೋತ್ಸಾಹಕ್ಕಾಗಿ 3 ಯೋಜನೆಗಳನ್ನು ಪ್ರಸ್ತಾಪಿಸುತ್ತದೆ:
ಯೋಜನೆ A: ಮೊದಲ ಟೈಮರ್‌ಗಳು
– ಒಂದು ತಿಂಗಳ ಸಂಬಳದ ನೇರ ಲಾಭ ವರ್ಗಾವಣೆ (ಡಿಬಿಟಿ) 15,000 ರೂ.ವರೆಗೆ ಮೂರು ಕಂತುಗಳಲ್ಲಿ ಒದಗಿಸಲಾಗುವುದು.
ಸ್ಕೀಮ್ ಬಿ: ಉತ್ಪಾದನೆಯಲ್ಲಿ ಉದ್ಯೋಗ ಸೃಷ್ಟಿ
– ಉದ್ಯೋಗದ ಮೊದಲ 4 ವರ್ಷಗಳಲ್ಲಿ EPFO ಕೊಡುಗೆಯ ಪ್ರಕಾರ ಉದ್ಯೋಗಿ ಮತ್ತು ಉದ್ಯೋಗದಾತರಿಗೆ ನೇರ ಪ್ರೋತ್ಸಾಹ.
ಸ್ಕೀಮ್ ಸಿ: ಉದ್ಯೋಗದಾತರಿಗೆ ಬೆಂಬಲ
– ಪ್ರತಿ ಹೆಚ್ಚುವರಿ ಉದ್ಯೋಗಿಗೆ EPFO ಕೊಡುಗೆಗಳಿಗೆ 2 ವರ್ಷಗಳವರೆಗೆ ತಿಂಗಳಿಗೆ ರೂ 3,000 ವರೆಗೆ ಮರುಪಾವತಿ.
ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿ ಗ್ರಾಮದ ಮೂಲಕ ಹಾದುಹೋಗುವ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಸ್ಥನ ರಸ್ತೆಗೆ ಅಡ್ಡಲಾಗಿ ರೈಲು ಹಳಿ ಹಾದುಹೋಗಿದ್ದು,…
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಉತ್ತೇಜಿಸುವ ಹಾಗು ಸಾರ್ವಜನಿಕ ದಾಖಲೆಗಳನ್ನು ಮುಕ್ತವಾಗಿ ಜನರ ಮುಂದೆ ಇಡುವುದು ಮಾಹಿತಿ…
ಧರ್ಮಸ್ಥಳ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿ, ಧರ್ಮಸ್ಥಳ ವಿಶ್ವದಲ್ಲೇ ಪವಿತ್ರವಾದ ಸ್ಥಳ. ಅವಷೇಶ ಮತ್ತೊಂದು…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ…
ಮೈಸೂರಿನ ಕೆಆರ್ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು…
ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ನಡೆದ ಕರ್ನಾಟಕ ಸೂಫಿಗಳ ಸಾಹಿತ್ಯ ಸಂಸ್ಕೃತಿ ಅನುಸಂಧಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ…