ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಲು ಮುಂದಾದ “ದೇವರ ಆಟ ಬಲ್ಲವರಾರು ಚಿತ್ರ ತಂಡ”ಕ್ಕೆ ಮೊದಲ ಹಂತ ಗಿನ್ನಿಸ್ ಯಶಸ್ಸು ಲಭಿಸಿದೆ. ಇದರ ಪೂರ್ತಿ ಚಿತ್ರೀಕರಣ ಮಡಿಕೇರಿಯಲ್ಲಿ ನಡೆಯುವುದರಿಂದ ಕಂಪ್ಲೀಟ್ ಸೆಟ್ ಇಲ್ಲಿಯೇ ಮಾಡಲಾಗಿದೆ.
36 ಗಂಟೆಯ ಟೈಮ್ ಲೈನ್ ಇಟ್ಟುಕೊಂಡು ಸೆಟ್ ವರ್ಕ್ ಆರಂಭಿಸಿದ ಚಿತ್ರ ತಂಡ ಕೇವಲ 22 ಗಂಟೆ 34 ನಿಮಿಷ 58 ಸೆಕೆಂಡ್‌ನ ನಿಗದಿತ ಸಮಯಕ್ಕಿಂತ ಮೊದಲೆ ಮುಗಿಸಿ ಗಿನ್ನಿಸ್ ಮೊದಲ ಹಂತ ಕಂಪ್ಲಿಟ್ ಮಾಡಿ ಗೆಲುವಿನ ನಗೆಬೀರಿದೆ.
ಚೆನ್ನೈನ ಆರ್ಟ್ ಡೈರೆಕ್ಟರ್ ರಾಷ್ಟ್ರ ಪ್ರಶಸ್ತಿ ವಿಜೇತ ತೆಲುಗಿನ “ಪರದೇಶಿ” ಸಿನಿಮಾ ಖ್ಯಾತಿಯ ಬಾಲಚಂದ್ರನ್ ರವರು ಈ ಸೆಟ್ ನಿರ್ಮಾಣ ಮಾಡಿದ್ದು, ನಿಗದಿತ ಸಮಯಕ್ಕೆ ಮೊದಲೇ ನಿರ್ಮಿಸಿ ದಾಖಲೆ ಸೃಷ್ಟಿಸಿದ್ದಾರೆ.
“ಪಿರಂಗಿಪುರ” ಸಿನಿಮಾ ಖ್ಯಾತಿಯ ನಿರ್ದೇಶಕ ಜನಾರ್ದನ್.ಪಿ ಜಾನಿ ಈ ಸಿನಿಮ ನಿರ್ದೇಶನ ಮಾಡಿತ್ತಿದ್ದು, ಮೊದಲ ಹಂತ ಸೆಟ್ ವರ್ಕ್ ಕಂಪ್ಲಿಟ್ ಮಾಡಿದ್ದಾರೆ. ನಿನ್ನೆ ಬೆಳಗ್ಗೆ 10ಗಂಟೆಗೆ ಗಿನ್ನಿಸ್ ಪ್ರಕ್ರಿಯೆಗೆ ಸಹಿಹಾಕಿದ್ದರು. 36 ಗಂಟೆಯ ಟೈಮ್ ಲೈನ್ ಇಟ್ಟುಕೊಂಡು ಆರಂಭಿಸಿದ ಚಿತ್ರತಂಡ ಕೇವಲ 22 ಗಂಟೆಯಲ್ಲಿ ಕಂಪ್ಲಿಟ್ ಮಾಡಿ ಮೊದಲ ಹಂತದ ಗಿನ್ನಿಸ್ ದಾಖಲಿಸಿದೆ.
ಸೆಟ್ ವರ್ಕ್ ನಲ್ಲಿ 170 ಜನಗಳನ್ನೊಳಗೊಂಡ ತಂಡ ಹಗಲು-ರಾತ್ರಿ ಶ್ರಮಿಸಿ ವೇಗವಾಗಿ ಕಂಪ್ಲಿಟ್ ಮಾಡಿ ದಾಖಲೆ ಸೃಷ್ಟಿಸಿದೆ. 150 ಎಕರೆ ಜಾಗದಲ್ಲಿ 150×80 ಅಡಿ ಉದ್ದ ಮತ್ತು ಅಗಲ 19 ಅಡಿ ಎತ್ತರ ವಿಸ್ತೀರ್ಣದ ಬಹುದೊಡ್ಡ ಸೆಟ್ ನಿರ್ಮಾಣ ಮಾಡಲಾಗಿದೆ.
ಬಿಗ್ ಬಾಸ್ ಖ್ಯಾತಿಯ ಅರ್ಜುನ್ ರಮೇಶ್ ನಾಯಕ ನಟನಾಗಿ ಮತ್ತು ಸಿಂಧು ಲೋಕನಾಥ್ ನಾಯಕಿಯಾಗಿ ನಟಿಸುತ್ತಿರುವ ಈ ಸಿನಿಮಾ ವರ್ಷ ವಿಶ್ವನಾಥ್, ಸಂಪತ್ ರಾಮ್ ಅರ್ಜುನ್, ಮೇದಿನಿ ಕೆಳಮನೆ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಪ್ರಿಸ್ವಸ್ ಸ್ಟುಡಿಯೋಸ್ ಬ್ಯಾನರ್ ನಡಿ ಮೂಡಿ ಬರ್ತಾ ಇರೋ ಈ ಸಿನಿಮಾ ವಿಶ್ವದಾದ್ಯಂತ ತೆರೆ ಕಾಣಲು ಪ್ಲಾನ್ ಮಾಡಿಕೊಂಡಿದೆ. ಈ ಸಿನಿಮಾಕ್ಕಾಗಿ ಕಳೆದು ಒಂದು ವರ್ಷದಿಂದ ತಯಾರಿ ನಡೆಸಿ ನಾಯಕ ನಟ ಅರ್ಜುನ್ ರಮೇಶ್ ಪಾತ್ರಕ್ಕಾಗಿ 14 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಮೂರು ವರ್ಷಗಳ ಬಳಿಕ ಕನ್ನಡ ಚಿತ್ರರಂಗ ಕಂಬ್ಯಾಕ್ ಮಾಡಿದ ಸಿಂಧು ಲೋಕನಾಥ್ ಆರು ತಿಂಗಳಿನಿಂದ ಚಿತ್ರಕ್ಕಾಗಿ ತಾಲೀಮು ನಡೆಸಿದ್ದಾರೆ.
ಮದುವೆಯಾದ 45 ದಿನಕ್ಕೆ ನವವಿವಾಹಿತ ಪತ್ನಿಯಿಂದ ಕಿರುಕುಳ ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ವರ್ತನೆಯೇ ಸಾವಿಗೆ ಕಾರಣ ಎಂದು…
ಬೆಂಗಳೂರು ನಗರದ ಯಡಿಯೂರು ಕೆರೆ ಸಮೀಪದ ನಿವಾಸಿಯೊಬ್ಬರು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.…
ರಾಯಚೂರು: ಆಸ್ತಿ ಮೇಲಿನ ವ್ಯಾಮೋಹಕ್ಕೆ ಹೆತ್ತ ತಾಯಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಹೃದಯವಿದ್ರಾವಕ ಘಟನೆ ರಾಯಚೂರು…
ಆಗ್ರಾ: ಆಗ್ರಾದಲ್ಲಿ ಚೀಲದಲ್ಲಿ ಯುವತಿಯ ಶಿರರಹಿತ ಶವ ಪತ್ತೆಯಾದ ಪ್ರಕರಣದಲ್ಲಿ ಯುವಕನೊಬ್ಬನನ್ನು ಬಂಧಿಸಲಾಗಿದೆ. ಆಗ್ರಾದ ಪಾರ್ವತಿ ವಿಹಾರ್ನಲ್ಲಿ ಜನವರಿ 24…
ಕೋಲಾರ: ರಾಜ್ಯ ಸರ್ಕಾರ 2023ರ ಪಿಟಿಸಿಎಲ್ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ಕಂದಾಯ ಇಲಾಖೆ, ನ್ಯಾಯಾಲಯಗಳು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನಲ್ಲಿ…
ಒಂದು ಸುಂದರ ಸಂಸಾರ ಸಾಲದ ಸುಳಿಗೆ ಸಿಲುಕುವುದು ಎಂದರೆ ಅದು ಕೇವಲ ಆರ್ಥಿಕ ಬಿಕ್ಕಟ್ಟಲ್ಲ; ಅದು ಆ ಮನೆಯ ನೆಮ್ಮದಿಯ…