ಬೆಂಗಳೂರು,ವೈಟ್ ಫೀಲ್ಡ್ : ಮೆಡಿಕವರ್ ಆಸ್ಪತ್ರೆ, ಬೆಂಗಳೂರು ವತಿಯಿಂದ ವೈದ್ಯರು ಮತ್ತು ನರ್ಸ್ ಗಳಿಗಾಗಿ ನವಜಾತ ಶಿಶು ಪುನಶ್ಚೇತನ ಕಾರ್ಯಕ್ರಮವನ್ನು (Basic NRP) ಯಶಸ್ವಿಯಾಗಿ ಆಯೋಜಿಸಲಾಯಿತು. ಈ ತರಬೇತಿ ಕಾರ್ಯಕ್ರಮವು ವೈದ್ಯಕೀಯ ವೃತ್ತಿಪರರಲ್ಲಿ ಜೀವ ರಕ್ಷಣಾ ಕೌಶಲ್ಯಗಳನ್ನು ವೃದ್ಧಿಸಲು, ಹಾಗೂ ನವಜಾತ ಶಿಶುಗಳ ಉತ್ತಮ ಆರೈಕೆಗಾಗಿ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸಲು ರೂಪಗೊಳಿಸಲಾಗಿದೆ.
ಈ ಕಾರ್ಯಕ್ರಮವನ್ನು ಮಕ್ಕಳ ವೈದ್ಯರಾದ ಡಾ. ಸಂಜೀವ ರೆಡ್ಡಿ, ಡಾ. ಲೀನಾತ ರೆಡ್ಡಿ, ಡಾ. ಅನುರಾಗ್ ಮಹಾಗಾಂಕಾರ ಹಾಗೂ ಮೆಡಿಕವರ್ ಆಸ್ಪತ್ರೆಯ AGM ಮೊಹಿತ್ ಅವರು ಉದ್ಘಾಟಿಸಿದರು.
ಬೇಸಿಕ್ ಎನ್‌ಆರ್‌ಪಿ ತರಬೇತಿ, ಜನನ ಕ್ಷಣದಲ್ಲೇ ಉದ್ಭವಿಸಬಹುದಾದ ತುರ್ತು ಪರಿಸ್ಥಿತಿಗಳಿಗೆ ತ್ವರಿತ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆ ನೀಡಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ವೈದ್ಯರು ಹಾಗೂ ನರ್ಸುಗಳಿಗೆ ಒದಗಿಸುತ್ತದೆ. ಹೊಸಜಾತ ಶಿಶುಗಳ ಜೀವ ಉಳಿಸುವ ಉನ್ನತ ತಂತ್ರಗಳನ್ನು ಕಲಿಸುವ ಮೂಲಕ, ಮೆಡಿಕವರ್ ಆಸ್ಪತ್ರೆ ನವಜಾತ ಶಿಶುಗಳ ಉತ್ತಮ ಫಲಿತಾಂಶ ಮತ್ತು ಸುರಕ್ಷಿತ ಆರೈಕೆಗೆ ತನ್ನ ಬದ್ಧತೆಯನ್ನು ಮುಂದುವರೆಸುತ್ತಿದೆ.
ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿಯೂ ಹಣದ ಹೊಳೆ ಹರಿಯುತ್ತಿದೆ. ಇದು ಹೊಸದೇನು…
ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ದಿನವೇ ಡಾ. ಸುಧಾ ಯಾದವ್ ಅವರು ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್…
ದೊಡ್ಡಬಳ್ಳಾಪುರ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ತಾಲ್ಲೂಕು ಮಟ್ಟದ ಯುವ ಸಂಸತ್ತು ಅಣಕು ಸ್ಪರ್ಧೆಯಲ್ಲಿ ಶ್ರೀ ಕೊಂಗಾಡಿಯಪ್ಪ ಕಾನೂನು…
ದೊಡ್ಡಬಳ್ಳಾಪುರ: ತಾಲೂಕಿನ ನಾಗದೇನಹಳ್ಳಿ ಸಮೀಪದ ಗೀತಂ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ತಡರಾತ್ರಿ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮುಂಗಾರು ಮಳೆಯ ಏರುಪೇರಿನಿಂದ ಮಳೆಯಾಶ್ರಿತ ಕೃಷಿ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯ ಪ್ರಮುಖ ಆಹಾರ ಬೆಳೆಯಾದ ರಾಗಿಯನ್ನು…
ಪೆನ್ ಡ್ರೈವ್....... ನಾಚಿಕೆಯಿಂದ ತಲೆತಗ್ಗಿಸಿ ನಾನೂ ಈ ವಿಷಯವನ್ನೇ ಕುರಿತು ಬರೆಯುವ ಅನಿವಾರ್ಯ ಸೃಷ್ಟಿಯಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತಾ...... ಬರಗಾಲ -…