ದೊಡ್ಡಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ನಾಗದೇನಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಸುಮಾರು 50 ವರ್ಷದ ನಿರಾಶ್ರಿತ ಮಾನಸಿಕ ಖಿನ್ನತೆಗೆ ಒಳಗಾಗಿ ಚಳಿ, ಗಾಳಿಗೆ ನಲುಗಿ ನೀರು, ಊಟ, ವಸತಿ ಹಾಗೂ ಸ್ನಾನ ಇಲ್ಲದೆ ಸುಮಾರು 4-5 ತಿಂಗಳಿಂದ ಚಿಕತ್ಸೆ ಸಿಗದೆ ಅನಾರೋಗ್ಯದಿಂದ ಬಳಲಿದ ವ್ಯಕ್ತಿಯನ್ನು ರಕ್ಷಿಸಿ, ಪವಿತ್ರ ರೂರಲ್ ಡೆವಲಪ್ಮೆಂಟ್ ಸಂಸ್ಥೆ ವೃದ್ಧಾಶ್ರಮಕೆ ದಾಖಲಿಸಿದ ಜಗದೀಶ ಎನ್ ಎಂ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ. ಚಿಕ್ಕಬಳ್ಳಾಪುರ ಹಾಗೂ ಪ್ರಭಾರ ಅಧಿಕಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ.
ವ್ಯಕ್ತಿಗೆ ಪುನರ್ವಸತಿ ಕಲ್ಪಿಸಲು ವ್ಯತಿಯೊಂದಿಗೆ ಸುಮಾರು 20 ದಿನಗಳ 8-10 ಗಂಟೆಗಳ ಸಂಭಾಷಣೆ ಹಾಗೂ ಆಪ್ತ ಸಮಾಲೋಚನೆ ನಡೆಸಿ ಮನವೊಲಿಸಲು ಯತ್ನಿಸಿ ಯಶಸ್ಸು ಕಾಣಲಾಯಿತು.
ಸುಮಾರು ನಾಲ್ಕೈದು ತಿಂಗಳಿನಿಂದ ಬೆಂಗಳೂರಿನ ತನ್ನ ಕುಟುಂಬದಿಂದ ದೂರವಾಗಿ ಒಂಟಿಯಾಗಿದ್ದ ಮಾನಸಿಕ ಖಿನ್ನತೆಯ ವ್ಯಕ್ತಿ, ಯಾರಾದರೂ ನೀರು, ಊಟ, ಬ್ರೆಡ್, ಬಿಸ್ಕತ್ ಹಾಗೂ ನೀರಿನ ಬಾಟಲ್ ನ್ನು ಅಕ್ಕ ಪಕ್ಕದ ಮನೆಯವರು, ಗ್ರಾಮಸ್ಥರು ಹಾಗು ರಾಷ್ಟ್ರೀಯ ಹೆದ್ದಾರಿ ದಾರಿ ಹೋಕರು ನೀಡುತ್ತಿದ್ದರು. ಅದೇ ಆತನಗೆ ಆಹಾರದ ಮೂಲವಾಗಿತ್ತು. ನಿರಾಶ್ರಿತ ವ್ಯಕ್ತಿಗೆ ಆಸರೆಯ ಕೈಗಳ ಅವಶ್ಯಕತೆಯೂ ಇತ್ತು.
ಪೋಷಕರು ಅನಾರೋಗ್ಯಕ್ಕೆ ಒಳಗಾದಾಗ ಅವರನ್ನು ಹೊರಹಾಕುವ ಸಂಸ್ಕೃತಿ ಬಾರದ ರೀತಿ. ಎಲ್ಲಾ ಮಕ್ಕಳಿಗೆ ಮೌಲ್ಯ ಶಿಕ್ಷಣ ಕಡ್ಡಾಯವಾಗಿ ತಿಳಿಸಬೇಕು.
ಈ ರೀತಿಯ ಸಂದರ್ಭಗಳು ಕಂಡುಬಂದರೆ ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡಬಹುದಾಗಿದೆ.
ರಕ್ಷಣಾ ಕಾರ್ಯಾದಲ್ಲಿ ಸಹಕಾರಿಯಾದ ಹಾಗು ವ್ಯಕ್ತಿಗೆ ತಾತ್ಕಾಲಿಕ ಪುನರ್ವಸತಿ ದೊರಕಿಸಿದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅನುಮತಿ ಪಡೆದ ಸಂಸ್ಥೆ ಪವಿತ್ರ ರೂರಲ್ ಡೆವಲಪ್ಮೆಂಟ್ ಸಂಸ್ಥೆ, (ವೃದ್ಧಾಶ್ರಮ)ದೊಡ್ಡಬಳ್ಳಾಪುರ ಮುಖ್ಯಸ್ಥರಾದ ಎಂ ಸಿದ್ದಗಂಗಯ್ಯ ರವರಿಗೆ ಧನ್ಯವಾದಗಳು.ಈ ರೀತಿಯ ನಿಸ್ವಾರ್ಥ ಸೇವೆಯ ಸಂಸ್ಥೆಗೆ ಇನ್ನಷ್ಟು ಸೇವೆಯ ಅವಕಾಶ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಜಗದೀಶ ಎನ್ ಎಂ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ. ಚಿಕ್ಕಬಳ್ಳಾಪುರ ಹಾಗೂ ಪ್ರಭಾರ ಅಧಿಕಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರು ತಿಳಿಸಿದರು.
ಬೆಳಗಾವಿಯಲ್ಲಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಒಂದೇ ದಿನ ಪತಿ-ಪತ್ನಿ ದಾರುಣ ಸಾವನ್ನಪ್ಪಿದ್ದಾರೆ. ಅರವಳ್ಳಿ…
ಕಲಬುರಗಿ ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯ ಮೇಲೆ ನಡೆದ ಕ್ರೂರ ಹತ್ಯೆ ಪ್ರಕರಣ ಎಲ್ಲರಲ್ಲೂ ಆತಂಕ ಮೂಡಿಸಿದೆ. ಕಮಲಾಪುರ ತಾಲೂಕಿನ…
ಸುಮಾರು ಆರು ವರ್ಷಗಳ ಹಿಂದೆ ಅಂದರೆ 2020ರಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದ ಅಮಾನುಷ ಲಾಕಪ್ ಡೆತ್ ಬಗ್ಗೆ ಬರೆದ…
2020ರಲ್ಲಿ ತಮಿಳುನಾಡಿನಲ್ಲಿ ನಡೆದ ಸಾತಂಕುಲಂ ಕಸ್ಟಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮದ್ರಾಸ್ ಹೈಕೋರ್ಟ್ ಪೀಠವು 9 ಪೊಲೀಸ್ ಸಿಬ್ಬಂದಿಗೆ…
ರಾಜ್ಯದಲ್ಲಿ ಇಂಧನ ತೈಲ ಮತ್ತು ಅನಿಲ ಪೂರೈಕೆಯ ಸಮಸ್ಯೆ ಗಂಭೀರ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ, ಆಹಾರ, ನಾಗರಿಕ ಸರಬರಾಜು ಮತ್ತು…
ಆಟೋ ಎಲ್‌ಪಿಜಿಗಾಗಿ ಡಿಕ್ರಾಸ್ ರಸ್ತೆಯ ಸೂಪರ್ ಗ್ಯಾಸ್ ಬಂಕ್ ಬಳಿ ನೂರಾರು ಆಟೋಗಳು ಸಾಲುಗಟ್ಟಿ ನಿಂತಿವೆ. ಆಟೋ ಎಲ್ಪಿಜಿ ಇಲ್ಲದೆ…