ಮಹಿಷ ಚಾರಿತ್ರಿಕ ಹಾಗೂ ಪೌರಾಣಿಕ ಪುರುಷನೆ ಹೊರತು ಕಾಲ್ಪನಿಕ ವ್ಯಕ್ತಿಯಲ್ಲ-ಚಿಂತಕ ಪ್ರೊ.ವಿಠಲ್ ವಗ್ಗನ್

ದೊಡ್ಡಬಳ್ಳಾಪುರ: ನಮ್ಮ ಅಸ್ತಿತ ಮತ್ತು ಅಸ್ಮಿತೆಯ ಸಂಕೇತ ಮಹಿಷ ಎಂದು ಪ್ರಗತಿಪರ ಚಿಂತಕ ಪ್ರೊ.ವಿಠಲ್ ವಗ್ಗನ್ ಹೇಳಿದರು.

ಮಹಿಷ ಉತ್ಸವ ಆಚರಣ ಸಮಿತಿ ನಗರದ ಕನ್ನಡ ಜಾಗೃತ ಭವನದಲ್ಲಿ ಏರ್ಪಡಿಸಿದ್ದ ಮಹಿಷ ಉತ್ಸವವನ್ನು ಅರಳಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಷ ಚಾರಿತ್ರಿಕ ಹಾಗೂ ಪೌರಾಣಿಕ ಪುರುಷನೆ ಹೊರತು ಕಾಲ್ಪನಿಕ ವ್ಯಕ್ತಿಯಲ್ಲ ಎಂದ ಅವರು ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆ ಹೊರ ತಂದಿರುವ ಸಂಶೋಧನಾ ದಾಖಲೆಗಳನ್ನು ಪ್ರದರ್ಶನ ಮಾಡಿದರು.

ಮಹಿಷ ಚಾರಿತ್ರಿಕ ವ್ಯಕ್ತಿ ಎಂಬುದಕ್ಕೆ 2500 ವರ್ಷಗಳ ಇತಿಹಾಸವಿದೆ, ಭಾರತ ಬಹುಸಂಸ್ಕೃತಿಗಳ ದೇಶ. ಭಾರತವನ್ನು ಜ್ಯಾತ್ಯಾತೀತ, ಇಲ್ಲಿನ ಪ್ರತಿ ಉದಾಯವು ಅವರ ಅವರದೆ ಆದ ಸಂಸ್ಕೃತಿಗಳ ಆಚರಣೆಗೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಮೈಸೂರು ಚಾಮುಂಡಿ ಕಾಲ್ಪನಿಕ ದೇವಿಯಾಗಿದ್ದು 18 ಪುರಾಣಗಳಲ್ಲಿ ಎಲ್ಲಿಯೂ ಚಾಮುಂಡಿ ಮಹಿಷನ ಕೊಂದ ಬಗ್ಗೆ ಉಲ್ಲೇಖವಿಲ್ಲ ಎಂದ ಅವರು, ಎಲ್ಲ ಪುರಾಣಗಳ ಪ್ರಕಾರ ಚಾಮುಂಡಿ ದೇವಿಗೆ ಸಿಂಹ ವಾಹನವಾಗಿದೆ. ಆದರೆ ಈಗಿನ ಮೈಸೂರು ಚಾಮುಂಡಿಯ ವಾಹನ ಹುಲಿಯಾಗಿದೆ. ಮಹಿಷನನ್ನು ಕೊಂದದ್ದು ಮೈಸೂರಿನಲ್ಲಿ ಅಲ್ಲ. ಕೊಲ್ಕತ್ತಾದಲ್ಲಿ ಅದು ದುರ್ಗೆ ಎಂಬ ಹೆಸರಿನ ಹೆಣ್ಣು ಮಗಳು. ಹಾಗಾಗಿ ಚಾಮುಂಡಿ ಮಹಿಷ ಎಂಬ ವ್ಯಕ್ತಿಯನ್ನು ಕೊಂದಿರುವುದಕ್ಕೆ ಯಾವುದೇ ಪುರಾಣ, ಚಾರಿತ್ರಿಕ ಇತಿಹಾಸದಲ್ಲಿ ಉಲ್ಲೇಖ ಆಗಿಲ್ಲ ಎಂದರು.

ದ್ರಾವಿಡ ರಾಜರನ್ನು ರಾಕ್ಷಸರು, ದುಷ್ಟರು, ಜೀವ ವಿರೋಧಿಗಳು ಎಂದು ಕೆಟ್ಟದಾಗಿ ಪುರಾಣ ಬರೆದಿದ್ದಾರೆ. ಎಂದ ಅವರು ಯಾವುದೇ ಊರು ಅಥವಾ ಸಂಸ್ಥೆಗೆ ಒಬ್ಬ ವ್ಯಕ್ತಿಯ ಹೆಸರಿಡಲು ಆ ವ್ಯಕ್ತಿ ಒಳ್ಳೆಯವನಾಗಿದ್ದರೆ ಮಾತ್ರ ಇಡುತ್ತಾರೆ, ಕರ್ನಾಟಕದ ಮೈಸೂರು (ಮಹಿಷನಾಡು) ಪಂಜಾಬಿನ ಜಲಂದರ್ ಮತ್ತು ಬಿಹಾರದ ಗಯಾ ( ಬೋದ್ ಗಯಾ) ಜಿಲ್ಲೆಗಳಿಗೆ ರಾಕ್ಷಸರ ಹೆಸರು ಇಟ್ಟಿದ್ದಾರೆ ಎಂದರೆ ಅವರು ಒಳ್ಳೆಯವರಾಗಿದ್ದರು ಎಂದು ಅರ್ಥವಲ್ಲವೆ ? ಎಂದು ಪ್ರಶ್ನಿಸಿದರು.

ಸಂಸದ ಪ್ರತಾಪ್ ಸಿಂಹ ಮತ್ತು ಭಾಷಣಕಾರ ಸೂಲಿಬೆಲೆ ಚಕ್ರವರ್ತಿ ಕುರಿತು ನಾನು ಪಂಥಾಹ್ವಾನ ನೀಡುತ್ತೇನೆ ಮಹಿಷ ಬೌತಿಕ ಅಸ್ತಿತ್ವದಲ್ಲಿದ್ದ ಎಂಬ ಬಗ್ಗೆ ನಾನು ದಾಖಲೆ ನೀಡುತ್ತೇನೆ. ಚಾಮುಂಡಿ ಅಸ್ತಿತ್ವದಲ್ಲಿ ಇದ್ದರು ಎಂಬುದಕ್ಕೆ  ಅವರು ದಾಖಲೆ ನೀಡಲಿ. ಇಲ್ಲವಾದಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಲಿ ಎಂದು ಸವಾಲು ಎಸೆದರು.

ಸಮಾಜಿಕ ವ್ಯವಸ್ಥೆಯಲ್ಲಿ ಮನುವಾದಿಗಳ ಅನಾವಾರಗಳನ್ನು ಪ್ರಶ್ನೆ ಮಾಡಿದರೆ ಆರಂಭದಲ್ಲೇ ತುಳಿದು ಹಾಕುತ್ತಾರೆ. ಇದು ಶತ ಮಾನಗಳಿಂದ ನಡೆದುಕೊಂಡು ಬಂದಿದೆ, ಅದು ಇಂದಿಗೂ ಚಲಾವಣೆಯಲ್ಲಿದೆ ಎಂದು ತಮ್ಮ ಅಸಮಾಧಾನ ಹೊರಹಾಕಿದರು.

ಕಾರ್ಯಕ್ರಮದಲ್ಲಿ ಪ್ರಜಾ ವಿಮೋಚನಾ ಸೇನೆಯ ರಾಜ್ಯಾಧ್ಯಕ್ಷ ಮಾ.ಮುನಿರಾಜು, ಜಿಲ್ಲಾ ಕಾಂಗ್ರೆಸ್ ಎಸ್.ಟಿ ಘಟಕದ ಅಧ್ಯಕ್ಷ ಮುನಿಕೃಷ್ಣಪ್ಪ, ವಕೀಲರಾದ ಮುನಿರಾಜು, ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಗುರುರಾಜಪ್ಪ, ಮಾನವ ಬಧುತ್ವ ವೇದಿಕೆ ಅಧ್ಯಕ್ಷ ವೆಂಕಟೇಶ್, ದಸಂಸ ರಾಜುಸಣ್ಣಕ್ಕಿ, ಪ್ರಜಾವಿಮೋಚನಾ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಹನುಮಣ್ಣ ಗೂಳ್ಯ, ವಡ್ಡರಹಳ್ಳಿ ರಾಜಗೋಪಾಲ್, ಅಜಯ್ ಕುಮಾರ್,ಕರೀಂಸೊಣ್ಣೇನಹಳ್ಳಿ ಮುನಿಯಪ್ಪ, ತಳಗವಾರ ಪುನೀತ್, ಬೆಳವಂಗಲ ಮಹೇಶ್, ಕುಮಾರ್ ಮುಂತಾದವರು ಉಪಸ್ಥಿತರಿದ್ದರು

Ramesh Babu

Journalist

Recent Posts

ಮಹಿಳೆಯರು ಎಲ್ಲ ವಲಯಗಳಲ್ಲಿ ತಮ್ಮ ಛಾಪು ಮೂಡಿಸಿದ್ದು, ಸಬಲೀಕರಣದ ಆಶಯ ಸಾಕಾರದತ್ತ ಸಾಗುತ್ತಿದೆ-ಎನ್.ಶೋಭಾ

ಮಹಿಳೆಯರು ಎಲ್ಲ ವಲಯಗಳಲ್ಲಿ ತಮ್ಮ ಛಾಪು ಮೂಡಿಸಿದ್ದು, ಮಹಿಳಾ ಸಬಲೀಕರಣದ ಆಶಯ ಸಾಕಾರದತ್ತ ಸಾಗುತ್ತಿದೆ ಎಂದು ಆರಕ್ಷಕ ನಿರೀಕ್ಷಕರಾದ ಎನ್.ಶೋಭಾ…

3 hours ago

ಮನೆ ಹೊಸ್ತಿಲಿನಲ್ಲಿ ಪೂಜೆಗಿಟ್ಟಿದ್ದ ಒಣಗಿದ ದಾಸವಾಳ ಹೂ ನುಂಗಿ ಆರುವರೆ ತಿಂಗಳ ಮಗು ದಾರುಣ ಸಾವು

ಮನೆಯ ಹೊಸ್ತಿಲಿನಲ್ಲಿ ಪೂಜೆಗಾಗಿ ಇಟ್ಟಿದ್ದ ಒಣಗಿದ ದಾಸವಾಳದ ಹೂವನ್ನು ಆಟವಾಡುತ್ತಾ ನುಂಗಿದ ಆರುವರೆ ತಿಂಗಳ ಕಂದಮ್ಮ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ…

5 hours ago

ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಲೋಕಾಯುಕ್ತ ಬಲೆಗೆ

ಹುಬ್ಬಳ್ಳಿಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಆರು ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಭರತ್ ಹೆಗ್ಗಡೆ, ಲೋಕಾಯುಕ್ತ ಬಲೆಗೆ…

7 hours ago

ದೊಡ್ಡಬಳ್ಳಾಪುರದಲ್ಲಿ ರಾಯಲ್‌ ಓಕ್‌ ಫರ್ನಿಚರ್ ನೂತನ ಮಳಿಗೆ ಉದ್ಘಾಟನೆ

ಭಾರತದ ಅಗ್ರ ಪೀಠೋಪಕರಣ ಬ್ರ್ಯಾಂಡ್ ಆಗಿರುವ ರಾಯಲ್‌ ಓಕ್‌ ಫರ್ನಿಚರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನೂತನ ಮಳಿಗೆಗೆ ಚಾಲನೆ…

15 hours ago

ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ಇಲ್ಲ – ​ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಸ್ಪಷ್ಟನೆ

ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್.ಪಿ.ಜಿ‌ ಸರಬರಾಜು ಮಾಡಲಾಗುತ್ತಿದೆ ಅಲ್ಲದೇ ವಿಶೇಷವಾಗಿ *ಆಟೋ‌ ಎಲ್.ಪಿ.ಜಿ*.ಗೆ ಯಾವುದೇ ರೀತಿಯ ‌ಕೊರತೆ…

17 hours ago

Affordable Emotional Support Animal Letters for Enhanced Well-being

Cheap Emotional Support Animal Letter: Affordable ESA Documentation Affordable Emotional Support Animal Letters for Enhanced…

1 day ago