ಮಳೆಗಾಗಿ ಉದ್ಭವ ಬಸವಣ್ಣ ಮೂರ್ತಿಗೆ ವಿಶೇಷ ಪೂಜೆ: 101 ಈಡುಗಾಗಿ ಹೊಡೆದು ವರುಣ ದೇವರ ಮೊರೆ ಹೋದ ಗ್ರಾಮಸ್ಥರು

 

ಬೀಜ ಬಿತ್ತನೆ ಮಾಡಿ ಉತ್ತಮ ಮಳೆಯ ನಿರೀಕ್ಷೆಯಲ್ಲಿ ಇರುವ ರೈತರಿಗೆ ಮಳೆರಾಯ ಮಳೆ ಸುರಿಸದೆ ಸಂಕಷ್ಟಕ್ಕೆ ದೂಡಿದ್ದಾನೆ. ಕಳೆದ ಎರಡು ವಾರಗಳಿಂದ ಮಳೆಯಾಗದೆ ರೈತರು ಬೆಳೆದ ಬೆಳೆಗಳಿಗೆ ಹಾಗೂ ಪ್ರಾಣಿ ಪಕ್ಷಿಗಳು ನೀರಿಲ್ಲದೆ ಸೊರಗುತ್ತಿವೆ.

ಹೀಗಾಗಿ ಮಳೆಗಾಗಿ ಹಲವು ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ರೀತಿಯ ಪೂಜೆ- ಪುನಸ್ಕಾರಗಳ ಮೊರೆ ಹೋಗುತ್ತಿದ್ದಾರೆ. ಭಾನುವಾರ ತೂಬಗೆರೆ ಹೋಬಳಿಯ ಕೆಳಗಿನಜೂಗಾನಹಳ್ಳಿ ಗ್ರಾಮದಲ್ಲಿ ಇಬ್ಬರು ಬಾಲಕರಿಗೆ ವಧು-ವರ ಪೋಷಾಕು ಧರಿಸಿ ಚಂದಮಾಮ ಮದುವೆ ಮಾಡಿಸಿದ್ದರು.

ಇದೀಗ ತಾಲೂಕಿನ ಸಾಸಲು ಹೋಬಳಿಯ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದಲ್ಲಿ ಉದ್ಭಬ ಬಸವಣ್ಣ ದೇವರಿಗೆ ಊರಿನ ಗ್ರಾಮಸ್ಥರೆಲ್ಲಾ ಸೇರಿ ವಿಶೇಷ ಪೂಜೆ ಸಲ್ಲಿಸಿ, 101 ಈಡುಗಾಯಿ ಹೊಡೆದು ಮಳೆಗಾಗಿ ಪ್ರಾರ್ಥಿಸಿದರು.

ಈ ವೇಳೆ ಗ್ರಾಮದ ಮುಖಂಡ ರವಿಕುಮಾರ್ ಮಾತನಾಡಿ, ಕಳೆದ 20 ವರ್ಷಗಳ ಹಿಂದೆ ನಮ್ಮೂರಿನ ಪೂಜಾರಿಯ ಕನಸ್ಸಿನಲ್ಲಿ ದೇವರು ಬಂದು ಇಲ್ಲಿ ಬಸವಣ್ಣ ಇದೆ ಅಂತಾ ಹೇಳಿದ್ದರು. ಉತ್ತಮ ಮಳೆ ಬೆಳೆಗಾಗಿ ಇಲ್ಲಿ ಬಸವಣ್ಣ ಇದೆ ಪೂಜಿಸಿ ಎಂದು ಹೇಳಿದ್ದರು ಎಂಬ ಪ್ರತೀತಿ ಇದೆ. ಅಂದಿನಿಂದಲೂ ನಮ್ಮ ಪೂರ್ವಿಕರು ಊರಿನ ಗ್ರಾಮಸ್ಥರಿಂದ ಧವಸ ಧಾನ್ಯಗಳನ್ನ ಸಂಗ್ರಹಿಸಿ ಇಲ್ಲಿಯೆ ಅಡುಗೆ ತಯಾರಿ ಮಾಡಿ ಮಳೆಗಾಗಿ ವಿಶೇಷ ಪೂಜೆ ನೇರವೇರಿಸಲಾಗುತ್ತಿದೆ ಎಂದರು.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಉದ್ಭವ ಬಸವಣ್ಣ ಮೂರ್ತಿಗೆ ಶ್ರದ್ಧಾಭಕ್ತಿಯಿಂದ ಹೂವಿನ ಅಲಂಕಾರ, ಕ್ಷೀರಾಭಿಷೇಕ ಮಾಡಲಾಯಿತು. ನಂತರ ನೆರೆದಿದ್ದ ಗ್ರಾಮಸ್ಥರಿಗೆ ಅನ್ನಸಂತರ್ಪಣೆ ನಡೆಯಿತು.

ಈ ವೇಳೆ ಹೊಸಹಳ್ಳಿ ಗ್ರಾ.ಪಂ ಸದಸ್ಯ ಆನಂದ್, ಪೂಜಾರಿ ಸಿದ್ದಪ್ಪ, ಹೊಸಹಳ್ಳಿ ವಿಭಾಗದ ಬೆಸ್ಕಾಂ ಸಹಾಯಕ ಎಂಜಿನಿಯರ್ ಶಾಂತಕುಮಾರ್, ಗ್ರಾಮದ ಮುಖಂಡರಾದ ನಾಗೇಶ್, ರವಿಕುಮಾರ್, ಸತೀಶ್ ಮತ್ತಿತರರು ಇದ್ದರು.

Ramesh Babu

Journalist

Recent Posts

ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ಇಲ್ಲ – ​ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಸ್ಪಷ್ಟನೆ

ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್.ಪಿ.ಜಿ‌ ಸರಬರಾಜು ಮಾಡಲಾಗುತ್ತಿದೆ ಅಲ್ಲದೇ ವಿಶೇಷವಾಗಿ *ಆಟೋ‌ ಎಲ್.ಪಿ.ಜಿ*.ಗೆ ಯಾವುದೇ ರೀತಿಯ ‌ಕೊರತೆ…

2 hours ago

Affordable Emotional Support Animal Letters for Enhanced Well-being

Cheap Emotional Support Animal Letter: Affordable ESA Documentation Affordable Emotional Support Animal Letters for Enhanced…

10 hours ago

ದೊಡ್ಡಬಳ್ಳಾಪುರದಲ್ಲಿ ಅದ್ಧೂರಿ ಶ್ರೀರಾಮೋತ್ಸವ‌:‌ ಹೆಲಿಕಾಪ್ಟರ್‌ನಿಂದ ಪುಷ್ಪಾರ್ಚನೆ: ಶ್ರೀರಾಮ ನಾಮದಲ್ಲಿ ಮಿಂದೆದ್ದ ಸಹಸ್ರಾರು ಜನ

ಶ್ರೀರಾಮನವಮಿ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ವತಿಯಿಂದ ದೊಡ್ಡಬಳ್ಳಾಪುರ ನಗರದಲ್ಲಿ ಮಾರ್ಚ್ 27 ರಿಂದ ಮೂರು ದಿನಗಳ…

15 hours ago

ಕೃಷಿ ಹೊಂಡದಲ್ಲಿ ಮುಳುಗಿ ನಾಲ್ವರು ಮಕ್ಕಳು ದಾರುಣ ಸಾವು

ಆಟವಾಡುತ್ತಾ ಈಜಲು ಹೋದ ನಾಲ್ವರು ಮಕ್ಕಳು ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು…

18 hours ago

ಶ್ರೀರಾಮನವಮಿ ಅನ್ನ ಪ್ರಸಾದಿಂದ ಗ್ರಾಮಸ್ಥರಿಗೆ ಫುಡ್ ಪಾಯಿಸನ್…!!?: ಪ್ರಸಾದ ತಿಂದ ಬಹುತೇಕ ಜನ ಆಸ್ಪತ್ರೆ ಪಾಲು….!

ಶ್ರೀರಾಮನವಮಿ ಅನ್ನ ಪ್ರಸಾದಿಂದ ಗ್ರಾಮಸ್ಥರಿಗೆ ಫುಡ್ ಪಾಯಿಸನ್...!!?ಆಗಿದ್ದು, ಅನ್ನಪ್ರಸಾದ ಸೇವಿಸಿದ ಗ್ರಾಮಸ್ಥರಲ್ಲಿ ಬಹುತೇಕ ಜನ ಆಸ್ಪತ್ರೆ ಪಾಲಾಗಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವ…

19 hours ago

ಕೆ.ಎಚ್.ಎಂ. ಯೂತ್ ಕಾಂಗ್ರೆಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ: ಸಚಿವ ಕೆ.ಎಚ್ ಮುನಿಯಪ್ಪ ಭಾಗಿ

ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ವತಿಯಿಂದ ತೂಬಗೆರೆ ಹೋಬಳಿ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ  ನರಸಿಂಹ ಮೂರ್ತಿ ಹೆಚ್…

19 hours ago