ವೈಟ್ ಫಿಲ್ಡ್ ನಲ್ಲಿರೋ SMRITI MOTORS, SALES & SERVICE ಮಲ್ಟಿ ಬ್ರ್ಯಾಂಡ್ ಬೈಕ್ ಶೋರೂಂ ಮಾಲೀಕನಿಂದ ವಂಚನೆ ಆಗಿದೆ ಎಂದು ಗ್ರಾಹಕರು ದೂರಿದ್ದಾರೆ.
ಕಸ್ಟಮರ್ ಗಳಿಂದ ಲಕ್ಷಗಟ್ಟಲೇ ಅಡ್ವಾನ್ಸ್ ಹಣ ಪಡೆದು ಬೈಕ್ ನೀಡದೇ ಬೈಕ್ ಶೋರೂಂ ಮಾಲೀಕ ವಿಜಯ್ ಕುಮಾರ್ ಸದ್ಯ ಎಸ್ಕೇಪ್ ಆಗಿದ್ದಾನೆ.
ಫುಲ್ ಕ್ಯಾಷ್ ಕಟ್ಟಿರುವವರಿಗೆ ಗೊತ್ತೆ ಆಗದಂತೆ EMIಗೆ ಕನ್ವರ್ಟ್ ಮಾಡಿದ್ದ ಮಾಲೀಕ. ಕೆಲವರಿಗಂತು ಸಿಂಗಲ್ EMI ಗೆ ಡಬಲ್ EMI ಕಟ್ಟುವಂತ ಸ್ಥಿತಿ ತಂದಿಟ್ಟಿದ್ದಾನೆ. ಕೆಲವರಿಗೆ NOC ಕೊಡಿಸುತ್ತೇನೆ ಎಂದು ಮತ್ತೆ EMI ಆಕ್ಟಿವ್ ಮಾಡಿರುವ ಭೂಪ. ಹಳೇ ಲೋನ್ ಜೊತೆ ಖರೀದಿ ಮಾಡದ ಬೈಕ್ ಗೂ ಲೋನ್ ಕಟ್ಟುತ್ತಿರುವ ಕೆಲ ಗ್ರಾಹಕರು. ಕಸ್ಟಮರ್ ಗಳ ಬ್ಯಾಂಕ್ ಡಿಟೇಲ್ಸ್ ಪಡೆದು ವಂಚನೆ ಮಾಡುತ್ತಿದ್ದ ವಿಜಯ್ ಕುಮಾರ್.
ಲೋನ್ ಕೊಡುವ ಬ್ಯಾಂಕ್ & ಫೈನಾನ್ಸ್ ಕಂಪನಿಗಳ ಜೊತೆ ಸೇರಿ ಈ ರೀತಿ ವಂಚಿಸಿರೋ ಶಂಕೆ ವ್ಯಕ್ತವಾಗಿದೆ. ವಿಜಯ್ ಕುಮಾರ್ ತಂದಿಟ್ಟ ಪಜೀತಿಗೆ ಕಸ್ಟಮರ್ ಗಳು ಕಂಗಾಲಾಗಿದ್ದಾರೆ. ಪ್ರತಿ ತಿಂಗಳು EMI ಹಣ ಕಟ್ಟುವಂತೆ ಫೈನಾನ್ಸ್ ಕಂಪನಿಗಳು ಕಸ್ಟಮರ್ ಗಳ ಬೆನ್ನತ್ತಿವೆ.
ಸದ್ಯ 21 ಜನರಿಂದ ವೈಟ್ ಫೀಲ್ಡ್ ಠಾಣೆಯಲ್ಲಿ ದೂರಿನ ಆಧಾರದ ಮೇಲೆ ಬೈಕ್ ಶೋರೂಂ ಮಾಲೀಕನ ವಿರುದ್ಧ FIR ದಾಖಲಾಗಿದೆ.
ಇನ್ನೂ ಪತಿ ಕಾಣೆಯಾಗಿದ್ದಾರೆ ಅಂತ 1 ತಿಂಗಳ ಹಿಂದೆ ವೈಟ್ ಫಿಲ್ಡ್ ಠಾಣೆಗೆ ದೂರು ನೀಡಿರುವ ಪತ್ನಿ. ಈ ಹಿನ್ನೆಲೆ ವಿಜಯ್‌ಕುಮಾರ್ ಮತ್ತು ಇನ್ನೊಬ್ಬ ಪಾರ್ಟರ್ನ್ ಕಿಶೋರ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ದ್ವೇಷ ಭಾಷಣ ತಡೆ ಮಸೂದೆಯ ಬಗ್ಗೆ ಬಿಜೆಪಿಗೆ ಮಾತ್ರ ಏಕೆ ಆತಂಕ? ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡು…
ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಸಂಬಂಧ ಎಸ್ಪಿ ಗುಂಜನ್…
ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…
ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…
ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರ ಸೂಸುತ್ರವಾಗಿ ಪೂರ್ಣಗೊಂಡಿದೆ. ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ…
ಒಂಟಿ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಊರಿನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು…