Categories: ಲೇಖನ

ಮರೆತರೋ, ನಿರ್ಲಕ್ಷಿಸಿದರೋ, ಮಾರಿಕೊಂಡರೋ ತಮ್ಮ ವಿವೇಚನೆಯನ್ನು…….

ಮಂಡ್ಯದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗಿರುತ್ತದೆ. ಕನ್ನಡ ನಾಡು, ನುಡಿ, ಜಲ, ಸಾಹಿತ್ಯ, ಸಂಸ್ಕೃತಿಯ ಅತ್ಯಂತ ಮಹತ್ವದ ನುಡಿ ಹಬ್ಬ. ಇದು ವಿಜೃಂಭಣೆಯಿಂದ ನಡೆಯುತ್ತಿರುವಾಗ ಬಹುತೇಕ ಕನ್ನಡದ ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳು ಇದನ್ನು ತೀರ ಕ್ಷುಲ್ಲಕ ಎನ್ನುವಂತೆ ನಿರ್ಲಕ್ಷಿಸಿದ್ದು ಮಾತ್ರ ಅತ್ಯಂತ ವಿಷಾದನೀಯ ಮತ್ತು ಖೇದಕರ.

ಇಂದಿನ ದಿನಮಾನಗಳಲ್ಲಿ ಅತ್ಯಂತ ಜವಾಬ್ದಾರಿಯಿಂದ, ವಿವೇಚನೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕಾದ ಮಾಧ್ಯಮಗಳು ಇಷ್ಟೊಂದು ಮಹತ್ವದ ವಿಷಯವನ್ನು ನಿರ್ಲಕ್ಷಿಸಿದರೆ ಅದರ ಪರಿಣಾಮ ಮಾತ್ರ ತುಂಬಾ ಭೀಕರವಾಗಿರುತ್ತದೆ. ಉದಾಹರಣೆಗೆ ತಾಯಿ ಭಾಷೆ, ಇಲ್ಲಿನ ನಿಜ ಸಂಸ್ಕೃತಿಯ ಬಗ್ಗೆ ಇಡೀ ಜನ ಸಮೂಹಕ್ಕೆ ಸರಿಯಾಗಿ ಪರಿಚಯ ಮಾಡಿಕೊಡದಿದ್ದರೆ ಮೊನ್ನೆ ವಿಧಾನ ಮಂಡಲದ ಅಧಿವೇಶನದ ಕೊನೆಯ ದಿನ ಇಬ್ಬರು ಅತ್ಯಂತ ಜವಾಬ್ದಾರಿಯತ ಹಾಲಿ ಮಂತ್ರಿ ಮತ್ತು ಮಾಜಿ ಮಂತ್ರಿ ಕೆಟ್ಟದಾಗಿ ಒಬ್ಬರಿಗೊಬ್ಬರು ಅತ್ಯಂತ ಅಸಹ್ಯಕರವಾಗಿ ಬೈದುಕೊಳ್ಳಲು ಅಥವಾ ಆ ರೀತಿ ಅನೇಕ ಜನರು ಈ ರೀತಿ ಮಾತನಾಡಲು ಬಹು ಮುಖ್ಯ ಕಾರಣವೇ ಈ ರೀತಿಯ ಮುಖ್ಯ ವಾಹಿನಿಗಳ ಸಾಂಸ್ಕೃತಿಕ ನಿರ್ಲಕ್ಷ್ಯವೇ ಕಾರಣ……

ಮುಗಿಯುತ್ತಲಿದೆ ಕನ್ನಡದ ನುಡಿ ಹಬ್ಬ,
ಎಂದೆಂದೂ ಮುಗಿಯಬಾರದ ನಿತ್ಯ ಹಬ್ಬ………

ತಮ್ಮ ಅನ್ನದ ಮೂಲವನ್ನೇ ನಿರ್ಲಕ್ಷಿಸಿದ ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳು…

ಎಷ್ಟೋ ಬೇಡದ ವಿಷಯಗಳನ್ನು ನೇರ ಪ್ರಸಾರ ಮಾಡುತ್ತವೆ. ಮನೆಯ ಜಗಳಗಳನ್ನು ದಿನ ಪೂರ್ತಿ ತೋರಿಸುತ್ತವೆ. ಯಾರದೋ ಆತ್ಮಹತ್ಯೆ, ಕೊಲೆ ಇವರಿಗೆ ಮೂರು ದಿನದ ಸರಕು.
ಇನ್ಯಾವುದೋ ವಂಚನೆ, ದರೋಡೆ ಇವರಿಗೆ ವಾರದ ಆಹಾರ,
ರಾಜಕೀಯ ಭಿನ್ನಮತ ಇವರಿಗೆ ತಿಂಗಳಾನುಗಟ್ಟಲೆ ಹಗಲು ರಾತ್ರಿಗಳ ಬ್ರೇಕಿಂಗ್ ನ್ಯೂಸ್,
ಇಬ್ಬರು ಬಲಾಢ್ಯ ಮಂತ್ರಿಗಳ ಖಾಸಗಿ ಜಗಳ ಸಾಹಿತ್ಯ ಸಮ್ಮೇಳನಕ್ಕಿಂತ ಮಹತ್ವದ ವಿಷಯ……

ಆದರೆ ಕನ್ನಡಮ್ಮನ‌ ಅತ್ಯಂತ ಪ್ರಮುಖ ಜಾತ್ರೆ ಕೇವಲ ಕೆಲವು ನಿಮಿಷಗಳ ಒಂದು ಸುದ್ದಿ ಮಾತ್ರ……..

ಛೇ, ಎಷ್ಟೊಂದು ವಿವೇಕಹೀನ ಸಂಸ್ಕೃತಿಯ ಜನ ಇವರು. ಸಾಹಿತ್ಯಾಸಕ್ತರು ಮತ್ತು ಪಕ್ಕಾ ಕನ್ನಡ ಅಭಿಮಾನಿಗಳನ್ನು ಹೊರತುಪಡಿಸಿ ಅನೇಕರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯುತ್ತಿದೆ ಎಂದು ತಿಳಿಯಲೇ ಇಲ್ಲ.‌ ಕೆಲವರಿಗೆ ತಿಳಿದರೂ‌ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ. ಅದನ್ನು ಮನೆ ಮನೆಗೆ ತಲುಪಿಸುವ ಅವಕಾಶವಿದ್ದ ಮಾಧ್ಯಮಗಳು ಅನಾವಶ್ಯಕ ವಿಷಯಗಳ ಸುತ್ತಲೇ ಸುತ್ತಿದವು……

ಈಗಾಗಲೇ ಆಂಗ್ಲ ಮಾಧ್ಯಮದ ಮೋಹಕ್ಕೆ, ಬೆರಕೆ ಸಾಂಸ್ಕೃತಿಕ ವಾತಾವರಣದ ಪ್ರಭಾವಕ್ಕೆ ಒಳಗಾಗಿರುವ ಮಕ್ಕಳು ಮತ್ತು ಯುವ ಪೀಳಿಗೆಯನ್ನು ತನ್ನ ತಾಯಿ ಭಾಷೆಯ ಬಗ್ಗೆ ಸ್ವಲ್ಪವಾದರೂ ಹೆಮ್ಮೆ ಮತ್ತು ಜಾಗೃತಿ ಮೂಡಿಸುವ ಕೆಲಸ ಈ ಸಮ್ಮೇಳನದ ಸಂದರ್ಭದಲ್ಲಿ ಮಾಧ್ಯಮಗಳು ನಿರ್ವಹಿಸಬೇಕಿತ್ತು…..

ಸಮ್ಮೇಳನದ ಮೆರವಣಿಗೆ, ಅಧ್ಯಕ್ಷೀಯ ಭಾಷಣ, ವಿಚಾರ ಸಂಕಿರಣಗಳು, ಕವಿಗೋಷ್ಠಿಗಳು, ಪುಸ್ತಕ ಮೇಳ, ಜಾನಪದ ಕಲಾ ಪ್ರದರ್ಶನ, ಕರ್ನಾಟಕದ ವಿವಿಧ ಭಾಗಗಳ ಊಟದ ವೈವಿಧ್ಯತೆ, ಮಂಡಿಸಿದ ಬೇಡಿಕೆಗಳು ಎಲ್ಲವನ್ನೂ ನೇರ ಅಥವಾ ಮುದ್ರಿತ ಪ್ರಸಾರ ಮಾಡಬಹುದಿತ್ತು……

ಅಲ್ಲದೆ ಈ ನೆಪದಲ್ಲಿ ತಾಯಿ ಭಾಷೆಯ ಉಗಮ, ಬೆಳವಣಿಗೆ, ಮಹತ್ವ, ಸಾಧನೆ, ಭವಿಷ್ಯ, ಎಚ್ಚರಿಕೆ, ಕರ್ನಾಟಕದ ಸಮಗ್ರ ಅಭಿವೃದ್ಧಿ ಎಲ್ಲವನ್ನೂ ವಿಷಯ ತಜ್ಞರಿಂದ ತಮ್ಮ ಕೇಂದ್ರಿಂದಲೇ ಚರ್ಚಿಸಬಹುದಿತ್ತು…….

ವಿಶ್ವದ ವಿವಿಧ ಭಾಷೆಗಳು ಹೇಗೆ ಆಂಗ್ಲ ಭಾಷೆಯ ಹೊಡೆತಕ್ಕೆ ಸಿಲುಕಿ ನಾಶ ಹೊಂದುತ್ತಿವೆ, ಭಾರತದಲ್ಲಿ ಹಿಂದಿ ಹೇರಿಕೆ ಹೇಗೆ ಅಪಾಯಕಾರಿ, ಆ ಮುಖಾಂತರ ತಮ್ಮ ಬದುಕಿನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ,
ತಾಯಿ ಭಾಷೆಯ ಕಲಿಕೆ ಹೇಗೆ ನಮ್ಮ ಯೋಚನೆ ಮತ್ತು ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ, ಕನ್ನಡವನ್ನು ನಾವು ಹೇಗೆ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಸ್ವಲ್ಪವಾದರೂ ಪ್ರಯತ್ನಿಸಬೇಕಿತ್ತು…..

ಅದು ಯಾವುದೂ ಪ್ರಸಾರವಾಗಲೇ ಇಲ್ಲ. ನೆಪಕ್ಕೆ ಸಮ್ಮೇಳನದ ಕೆಲವು ತುಣುಕುಗಳು ಮಾತ್ರ ಕಾಣಿಸಿದವು. ಸಮಕಾಲೀನ ವಿಷಯಗಳಿಗೆ ಮಹತ್ವ ನೀಡದೆ, ಆಳದ ಚಿಂತನೆ ನಡೆಸದೆ, ಕೇವಲ ಹಣದ ಮೋಹದ ಹಿಂದೆ ಬಿದ್ದು, ನಿರೂಪಕರೆಂಬ ಬಾಯಿಬುಡುಕ ಸಂಸ್ಕೃತಿಯ ಜನರನ್ನು ಸೃಷ್ಟಿಸಿ, ಜನರನ್ನು ಮರುಳು ಮಾಡುತ್ತಿರುವ ಕನ್ನಡ ಟಿವಿ ವಾರ್ತಾ ಮಾಧ್ಯಮಗಳಿಗೆ ಈ ಮೂಲಕ ಛೀಮಾರಿ ಹಾಕುತ್ತಾ……

ಅದೇ ರೀತಿ ತುಂಬಾ ಎಚ್ಚರಿಕೆಯಿಂದ ಕಾರ್ಯಕ್ರಮದ ಬಹಳಷ್ಟು ಸುದ್ದಿಗಳನ್ನು ಮುಖಪುಟದಲ್ಲಿ ಪ್ರಕಟಿಸಿದ ಕನ್ನಡದ ಕೆಲವು ಪತ್ರಿಕಾ ಮಾಧ್ಯಮವನ್ನು ಅಭಿನಂದಿಸುತ್ತಾ….

ಇನ್ನಾದರೂ ಟಿವಿ ವಾಹಿನಿಗಳು ಎಚ್ಚೆತ್ತುಕೊಳ್ಳಲಿ ಎಂದು ಆಶಿಸುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಏ.12ರಂದು ದೊಡ್ಡಬಳ್ಳಾಪುರ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ ನಗರದಲ್ಲಿ ಏ.12 ರಂದು 220/66/11ಕೆವಿ ಕೆಐಎಡಿಬಿ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F02-Birla Super ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಗಳು…

2 hours ago

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರ ಸಾವು

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರವಾಗಿ ಸಾವನ್ನಪ್ಪಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೋರಾಯನಪಾಳ್ಯದಲ್ಲಿ ನಡೆದಿದೆ.. 17 ವರ್ಷದ…

6 hours ago

ಲೋಕಾಯುಕ್ತ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ರಾಯಚೂರು ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸುರೇಶ್ ಶೆಟ್ಟಿ ಲೋಕಾಯುಕ್ತರ ಬಲೆಗೆ ಬಿದ್ದ ಮುಖ್ಯಾಧಿಕಾರಿ. ರಾಘವೇಂದ್ರ…

7 hours ago

ಹುಚ್ಚನೊಬ್ಬನ ಕನಸು….

ದೇಶದ ಎಲ್ಲಾ ದಲಿತ ಕೇರಿಗಳನ್ನು ನಾಶ ಮಾಡಬೇಕು. ಅಲ್ಲಿನ ಎಲ್ಲರಿಗೂ ಊರ ಒಳಗಿನ ಸ್ಥಳದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಬೇಕು. ಬ್ರಾಹ್ಮಣರ…

11 hours ago

PUC Result: ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ….ಈ ಕಥೆ ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಗ್ಯಾರಂಟಿ

600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಟಾಪರ್ ಆದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು…

23 hours ago

ತೂಬಗೆರೆ ಸರ್ಕಾರಿ ಪಿಯು ಕಾಲೇಜಿಗೆ ಮತ್ತೊಮ್ಮೆ ಮೆರುಗು: ಶೇ.95.45 ಫಲಿತಾಂಶ

ದೊಡ್ಡಬಳ್ಳಾಪುರ (ತೂಬಗೆರೆ): ಗ್ರಾಮಾಂತರ ಭಾಗದಲ್ಲಿದ್ದರೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು…

24 hours ago