ಮಡಿಕೇರಿ ಹೋಂ ಸ್ಟೇನಲ್ಲಿ ಪ್ರವಾಸಿ ತಾಯಿ ಮಗಳಿಗೆ ಕೇರ್ ಟೇಕರ್‌ನಿಂದ ಕಿರುಕುಳ ನಡೆದ ಘಟನೆ ವರದಿಯಾಗಿದೆ.
ಕಾವೇರಪ್ಪ ಮಾಲಿಕತ್ವದ ಈಶ್ವರ ನಿಲಯ ಎಂಬ ಹೋಮ್ಸ್ ಸ್ಟೇ ನಲ್ಲಿ ಹೋಮ್ಸ್ ಸ್ಟೇ ಕೇರ್ ಟೇಕರ್‌ನಿಂದ ರಾತ್ರಿ 2 ಗಂಟೆಯಿಂದ 4 ಗಂಟೆವರೆಗೆ ಕಿರುಕುಳ ಆಗಿದೆ ಎಂದು ದೂರು ನೀಡಲಾಗಿದೆ.
ಹೋಮ್ಸ್ ಸ್ಟೇ ಕೇರ್ ಟೇಕರ್ ಕುಮಾರ @ ಪ್ರವೀಣ್ ಎಂಬಾತನಿಂದ ಕೃತ್ಯ ನಡೆದಿದೆ ಎಂದು ಆರೋಪಸಲಾಗಿದೆ.
ಡೋರ್ ಓಪನ್ ಮಾಡುವಂತೆ ತಾಯಿ ಮಗಳಿಗೆ ಕೇರ್ ಟೇಕರ್‌ನಿಂದ ಕಿರುಕುಳ ನೀಡಲಾಗಿದೆ ಎನ್ನಲಾಗಿದೆ.
ತಾಯಿ ಮಗಳು ಇಬ್ಬರೇ ಉಳಿದುಕೊಂಡಿದ್ದ ಹೋಮ್ಸ್ ಸ್ಟೇ
ಭಯವಾಗಿ ಬಾಗಿಲು ಓಪನ್ ಮಾಡದ ಪ್ರವಾಸಿ ತಾಯಿ ಮಗಳು, ಕುಡಿದು ಬಂದಿದ್ದ ಹೋಮ್ಸ್ ಸ್ಟೇ ಕೇರ್ ಟೇಕರ್ ಎಂದ ಪ್ರವಾಸಿ ಮಹಿಳೆ ಆರೋಪಿಸಿದ್ದಾರೆ.
ಇದು ನಮ್ಮ ಜೀವನದ ಅತ್ಯಂತ ಕೆಟ್ಟ ಅನುಭವ ಎಂದು ತಮ್ಮ ಅಸಮಾಧಾನವನ್ನು ಮಾಧ್ಯಮದವರೊಂದಿಗೆ ವ್ಯಕ್ತಪಡಿಸಿದ್ದಾರೆ.
ಓಪನ್ ಮಾಡದಿದ್ದಕ್ಕೆ ನಂತರ ನಾಲ್ಕು ಚಕ್ರಗಳ ಕಾರು ಪಂಕ್ಚರ್ ಮಾಡಿರುವದಾಗಿ ಅವರು ತಿಳಿಸಿದ್ದಾರೆ.
ಹೋಮ್ಸ್ ಸ್ಟೇ ಮಾಲೀಕನಿಗೆ ಕರೆ ಮಾಡಿದ್ರೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ ಅಂತ ಆರೋಪ ಮಾಡಿದ್ದಾರೆ.
ಬೆಂಗಳೂರು ಮೂಲದ ತಾಯಿ ಮಗಳು ಕೊಡಗಿಗೆ ಪ್ರವಾಸಕ್ಕೆ ಬಂದಿದ್ದರು. ಊಟಿಯಿಂದ ಕೊಡಗಿಗೆ ಬಂದು ಹೋಮ್ಸ್ ಸ್ಟೇನಲ್ಲಿ ಉಳಿದುಕೊಂಡಿದ್ದರು.
ಈ ಬಗ್ಗೆ ಮಡಿಕೇರಿ ನಗರ ಠಾಣೆಗೆ ದೂರು ನೀಡಿದ ಹಿನ್ನೆಲೆ
ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಹೆಣ್ಣಿನ ಹಿತರಕ್ಷಣೆಗಾಗಿ ದೊಡ್ಡಬಳ್ಳಾಪುರದಲ್ಲಿ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಾಪನೆ ಮಾಡಲಾಗಿದೆ..ಈ ಮಹಿಳಾ ಠಾಣೆಯಲ್ಲಿ ಅತ್ಯಾಚಾರ, ವರದಕ್ಷಿಣೆ ನಿಷೇಧ ಕಾಯ್ದೆ, ಮಕ್ಕಳ…
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟು ಹಬ್ಬದ ಮುನ್ನ ( ಏಪ್ರಿಲ್ 14 ) ಅವರ ವ್ಯಕ್ತಿತ್ವ ಮತ್ತು…
In der heutigen akademischen Welt steht die Qualität der schriftlichen Arbeiten im Mittelpunkt des Interesses.…
'ಆಸರೆ' ಯೋಜನೆ ಅಂಗವಾಗಿ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗೇನಹಳ್ಳಿ ಐಯಮ್ಮನಹಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಪೊಲೀಸ್…
ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ..…
ದೊಡ್ಡಬಳ್ಳಾಪುರದ ಕಾಡತಿಪ್ಪೂರು ಗ್ರಾಮದಲ್ಲಿ ಸುಮಾರು 1300 ಜನಸಂಖ್ಯೆ ಇದ್ದು, 280 ಕುಟುಂಬಗಳು ವಾಸವಿದ್ದಾರೆ. ಅದರಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗದವರೇ…