ಮಕ್ಕಳ ಮನೋವಿಕಸನಕ್ಕಾಗಿ “ಚಿಲಿಪಿಲಿ” ಶಿಬಿರ: ಯಾಂತ್ರಿಕತೆಗೆ ಗುಡ್ ಬೈ: ಮಕ್ಕಳ ಸ್ವಾಭಾವಿಕ ಜೀವನಕ್ಕೆ ಒತ್ತು

ಡಾ.ಡಿ.ಆರ್ ನಾಗರಾಜ್ ಬಳಗ, ವಾಯ್ಸ್ ಆಫ್ ಆಕ್ಷನ್ ಟ್ರಸ್ಟ್, ಸೌಭಾಗ್ಯ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ  ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲಾ ಆವರಣದಲ್ಲಿ ಮಕ್ಕಳ ಮನೋವಿಕಸನಕ್ಕಾಗಿ “ಚಿಲಿಪಿಲಿ” ಹೆಸರಿನಡಿ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು.

ಶಿಬಿರವು ವಸತಿ ಹಾಗೂ ವಸತಿಯೇತರ ಸೌಕರ್ಯವನ್ನು ಹೊಂದಿದ್ದು, ಆರನೇ ತರಗತಿಯಿಂದ 9ನೇ ತರಗತಿಯಲ್ಲಿ ಓದುತ್ತಿರುವ ಸುಮಾರು 70-80 ಮಕ್ಕಳು ಸ್ವಯಂ ಪ್ರೇರಿತರಾಗಿ ಭಾಗವಹಿಸಿದ್ದರು.

ಸುಮಾರು 70-80 ಮಕ್ಕಳು ಸ್ವಯಂ ಪ್ರೇರಿತರಾಗಿ  ಭಾಗವಹಿಸಿದ್ದರು. ಆಧುನಿಕ ಜಗತ್ತಿನಲ್ಲಿ ಮಕ್ಕಳು ಯಾಂತ್ರಿಕ ಜೀವನದ‌ ಜಂಜಾಟದಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. ಈ ಹಿನ್ನೆಲೆ ಈ ಶಿಬಿರದಲ್ಲಿ ಯಾಂತ್ರಿಕ ಜೀವನದಿಂದ ಹೊರಬಂದು ತಮ್ಮ ಮನೋವಿಕಸನ ಬೆಳೆಸಿಕೊಂಡು ನೈಸರ್ಗಿಕ ಜೀವನ ನಡೆಸುವುದು ಹೇಗೆ…? ತಮ್ಮ ಜೀವನಾನುಭವ ಹೆಚ್ಚಿಸಿಕೊಳ್ಳುವುದು ಹೇಗೆ…? ಹೊಸ ಸಂಗತಿಗಳ ಅಧ್ಯಯನ, ಹೊಸ ಸ್ನೇಹಿತರು, ಹೊಸ‌ ಹೊಸ ವಿಚಾರಗಳನ್ನು ಮಕ್ಕಳಿಗೆ ತಿಳಿಸಿಕೊಡಲಾಯಿತು.

ಶಿಬಿರದಲ್ಲಿ ಮಕ್ಕಳಿಗೆ ಅತ್ಯಂತ ಅಗತ್ಯವಾದ ಸ್ವಾತಂತ್ರ್ಯದ ಪರಿಚಯ. ತಾವಾಗಿಯೇ ತಮ್ಮ ಕೆಲಸಗಳನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದರ ಅರಿವು, ಹೊಸ ಹೊಸ ಜವಾಬ್ದಾರಿಗಳ ಕುರಿತು ತಿಳಿಸಿಕೊಡಲಾಯಿತು.

ಕಲೆ, ಸಾಹಿತ್ಯ, ಕೃಷಿ, ಮಕ್ಕಳ ಹಕ್ಕು, ಶಿಕ್ಷಣ, ಮಕ್ಕಳ ಮನೋವಿಕಸನ, ಹಾಡು, ನೃತ್ಯ, ನಾಟಕ, ಚಿತ್ರಕಲೆ, ವಿಜ್ಙಾನ ಪ್ರಾತ್ಯಕ್ಷಿತೆ ತಯಾರಿಕೆ, ಗೊಂಬೆ ತಯಾರಿಕೆ, ಟ್ರಕ್ಕಿಂಗ್, ಶಿಲ್ಪಗಳ ತಯಾರಿಕೆ, ಮಕ್ಕಳಿಗೆ ಕಾನೂನು ತಿಳಿವಳಿಕೆಯನ್ನು ಒಳಗೊಂಡಂತೆ ಹಲವಾರು ವಿನೂತನ ರೀತಿಯ ಕಾರ್ಯಚಟುವಟಿಕೆಗಳನ್ನು ಆಯಾಯ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ಅರಿವು ಮೂಡಿಸಿದರು.

ಡಾ.ಡಿ.ಆರ್.ನಾಗರಾಜ್‌ ಬಳಗದ ಸದಸ್ಯ ಹಾಗೂ ಉಪನ್ಯಾಸಕ ಪ್ರಕಾಶ್ ಮಂಟೇದ ಮತಾನಾಡಿ, ಶಿಬಿರದ ಮುಖ್ಯ ಉದ್ದೇಶ ಮಕ್ಕಳ ಮನೋವಿಕಸನ ಬೆಳವಣಿಗೆ. ಪ್ರಸ್ತುತ ಸಂದರ್ಭದಲ್ಲಿ ಮಕ್ಕಳು ಮೊಬೈಲ್ ತಮ್ಮ ಪ್ರಪಂಚ ಅಂದುಕೊಂಡಿದ್ದಾರೆ. ಅದನ್ನು ಬಿಟ್ಟು ನಾವು ಇರಲಾರೆವು ಎಂಬ ಮನೋಭಾವನೆ ಮಕ್ಕಳಲ್ಲಿ ಇದೆ. ಒಂದು ರೀತಿಯಲ್ಲಿ ಯಾಂತ್ರಿಕ ಜೀವನ ನಡೆಸುತ್ತಿದ್ದಾರೆ. ಅದರಿಂದ ಹೊರತರಲು ಚಿಲಿಪಿಲಿ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಈ‌ ಶಿಬಿರದಲ್ಲಿ ಮಾನವೀಯ ಮೌಲ್ಯಗಳೊಂದಿಗೆ ಸಮಾಜದಲ್ಲಿ ಮೌಲ್ಯಯುತ ಜೀವನವನ್ನು ಕಟ್ಟಿಕೊಡಲು, ಒತ್ತಡವಿಲ್ಲದ ಜೀವನವನ್ನು ಮುನ್ನಡೆಸಲು, ಪರಸ್ಪರ ಪ್ರೀತಿ, ವಿಶ್ವಾಸದಿಂದ ಇರುವ ಕುರಿತು ಮಕ್ಕಳಿಗೆ ತಿಳಿಸಿಕೊಡಲಾಯಿತು. ಚಿಲಿಪಿಲಿ ಶಿಬಿರದಲ್ಲಿ ಮಕ್ಕಳು ಲವಲವಿಕೆಯಿಂದ ಭಾಗವಹಿಸಿ ಶಿಬಿರದ ಸದುಪಯೋಗ ಪಡೆಸಿಕೊಂಡರು ಎಂದರು.

ಈ ವೇಳೆ ಡಾ.ಡಿ.ಆರ್.ನಾಗರಾಜ್‌ ಬಳಗದ ಸದಸ್ಯ ಹಾಗೂ ಶಿಬಿರದ ಸಂಯೋಜಕ ವೆಂಕಟೇಶ್ ಕೊನಘಟ್ಟ, ವಾಯ್ಸ್‌ ಆಫ್‌ ಆಕ್ಷನ್‌ ಟ್ರಸ್ಟಿನ ಸದಸ್ಯ ಹಾಗೂ ಶಿಬಿರದ ನಿರ್ದೇಶಕ ಕಾಂತರಾಜು, ಡಾ.ಆರ್.ಡಿ.ಆರ್.ನಾಗರಾಜ್‌ ಬಳಗ ಕಾರ್ಯದರ್ಶಿ ಹಾಗೂ ವಕೀಲ ದಯಾನಂದಗೌಡ ಹೆಚ್. ಎನ್‌, ಪೊಲೀಸ್ ಚಂದ್ರ ಶೇಖರ್ ಸೇರಿದಂತೆ ಇತರರು ಶಿಬಿರ ಯಶಸ್ಸಿಗೆ ಸಹಕರಿಸಿದರು.

Ramesh Babu

Journalist

Recent Posts

ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿದ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ

ದಕ್ಷಿಣ ಭಾರತದಲ್ಲಿ ನಾಗರಾಧನೆಗೆ ಸುಪ್ರಸಿದ್ಧಿ ಪಡೆದಿರುವ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿಂದು ಅದ್ಧೂರಿಯಾಗಿ ನೆರವೇರಿತು. ತಾಲೂಕಿನ…

11 hours ago

ಜಗತ್ತಿನ ಬೆಳಕಿನ ಹಬ್ಬ – ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ…..

ಕ್ರಿಸ್ಮಸ್ ಮತ್ತು ಜೀಸಸ್, ಪ್ರೀತಿ ಮತ್ತು ಸೇವೆ.......... ಜಗತ್ತಿನ ಬೆಳಕಿನ ಹಬ್ಬ - ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ..... ಯೇಸುಕ್ರಿಸ್ತನ…

14 hours ago

ಖಾಸಗಿ ಬಸ್ ಲಾರಿಗೆ ಡಿಕ್ಕಿ: ಹೊತ್ತಿ ಉರಿದ ಬಸ್: 9 ಮಂದಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಬಸ್ ಒಳಗಡೆಯೇ ಸಜೀವ ದಹನ

ಎಲ್ಲರನ್ನು ಬೆಚ್ಚಿಬೀಳಿಸುವಂತಹ ಭೀಕರ ರಸ್ತೆ ಅಪಘಾತವೊಂದು ಚಿತ್ರದುರ್ಗದ ಬಳಿ ನಡೆದಿದ್ದು, ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ 'ಸೀ ಬರ್ಡ್' ಖಾಸಗಿ ಬಸ್…

14 hours ago

ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್​ ಪೂರೈಕೆ ಸ್ಥಗಿತ: ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು ಇಲ್ಲಿವೆ ನೋಡಿ…

ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್​ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ದೊಡ್ಡಬಳ್ಳಾಪು ಉಪವಿಭಾಗದ ಬೆಸ್ಕಾಂ ಅಧಿಕಾರಿಗಳು ಪತ್ರಿಕಾ…

1 day ago

ನಾಳೆ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಬ್ರಹ್ಮರಥೋತ್ಸವ: ಬ್ರಹ್ಮ ರಥೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಇಂದು ಕ್ಷೇತ್ರಕ್ಕೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಭೇಟಿ, ಪರಿಶೀಲನೆ

ಇತಿಹಾಸ ಪ್ರಸಿದ್ಧ ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ನಾಳೆ(ಡಿಸೆಂಬರ್ 25) ಬ್ರಹ್ಮರಥೋತ್ಸವ ನಡೆಯಲಿದ್ದು, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ…

1 day ago